Friday, April 17, 2026
Google search engine
Homeಕಾರ್ಕಳಕಾರ್ಕಳ :ಕೆ.ಎಮ್.ಇ.ಎಸ್ ಸಂಸ್ಥೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ಕಾರ್ಕಳ :ಕೆ.ಎಮ್.ಇ.ಎಸ್ ಸಂಸ್ಥೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ಕುಕ್ಕುಂದೂರು ಗ್ರಾಮದಲ್ಲಿರುವ ಕೆ.ಎಮ್.ಇ.ಎಸ್ ವಿದ್ಯಾ ಸಂಸ್ಥೆಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.ಕಾಲೇಜಿನ ಇತಿಹಾಸ ಉಪನ್ಯಾಸಕಿ ಸುಮನ್ ರವರು ಅಂಬೇಡ್ಕರ್ ರವರ ಜೀವನ ಚರಿತ್ರೆಯ ಬಗ್ಗೆ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಕೆ.ಬಾಲಕೃಷ್ಣ ರಾವ್ ರವರು ಮಾತನಾಡಿ” ಡಾ.ಬಿ. ಆರ್. ಅಂಬೇಡ್ಕರ್ ರವರು ಹಲವು ವಿಶ್ವವಿದ್ಯಾನಿಲಯಗಳ ಪದವಿಗಳನ್ನು ಪಡೆದಿರುವ ಪ್ರತಿಭಾವಂತರು. ಸವಿಂಧಾನ ದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕೊಟ್ಟಿರುವ ಸವಿಂಧಾನ ನಮ್ಮ ದೇಶದ ಮಾರ್ಗದರ್ಶಿ ಯಾಗಿದೆ. ಸವಿಂಧಾನವನ್ನು ಗೌರವಿಸುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು.

ಸಂಸ್ಥೆಯ ಎಲ್ಲಾ ಸಹೋದ್ಯೋಗಿ ಮಿತ್ರರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಅರ್ಪಿಸಿದರು. ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥೆ ಶ್ರೀಮತಿಯವರು, ಪ್ರೈಮರಿ ವಿಭಾಗದ ಮುಖ್ಯಸ್ಥೆ ಲೊರಿಟ ಡಿ’ಸಿಲ್ವ, ಉಪನ್ಯಾಸಕರು,ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿ ಗಳು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments