ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳ ಫುಟ್ಬಾಲ್ ಕ್ರೀಡಾಪಟುಗಳು ಹಾಗೂ ಮಣಿಪಾಲದ ವಿಕ್ಟೋರಿಯಾ ಫುಟ್ಬಾಲ್ ಕ್ಲಬ್ ನಡುವಿನ ಹೊನಲುಬೆಳಕಿನ ಫುಟ್ಬಾಲ್ ಪಂದ್ಯ ಏ.೧೪ ರಂದು ಬಿ.ಸಿ. ಆಳ್ವಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನ ಆರ್ಟಿಫಿಷಿಯಲ್ ಟರ್ಫ್ ಫುಟ್ಬಾಲ್ ಮೈದಾನದಲ್ಲಿ ಹೊಸದಾಗಿ ಸ್ಥಾಪಿಸಲಾದ ಫ್ಲಡ್ ಲೈಟ್ಗಳ ಅಡಿಯಲ್ಲಿ ನಡೆಸಲಾಯಿತು.
ನಿಟ್ಟೆ ತಂಡವು ಮಣಿಪಾಲದ ವಿಕ್ಟೋರಿಯಾ ಫುಟ್ಬಾಲ್ ಕ್ಲಬ್ ವಿರುದ್ಧ 3-2 ಗೋಲುಗಳಿಂದ ಗೆಲುವು ಸಾಧಿಸಿತು.


















