ಶ್ರಮಿಕರ ಅನ್ನದ ಬಟ್ಟಲಿಗೆ ಕಾಂಗ್ರೆಸ್ ಹಾಕಿದ್ದು ಕಲ್ಲು.
ಪ್ರವಾಸೋದ್ಯಮ ವಿರೋಧಿ ಕಾರ್ಕಳ ಕಾಂಗ್ರೆಸ್ಸಿಗರ ವಿರುದ್ಧ ಸುಮಿತ್ ಶೆಟ್ಟಿ ಕಿಡಿ
ಕಾರ್ಕಳ : ಸುಳ್ಳನ್ನು ಶೃಂಗರಿಸಬಹುದಾದ ಜಾಣ್ಮೆ ನಿಮ್ಮಲ್ಲಿರಬಹುದು. ಸತ್ಯವನ್ನು ಬೆತ್ತಲಾಗಿಸುವಂತ ಶಕ್ತಿ ನಿಮ್ಮಿಂದ ಸಾಧ್ಯವಿಲ್ಲ ಎಂದು ಬೈಲೂರಿನ ಪರಶುರಾಮ ಪ್ರತಿಮೆಗೆ ಸಂಬಂದಿಸಿ ಸ್ಥಳಿಯವಾಗಿ ಒಂದು ರೀತಿ, ನ್ಯಾಯಾಲಯದಲ್ಲಿ ಇನ್ನೊಂದು ರೀತಿ ನಡೆದುಕೊಳ್ಳುತ್ತಿರುವ ಕಾರ್ಕಳ ಕಾಂಗ್ರೆಸ್‌ನ ವಿಕೃತ ಮನಸ್ಸುಗಳ ವಿರುದ್ಧ ಮಾಜಿ ಜಿ.ಪಂ. ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಕಿಡಿಕಾರಿದ್ದಾರೆ.
ಬೈಲೂರಿನ ಪರಶುರಾಮ ಪ್ರತಿಮೆಗೆ ಸಂಬಂಧಿಸಿ, ಕಳೆದೊಂದು ವರ್ಷದಿಂದ ಪ್ರತಿಮೆ ಫೈಬರಿನದು, ಪ್ಲಾಸ್ಟಿಕ್‌ನದ್ದು ಎಂದೆಲ್ಲ ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಅಬ್ಬರದ ಅಪಪ್ರಚಾರ ನಡೆಸಿ, ಬೈಲೂರು-ಕಾರ್ಕಳ ಪ್ರವಾಸೋದ್ಯಮಕ್ಕೆ ತಡೆಯನ್ನುಂಟುಮಾಡಿ, ಬೃಹತ್ ನಷ್ಟ ಮಾಡಿದ್ದಲ್ಲದೇ, ಸ್ಥಳಿಯವಾಗಿ ಹಾಗೂ ರಾಜ್ಯದ ಜನತೆಯ ದಾರಿ ತಪ್ಪಿಸಿ ವಿಕೃತ ಮೆರೆದ ಕಾರ್ಕಳ ಕಾಂಗ್ರೆಸ್ಸಿನ ಪಟ್ಟ ಭದ್ರ ಹಿತಾಶಕ್ತಿಗಳು ನೀವು. ನಿಮ್ಮ ದೊಡ್ಡ ಮಟ್ಟದ ಅಪಪ್ರಚಾರದಿಂದ ಕಳೆದೊಂದು ವರ್ಷದಿಂದ ಬೈಲೂರು, ಕಾರ್ಕಳದ ಪ್ರವಾಸೋದ್ಯಮಕ್ಕೆ ಆದ ನಷ್ಟ ಎಷ್ಟೆಂದು ಅಂದಾಜಿಸಿದ್ದೀರಾ? ನಿಮ್ಮಿಂದ ಇಲ್ಲಿನ ವಿವಿಧ ರಂಗದ ಶ್ರಮ ಜೀವಿಗಳಿಗೆ ಆದ ನಷ್ಟಕ್ಕೆ ಮಿತಿಯಿಲ್ಲ. ಇಲ್ಲಿನ ಹಲವು ರಂಗಗಳಿಗೆ ಆದ ಭಾರಿ ನಷ್ಟಕ್ಕೆ ನೀವೆ ಹೊಣೆಗಾರರಾಗಿದ್ದೀರಿ ಎಂದು ಎಚ್ಚರಿಸಿದ್ದಾರೆ.
