ಸೈಕಲ್ ಸರ್ಕಸ್ ನಲ್ಲಿ ಡ್ಯಾನ್ಸ್ ಮಾಡಿ ಊರಿನ ಮರ್ಯಾದೆ ತೆಗೆದಿದ್ದೀಯಾ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಕುಕ್ಕುಂದೂರು ಗ್ರಾಮದ ದುರ್ಗಾನಗರದಲ್ಲಿ ನಡೆದಿದೆ. ಕುಕ್ಕುಂದೂರಿನ ವಿಜಯ ಕುಮಾರ್ (40) ಹಲ್ಲೆಗೊಳಗಾದವರು.
ದುರ್ಗಾನಗರದಲ್ಲಿ ನಡೆದ ಸೈಕಲ್ ಸರ್ಕಸ್‌ನಲ್ಲಿ ಡ್ಯಾನ್ಸ್ ಮಾಡಿ ಮನೆಗೆ ಮರಳುತ್ತಿದ್ದಾಗ, ಗುರುಪ್ರಸಾದ್, ಶಿವ ಹಾಗೂ ದಯಾನಂದ ಅವರು ಅಡ್ಡಗಟ್ಟಿ ನಿಂದಿಸಿ, ಹೊಡೆದು ನೆಲಕ್ಕೆ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. ನೆಲಕ್ಕೆ ಬಿದ್ದಾಗ ವಿಜಯ ಅವರ ತಲೆಗೆ ತೀವ್ರ ರಕ್ತಗಾಯವಾಗಿದೆ.
ಗಾಯಾಳು ಮೊದಲು ಕಾರ್ಕಳ ಸರಕಾರಿ ಆಸ್ಪತ್ರೆ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















