ಹೆಚ್ಚಿನ ಹಣವನ್ನು ತರುವಂತೆ ಒತ್ತಾಯಿಸಿ ಪತಿ ಹಾಗೂ ಮನೆಯವರು ಸುಮಾರು 5 ತಿಂಗಳ ಮಗುವಿನೊಂದಿಗೆ ಮಹಿಳೆಯನ್ನು ಮನೆಯಿಂದ ಹೊರಗೆ ಹಾಕಿ ಪಡುಬಿದ್ರಿ ಮಾರ್ಗ ಮಧ್ಯದಲ್ಲಿ ಬಿಟ್ಟು ಹೋದ ಘಟನೆಯೊಂದು ವರದಿಯಾಗಿದೆ.
ಮೂಡಬೆಟ್ಟು ಗ್ರಾಮದ ಸರಕಾರಿಗುಡ್ಡೆ ನಿವಾಸಿ ಯಾಸೀರ್ ಸಾಬನ್ ಅಲಿ ಎಂಬಾತ 2024ರ ಮೇ ತಿಂಗಳಿನಲ್ಲಿ ನಾಲು ಗ್ರಾಮದ ಶಬೀನ ಎಂಬ ಯುವತಿಯನ್ನು
ಮದುವೆಯಾಗಿದ್ದ. ಅನಂತರದ ದಿನಗಳಲ್ಲಿ ಶಬ್ರಿನ ಅವರಿಗೆ ಪತಿ, ಅವರ ತಂದೆ ಸಾಬನ್ ಸಾಹೇಬ್, ಮಾನಸಿಕ ತಾಯಿ ಅವ್ವಮ್ಮ ಕಿರುಕುಳವನ್ನು ನೀಡುತ್ತಿದ್ದರು ಎಂದು ದೂರಲಾಗಿದೆ. ಇತ್ತೀಚೆಗೆ ಅದು ತಾರಕಕ್ಕೇರಿದಾಗ ಪತಿಯ ಮನೆಯವರು ಬೈದು, ಜೀವ ಬೆದರಿಕೆ ಒಡ್ಡಿ, ಹಲ್ಲೆ ಮಾಡಿ, ಮನೆಯಿಂದ ಹೊರಗೆ ಹಾಕಿ, ದಾರಿ ಮಧ್ಯೆ ಬಿಟ್ಟು ಹೋದರು ಎಂದು ಹೇಳಲಾಗಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















