Home ಕಾರ್ಕಳ ದಿ| ಎಂ.ಕೆ. ವಿಜಯ ಕುಮಾರ್‌ ರವರಿಗೆ ಕಾರ್ಕಳ ಬಿಜೆಪಿ ವತಿಯಿಂದ ಅ.25 ರಂದು ನುಡಿನಮನ ಕಾರ್ಯಕ್ರಮ

ದಿ| ಎಂ.ಕೆ. ವಿಜಯ ಕುಮಾರ್‌ ರವರಿಗೆ ಕಾರ್ಕಳ ಬಿಜೆಪಿ ವತಿಯಿಂದ ಅ.25 ರಂದು ನುಡಿನಮನ ಕಾರ್ಯಕ್ರಮ

0

 

ಅ. 03 ಶುಕ್ರವಾರದಂದು ನಮ್ಮನ್ನು ಅಗಲಿದ ಕಾರ್ಕಳ ಬಿಜೆಪಿಯ ಹಿರಿಯ ಮುಖಂಡ, ಖ್ಯಾತ ನ್ಯಾಯವಾದಿಗಳಾದ ಎಂ. ಕೆ. ವಿಜಯ್‌ ಕುಮಾರ್‌ ರವರು ಕಾರ್ಕಳ ಬಿಜೆಪಿಗೆ, ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.

ಶ್ರೀಯುತರ ಆತ್ಮಕ್ಕೆ ಸದ್ಗತಿ ಕೋರಿ ಕಾರ್ಕಳ ಬಿಜೆಪಿ ಮಂಡಲದ ವತಿಯಿಂದ ಬಿ ಮಂಜುನಾಥ ಪೈ ಸಭಾಂಗಣದಲ್ಲಿ ಅ. 25 ರಂದು ಬೆಳಿಗ್ಗೆ 10.00 ಗಂಟೆಗೆ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಹಿರಿಯರು, ಶಾಸಕರು, ಪ್ರಮುಖರು ಭಾಗವಹಿಸಲಿದ್ದಾರೆ.

ಎಂ ಕೆ ವಿಜಯ ಕುಮಾರ್‌ ರವರ ಅಭಿಮಾನಿಗಳು, ಪಕ್ಷದ ಹಿರಿಯರು, ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಗಲಿದ ಹಿರಿಯ ಚೇತನಕ್ಕೆ ನಮನ ಸಲ್ಲಿಸಬೇಕಾಗಿ ಕಾರ್ಕಳ ಬಿಜೆಪಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಜಾಹೀರಾತು    

NO COMMENTS

LEAVE A REPLY

Please enter your comment!
Please enter your name here