ಕ್ರೈಸ್ಟ್ ಕಿಂಗ್: ರೋವರ್ಸ್ ಮತ್ತು ರೇಂಜರ್ಸ್ ಪುನಶ್ಚೇತನಾ ಕಾರ್ಯಾಗಾರ

0

 

ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸದಸ್ಯರಿಗೆ ಒಂದು ದಿನದ ಪುನಶ್ಚೇತನಾ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಉಡುಪಿ ಜಿಲ್ಲಾ ಮುಖ್ಯ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿ ಅವರು ದೀಪ ಬೆಳಗಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು “ಪ್ರಕೃತಿ ಹಾಗೂ ಸಮಾಜದಿಂದ ಎಲ್ಲವನ್ನೂ ಪಡೆದುಕೊಳ್ಳುವ ನಾವು ತಿರುಗಿ ಏನು ಕೊಡುತ್ತೇವೆ ಎಂದು ಯೋಚಿಸಬೇಕು. ಹಿಂತಿರುಗಿ ಏನನ್ನಾದರೂ ನೀಡುವಲ್ಲಿ ಸ್ಕೌಟ್ ಗೈಡ್ಸ್ನಂತಹ ಸಂಸ್ಥೆಗಳು ನಮಗೆ ಅವಕಾಶ ಮಾಡಿಕೊಡುತ್ತವೆ. ರೋವರ್ಸ್ ಮತ್ತು ರೇಂಜರ್ಸ್ ಘಟಕಗಳು ಮಕ್ಕಳಲ್ಲಿ ಕೌಶಲ ವೃದ್ಧಿಸಿ ಧನಾತ್ಮಕ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗುತ್ತವೆ” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಭಾರತ್ ಸ್ಕೌಟ್ಸ್ ಗೈಡ್ಸ್ನ ಉಡುಪಿ ಜಿಲ್ಲಾ ಮುಖ್ಯಸ್ಥರಾದ ಡಾ.ಗಣನಾಥ ಎಕ್ಕಾರು ಅವರು ಮಾತನಾಡಿ “ಸಮಾಜ ಸೇವೆ ನಮ್ಮ ಜೀವನದ ಅವಿಭಾಜ್ಯ ಭಾಗವಾಗಬೇಕು, ವಿದ್ಯಾರ್ಥಿಗಳು ಸೇವಾಭಾವನೆ ಬೆಳೆಸಿಕೊಂಡು ಸಮಾಜಮುಖಿ ವ್ಯಕ್ತಿಗಳಾಗಿ ಬೆಳೆಯಬೇಕು” ಎಂದು ಹೇಳಿದರು.

ಅತಿಥಿಗಳಾಗಿದ್ದ ಉಡುಪಿ ಜಿಲ್ಲಾ ಗೈಡ್ಸ್ ಆಯುಕ್ತರಾದ ಶ್ರೀಮತಿ ಜ್ಯೋತಿ ಪೈ ಅವರು ಮಾತನಾಡಿ “ಮಕ್ಕಳು ತಂದೆ-ತಾಯಿ, ಗುರುಗಳು ಹಾಗೂ ಜನ್ಮಭೂಮಿಯನ್ನು ಎಂದಿಗೂ ಮರೆಯಬಾರದು, ಗೈಡ್ಸ್ನಂತಹ ಸಂಸ್ಥೆಗಳು ನಮ್ಮನ್ನು ಪರೋಪಕಾರಿಗಳನ್ನಾಗಿ ಮಾಡುತ್ತವೆ. ಮಕ್ಕಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಬೇಕು” ಎಂದು ಹೇಳಿದರು.

ಇನ್ನೋರ್ವ ಅತಿಥಿ ಕಾರ್ಕಳ ಸ್ಥಳೀಯ ಸಂಸ್ಥೆಗಳ ಉಪಾಧ್ಯಕ್ಷೆ ಶ್ರೀಮತಿ ಸಾವಿತ್ರಿ ಮನೋಹರ್ ಅವರು ಸ್ಕೌಟ್ ಗೈಡ್ಸ್ ಗೀತೆಗಳ ಗಾಯನದ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಲಕ್ಷ್ಮಿನಾರಾಯಣ ಕಾಮತ್ ಅವರು ಮಾತನಾಡಿ “ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಯಾವುದಾದರೂ ಒಂದು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು, ಮೊಬೈಲ್ ಮತ್ತು ಸಾಮಾಜಿಕ ಜಾಲಾತಾಣಗಳ ಚಟಗಳಿಂದ ಹೊರಬರಲು ಹಾಗೂ ನಮ್ಮ ದೇಹವನ್ನು ಸದೃಢವಾಗಿಸಲು ರೋವರ್ಸ್ ಮತ್ತು ರೆಂಜರ್ಸ್ ಗಳಂತಹ ಚಟುವಟಿಕೆಗಳು ತುಂಬಾ ಸಹಕಾರಿ” ಎಂದು ಹೇಳಿದರು.

ಉಡುಪಿ ಜಿಲ್ಲಾ ಸ್ಕೌಟ್ಸ್ನ ಸಹಾಯಕ ಆಯುಕ್ತರಾದ ವಿತೇಶ್ ಕಾಂಚನ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಇಡೀ ದಿನದ ಪುನಶ್ಚೇತನಾ ಕಾರ್ಯಾಗಾರದ ತರಬೇತಿ ನಡೆಸಿಕೊಟ್ಟರು. ಸಂಸ್ಥೆಯ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಅರ್ಥಶಾಸ್ತ್ರ ಉಪನ್ಯಾಸಕಿ, ರೇಂಜರ್ ಲೀಡರ್ ಕು.ಅಭಿನಯ ಸ್ವಾಗತಿಸಿ ದೈಹಿಕ ಶಿಕ್ಷಣ ನಿರ್ದೇಶಕ, ರೋರ‍್ಸ್ ಸ್ಕೌಟ್ ಲೀಡರ್ ಕೃಷ್ಣಪ್ರಸಾದ್ ಪ್ರಸ್ತಾವನೆಗೈದರು. ಉಪನ್ಯಾಸಕ ಉಮೆಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

   

LEAVE A REPLY

Please enter your comment!
Please enter your name here