ಕಾರ್ಕಳ:ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಧರ್ ಭಟ್ ಅವರಿಗೆ ಸನ್ಮಾನ
ಶ್ರೀಧರ ಭಟ್ರ ಮೂಲಕ ಬಲಿ ಮೂರ್ತಿ ಸೇವೆಯಲ್ಲಿ ದೇವರ ಪ್ರತಿಬಿಂಬ ಕಾಣುತಿದ್ದೇವೆ-ಗಿರೀಶ್ ರಾವ್
ಶ್ರೀ ಕ್ಷೇತ್ರ ಹಿರಿಯoಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುಮಾರು 55 ವರ್ಷಗಳಿಂದ ಬಲಿ ಸೇವೆಯನ್ನು ನೀಡುತ್ತಿರುವ ಶ್ರೀಧರ್ ಭಟ್ ರವರಿಗೆ ಈ ವರ್ಷ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ದೇವಸ್ಥಾನದ ದೀಪೋತ್ಸವದ ಪ್ರಯುಕ್ತ ಜರಗುವ ವರ್ಷಾವಧಿ ಬಲಿ ಉತ್ಸವ ಮೆರವಣಿಗೆಯ ಸಂದರ್ಭ ಇವರನ್ನು ದೇವಳದ ಆಡಳಿತ ಮಂಡಳಿಯ ಪರವಾಗಿ ಭಕ್ತಿ ಪೂರ್ವಕವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿಯವರಾದ ಶ್ರೀ ಸುಬ್ರಹ್ಮಣ್ಯ ತಂತ್ರಿ, ಕ್ಷೇತ್ರದ ಆಡಳಿತ ಮೊಕ್ತೇಸರ ಗಿರೀಶ್ ರಾವ್, ಮೊಕ್ತೆಸರರಾದ ಗಣೇಶ್ ರಾವ್, ಸುಧೀಂದ್ರರಾವ್, ರಾಮಚಂದ್ರರಾವ, ದಯಾನಂದರಾವ್, ಸೇವಾ ಸಮಿತಿಯ ಸಂಚಾಲಕರಾದ ವೀರೇಂದ್ರ ರಾವ್ ಹಾಗೂ ಸಮಾಜ ಬಂಧುಗಳು ಉಪಸ್ಥಿತರಿದ್ದರು















