Thursday, April 2, 2026
Google search engine
Homeಕಾರ್ಕಳಕಾರ್ಕಳ:ಸ್ಕೂಟರ್‌ಗೆ ಟಿಪ್ಪರ್‌ಢಿಕ್ಕಿ; ಚಾಲಕ ಪರಾರಿ

ಕಾರ್ಕಳ:ಸ್ಕೂಟರ್‌ಗೆ ಟಿಪ್ಪರ್‌ಢಿಕ್ಕಿ; ಚಾಲಕ ಪರಾರಿ

ಹಿರ್ಗಾನ ಗ್ರಾಮದ ಬಿಇಎಂ ಶಾಲೆಯಬಳಿ ಸ್ಕೂಟರ್‌ಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ. ನಕ್ರೆಯ ಆಶಾ ನಾಯಕ್ (31) ಗಾಯಗೊಂಡವರು. ಅವರು ತಮ್ಮ ಸ್ಕೂಟರ್‌ನಲ್ಲಿ ಕಾರ್ಕಳದಿಂದ ಎಣ್ಣೆಹೊಳೆ ಕಡೆಗೆ ತೆರಳುತ್ತಿದ್ದಾಗ, ಹಿಂದಿನಿಂದ ಬಂದ ಟಿಪ್ಪರ್ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ.

ಅಪಘಾತ ರಭಸಕ್ಕೆ ಆಶಾ ನಾಯಕ್ ರಸ್ತೆಗೆ ಬಿದ್ದು ಗಾಯಗಳಾಗಿವೆ. ಘಟನೆ ಅನಂತರ ಟಿಪ್ಪರ್‌ಚಾಲಕ ವಾಹನ ನಿಲ್ಲಿಸದೆ, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಗಾಯಾಳು ಆಶಾ ನಾಯಕ್ ಅವರು ಹಿರ್ಗಾನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments