62 ವರುಷಗಳ ಇತಿಹಾಸವಿರುವ ಸುಮಾರು 130 ಸದಸ್ಯರಿರುವ ಕಾರ್ಕಳ ರೋಟರಿ ಕ್ಲಬ್ ಹಿಂದಿನ ಹಲವಾರು ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ.
ಶಿಕ್ಷಣ ಕ್ಷೇತ್ರ ಇರಬಹುದು, ಆರೋಗ್ಯ ಕ್ಷೇತ್ರ ಇರಬಹುದು, ಪರಿಸರ ಸಂರಕ್ಷಣೆ, ರೋಡ್ ಸೇಫ್ಟಿ ಅಂತಹ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿದೆ.
ಅಶಕ್ತರಿಗೆ ಶಕ್ತಿಯನ್ನು ನೀಡುವಂತಹ ಯಾವುದೇ ಕಾರ್ಯಕ್ರಮ ಇರಬಹುದು ಅದರಲ್ಲಿ ಕಾರ್ಕಳ ರೋಟರಿ ಕ್ಲಬ್ ಮುಂಚೂಣಿಯಲ್ಲಿದೆ.
ಕಾರ್ಕಳದಲ್ಲಿರುವ ರೋಟರಿ ಹಾಸ್ಪಿಟಲ್ ಒಂದು ಉತ್ತಮ ಗುಣ ಮಟ್ಟದ ಆಸ್ಪತ್ರೆ ಎನ್ನುವುದರಲ್ಲಿ ಸಂಶಯವಿಲ್ಲ.
ಗ್ಲೋಬಲ್ ಗ್ರಾಂಟ್ ಮುಖಾಂತರ ಸುಮಾರು 90 ಲಕ್ಷ ವೆಚ್ಚದಲ್ಲಿಒಂದು ಬ್ಲಡ್ ಬ್ಯಾಂಕ್ ನ್ನು ಓಪನ್ ಮಾಡುವ ಎಲ್ಲಾ ಕೆಲಸಗಳು ಮುಗಿದಿದೆ.
ಸರಕಾರದಿಂದ ಒಂದು ಅನುಮತಿ ಸಿಗುವ ಕೆಲಸ ಮಾತ್ರ ಬಾಕಿ ಇದೆ.
ಸದ್ಯದಲ್ಲಿ ಅದು ಕೂಡ ಇನ್ನು ಒಂದೆರಡು ತಿಂಗಳಲ್ಲಿ ಸಿಗುವ ನಿರೀಕ್ಷೆಯಲ್ಲಿದ್ದೇವೆ.
ರೋಟರಿ ಕ್ಲಬ್ ವತಿಯಿಂದ ಹಲವಾರು ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದೇವೆ.
ಹಲವಾರು ಮನೆಗಳಿಗೆ ಸೋಲಾರ್ ವಿದ್ಯುತ್ತನ್ನು ಅಳವಡಿಸಿದ್ದೇವೆ.
ಹಲವಾರು ಕ್ಯಾನ್ಸರ್ ರೋಗಿಗಳಿಗೆ ಧನಸಹಾಯವನ್ನು ನೀಡಿದ್ದೇವೆ.
ಇಲ್ಲಿಯವರೆಗೆ ಸುಮಾರು 16 ಗ್ಲೋಬಲ್ ಗ್ರಾಂಟ್ ನ್ನು ರೋಟರಿ ಕ್ಲಬ್ ವತಿಯಿಂದ ಮಾಡಿದ್ದೇವೆ.
ಈ ವರ್ಷ ನಿಟ್ಟೆ ಗಜರಿಯ ಹಾಸ್ಪಿಟಲ್ ಗೆ ಇನ್ನೊಂದು ಗ್ಲೋಬಲ್ ಗ್ರಾಂಟ್ ಮುಖಾಂತರ ಸುಮಾರು 45 ಲಕ್ಷ ವೆಚ್ಚದಲ್ಲಿ ಕಾಟ್ರಾಕ್ಟ್ ಆಪರೇಟಿಂಗ್ ಯೂನಿಟ್ ನ್ನು ನೀಡುವ ಕೆಲಸದ ಕೊನೆಯ ಹಂತದಲ್ಲಿ ಇದ್ದೇವೆ.
ಇದೇ ಬರುವ ಎಪ್ರಿಲ್ 6 ರಂದು ಸೋಮವಾರ ನಮ್ಮ ಕ್ಲಬ್ಬಿಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಬೇಟಿ ನಡೆಯಲಿದೆ.
ಆ ದಿನ ಜಿಲ್ಲಾ ಗವರ್ನರ್ ರೊಟೇರಿಯನ್ ಪಾಲಕ್ಷ ಅವರಿಂದ ರೋಟರಿಯಿಂದ ಕೊಡಲ್ಪಟ್ಟ ಹಲವಾರು ಯೋಜನೆಗಳ ಉದ್ಘಾಟನೆ ಹಾಗೂ ಹಸ್ತಾಂತರ ನಡೆಯಲಿದೆ.
1.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಬೆಟ್ಟು ಬೆಂಚು ಮತ್ತು ಡೆಸ್ಕ್ -80,000
2.ಸ.ಹಿ.ಪ್ರಾ.ಶಾಲೆ.ಬಸ್ರಿ ಬೈಲೂರು ಕಾಪಾಟು -25,000
3.ಸ.ಹಿ.ಪ್ರಾ.ಶಾಲೆ ಕಲಂಬಾಡಿ ಪದವು ಗೆ ಪ್ರೊಜೆಕ್ಟರ್-45,000
4.ಅಂಗನವಾಡಿ ಕಲಂಬಾಡಿ ಪದವು ಗೆ ಕಪಾಟು ಮತ್ತು ರೇಕ್ -20,000
5.ಅಂಗನವಾಡಿ ರಾಮಪ್ಪ ಆನೆಕೆರೆ ಮಕ್ಕಳಿಗೆ ಪರಿಕರ -10,000
6.ಸ.ಹಿ.ಪ್ರಾ.ಶಾಲೆ ಬಜಗೋಳಿ ಮೇಲ್ಚಾವಣಿ ವ್ಯವಸ್ಥೆ-40,000
7.ಸ.ಹಿ.ಪ್ರಾ.ಶಾಲೆ ಶಿರ್ಲಾಲು ಗೆ ಸೌಂಡ್ ಬಾಕ್ಸ್ -10,000
8.ಸ.ಹಿ.ಪ್ರಾ.ಶಾಲೆ ಮುಂಡ್ಲಿ ಕುಡಿಯುವ ನೀರಿನ ಘಟಕ -40,000
9.ಸ.ಹಿ.ಪ್ರಾ.ಶಾಲೆ ದುರ್ಗಾ ತೆಳ್ಳಾರು ಕುಡಿಯುವ ನೀರಿನ ಘಟಕ -40,000
10 . ಸೂಚನಾ ಫಲಕಗಳು(6) -10,000
1.ತೆಳ್ಳಾರು ರಸ್ತೆ
2.ಅನಂತಶಯನ
3.ಕರಿಯಕಲ್ಲು
4.ಫುಲ್ಕೇರಿ ಬೈಪಾಸ್
5.ಹಿರಿಯಂಗಡಿ
6.ಕಾಬೆಟ್ಟು
ಇದರೊಂದಿಗೆ ಸುಮಾರು 5 ಲಕ್ಷ ವೆಚ್ಚದಲ್ಲಿ ರೋಟರಿ ಪಾರ್ಕಿನ ಉನ್ನತೀಕರಣ.
ಕಲ್ಲಂಬಾಡಿ ಪದವು ಶಾಲೆಗೆ ಸುಮಾರು 12 ಲಕ್ಷ ವೆಚ್ಚದಲ್ಲಿ ಕ್ಯಾನ್ ಫಿನ್ ಹೋಂಮ್ಸ್ ನ ಸಹಯೋಗದೊಂದಿಗೆ ಉನ್ನತ ಮಟ್ಟದ ಶೌಚಾಲಯ ನಿರ್ಮಾಣ.
ಹಾಗೂ ಚತುರ್ಮುಖ ಬಸದಿ ಹತ್ತಿರ ಇರುವ ನಾಗರಬಾವಿ ಕೆರೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಸಹಯೋಗದೊಂದಿಗೆ ಸುಮಾರು 30 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ.



















