ನಾಳೆ (ಜ. 24) ರಂದು ಮುಡಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಮಹೋತ್ಸವ ನಡೆಯಲಿದೆ.
ಹಳೆ ವಿದ್ಯಾರ್ಥಿ ಸಂಘದ ಸಹಕಾರದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದ ದ್ವಜಾರೋಹಣವನ್ನು ಮುಡಾರು ಗ್ರಾಮ ಪಂಚಾಯತ್ ಸದಸ್ಯ ಶಿವಪ್ರಸಾದ್ ರವರು ನಡೆಸಲಿದ್ದಾರೆ. ಉದ್ಘಾಟನೆಯನ್ನು ಕಾರ್ಕಳದ ಲೆಕ್ಕಪರಿಶೋಧಕ ಕಮಲಾಕ್ಷ ಕಾಮತ್ ನಡೆಸಿಕೊಡಲಿದ್ದಾರೆ. ಬೆಳಗ್ಗಿನ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮುಡಾರಿನ ನಿವೃತ ಮುಖ್ಯೋಪಾಧ್ಯಾರಾದ ಸಂಜೀವ ಎನ್., ಮುಡಾರು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಲಕ್ಷ್ಮಿ, ನಿವೃತ್ತ ಮುಖ್ಯೋಪಾಧ್ಯಾರಾದ ಕೃಷ್ಣ ಮೊಯ್ಲಿ, ಬಜಗೋಳಿ ವಲಯದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಶಿವರಾಮ, ಉಳಿದಂತೆ ಗುಣಪಾಲ್ ಜೈನ್ ಹಾಗೂ ನಾರಾಯಣ ಶೆಟ್ಟಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಛದ್ಮವೇಷ ಸ್ಪರ್ಧೆ ನೆರವೇರಲಿದೆ.
ಸಂಜೆ 6.30ಕ್ಕೆ ಸರಿಯಾಗಿ ಅಂಗನವಾಡಿ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಲಿದೆ. ನೃತ್ಯದ ಬಳಿಕ ಆನಂದ ಗುಡಿಗಾರ್ ರವರ ನಿರ್ದೇಶನದಲ್ಲಿ, ಕಾರ್ಕಳ ಯಕ್ಷ ಕಲಾರಂಗದ ಸಹಕಾರದೊಂದಿಗೆ, ಶಾಲಾ ಮಕ್ಕಳಿಂದ ಗುರುದಕ್ಷಿಣೆ ಎಂಬ ಪ್ರಸಂಗದ ಯಕ್ಷಗಾನ ನಡೆಯಲಿದೆ.
ರಾತ್ರಿ 8 ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಶಾಸಕ ವಿ. ಸುನಿಲ್ ಕುಮಾರ್ ರವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರುತಿ ದೀಪಕ್ ಜೈನ್ ನಿರ್ವಹಿಸಲಿದ್ದಾರೆ. ಸಭೆಯ ಪ್ರಧಾನ ಅತಿಥಿಗಳಾಗಿ ಕಾರ್ಕಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಮುಡಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅರುಣ್ ಶೆಟ್ಟಿ, ಮುಡಾರು ಗ್ರಾಮ ಪಂಚಾಯತ್ ಸದಸ್ಯ ರಜತ್ ರಾಮಮೋಹನ್, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ, ಕಾರ್ಕಳ ಯಕ್ಷ ಕಲಾ ರಂಗದ ಸಂಚಾಲಕರಾದ ಪ್ರೊ| ಪದ್ಮನಾಭ ಗೌಡ, ಟೈಮ್ಸ್ ಆಫ್ ಕಾರ್ಕಳದ ಮುಖ್ಯಸ್ಥ ಪ್ರಶಾಂತ್ ಆಚಾರ್ಯ, ಕಾರ್ಕಳ ಯಕ್ಷ ಕಲಾ ರಂಗದ ಅಧ್ಯಕ್ಷ ವಿಜಯ ಶೆಟ್ಟಿ, ಕರಿಯಣ್ಣ ಶೆಟ್ಟಿ ಹೆನ್ನೊಟ್ಟು, ಮಹಾವೀರ ಹೆಗ್ಡೆ, ಪವರ್ ಪಾಯಿಂಟ್, ಕಾರ್ಕಳ, ಎಂ. ಎನ್. ಧನಕೀರ್ತಿ ಬುನ್ನಾಡಿ, ಶ್ರೀಧರ ಪೂಜಾರಿ ರೋಶನಿ ಗಾರ್ಡನ್, ಮುಡಾರು, ಸುಧಾಕರ ಶೆಟ್ಟಿ ಅಲ್ಪಾಟ್ಟು, ಶಾಲಾ ಮುಖ್ಯೋಪಾಧ್ಯಾಯಿನಿ ಜಯ ಕೃಷ್ಣ ಮೊಯಿಲಿ, ಹರ್ಷೇಂದ್ರ ಜೈನ್ ಮಾಳ ಮೊದಲಾದವರು ಉಪಸ್ಥಿತರಿರಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ನೃತ್ಯ ಹಾಗೂ ತುಳುವೆರ ತಿಂಗೊಲ್ದ ಜಾನಪದ ತೆಲಿಕೆ ನಲಿಕೆ ಕಾರ್ಯಕ್ರಮ ಜರುಗಲಿದೆ. ರಾತ್ರಿ ಘಂಟೆ 10.೦೦ರ ಬಳಿಕ ಹಳೆ ವಿದ್ಯಾರ್ಥಿಗಳಿಂದ ಕಲತ್ರಪಾದೆ ಸುರೇಂದ್ರ ಕುಮಾರ್ ವಿರಚಿತ ತುಳು ಸಾಂಸಾರಿಕ ಹಾಸ್ಯಮಯ ನಾಟಕ ‘ಮೇಘ ಮುರಾರಿ’ ಪ್ರದರ್ಶನಗೊಳ್ಳಲಿದೆ.
ವಾರ್ಷಿಕ ಮಹೋತ್ಸವದ ಎಲ್ಲಾ ದೃಶ್ಯಾವಳಿಗಳು ಟೈಮ್ಸ್ ಆಫ್ ಕಾರ್ಕಳ ಯುಟ್ಯೂಬ್ ವಾಹಿನಿಯಲ್ಲಿ ನೇರಪ್ರಸಾರಗೊಳ್ಳಲಿದೆ.


