ಜನರ ದಾರಿ ತಪ್ಪಿಸಿದ ನೀಚ ಮನಸ್ಸುಗಳೇ ನೀವು ಮಾಡಿದ ತಪ್ಪಿಗೆ ಕಾರ್ಕಳದ ಕೀರ್ತಿಯನ್ನು ರಾಜ್ಯ, ದೇಶ ಮಟ್ಟದಲ್ಲಿ ಹರಾಜು ಹಾಕಿ ನಷ್ಟವನ್ನುಂಟು ಮಾಡಿದ ನೀವು ಕಾರ್ಕಳ ಹಾಗೂ ನಾಡಿನ ಜನತೆಯ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾಾರೆ. ಪ್ರತಿಮೆ ಸಂಬಂಧ ನ್ಯಾಯಾಲಯದಲ್ಲಿ ʻನಮ್ಮದು ಜಿಎಸ್‌ಟಿ ಕುರಿತಷ್ಟೆ ಆಕ್ಷೇಪವಿರುವುದು. ಇನ್ನುಳಿದಂತೆ ವಿವಾದವಿಲ್ಲʻ ಎನ್ನುತ್ತೀರಿ. ಪ್ರತಿಮೆಯು ಬ್ರಾಸ್, ಬ್ರಾನ್ಸ್ ಎಂದು ಒಪ್ಪಿಕೊಳ್ಳುತ್ತೀರಿ. ಇಲ್ಲಿ ಸ್ಥಳಿಯವಾಗಿ ಪ್ರತಿಮೆ ಕುರಿತು ಅಪಪ್ರಚಾರ ನಡೆಸುತ್ತ ಬಂದಿರುವಿರಿ. ಬೀದಿ ಬದಿಯಲ್ಲಿ ಅರಚಾಡುತ್ತ ಜನರ ದಾರಿ ತಪ್ಪಿಸಲು ಬೀದಿ ನಾಟಕ ಆಡುತ್ತೀರಿ. ಅತ್ತ ಕಡೆ ನ್ಯಾಯಾಲಯದಲ್ಲಿ ಸತ್ಯ ಒಪ್ಪಿಕೊಳ್ಳುತ್ತಿರುವ ನಿಮ್ಮ ನೀಚ ರಾಜಕಾರಣದ ತೆವಳಿಗೆ ಕಾರ್ಕಳದ ಕೀರ್ತಿ ಅಳಿಸುತ್ತಿದ್ದೀರಿ.
ನಿಮ್ಮ ಸ್ವಾರ್ಥ, ಅವಿವೇಕಿತನ, ಹತಾಶೆಯ ಕುಚೇಷ್ಠೆಯ ಅಪಪ್ರಚಾರದಿಂದ ಕಾರ್ಕಳ ಕ್ಷೇತ್ರದ ಪ್ರವಾಸೋದ್ಯಮ ನೆಲಕಚ್ಚಿ ಹೋಗಿದೆ. ಬೈಲೂರು ಸೇರಿದಂತೆ ಕಾರ್ಕಳವು ಇಡೀ ರಾಜ್ಯದ ಜನತೆಯನ್ನು ಪ್ರವಾಸಿ ಕ್ಷೇತ್ರವಾಗಿ ಕೈ ಬೀಸಿ ಕರೆಯುತಿತ್ತು. ಲಕ್ಷಾಂತರ ಮಂದಿ ಧಾವಿಸಿ, ಪ್ರವಾಸಿಗರ ದಂಡೇ ಜನಸಾಗಾರೋಪಾದಿಯಲ್ಲಿ ಇತ್ತ ಕಡೆ ಹರಿದು ಬಂದು ವ್ಯಾಪಾರ-ವಹಿವಾಟು ನಡೆದು ಹಲವರ ಬದುಕಿಗೆ ಅನ್ನದ ದಾರಿಯಾಗಿತ್ತು. ಆರ್ಥಿಕ ಚೇತರಿಕೆಯ ಕೇಂದ್ರವಾಗಿ ಬೈಲೂರು ಪರಿಸರ ಹಾಗೂ ಕಾರ್ಕಳ ಬೆಳೆದು ದೊಡ್ಡ ಬದಲಾವಣೆ ಕಡೆ ಸಾಗಿತ್ತು.
