Wednesday, February 25, 2026
Google search engine
Homeಕಾರ್ಕಳಇನ್ನಾ:ಪಂಚಾಯತ್ ಸದಸ್ಯ ಪ್ರೇಮ್ ಕುಲಾಲ್ ರವರಿಗೆ ಗ್ರಾಮಸ್ಥರಿಂದ ಸನ್ಮಾನ

ಇನ್ನಾ:ಪಂಚಾಯತ್ ಸದಸ್ಯ ಪ್ರೇಮ್ ಕುಲಾಲ್ ರವರಿಗೆ ಗ್ರಾಮಸ್ಥರಿಂದ ಸನ್ಮಾನ

ಇನ್ನಾ:ಪಂಚಾಯತ್ ಸದಸ್ಯ ಪ್ರೇಮ್ ಕುಲಾಲ್ ರವರಿಗೆ ಗ್ರಾಮಸ್ಥರಿಂದ ಸನ್ಮಾನ

ಇನ್ನಾ ಗ್ರಾಮದ 3ನೇ ವಾರ್ಡ್ ನ ಸದಸ್ಯ ಪ್ರೇಮ್ ಕುಲಾಲ್ ಪಂಚಾಯತ್ ಸದಸ್ಯನಾಗಿ ಯಶಸ್ವಿಯಾಗಿ 5 ವರ್ಷ ಪೂರೈಸಿದ ಪ್ರೇಮ್ ಕುಲಾಲ್ ಇನ್ನಾರವರನ್ನು ಗ್ರಾಮಸ್ಥರು ಸನ್ಮಾನಿಸಿದರು.

ನಿರಂತರವಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಪ್ರೇಮ್ ಕುಲಾಲ್ ರವರು ತನ್ನ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮಸ್ಥರ ಬಹುತೇಕ ಬೇಡಿಕೆಗಳನ್ನು ಈಡೇರಿಸಿದ್ದು, ಈ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.

ಗ್ರಾಮಸ್ಥರ ಬೇಡಿಕೆಗಳಾದ ಬೀದಿ ದೀಪ,ರಸ್ತೆ ಕಾಂಕ್ರೀಟಿಕರಣ,7ಕ್ಕೂ ಹೆಚ್ಚು ಬಾವಿ ನಿರ್ಮಾಣ ಸೇರಿದಂತೆ ಸೇರಿದಂತೆ ಗ್ರಾಮಸ್ಥರ ಬಹುತೇಕ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದು,ಅಲ್ಲದೆ ಸ್ವಂತ ಖರ್ಚಿನಿಂದ ಹಲವರಿಗೆ ಮನೆ ನಿರ್ಮಾಣಕ್ಕೆ ಧನಸಹಾಯ,ರಸ್ತೆ ರಿಪೇರಿ ಸೇರಿದಂತೆ ಸಮಾಜಮುಖಿ ಕೆಲಸಗಳಲ್ಲಿ ಪ್ರೇಮ್ ಕುಲಾಲ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೇಮ್ ಕುಲಾಲ್ ‘ಚುನಾವಣೆ ಸಂದರ್ಭದಲ್ಲಿ ಗ್ರಾಮಸ್ಥರು ನೀಡಿದ್ದ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದೇನೆ ಎಂಬ ತೃಪ್ತಿಯಿದೆ.ಹಲವು ವರ್ಷಗಳಿಂದ ಬೇಡಿಕೆಯಾಗಿದ್ದ ರಸ್ತೆ,ಬೀದಿ ದೀಪ,ಬಾವಿ ನಿರ್ಮಾಣ ನಮ್ಮ ವಾರ್ಡ್ ನ ಜನರ ಬೇಡಿಕೆಯಾಗಿತ್ತು, ನನ್ನ ವಾರ್ಡ್ ನ ಮತದಾರರಿಗೆ ಕೊಟ್ಟ ಮಾತಿನಂತೆ ಎಲ್ಲಾ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ.ಗ್ರಾಮಸ್ಥರ ಪ್ರೀತಿಯ ಸನ್ಮಾನವನ್ನು ಆಶೀರ್ವಾದ ಎಂದುಕೊಳ್ಳುತ್ತೇನೆ.ಈ ಸನ್ಮಾನ ಸಮಾಜಕ್ಕಾಗಿ ಇನ್ನಷ್ಟು ಕೆಲಸ ಮಾಡಲು ಸ್ಫೂರ್ತಿ ಸಿಕ್ಕಿದಂತೆ ಹೇಳಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments