ಸರಕಾರಿ ಪದವಿಪೂರ್ವ ಕಾಲೇಜು ಬೈಲೂರು ಹಾಗೂ ಕಾರ್ಕಳ ನಗರ ಪೊಲೀಸ್ ಠಾಣೆ ಯ ಜಂಟಿ ಆಶ್ರಯದಲ್ಲಿ ಆ.9 ರಂದು ನಶಾಮುಕ್ತ ಭಾರತ ಅಭಿಯಾನದಡಿ ಅಗಸ್ಟ್ ತಿಂಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಕಳ ನಗರ ಠಾಣಾ ಉಪನಿರೀಕ್ಷಕರಾದ ಶ್ರೀ ಮುರಳೀಧರ ನಾಯಕ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಾದಕ ವಸ್ತು ವ್ಯಸನದ ದುಷ್ಪರಿಣಾಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಸಹಾಯಕ ಉಪನಿರೀಕ್ಷಕರಾದ ಶ್ರೀ ಕೃಷ್ಣ ಆಚಾರ್ಯ, ಹೆಡ್ ಕಾನ್ಸ್ಟೇಬಲ್ ಉಮೇಶ ನಾಯ್ಕ, ಕಾನ್ಸ್ಟೇಬಲ್ ಗಜ ಇವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಭಟ್ ಇವರು ಅಧ್ಯಕ್ಷತೆ ವಹಿಸಿದ್ದು, ಹಿರಿಯ ಉಪನ್ಯಾಸಕರಾದ ಗೋಪಾಲಕೃಷ್ಣ ಗೋರೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕ ಪ್ರಮೋದ್ ನಾಯಕ್ ಇವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಉಪನ್ಯಾಸಕ ರತ್ನಾಕರ ಪೂಜಾರಿ ನಿರೂಪಿಸಿದರು.



































