Wednesday, September 18, 2024
Google search engine
Homeಕಾರ್ಕಳಬಿಜೆಪಿ ನಾಯಕರು ಕಾಂಗ್ರೆಸ್ ಕಾರ್ಯಕರ್ತರ ಚಿಂತೆ ಬಿಟ್ಟು, ಬಿಜೆಪಿ ನಾಯಕರಿಂದ ದೌರ್ಜನ್ಯಕ್ಕೊಳಗಾಗಿರುವ ಬಿಜೆಪಿಯ ಬಡ ಕಾರ್ಯಕರ್ತರಿಗೆ...

ಬಿಜೆಪಿ ನಾಯಕರು ಕಾಂಗ್ರೆಸ್ ಕಾರ್ಯಕರ್ತರ ಚಿಂತೆ ಬಿಟ್ಟು, ಬಿಜೆಪಿ ನಾಯಕರಿಂದ ದೌರ್ಜನ್ಯಕ್ಕೊಳಗಾಗಿರುವ ಬಿಜೆಪಿಯ ಬಡ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆಯನ್ನು ನೀಡಲಿ: ಪ್ರದೀಪ್ ಬೇಲಾಡಿ

ಬಿಜೆಪಿ ನಾಯಕರು ಕಾಂಗ್ರೆಸ್ ಕಾರ್ಯಕರ್ತರ ಚಿಂತೆ ಬಿಟ್ಟು, ಬಿಜೆಪಿ ನಾಯಕರಿಂದ ದೌರ್ಜನ್ಯಕ್ಕೊಳಗಾಗಿರುವ ಬಿಜೆಪಿಯ ಬಡ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆಯನ್ನು ನೀಡಲಿ: ಪ್ರದೀಪ್ ಬೇಲಾಡಿ

ಕಾರ್ಕಳದ ಅತ್ಯಾಚಾರ ಪ್ರಕರಣದಲ್ಲಿ ಪೋಲಿಸರು ಬಂಧಿಸಿರುವ ಮೂರನೆ ಆರೋಪಿಯಾದ ಅಭಯ್ ಎನ್ನುವಾತ ಶಾಸಕ ಸುನೀಲ್ ಕುಮಾರ್ ಬೆಂಬಲಿಗ ಎನ್ನುವ ವಿಚಾರ ಬಹಿರಂಗವಾಗುತ್ತಿದ್ದಂತೆ ಕಾರ್ಕಳ ಬಿಜೆಪಿ ಮುಖ ಉಳಿಸಿಕೊಳ್ಳಲು ಪರದಾಡುತ್ತಿದ್ದು ಅತ್ಯಾಚಾರದ ಖಂಡನೆ, ಹೋರಾಟ ಎಲ್ಲವನ್ನೂ ಕೈಬಿಟ್ಟು ಕ್ಷುಲ್ಲಕ ವಿಚಾರಗಳಿಗೆ ಹೇಳಿಕೆಯನ್ನು ನೀಡಿ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಸುತ್ತಿದೆ. ಅತ್ಯಾಚಾರ ಆರೋಪಿ ಬಿಜೆಪಿ ಬೆಂಬಲಿಗನಾಗಿರುವುದರಿಂದ ಅವಮಾನಕ್ಕೊಳಗಾಗಿರುವ ಕಾರ್ಕಳ ಬಿಜೆಪಿ ನಾಯಕರು ಹೊಸ ವರಸೆಯನ್ನು ಆರಂಭಿಸಿದ್ದು ಕಾಂಗ್ರೆಸ್ ಪಕ್ಷದಲ್ಲಿರುವ ಹಿಂದು ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎನ್ನುವ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿರುವುದು ಅವರ ಹತಾಶೆಗೆ ಸಾಕ್ಷಿಯಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿರುವ ಹಿಂದು ಕಾರ್ಯಕರ್ತರಿಗೆ ಯಾರ ರಕ್ಷಣೆಯ ಅವಶ್ಯಕತೆಯೂ ಇಲ್ಲ. ಬಂಡವಾಳಶಾಹಿ, ಸರ್ವಾಧಿಕಾರಿ ಮನೋಭಾವನೆಯ ಬಿಜೆಪಿ ನಾಯಕರಿಂದ ಕೊಲೆ, ಹಲ್ಲೆ ಮುಂತಾದ ಕೃತ್ಯಗಳಿಂದ ದೌರ್ಜನ್ಯಕ್ಕೊಳಗಾಗಿರುವ ಬಡ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆಯ ಅಗತ್ಯವಿದೆ. ಬಿಜೆಪಿಯಲ್ಲಿ ಬಡ ಹಿಂದುಳಿದ ವರ್ಗಗಳ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆಯೇ ಇಲ್ಲವಾಗಿದ್ದು, ಬಿಜೆಪಿ ನಾಯಕರ ಅನಾಚಾರ, ಭ್ರಷ್ಟಾಚಾರಗಳನ್ನು ಪ್ರಶ್ನೆ ಮಾಡುವ ಬಡ ಹಿಂದುಳಿದ ವರ್ಗಗಳ ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಲಾಗುತ್ತಿದೆ, ಮನೆಗೆ ನುಗ್ಗಿ ಹಲ್ಲೆ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯ ಬೈಂದೂರಿನ ಯಡಮೊಗೆಯ ಉದಯ ಗಾಣಿಗ ಎನ್ನುವ ಬಿಜೆಪಿ ಕಾರ್ಯಕರ್ತನ ಕೊಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆರೋಪಿಯಾಗಿರುವುದು ಇದಕ್ಕೆ ಸಾಕ್ಷಿ.

ಹೆಬ್ರಿ ಸಮೀಪದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿಯವರನ್ನು ಪರಿವಾರ ಸಂಘಟನೆಗಳ ಕಾರ್ಯಕರ್ತರು ನಡು ರಸ್ತೆಯಲ್ಲಿ ಹೊಡೆದು ಸಾಯಿಸಿರುವುದನ್ನು ಜಿಲ್ಲೆಯ ಜನತೆ ಮರೆತಿಲ್ಲ. ಬಿಜೆಪಿ ನಾಯಕರ ಭ್ರಷ್ಟಾಚಾರಗಳನ್ನು ಪ್ರಶ್ನೆ ಮಾಡುತ್ತಿದ್ದ ಬಿಜೆಪಿ ಬೆಂಬಲಿಗರೂ ಆಗಿದ್ದ ಮಾಹಿತಿ ಹಕ್ಕು ಕಾರ್ಯಕರ್ತರಾದ ವಿನಾಯಕ ಬಾಳಿಗ ಎನ್ನುವವರನ್ನು ಹತ್ಯೆ ನಡೆಸಿದ ಕೇಸಿನಲ್ಲಿ ಬಿಜೆಪಿ ನಾಯಕ ನರೇಂದ್ರ ಮೋದಿ ಬ್ರಿಗೇಡ್ (ನಮೋ ಬ್ರಿಗೇಡ್) ಇದರ ರಾಜ್ಯಾಧ್ಯಕ್ಷ ನರೇಶ್ ಶೆಣೈ ಕೊಲೆ ಆರೋಪಿಯಾಗಿರುವುದು ಬಿಜೆಪಿಯಲ್ಲಿ ಬಡ ಕಾರ್ಯಕರ್ತರನ್ನು ಹೇಗೆ ಕೊಲೆ ಮಾಡಲಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಕಾರ್ಕಳದ ನಗರ ಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ದಿಸಿದ್ದ ಬಡ ಬಿಜೆಪಿ ಕಾರ್ಯಕರ್ತರೋರ್ವರ ಮನೆಗೆ ಅಪರಾತ್ರಿಯಲ್ಲಿ ನುಗ್ಗಿದ ಬಿಜೆಪಿ ಬೆಂಬಲಿಗ ಗೂಂಡಾಗಳು ಮಹಿಳೆಯರನ್ನೂ ಬಿಡದೆ ಮನೆ ಮಂದಿಯ ಮೇಲೆ ಹಲ್ಲೆ ನಡೆಸಿರುವುದನ್ನು ಕಾರ್ಕಳದ ಜನತೆ ಮರೆತಿಲ್ಲ.

ಕಾಂಗ್ರೆಸ್ ಕಾರ್ಯಕರ್ತರಿಗೆ ರಕ್ಷಣೆ ನೀಡುತ್ತೇವೆ ಎಂದು ಹೇಳಿಕೆ ನೀಡುವ ಬಿಜೆಪಿ ನಾಯಕರು ಮೊದಲು ತಮ್ಮದೇ ಪಕ್ಷದ ಬಡ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆಯನ್ನು ನೀಡಲಿ ಎಂದು ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರದೀಪ್ ಬೇಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments