Saturday, April 18, 2026
Google search engine
Homeಕಾರ್ಕಳಕಾರ್ಕಳದ ನೂತನ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಶಾಸಕರ ಗೈರು: ಬೇಸರ ವ್ಯಕ್ತಪಡಿಸಿದ ದಲಿತ...

ಕಾರ್ಕಳದ ನೂತನ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಶಾಸಕರ ಗೈರು: ಬೇಸರ ವ್ಯಕ್ತಪಡಿಸಿದ ದಲಿತ ಮುಖಂಡರು

ಕಾರ್ಕಳದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಿ.‌ಆರ್ ಅಂಬೇಡ್ಕರ್ ಭವನದಲ್ಲಿ ಕಾರ್ಕಳ ತಾಲೂಕು ಆಡಳಿತ ವತಿಯಿಂದ ಮೊದಲ ಬಾರಿಗೆ ಹಮ್ಮಿಕೊಳ್ಳಲಾದ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆಗೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಗೈರು ಹಾಜರಾಗಿರುವುದಕ್ಕೆ ದಲಿತ ಸಮಾಜ ಬಂಧುಗಳು ಮತ್ತು ಅಂಬೇಡ್ಕರ್ ಅನುವಾಯಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಶಾಸಕರು ತನ್ನ ಪಕ್ಷದ ಕಚೇರಿಯಲ್ಲಿ ಇದ್ದರೂ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸದೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮಾತ್ರವಲ್ಲ ಇಡೀ ದಲಿತ ಸಮಾಜವನ್ನು ಅವಮಾನ ಮಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಶಾಸಕರ ಮೊದಲ ಕರ್ತವ್ಯವಾಗಿದೆ, ಅವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದು ಬದಲಾಗಿ ಅಸಡ್ಡೆ ತೋರಿರುವುದು ಖೇದಕರ.

ಸಂವಿಧಾನದ ರಚನೆಯಿಂದ ಭಾರತದಲ್ಲಿ ಸಮಾನತೆಯನ್ನು ಕಲ್ಪಿಸಿದ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಅವಮಾನಿಸುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಜವಾಬ್ದಾರಿಯುತ ಸ್ಥಾನದಲ್ಲಿರುವ ಕಾರ್ಕಳ ಶಾಸಕರು ತನ್ನ ಕಚೇರಿಯಿಂದ ಸ್ವಲ್ಲವೇ ದೂರದಲ್ಲಿರುವ ಅಂಬೇಡ್ಕರ್ ಭವನಕ್ಕೆ ಆಗಮಿಸದೆ ಇರುವುದು ನಮಗೆ ಅತ್ಯಂತ ಬೇಸರ ಉಂಟು ಮಾಡಿದೆ ಮುಂದಿನ ದಿನದಲ್ಲಿ ಶಾಸಕರು ತಮ್ಮ ತಪ್ಪನ್ನು ತಿದ್ದಿಗೊಳ್ಳದಿದ್ದರೆ ಅವರು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳನ್ನು ಬಹಿಷ್ಕರಿಸಲಾಗುವುದು ಎಂದು ದಲಿತ ಮುಖಂಡರಾದ ಅಣ್ಣಪ್ಪ ನಕ್ರೆ ಹಾಗೂ ವಕೀಲರಾದ ರಾಘವ ಕುಕ್ಕುಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments