ಉಡುಪಿಯ ಹಿಂದೂ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ- ವಿಖ್ಯಾತ್ ಶೆಟ್ಟಿ
ಕಾರ್ಕಳ:ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಛೇರಿ ಬಳಿ ಜಿಹಾದಿ ಮನಸ್ಥಿತಿಯ ಮುಸ್ಲಿಂ ಗೂಂಡಾಗಳಿಂದ ಕಾಂಗ್ರೆಸ್ ನ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಅದರಲ್ಲೂ ಪ್ರಮುಖವಾಗಿ ಕರಾವಳಿ ಪ್ರದೇಶದಲ್ಲಿ ಹಿಂದೂ ಕಾಂಗ್ರೆಸ್ ಕಾರ್ಯಕರ್ತರ ದಯನೀಯ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದ್ದು ಜನಸಾಮಾನ್ಯರಿಗೆ ಸೂಕ್ತ ರಕ್ಷಣೆ ಇಲ್ಲದಂತೆ ಆಗಿದೆ. ಇವರ ಓಲೈಕೆ ಹಾಗೂ ತುಷ್ಠೀಕರಣ ರಾಜಕೀಯದಿಂದಾಗಿ ರಾಜ್ಯದ ಹಲವೆಡೆ ಗಲಭೆ, ಅತ್ಯಾಚಾರದಂತಹ ಅಹಿತಕರ ಘಟನೆಗಳು ನಿರಂತರವಾಗಿ ನಡೆಯುತ್ತಲೆ ಇದ್ದು, ಇದೀಗ ತಮ್ಮದೆ ಪಕ್ಷದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುವಷ್ಟರ ಮಟ್ಟಿಗೆ ಅದು ಮುಂದುವರಿದಿದೆ.
ನಮಗೆ ಒಬ್ಬ ಹಿಂದೂ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ನಮ್ಮ ಹಿಂದೂನೇ, ಬಿಜೆಪಿ ಪಕ್ಷದಲ್ಲಿದ್ದರೂ ನಮ್ಮ ಹಿಂದೂವೇ. ಹಾಗಾಗಿ ಅಗತ್ಯ ಬಿದ್ದರೆ ಹಲ್ಲೆಗೊಳಗಾದ ಕಾಂಗ್ರೆಸ್ ನ ಹಿಂದೂ ಕಾರ್ಯಕರ್ತರ ಬೆಂಬಲವಾಗಿ ನಮ್ಮ ಹಿಂದೂಪರ ಸಂಘ ಪರಿವಾರದ ಕಾರ್ಯಕರ್ತರು ರಕ್ಷಣೆ ನೀಡಲು ತಯಾರಿದ್ದೇವೆ. ನೀವು ಯಾವಾಗ ಬೇಕಾದರೂ ನಮ್ಮ ನೆರವು ಕೇಳಬಹುದು. ಮುಸ್ಲಿಂ ಗೂಂಡಾಗಳಿಂದ ಹಿಂದೂಗಳ ಮೇಲೆ ಎಲ್ಲಯೇ ದಬ್ಬಾಳಿಕೆ ನಡೆದರು ನಾವು ಸಹಿಸುವುದಿಲ್ಲ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.