Saturday, January 24, 2026
Google search engine
Homeಕಾರ್ಕಳಕಾರ್ಕಳ: ನ. 15 ರಂದು ಕಾರ್ಕಳದಲ್ಲಿ ಪಟ್ಲ ಸಂಭ್ರಮ; ಶ್ರೀದೇವಿ ಮಹಾತ್ಮೆ ಬಯಲಾಟ

ಕಾರ್ಕಳ: ನ. 15 ರಂದು ಕಾರ್ಕಳದಲ್ಲಿ ಪಟ್ಲ ಸಂಭ್ರಮ; ಶ್ರೀದೇವಿ ಮಹಾತ್ಮೆ ಬಯಲಾಟ

 

ಯಕ್ಷಗಾನ, ನಾಟಕ, ದೈವಾರಾಧನೆ, ಮುಂತಾದ ಕ್ಷೇತ್ರದ ಕಲಾವಿದರ ಶ್ರೇಯೋಭಿವೃದ್ದಿಗಾಗಿರುವ ಸಂಘಟನೆ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಾರ್ಕಳ ಘಟಕದ ಹತ್ತನೇ ವಾರ್ಷಿಕ ಸಮಾರಂಭವು ನ. 15 ರಂದು ಕಾರ್ಕಳ ಬಸ್ಸು ನಿಲ್ದಾಣ ಬಳಿಯ ಮಾರಿಗುಡಿ ವಠಾರದಲ್ಲಿ ಸಂಜೆ ಆರು ಗಂಟೆಯಿಂದ ನಡೆಯಲಿದೆ.

ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕ ಅದ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರ ಸಭಾದ್ಯಕ್ಷತೆಯಲ್ಲಿ ಕಾರ್ಕಳ ಕ್ಷೇತ್ರದ ಶಾಸಕರು, ಮಾಜಿ ಸಚಿವರಾದ ವಿ.ಸುನೀಲ್ ಕುಮಾರ್ ಉದ್ಘಾಟಿಸಲಿದ್ದಾರೆ.

ಕಾರ್ಕಳದ ಎಸ್. ಕೆ .ಎಸ್ ಇನ್ಫ್ರಾಪ್ರಾಕ್ಕ್ಚರ್ಸ್ ನ ಸುಜಯ್ ಶೆಟ್ಟಿ, ಅಜೆಕಾರ್ ನಂದ ಕುಮಾರ್ ಹೆಗ್ಡೆ, ಸಾಣೂರು ಯುವರಾಜ ಜೈನ್, ಹಾಗೂ ಕೇಂದ್ರೀಯ ಸಮಿತಿಯ ಪ್ರದಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾದಿಕಾರಿ ಸುದೇಶ್ ಕುಮಾರ್ ರೈ ಇವರಗಳು ಗೌರವ ಉಪಸ್ಥಿತಿ ಇರಲಿದೆ.

ಈ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ವ್ಯವಸಾಯ ಮಾಡಿ ನಿವೃತ್ತರಾದ ದಿ.ವಸಂತ ಆಚಾರ್ ಇವರಿಗೆ ಮರಣೋತ್ತರವಾಗಿ, ಮತ್ತು ನಂದಳಿಕೆ ಜನಾರ್ದನ ಶಾಸ್ತ್ರೀ ಇವರಿಗೆ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಿಕ್ಕಿದೆ.

ಪಾವಂಜೆಯ ಜ್ಞಾನಶಕ್ತಿ ಸುಬ್ರಹ್ಮಣ್ಯ ಮೇಳದವರಿಂದ ಕಾಲಮಿತಿಯಲ್ಲಿ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ. ಕಲಾಭಿಮಾನಿಗಳಿಗೆ ಆದರದ ಸ್ವಾಗತ ಎಂದು ಸಂಸ್ಥೆಯ ಅದ್ಯಕ್ಷ ವಿಜಯ ಶೆಟ್ಟಿ, ಕಾರ್ಯದರ್ಶಿ ಮಹಾವೀರ ಪಾಂಡಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments