ಹೆಬ್ರಿಯ ಮುಳ್ಕುಂಬ್ರಿ ಶೇಖರ ನಾಯ್ಕ್ (57) ಎಂಬವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಮನೆಯ ನೀರಿನ ಟ್ಯಾಂಕ್ ಗೆ ನೀರು ತುಂಬಿರುವುದನ್ನು ನೋಡುವಾಗ ಮೊಬೈಲ್ ಟ್ಯಾಂಕ್ ಗೆ ಬಿದ್ದಿದೆ. ಮೊಬೈಲ್ ಹೆಕ್ಕಲು ಪ್ರಯತ್ನಿಸಿದಾಗ ಆಕಸ್ಮಿಕವಾಗಿ ನೀರಿನ ಟ್ಯಾಂಕಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಹೆಬ್ರಿಯ ಪರಿಸರದಲ್ಲಿ ಸಕ್ರೀಯರಾಗಿದ್ದ ಶೇಖರ ನಾಯ್ಕ್ ಪ್ರತಿಷ್ಠಿತ ಹೆಬ್ರಿ ಚೈತನ್ಯ ಯುವವೃಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಟನೆಯ ಸ್ಥಾಪಕ ಸದಸ್ಯರು, ಬಳಿಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ನೂರಾರು ಮಂದಿ ಅಂತಿಮ ದರ್ಶನ ಪಡೆದರು. ಮಕ್ಕಳು ಇಲ್ಲದ ಶೇಖರ ನಾಯ್ಕ್ ದಂಪತಿಗಳು ಹೆಬ್ರಿಯ ಮುಳ್ಕುಂಬ್ರಿಯಲ್ಲಿ ಪತ್ನಿಯೊಂದಿಗೆ ವಾಸವಿದ್ದರು. ಹೆಬ್ರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.



















