Tuesday, April 7, 2026
Google search engine
Homeಕಾರ್ಕಳಹೆಬ್ರಿ: ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಶ್ರೀಕ್ಷೇತ್ರದಲ್ಲಿ ಆದಿಮುದ್ರೋತ್ಸವ : ಸಂಪತ್‌ ಪ್ರದ ಶ್ರೀಸೂಕ್ತ ಹೋಮ...

ಹೆಬ್ರಿ: ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಶ್ರೀಕ್ಷೇತ್ರದಲ್ಲಿ ಆದಿಮುದ್ರೋತ್ಸವ : ಸಂಪತ್‌ ಪ್ರದ ಶ್ರೀಸೂಕ್ತ ಹೋಮ , ನೇಮೋತ್ಸವ

ಭಕ್ತರನ್ನು ಸಲಹುವ ಮಹಾತಾಯಿ ಅಭಯಹಸ್ತೆ ಶ್ರೀ ಆದಿಶಕ್ತಿ ಶ್ರೀಕ್ಷೇತ್ರ, ಶ್ರೀ ನಂದಿಕೇಶ್ವರ ದೇವಸ್ಥಾನ, ಶ್ರೀ ಬ್ರಹ್ಮಬೈದರ್ಕಳ ಗರಡಿ ಮತ್ತು ಧರ್ಮದೈವಗಳ ಸನ್ನಿಧಿಯಲ್ಲಿ ಆದಿಮುದ್ರೋತ್ಸವ ವರ್ಧಂತಿ ಉತ್ಸವ ಹಾಗೂ ೫೩ನೇ ವರ್ಷದ ನೇಮೋತ್ಸವ ಧರ್ಮಾಧಿಕಾರಿ ವಿಜಯಕೀರ್ತಿ ಧರ್ಮಯೋಗಿ ಶ್ರೀ ಸುಕುಮಾರ್‌ ಮೋಹನ್‌ ನೇತ್ರತ್ವದಲ್ಲಿ ಭಾನುವಾರ ಆರಂಭಗೊಂಡಿತು.

ಗ್ರಾಮದೇವತಾ ಪ್ರಾರ್ಥನೆ, ನಿತ್ಯ ಪೂಜೆ, ಸಂಪತ್‌ ಪ್ರದ ಶ್ರೀಸೂಕ್ತ ಹೋಮ, ಭಂಡಾರ ಇಳಿದು ಪಿಲಿ ಚಾಮುಂಡಿ ಬಂಟ ನೇಮ ಮತ್ತು ಅನ್ನ ಸಂತರ್ಪಣೆ ನಡೆಯಿತು. ಸೋಮವಾರ ಭಕ್ತರ ಇಷ್ಟಾರ್ಥ ಸಿದ್ಧಿಗೆ ಸಹಸ್ರ ಕದಳಿ ಹೋಮ ನಡೆಯಿತು. ಧರ್ಮರಸು ಕೊಡಮಣಿತ್ತಾಯ ಕುಕ್ಕಿನಂತಾಯ ನೇಮ, ಬ್ರಹ್ಮಬೈದರ್ಕಳಿಗೆ ಅಗೆಲು ಸೇವೆ, ದರ್ಶನ ಮುಖಾವಲಿ, ಅನ್ನ ದಾಸೋಹ ನಡೆಯಿತು.ನೂರಾರು ಭಕ್ತ ಸಮೂಹ ಭಾಗವಹಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments