ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಮಾಲೋಚನೆ, ವಿದ್ಯಾರ್ಥಿ ಕ್ಷೇಮಪಾಲನೆ, ತರಬೇತಿ ಮತ್ತು ಉದ್ಯೋಗ ವಿಭಾಗವಾದ ಅಭ್ಯುದಯದ ಅಡಿಯಲ್ಲಿ ಅನ್ನದಾನ ಕ್ಲಬ್ನ ವಿದ್ಯಾರ್ಥಿಗಳು ಕಾಲೇಜಿನಲ್ಲಿ ದಾನಕ್ಕಾಗಿ ಅಕ್ಕಿ ಸಂಗ್ರಹ ಅಭಿಯಾನವನ್ನು ನಡೆಸಿದರು. ಇದರ ಮೂಲಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಸಂಗ್ರಹಿಸಿದ 110 ಕೆಜಿ ಅಕ್ಕಿಯನ್ನು ಕಾರ್ಕಳದ ಸುರಕ್ಷಾ ಆಶ್ರಮಕ್ಕೆ ಏ.13 ರಂದು ದಾನ ಮಾಡಿದರು.



















