ಅಬ್ಬನಡ್ಕದಲ್ಲಿ ಅದ್ದೂರಿಯ ಕೃಷ್ಣವೇಷ ಸ್ಪರ್ಧೆ ಸಮಾರೋಪ ಸಮಾರಂಭ
ನಿರಂತರ ವೈಶಿಷ್ಟಪೂರ್ಣ ಕಾರ್ಯಕ್ರಮಗಳೊಂದಿಗೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಜಿಲ್ಲೆಯಲ್ಲೇ ಮುಂಚೂಣ ಯಲ್ಲಿದೆ-ದೀಪಕ್ ಕೋಟ್ಯಾನ್ ಇನ್ನಾ
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಜೇಸಿಐ ಬೆಳ್ಮಣ್ಣು, ಯುವ ಜೇಸಿ ವಿಭಾಗ ಮತ್ತು ಮಹಿಳಾ ಜೇಸಿ ವಿಭಾಗದ ನೇತೃತ್ವದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ರವಿವಾರ ಶ್ರೀ ಕೃಷ್ಣಾಷ್ಟಮಿಯ ಪ್ರಯುಕ್ತ ಕೃಷ್ಣವೇಷ ಸ್ಪರ್ಧೆ ಜರಗಿತು. ಸ್ಪರ್ಧೆಯಲ್ಲಿ 110 ಮಕ್ಕಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಇನ್ನಾ ದೀಪಕ್ ಕೋಟ್ಯಾನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದವರು ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ನಿರಂತರ ವೈಶಿಷ್ಯಪೂರ್ಣ ಕಾರ್ಯಕ್ರಮಗಳೊಂದಿಗೆ ಜಿಲ್ಲೆಯಲ್ಲೇ ಮುಂಚೂಣ ಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ತಂತ್ರಿಗಳಾದ ನಡಿಗುತ್ತು ಸತೀಶ್ ತಂತ್ರಿ, ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಅರ್ಚಕರಾದ ಬೆಳ್ಮಣ್ಣು ಸತೀಶ್ ಭಟ್, ಬೆಳ್ಮಣ್ಣು ಶಿವಪ್ರಸಾದ್ ದೇವಾಡಿಗ, ಬೆಳ್ಮಣ್ಣು ಸಾನ್ವಿ ಎಂಟರ್ ಪ್ರೆöÊಸ್ಸಸ್ ಮಾಲಕರಾದ ರವೀಂದ್ರ ಶೆಟ್ಟಿ ಬೆಳ್ಮಣ್ಣು, ನಂದಳಿಕೆ ಶ್ರೀ ಲಕ್ಷಿö್ಮÃಜನಾರ್ದನ ಸತೀಶ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಕಾಸರಬೈಲು, ನಿಕಟ ಪೂರ್ವಾಧ್ಯಕ್ಷ ಪ್ರಶಾಂತ್ ಪೂಜಾರಿ, ಕಾರ್ಯದರ್ಶಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಕಾರ್ಯಕ್ರಮದ ನಿರ್ದೇಶಕರಾದ ಸಂಧ್ಯಾ ಶೆಟ್ಟಿ, ಬೆಳ್ಮಣ್ಣು ಜೇಸಿಐ ನಿಕಟ ಪೂರ್ವಾಧ್ಯಕ್ಷ ಸತೀಶ್ ಪೂಜಾರಿ, ಕಾರ್ಯದರ್ಶಿ ಸೌಜನ್ಯ ಕೋಟ್ಯಾನ್, ಮಹಿಳಾ ಜೇಸಿ ಸಂಯೋಜಕಿ ಶ್ವೇತಾ ಆಚಾರ್ಯ ಮೊದಲಾದವರು ವೇದಿಕೆಯಲ್ಲಿದ್ದರು.
ಸ್ಪರ್ಧೆಯು 0-02ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ, 02-04ವರ್ಷದೊಳಗಿನ ಮಕ್ಕಳಿಗೆ ಬಾಲಕೃಷ್ಣ ಸ್ಪರ್ಧೆ, 04-06 ವರ್ಷದೊಳಗಿನ ಮಕ್ಕಳಿಗೆ ಚೆಲ್ವ ಕೃಷ್ಣ ಸ್ಪರ್ಧೆ ಹಾಗೂ ೦೭ ವರ್ಷದೊಳಗಿನ ಮಗುವಿನೊಂದಿಗೆ ತಾಯಿ ಯಶೋಧ ಕೃಷ್ಣ ಸ್ಪರ್ಧೆ ನಡೆಸಲಾಯಿತು.
ಹೆಬ್ರಿ ಅಮೃತಾ ಭಾರತಿ ವಿದ್ಯಾ ಸಂಸ್ಥೆಯ ಉಪನ್ಯಾಸಕರಾದ ವೀಣೇಶ್ ಅಮೀನ್ ಅವರು ಕೃಷ್ಣವೇಷ ಸ್ಪರ್ಧಾ ಕಾರ್ಯಕ್ರಮದ ನಿರೂಪಣೆ ಮಾಡಿದರು. ನಿಟ್ಟೆ ವಿದ್ಯಾ ಸಂಸ್ಥೆಯ ಸುರೇಖಾ ಶೆಟ್ಟಿ, ಹಾಗೂ ವಂಜಾರಕಟ್ಟೆ ವಿದ್ಯಾ ಸಂಸ್ಥೆಯ ಆಶಾ ಅವರು ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಕೃಷ್ಣವೇಷ ಸ್ಪರ್ಧೆಯ ಫಲಿತಾಂಶ:
0-02ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ – ಭುವಿಕ್ ದೇವಾಡಿಗ ಹೊಸಮಾರು, ದ್ವಿತೀಯ ಸ್ಥಾನ – ಸಾನ್ಯ ವೈ. ಆಚಾರ್ಯ ಬೋಳ, ತೃತೀಯ ಸ್ಥಾನ – ಆಶ್ವಿ ಶೆಟ್ಟಿ
02-04ವರ್ಷದೊಳಗಿನ ಮಕ್ಕಳಿಗೆ ಬಾಲಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ – ಆಧೃತಿ ಕುಲಾಲ್, ದ್ವಿತೀಯ ಸ್ಥಾನ – ವಿಕ್ರಮ್ ಆಚಾರ್ಯ ನಂದಳಿಕೆ, ತೃತೀಯ ಸ್ಥಾನ – ಮೋನಿಶಾ ನಂದಳಿಕೆ
04-06 ವರ್ಷದೊಳಗಿನ ಮಕ್ಕಳಿಗೆ ಚೆಲ್ವ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ – ಸಾಧ್ವಿ ಎಸ್. ಶೆಟ್ಟಿ ಮೂಡುಬಿದಿರೆ, ದ್ವಿತೀಯ ಸ್ಥಾನ – ದಿಥಿ ಎಸ್. ಆಚಾರ್ಯ ಶಂಕರಪುರ, ತೃತೀಯ ಸ್ಥಾನ – ಸಾನ್ವಿ ದೇವಾಡಿಗ ಬೆಳ್ಮಣ್ಣು
7ವರ್ಷದೊಳಗಿನ ಮಗುವಿನೊಂದಿಗೆ ತಾಯಿ ಯಶೋಧ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ – ಸಿರಿಶಾ ಮತ್ತು ಸೌಜನ್ಯ ಕೋಟ್ಯಾನ್ ನಂದಳಿಕೆ, ದ್ವಿತೀಯ ಸ್ಥಾನ – ಕ್ಷಿಪ್ರ ಮತ್ತು ಪ್ರತಿಮಾ ಸಚ್ಚೇರಿಪೇಟೆ, ತೃತೀಯ ಸ್ಥಾನ- ಸ್ಮಹಿ ಮತ್ತು ಶ್ವೇತಾ ಆಚಾರ್ಯ ಮುಂಡ್ಕೂರು ಇವರು ಬಹುಮಾನ ಪಡೆದಿರುತ್ತಾರೆ.