Thursday, February 26, 2026
Google search engine
Homeಕಾರ್ಕಳಜೋಡುರಸ್ತೆ:ಮಾನಸ ಕಂಫರ್ಟ್ಸ್ ಶುಭಾರಂಭ

ಜೋಡುರಸ್ತೆ:ಮಾನಸ ಕಂಫರ್ಟ್ಸ್ ಶುಭಾರಂಭ

ಜೋಡುರಸ್ತೆ:ಮಾನಸ ಕಂಫರ್ಟ್ಸ್ ಶುಭಾರಂಭ

ಕಾರ್ಕಳ:ನವೀನ್ ದೇವಾಡಿಗ,ಮಧುರಾಜ್ ಶೆಟ್ಟಿ ಹಾಗೂ ಶಾಕಿರ್ ರವರ ಪಾಲುದಾರಿಕೆಯಲ್ಲಿ ಜೋಡುರಸ್ತೆಯ ಕಾರ್ಲ ಸಿಟಿ ಸೆಂಟರ್ ನಲ್ಲಿ ಮಾನಸ ಕಂಫರ್ಟ್ಸ್ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಶುಭಾರಂಭಗೊಂಡಿತು.ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಉದ್ಘಾಟಿಸಿ ನೂತನ ಉದ್ಯಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾನಸ ಕಂಫರ್ಟ್ಸ್ ವತಿಯಿಂದ ಕುಕ್ಕುಂದೂರು ಪಂಚಾಯತ್ ನ ಸ್ವಚ್ಛತಾ ಕಾರ್ಮಿಕರಿಗೆ, ಬಜಗೋಳಿಯ ಅಹಿಂಸೆ ಅನಿಮಲ್ ಕೇರ್, ವಿಜೇತ ವಿಶೇಷ ಶಾಲೆ, ಕಾರ್ಕಳದ ಮೈನ್ ಶಾಲೆಗೆ ನೆರವು,ಕಾರ್ಕಳ ಪೊಲೀಸ್ ಠಾಣೆಗೆ ಬ್ಯಾರಿಕೇಡ್ ವಿತರಣೆ ಸೇರಿದಂತೆ ಒಟ್ಟು 6 ಸೇವಾ ಕಾರ್ಯವನ್ನು ನಡೆಸಲಾಯಿತು.

ಕಿಸಾನ್ ಸಭಾ ಟ್ರಸ್ಟ್ ಅಧ್ಯಕ್ಷ ಹರ್ಷ ಮೊಯ್ಲಿ, ಕ್ರಿಯೇಟಿವ್ ಕಾಲೇಜು ಸಹ ಸಂಸ್ಥಾಪಕ ಗಣನಾಥ ಶೆಟ್ಟಿ,ಹಿರಿಯ ವಕೀಲ ಮಣಿರಾಜ್ ಶೆಟ್ಟಿ,ಹರಿ ಮೊಗೇರಾಯ,ನೀರೇ ಕೃಷ್ಣ ಶೆಟ್ಟಿ,ಮಾಜಿ ಪುರಸಭಾ ಸದಸ್ಯ ಅಷ್ಪಕ್ ಅಹಮದ್,ಪ್ರಕಾಶ್ ಜೆವೆಲ್ಲರ್ಸ್ ನ ಪ್ರಕಾಶ್ ಆಚಾರ್ಯ,ಕುಕ್ಕುಂದೂರು ಪಂಚಾಯತ್ ಮಾಜಿ ಅಧ್ಯಕ್ಷೆ ಉಷಾ ಕೆ.,ಉದ್ಯಮಿ ಸಂತೋಷ್ ಡಿ.ಸಿಲ್ವಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಶೇಖರ್ ಮಡಿವಾಳ ಪ್ರಾಸ್ತಾವಿಕ ಮಾತುಗಳನ್ನಾಡಿದರು.ನವೀನ ದೇವಾಡಿಗ ಸ್ವಾಗತಿಸಿದರು.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments