Saturday, March 7, 2026
Google search engine
Homeಕಾರ್ಕಳಕಾರ್ಕಳ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

ಕಾರ್ಕಳ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಕಾರ್ಕಳ ವತಿಯಿಂದ ಸೌಹಾರ್ಧ ಇಫ್ತಾರ್ ಕೂಟವನ್ನು ದಿನಾಂಕ 7 ಮಾರ್ಚ್ ಶನಿವಾರ ಸಾಯಂಕಾಲ 5:30 ರಿಂದ 6:30 ವರೆಗೆ ಕಾರ್ಕಳ ಸಾಲ್ಮಾರದ ಜಾಮೀಯಾ ಮಸೀದಿಯ ಶಾದಿ‌ ಮಹಲ್ ನಲ್ಲಿ ಆಯೋಜಿಸಲಾಗಿದೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮೌಲಾನಾ ಅಹ್ಮದ್ ಶರೀಫ್, ವಂದನೀಯ ಫಾದರ್ ಲೂಯೀಸ್ ಡೇಸಾ ಮತ್ತು ಹಿರಿಯ ವಕೀಲರಾದ ಶೇಖರ್ ಮಡಿವಾಳ್ ಸೌಹಾರ್ದ ಸಂದೇಶ ನೀಡಲಿದ್ದಾರೆ.

ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಎಂ. ಎ ಗಫೂರ್ ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖ್ ವಾಹಿದ್ ದಾವೂದ್ ಇವರಿಗೆ ಅಭಿನಂದನೆ ನಡೆಯಲಿದ್ದು ಮುಖ್ಯ ಅತಿಥಿಯಾಗಿ ಕಾಂಗ್ರೆಸ್ ಮುಖಂಡರಾದ ಉದಯ್ ಶೆಟ್ಟಿ ಮುನಿಯಾಲು, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್ ಮತ್ತು ಮುಸ್ಲಿಂ ಒಕ್ಕೂಟ ಕಾರ್ಕಳ ಘಟಕದ ಅಧ್ಯಕ್ಷ ಮೊಹ್ಮದ್ ಗೌಸ್ ಭಾಗವಹಿಸಲಿದ್ದಾರೆ.
ಪರಸ್ಪರ ಪ್ರೀತಿ, ಸಹೋದರತೆ, ಸಹಬಾಳ್ವೆ ಮತ್ತು ಸಮಾನತೆಯನ್ನು ಸಾರುವ ರಂಜಾನ್ ಹಬ್ಬದ ಪ್ರಯುಕ್ತ ಈ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments