
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂಸಿಎ ವಿಭಾಗವು ನ.17 ರಂದು ‘ಎಂಸಿಎ ಎಕ್ಸ್‌ಪ್ರೊ – 2025’ ಅನ್ನು ಆಯೋಜಿಸಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿರಾಂಶ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕಿ ಶಿಲ್ಪಾ ರಂಜೀತ್ ಶೆಟ್ಟಿ, ತಮ್ಮ ಉದ್ಘಾಟನಾ ಭಾಷಣದಲ್ಲಿ, ‘ಎಂಸಿಎ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ತಾಂತ್ರಿಕ ಹಾಗೂ ಅತಾಂತ್ರಿಕ ಜ್ಞಾನಕ್ಕೆ ಸಮಾನ ಮಹತ್ವ ನೀಡಬೇಕು. ಎಂಸಿಎ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ವೃದ್ಧಿಗಾಗಿ ಇಂತಹ ಪ್ರಾಜೆಕ್ಟ್ ಪ್ರದರ್ಶನಗಳು ಬಹುಮುಖ್ಯವಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಹಾಜರಿದ್ದ ನಿಟ್ಟೆ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ ಅವರು ಎಂ.ಸಿ.ಎ. ವಿಭಾಗದ ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಅವರ ಜೀವನವನ್ನು ರೂಪಿಸುವಲ್ಲಿ ಬಹಳಷ್ಟು ಸಹಕಾರಿಯಾಗಲಿದೆ. ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡ ವಿಭಾಗದ ಚಿಂತನೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಚಾರ್ಯರಾದ ಡಾ. ನಿರಂಜನ್ ಎನ್ ಚಿಪ್ಲುಂಕರ್, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ‘ವರ್ಷದಿಂದ ವರ್ಷ ವಿದ್ಯಾರ್ಥಿಗಳ ಉತ್ಸಾಹ ಹೆಚ್ಚುತ್ತಿರುವುದರಿಂದ ಪ್ರಾಜೆಕ್ಟ್‌ಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ’ ಎಂದು ಪ್ರಶಂಸಿದರು.
ಸ್ಕ್ಲೆರಾ ಕಂಪನಿಯ iOS ಡೆವಲಪರ್ ಹಾಗೂ ನಮ್ಮ ಹಳೆಯ ವಿದ್ಯಾರ್ಥಿನಿ ಚೈತ್ರಾ ಸಾಲಿಯನ್, ಹಾಗೂ ಅಕಮೈ ಟೆಕ್ನಾಲಜೀಸ್‌ನ SRE ವೇಲನ ಸಲೀಸ್ ವಿಶೇಷ ಅತಿಥಿಗಳಾಗಿ ಹಾಜರಿದ್ದರು.
ಈ ಸಂದರ್ಭದಲ್ಲಿ ನಿಟ್ಟೆ ಆಫ್ ಕ್ಯಾಂಪಸ್ ಸೆಂಟರ್‌ನ ಪರೀಕ್ಷಾ ನಿಯಂತ್ರಕರು ಡಾ. ಸುಬ್ರಮಣ್ಯ ಭಟ್, ಡಾ.ಎನ್‌ಎಸ್‌ಎಎಂ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾ ಬಿ.ಕೆ. ಹಾಗೂ ವಿನಮಿತಾ ಹಳೆವಿದ್ಯಾರ್ಥಿ ಸಂಘದ ಖಜಾಂಚಿ ಡಾ. ಹರ್ಷಿತಾ ಉಪಸ್ಥಿತರಿದ್ದರು.
ಎಂಸಿಎ ವಿಭಾಗದ ಮುಖ್ಯಸ್ಥೆ ಡಾ. ಮಮತಾ ಬಲಿಪ ಸ್ವಾಗತಿಸಿದರು. ಪ್ರಾಜೆಕ್ಟ್ ಸಂಯೋಜಕಿ ಡಾ. ಸ್ಪೂರ್ತಿ ಶೆಟ್ಟಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಎಂ.ಸಿ.ಎ ವಿನಮಿತಾ ಸಂಯೋಜಕ ಕೀರ್ತಿ ಶೆಟ್ಟಿ ವಂದಿಸಿದರು. ಸೋಹನ್ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮದ ನಿರ್ಣಾಯಕರಾದ ಡಾ. ಸಾರಿಕಾ ಹೆಗ್ಡೆ, ಡಾ. ಮಂಜುಳಾ ಗುರುರಾಜ್ ಮತ್ತು ಡಾ. ಶಬರಿ ಶೆಟ್ಟಿ ಉಪಸ್ಥಿತರಿದ್ದರು. 170 ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದವು.












