ಕಾರೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಸಹ ಸವಾರ ಗಾಯಗೊಂಡ ಘಟನೆ ಕಾಬೆಟ್ಟು ಕ್ರಾಸ್‌ನ ಅತ್ತೂರು ದ್ವಾರದ ಬಳಿ ಸಂಭವಿಸಿದೆ.
ಮಿಯ್ಯಾರು ಗ್ರಾಮದ ಶಾಂತಿನಗರ ನಿವಾಸಿ ಧನುಷ್ ಬಿ. ಮತ್ತು ಸಹ ಸವಾರ ವರುಣ್ ಬಿ. ಅವರು ಗಾಯಗೊಂಡವರು. ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















