ರೋಟರಿ ಕ್ಲಬ್ ಕಾರ್ಕಳವತಿಯಿಂದ “ವಿಶ್ವ ಅರೋಗ್ಯ ದಿನ -೨೦೨೬” ಪ್ರಯುಕ್ತ, ಕಾರ್ಕಳದ ಡಾ. TMA ಪೈ ರೋಟರಿ ಆಸ್ಪತ್ರೆಯಲ್ಲಿ “ಹೆಲ್ತ್ ಅವೇರ್ನೆಸ್ ಟಾಕ್” ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಮಕ್ಕಳ ತಜ್ಞರಾದ ಡಾ. ಆಶಾ ಪಿ ಹೆಗಡೆ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ರೋಟೇರಿಯನ್ ಕೆ. ನವೀನ್ ಚಂದ್ರ ಶೆಟ್ಟಿ ಅವರು ಸ್ವಾಗತ ಹಾಗೂ ಪ್ರಸ್ತಾವನಾ ಮಾತುಗಳನ್ನಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ರೋಟರಿ ಟಿ ಎಂ ಎ ಪೈ ಹಾಸ್ಪಿಟಲ್ ನ ಫಿಸಿಷಿಯನ್ ಡಾ. ಸೂರಜ್ ರಾವ್ ಎಚ್ ಅವರು ಭಾಗವಹಿಸಿ, ಆರೋಗ್ಯದ ಮಹತ್ವ, ಜೀವನಶೈಲಿ ಬದಲಾವಣೆಗಳು ಹಾಗೂ ಸಮಕಾಲೀನ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
ಪಿಡಿಜಿ ಡಾ. ಭರತೇಶ ಆದಿರಾಜ್ ಅವರು ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಈ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.
ಜೆಸಿಐ ಕಾರ್ಕಳದ ಅಧ್ಯಕ್ಷರಾದ ಜೆಸಿ ಅವಿನಾಶ್ ಜಿ ಶೆಟ್ಟಿ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ರಾಕ್ ಸಿಟಿಯ ಅಧ್ಯಕ್ಷರಾದ ರೋಟೇರಿಯನ್ ಸುರೇಂದ್ರ ನಾಯಕ್ ಅವರು ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮವನ್ನು ಹಾಸ್ಪಿಟಲ್ ನ AMO ಅನುಷಾ ಪ್ರಭು ಅವರು ಸುಸೂತ್ರವಾಗಿ ನಿರೂಪಿಸಿದರು.


















