ಬೆಳ್ಮಣ್ ಗ್ರಾಮದ ಬಾಡಿಗೆ ಮನೆಯೊಂದರ ಬಾತ್ ರೂಮ್‌ನಲ್ಲಿ ಟಿಪ್ಪರ್ ಚಾಲಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಸಾವಿನ ಮೇಲೆ ಸಂಶಯವಿ ರುವುದಾಗಿ ಮೃತರ ಸಹೋದರ ದೂರು ನೀಡಿದ್ದಾರೆ.
ಮೃತ ವ್ಯಕ್ತಿ ಹಾವೇರಿ ಜಿಲ್ಲೆಯ ಹಾನ ಗಲ್ ತಾಲೂಕಿನ ವೆಂಕಟೇಶ್ ಕೂರಗುಂದ (45). ಅವರು 35 ವರ್ಷಗಳಿಂದ ಬೆಳ್ಳಣ್‌ನಲ್ಲಿ ವಾಸ್ತವ್ಯ ವಿದ್ದು, ಬೆಳ್ಳನ್‌ನ ಉದಯ ನಾಯ್ಕಅವರ ಟಿಪ್ಪರ್‌ನಲ್ಲಿ ಚಾಲಕರಾಗಿದ್ದರು. ಬೆಳ್ಮಣ್‌ಚರ್ಚ್ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ವೆಂಕಟೇಶ್ ಕಳೆದ 1 ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದರೆ ಮಾ.31ರಂದು ಅವರು ವಾಸವಿದ್ದ ಮನೆಯ ಬಾತ್ ರೂಮ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾವಿನ ಹಿಂದೆ ಸಂಶಯವಿರುವುದಾಗಿ ಮೃತರ ಸಹೋದರ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.



















