ವ್ಯಕ್ತಿಯೋರ್ವರು ಬಸ್ ನಿಂದ ಇಳಿಯುವ ವೇಳೆ ರಸ್ತೆಗೆ ಬಿದ್ದು, ಗಾಯಗೊಂಡ ಘಟನೆ ಕಾರ್ಕಳದ ಸಾಣೂರು ಬಳಿಯ ಮುರತ್ತಂಗಡಿಯಲ್ಲಿ ನಡೆದಿದೆ.
ಗಾಯಗೊಂಡ ವ್ಯಕ್ತಿಯನ್ನು ನಿರಂಜನ ಆಳ್ವ ಎಂದು ಗುರ್ತಿಸಲಾಗಿದ್ದು, ಇವರು ಜ.೧೪ ರಂದು ಬಸ್ಸಿನಲ್ಲಿ ಮೂಡಬಿದ್ರಿಯಿಂದ ಮುರತ್ತಂಗಡಿಗೆ ಬಂದು ಇಳಿಯುವ ವೇಳೆ ನಿರ್ವಾಹಕನು ಪ್ರಯಾಣಿಕರು ಇಳಿಯುವ ಮೊದಲೇ ಬಸ್ ಚಲಾಯಿಸುವಂತೆ ಚಾಲಕನಿಗೆ ಸೂಚನೆ ನೀಡಿದ ಕಾರಣ ಗಾಯಾಳು ನಿರಂಜನ ಆಳ್ವರವರು ರಸ್ತೆಗೆ ಬಿದ್ದಿದ್ದು, ಪರಿಣಾಮ ಭುಜದ ಮೇಲೆ ಗಂಭೀರ ಗಾಯಗಳಾಗಿವೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದು, ನಿರ್ಲಕ್ಷ್ಯತನದಿಂದ ಬಸ್ ಚಲಾಯಿಸಿದ ಬಸ್ ಸಿಬ್ಬಂದಿ ವಿರುದ್ಧ ಗಾಯಾಳು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
















