
ಕಾರ್ಕಳದ ಜನಪ್ರಿಯ ಕನ್ಸ್ಟ್ರಕ್ಷನ್ ಸಂಸ್ಥೆಯಾದ ವೈಟ್ ಬಿಲ್ಡ್ ಕಚೇರಿ ನೂತನವಾಗಿ ನ. 27 ರಂದು ಕಾರ್ಕಳದ ಸಾಲ್ಮರ ಸುನೀತಾ ಮೋಟರ್ಸ್ ನ ಎದುರುಗಡೆಯ ಪ್ರೈಮ್ ವಿಸ್ತಾರ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.
ಕಚೇರಿ ಉದ್ಘಾಟಕರಾಗಿ ಕೃಷ್ಣಾಪುರ ಮಠ ಜಗದ್ಗುರು ಮದ್ವಾಚಾರ್ಯ ಮೂಲ ಮಹಾಸಂಸ್ಥಾನ ಉಡುಪಿ ಸ್ವಾಮೀಜಿಗಳಾದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಆಗಮಿಸಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕನ್ನರ್ಪಾಡಿ ಕಿನ್ನಿಮುಲ್ಕಿ ಉಡುಪಿಯ ಪೂರ್ವಾಧ್ಯಕ್ಷರಾದ ಕೆ. ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿರಲಿದ್ದಾರೆ.













