
ಸ.ಕಿ.ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಓಂ ಶ್ರೀ ಹಳೆವಿದ್ಯಾರ್ಥಿ ಸಂಘ ನೇತೃತ್ವದಲ್ಲಿ ಅಂಗನವಾಡಿ ಹಾಗೂ ಸ್ತ್ರೀ ಶಕ್ತಿ ಗುಂಪುಗಳ ಸಹಭಾಗಿತ್ವದಲ್ಲಿ ನ.15 ರಂದು ಜರಗಿತು.
ಬೆಳಿಗ್ಗೆ ಓಂ. ಶ್ರೀ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕೇಶ್ ಕೋಟ್ಯಾನ್,
ಎಸ್.ಡಿ.ಎಂ.ಸಿ ಅಧ್ಯಕ್ಷೆ ರಂಜಿತಾ, ಕಾಂತಾವರ ಗ್ರಾ.ಪಂ ಸದಸ್ಯರಾದ ಸುಧಾಕರ ಪೂಜಾರಿ ನಡಿಲ್ಲ, ಅಮಿತಾ ಕರುಣಾಕರ ಕೋಟ್ಯಾನ್ ಉಪಸ್ಥಿತಿಯಲ್ಲಿ ಶಾಲಾ ಸ್ಥಾಪಕ ಅಧ್ಯಕ್ಷ ಸದಾಶಿವ ಗುಜರನ್ ಬಾಂದೊಟ್ಟು ಧ್ವಜಾರೋಹಣಗೈದರು.
ಕಾಂತಾವರ ಗ್ರಾ.ಪಂ ಅಧ್ಯಕ್ಷ ರಾಜೇಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯ ಶಿಕ್ಷಕಿ ಜೆಸಿಂತಾ ಶಾಲಾ ವರದಿ ವಾಚಿಸಿದರು.
ಖ್ಯಾತ ವಾಗ್ಮಿ ದಾಮೋದರ ಶರ್ಮ ನಿಯೋಜಿತ ಭಾಷಣದಲ್ಲಿ ಗುರು ಹಾಗೂ ಶಿಷ್ಯರ ಸಂಭಂಧದ ಬಗ್ಗೆ ಹಾಗೂ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬೆಳಿಸಿಕೊಂಡು ಹೋಗುವ ಪ್ರಸ್ತುತ ಅನಿವಾರ್ಯತೆಯನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ವಾಗ್ಮಿ ಉದ್ಯಮಿಗಳಾದ ಹರ್ಷವರ್ಧನ ನಿಟ್ಟೆ ಮಾತನಾಡಿ ಕನ್ನಡ ಮಾಧ್ಯಮ ಶಾಲೆ ಉಳಿಸುವ ನಿಟ್ಟಿನಲ್ಲಿ ನಮ್ಮ ಪಾತ್ರ ಏನು ಎಂದು ವಿವರಿಸಿದರು.
ಸ್ತ್ರೀಶಕ್ತಿ ಗುಂಪುಗಳ ಬೆಳ್ಳಿ ಹಬ್ಬದ ಸಂಭ್ರಮ
ಸಂಜೆ ಸ್ತ್ರೀಶಕ್ತಿ ಗುಂಪುಗಳ ಬೆಳ್ಳಿ ಹಬ್ಬದ ಸಂಭ್ರಮ ಕಾರ್ಯಕ್ರಮವನ್ನು ಕಾಂತಾವರ ಶಾಲೆಯ ನಿವೃತ್ತ ಅಧ್ಯಾಪಕ ಧರ್ಮರಾಜ ಕಂಬಳಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅಂಗನವಾಡಿ ಕಾರ್ಯಕರ್ತೆ ಸುಜಾತ ಕೋಟ್ಯಾನ್ ಸ್ವಾಗತಿಸಿ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ತಂಡದ ಸಕ್ರೀಯ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು.
ಸಂಜೀವ ಕೋಟ್ಯಾನ್ ಕಡತ್ರಬೈಲು ಉಪಸ್ಥಿತರಿದ್ದರು.
ಸನ್ಮಾನ ಹಾಗೂ ಗುರುವಂದನೆ
ಇದೇ ಸಂದರ್ಭದಲ್ಲಿ ಸುಧೀರ್ಘ 17 ವರ್ಷಗಳ ಕಾಲ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನ್ಯಾನ್ಸಿ ಮಾರ್ಟಿಸ್ ಹಾಗೂ 30 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಜಾತ ಕೋಟ್ಯಾನ್ ಇವರನ್ನು ಸನ್ಮಾನಿಸಲಾಯಿತು.
ಶಾಲಾ ಶಿಕ್ಷಕರಿಗೆ ಗುರವಂದನೆ ಹಾಗೂ ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ ಮಾಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್ ಗಿರಿಜಮ್ಮ , BERT ಜ್ಯೋತಿ, ಬೆಳ್ಮಣ್ ಕಸ್ಟರ್ CRP ನವೀನ್ ಪೂಜಾರಿ, ಕಾಂತಾವರ ಗ್ರಾ.ಪಂ ಉಪಾಧ್ಯಕ್ಷ ಪ್ರಭಾಕರ್ ಕುಲಾಲ್ ಬೇಲಾಡಿ, ಎಂ ಸಂಜೀವ ಕೋಟ್ಯಾನ್ ಮಿತ್ತಲಚ್ಚಿಲು ಉಪಸ್ಥಿತರಿದ್ದರು.
ಅಂಗನವಾಡಿ, ಶಾಲಾ ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ನಂತರ ಮನರಂಜನಾ ಕಾರ್ಯಕ್ರಮ ಅಂಗವಾಗಿ ಹರಿಪ್ರಸಾದ್ ನಂದಳಿಕೆ ರಚಿಸಿ ನಿರ್ದೇಶನದ ತುಳುವಸಿರಿ ನಂದಳಿಕೆ ತಂಡದ ಕಲಾವಿದರಿಂದ ಕೈತಲ್ ಪೋವೊಡ್ಚಿ ನಾಟಕ ಪ್ರದರ್ಶನಗೊಂಡಿತು.
ಓಂ ಶ್ರೀ ಹಳೆವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಸುಕೇಶ್ ಕೋಟ್ಯಾನ್ ಕಾಂತಾವರ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಶಾಂತ್ ಆಚಾರ್ಯ ವರ್ಣಬೆಟ್ಟು, ಸಂತೋಷ್ ಪೂಜಾರಿ ಕೆರ್ವಾಶೆ ನಿರೂಪಿಸಿದರು. ಹಳೆವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಕೊಳಕೆಬೈಲು ಸುದರ್ಶನ ಆಚಾರ್ಯ ಧನ್ಯವಾದವಿತ್ತರು.