ಸಾಂಸ್ಕೃತಿಕ ಸಹಿತ ವಿವಿಧ ಚಟುವಟಿಕೆಗಳು ನಿರಂತರವಾಗಿ ನಡೆಯುತಿದ್ದವು. ಕಾರ್ಕಳ ಪ್ರವಾಸಿ ಕೇಂದ್ರವಾಗುವುದನ್ನು ಸಹಿಸದೆ ನೀವು ಇದನೆಲ್ಲ ಹಾಳುಗೆಡವಿದ್ದೀರಿ. ಬಡ ವ್ಯಾಪಾರಿಗಳ ಹೊಟ್ಟೆಗೆ ಹೊಡೆದು ಅನ್ನ ಕಿತ್ತುಕೊಂಡಿದ್ದೀರಿ. ಕಳೆದೊಂದು ಒಂದು ವರ್ಷದಿಂದ ಯಾವುದೇ ಚಟುವಟಿಕೆ ಇಲ್ಲದೆ ಆದ ಈ ಎಲ್ಲ ನಷ್ಟಕ್ಕೆ ನೀವೆ ಹೊಣೆಗಾರರು ಎಂದಿರುವ ಅವರು ಕಾರ್ಕಳದ ಮಾನವನ್ನು ಅಪಪ್ರಚಾರದ ಮೂಲಕ ಕಳೆದು ಕ್ಷೇತ್ರಕ್ಕೆ ಅಪಕೀರ್ತಿ ತಂದಿರುವ ನೀವುಗಳು ಕ್ಷೇತ್ರದ ಜನತೆಯ ಕ್ಷಮೆಗೂ ಆರ್ಹರಲ್ಲ ಎಂದಿದ್ದಾರೆ. ಅಭಿವೃದ್ಧಿ, ಪ್ರವಾಸೋದ್ಯಮ ಎರಡಕ್ಕೂ ತೊಡಕು ಮಾಡುತ್ತ ಬೆಂಗಳೂರಿನಲ್ಲಿ ಹೋಗಿ ಪ್ರತಿಮೆ ಸಂಬಂಧ ಅಪಚಾರದ ಪ್ರತಿಭಟನೆ ನಡೆಸುತ್ತೀರಿ. ನಿಮಗೆ ತಾಕತ್ತಿದ್ದರೆ ಪ್ರತಿಭಟನೆ ನಡೆಸುವುದರ ಬದಲು ಸರಕಾರದ ಮೇಲೆ ಹಣ ಬಿಡುಗಡೆಗೊಡೆಗೆ ಒತ್ತಾಯಿಸಿ. ಪ್ರತಿಮೆ ಕಾಮಗಾರಿ ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡಿಸಬೇಕಿತ್ತು. ಕಾರ್ಕಳ ಪ್ರವಾಸೋದ್ಯಮ ಮತ್ತೆ ವೈಭವ ಕಾಣಲು ಸಹಕರಿಸಬೇಕಿತ್ತು. ಇದನ್ನು ಮಾಡಿಲ್ಲ. ಮಾಡುವ ಮನಸ್ಸು ನಿಮ್ಮದಲ್ಲ. ಅಭಿವೃದ್ಧಿ, ಪ್ರವಾಸೋದ್ಯಮ ವಿರೋಧಿ ಮನಸ್ಥಿತಿಯ ನಿಮ್ಮಿಂದ ಇದು ಅಸಾಧ್ಯವೆನ್ನುವುದು ಕಾರ್ಕಳದ ಪ್ರತಿ ಜನತೆಯ ಮನಸ್ಸಿಗೂ ತಿಳಿದಿದೆ ಎಂದಿದ್ದಾರೆ.