Tuesday, March 10, 2026
Google search engine
Homeಕಾರ್ಕಳಮದುವೆಯಾಗುವಂತೆ ಮನೆಯವರಿಂದ ಒತ್ತಡ – ತಲೆಬೋಳಿಸಿಕೊಂಡು ಪಾರಾದ ಯುವತಿ!!

ಮದುವೆಯಾಗುವಂತೆ ಮನೆಯವರಿಂದ ಒತ್ತಡ – ತಲೆಬೋಳಿಸಿಕೊಂಡು ಪಾರಾದ ಯುವತಿ!!

ಹೆಣ್ಣು ಮಕ್ಕಳು ಎಷ್ಟೇ ಓದಿ ಇಂತಹ ಒಳ್ಳೆಯ ಉದ್ಯೋಗವನ್ನು ಪಡೆದರು ಕೂಡ ಮನೆಯವರು ಮದುವೆ ಮಾಡಿಕೋ ಎಂದು ಒತ್ತಡ ಹೇರುವುದು ತಪ್ಪುವುದಿಲ್ಲ. ಅವರ ಮನದಿಚ್ಚೆ ಏನಿದೆ ಎಂಬುದನ್ನು ತಿಳಿಯದೆ ಮನೆಯವರು ಹೆಣ್ಣು ಮಕ್ಕಳ ಮೇಲೆ ಮದುವೆಯ ಒತ್ತಡ ಹೇರುವುದು ನಿಜಕ್ಕೂ ವಿಷಾದದ ಸಂಗತಿ. ಇದೀಗ ಇಲ್ಲೊಬ್ಬಳು ಯುವತಿಗೆ ಮದುವೆಯಾಗುವಂತೆ ಮನೆಯವರು ಒತ್ತಡ ಹೇರುತ್ತಿದ್ದು ಇದನ್ನು ತಡೆಯಲಾರದೆ ಆಕೆ ತಲೆಯನ್ನು ಬೋಳಿಸಿಕೊಂಡು ಮದುವೆಯಿಂದ ಪಾರಾಗಿದ್ದಾಳೆ.
ಹೌದು, ಇಲ್ಲೊಬ್ಬಳು ಯುವತಿ ಮದುವೆಯಿಂದ ಪಾರಾಗುವುದಕ್ಕೆ ತನ್ನ ತಲೆ ಕೂದಲನ್ನೇ ಬೋಳಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದು, ಆಕೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಯುವತಿಯೊಬ್ಬಳು ತನ್ನ ಶೇವ್ ಮಾಡಿದ ತಲೆಯನ್ನು ತೋರಿಸುತ್ತಾ ಸಮಾಜ ಹಾಗೂ ಕುಟುಂಬದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾಳೆ. ನಾನು ಸತ್ಯ ಹೇಳಲು ಬಯಸುತ್ತೇನೆ ನಾನು ನನ್ನ ಕೂದಲಿಗೆ ಹೀಗೆ ಮಾಡಿದೆ ಎಂದು ಆಕೆ ಕೂದಲಿಲ್ಲದ ಬೋಳು ತಲೆಯಿಂದ ಟೋಫಿ ತೆಗೆದು ತೋರಿಸಿದ್ದಾಳೆ.

ನನಗೆ ನನ್ನ ಕೂದಲೆಂದರೆ ತುಂಬಾ ಪ್ರೀತಿ ಇತ್ತು. ಆದರೆ ನನಗೆ ಬೇರೆ ದಾರಿ ಇರಲಿಲ್ಲ. ಕೂದಲನ್ನು ಕತ್ತರಿಸುವುದು ನಿಜವಾಗಿಯೂ ನಾನು ಬಯಸಿದ ವಿಚಾರವಾಗಿರಲಿಲ್ಲ, ಇತರ ಅನೇಕ ಮಹಿಳೆಯರಂತೆ ತಾನು ತನ್ನ ಕೂದಲನ್ನು ತುಂಬಾ ಪ್ರೀತಿಸುತ್ತಿದ್ದೆ, ಆದರೆ ಮದುವೆಯಾಗಲು ತನ್ನ ಕುಟುಂಬದಿಂದ ನಿರಂತರ ಒತ್ತಡ ಬರುತ್ತಿದ್ದರಿಂದ ಈ ಹೆಜ್ಜೆ ಇಡಬೇಕಾಯಿತು ನಾನೇನು ಮಾಡಲಿ ಎಂದು ಅವಳು ಹೇಳಿದ್ದಾಳೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments