ಎಲ್ಲರೂ ಸೇರಿ ಶಾಲೆಯನ್ನು ಮುನ್ನಡೆಸಿ : ಮುದ್ರಾಡಿ ಮಂಜುನಾಥ ಪೂಜಾರಿ
ಶಿಕ್ಷಣಕ್ಕೆ ಅಂದು ಹೆಚ್ಚಿನ ಮಹತ್ವವನ್ನು ನೀಡಲೇಬೆಕೆಂದು ಗ್ರಾಮದಲ್ಲಿ ನಾಲ್ಕೈದು ಶಾಲೆಯನ್ನು ತೆರೆದ ಹಿನ್ನಲೆಯಲ್ಲಿ ಊರಿನ ಬಹುತೇಕ ಮಂದಿ ವಿದ್ಯೆ ಪಡೆಯಲು ಸಾಧ್ಯವಾಯಿತು. ಆದರೆ ಇಂದು ಆಯ್ಕೆಗಳಿಗೆ ವಿಪುಲವಾಗಿದೆ. ಸಮಾಜದ ಕಣ್ಣು ಆಗಿದ್ದ ಸರ್ಕಾರಿ ಶಾಲೆಗಳು ಇಂದು ಮುಚ್ಚುವ ಸ್ಥಿತಿಗೆ ಬಂದಿವೆ. ಸಾವಿರಾರು ಮಂದಿಗೆ ವಿದ್ಯೆ ನೀಡಿದ ಶತಮಾನೋತ್ಸವ ಸಂಭ್ರಮ ಮುಳ್ಳುಗುಡ್ಡೆ ಸರ್ಕಾರಿ ಅನುದಾನಿತ ಶಾಲೆಯನ್ನು ಶಿಕ್ಷಕರು, ಮಕ್ಕಳು,ಪೋಷಕರು, ಹಳೇ ವಿದ್ಯಾರ್ಥಿಗಳು ಸೇರಿ ಶಾಲೆಯನ್ನು ಮುಚ್ಚಲು ಬಿಡದೆ ಉಳಿಸಿ ಮುನ್ನಡೆಸಬೇಕಾಗಿದೆ ಎಂದು ರಾಜ್ಯದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಭಾನುವಾರ ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮದ ಮುಳ್ಳುಗುಡ್ಡೆ ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಮತ್ತು ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನವನ್ನು ಉದ್ಘಾಟಿಸಿ ಮಾತನಾಡಿದರು.
ಪರಿಷತ್ ಮತ್ತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶಿವಪುರದ ಮುಂದಾಳು ಮೂರ್ಸಾಲು ಮೋಹನದಾಸ ನಾಯಕ್ ಮಾತನಾಡಿ ೨೫ ವರ್ಷಗಳಿಂದ ನಿರಂತರವಾಗಿ ಶಾಲೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದೇನೆ. ಶಾಲೆಯನ್ನು ಉಳಿಸಲು ಸರ್ವರೂ ಕೈಜೋಡಿಸಿದರೇ ಇನ್ನಷ್ಟು ಶ್ರಮವಹಿಸಿ ಉಳಿಸಿಕೊಳ್ಳುತ್ತೇವೆ. ೫ ಸಾವಿರ ಮಂದಿ ನಮ್ಮ ಶಾಲೆಯಲ್ಲಿ ವಿದ್ಯೆ ಕಲಿತ್ತಿದ್ದಾರೆ. ಶಾಲೆಯನ್ನು ಮುನ್ನಡೆಸಿ ಹುದ್ದೆಗೆ ನ್ಯಾಯ ನೀಡಿದ್ದೇನೆ. ಶಾಲೆಯನ್ನುಉಳಿಸಲೆಂದೇ ಹಳೇ ವಿದ್ಯಾರ್ಥಿಗಳ ಸಮ್ಮೀಲನವನ್ನು ನಡೆಸಲಾಗಿದೆ, ಶಾಲೆಯ ನಿರಂತರ ಉಳಿವಿಗಾಗಿ ೧೦೦ ವರ್ಷಗಳ ಕಾಲ ಸೇವೆಸಲ್ಲಿಸಿದ ಮುಖ್ಯ ಶಿಕ್ಷಕರು, ಶಿಕ್ಷಕರು, ಜನಪ್ರತಿನಿಧಿಗಳು, ದಾನಿಗಳು, ಪೋಷಕರು, ಹಳೇ ವಿದ್ಯಾರ್ಥಿಗಳು, ಶಿಕ್ಷಣ ಇಲಾಖೆ ಸೇರಿ ಹಲವರ ಸೇವೆಯನ್ನು ಮೋಹನದಾಸ ನಾಯಕ್ ಸ್ಮರಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಶಿವಪುರ ಶಂಕರನಾರಾಯಣ ಕೊಡಂಚ ಅಧ್ಯಕ್ಷತೆ ವಹಿಸಿ ಮಾತನಾಡಿ ಶತಮಾನೋತ್ಸವ ಸಂಭ್ರಮ ಮತ್ತು ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ನಿವೃತ್ತ ಮುಖ್ಯ ಶಿಕ್ಷಕಿ ಬೇಬಿ ಅವರಿಗೆ ಗುರುವಂದನೆ, ಸಾಧಕರಿಗೆ, ದಾನಿಗಳು ಮತ್ತು ಗೌರವ ಶಿಕ್ಷಕರಾದ ಅನಿತಾ, ದೀಪಿಕಾ ಮತ್ತು ಸುಚರಿತ ಅವರಿಗೆ ಗೌರವ ಸಮರ್ಪಣೆ, ಸಾಹಿತಿ ಲೇಖಕರಾದ ಶಿಕ್ಷಕ ಮಂಜುನಾಥ ಕೆ ಶಿವಪುರ, ಸಾಧಕ ವಿದ್ಯಾರ್ಥಿಗಳಾದ ವರ್ಷಿಣಿ ಕುಲಾಲ್, ದೀಕ್ಷಿತಾ ಅವರನ್ನು ಸನ್ಮಾನಿಸಲಾಯಿತು.
ಶಾಲಾ ವಿದ್ಯಾರ್ಥಿಗಳ ನೃತ್ಯೋತ್ಸವ, ಹಳೆ ವಿದ್ಯಾರ್ಥಿಗಳ ನೃತ್ಯ ವೈವಿಧ್ಯ, ವಿನಯ ಬೇರೋಳ್ಳಿ ಅವರ ಸಂಯೋಜನೆಯಲ್ಲಿ ಯಕ್ಷರ್ಪಣ ಬೇರೋಳ್ಳಿ ಅವರ ತಂಡದಿಂದ ದಕ್ಷಿಣೋತ್ತರ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ರಾಮಾಂಜನೇಯ ಕಾಳಗ ಯಕ್ಷಗಾನ ನಡೆಯಿತು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗನ್ನಾಥ ಕುಲಾಲ್ ಶಿವಪುರ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನಿವೃತ್ತ ಮುಖ್ಯ ಶಿಕ್ಷಕ ಮುರಳೀಧರ ಭಟ್ ಮತ್ತು ಶಾಲಾ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಸಮಿತಿಯ ಅಧ್ಯಕ್ಷರಾದ ಡಾ.ಗುರುಪ್ರಸಾದ ಕೊಡಂಚ ಹಾಗೂ ಊರಿನ ದಾನಿಗಳು, ಸಂಘಸಂಸ್ಥೆಗಳು, ಹಳೇ ವಿದ್ಯಾರ್ಥಿಗಳು, ಶಾಲಾಡಳಿತ ಪರಿಷತ್ ಮತ್ತು ವ್ಯವಸ್ಥಾಪನಾ ಸಮಿತಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಶಾಲಾ ಶಿಕ್ಷಕ ರಕ್ಷಕ ಸಂಘ, ಶತಮಾನೋತ್ಸವ ಸಮಿತಿ, ಶಾಲಾ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಸಮಿತಿ, ಹಳೇ ವಿದ್ಯಾರ್ಥಿ ಸಂಘದ ಸರ್ವ ಸದಸ್ಯರು, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಗೌರವ ಶಿಕ್ಷಕಿಯರ ಸಹಕಾರದಲ್ಲಿ ಶತಮಾನೋತ್ಸವ ಸಂಭ್ರಮ ನಡೆಯಿತು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗನ್ನಾಥ ಕುಲಾಲ್ ಶಿವಪುರ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನಿವೃತ್ತ ಮುಖ್ಯ ಶಿಕ್ಷಕ ಮುರಳೀಧರ ಭಟ್, ಶಾಲಾ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಸಮಿತಿಯ ಅಧ್ಯಕ್ಷ ಡಾ.ಗುರುಪ್ರಸಾದ ಕೊಡಂಚ, ವಿವಿಧ ಪ್ರಮುಖರಾದ ವಿಶ್ವನಾಥ ಪೂಜಾರಿ, ಸಚಿನ್ ನಾಯ್ಕ್ ಕುಬ್ರಿ, ಶಿಕ್ಷಕ ರಮಾನಂದ ಶೆಟ್ಟಿ, ವಿಶ್ವಾಸ್ ವೈಲಾಯ, ಎಸ್.ಕೃಷ್ಣ, ವಿದ್ಯಾ ಶೆಟ್ಟಿ, ವಿಶ್ವನಾಥ ಕುಲಾಲ್, ವಿವಿಧ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು. ಮಂಜುನಾಥ ಕುಲಾಲ್ ಶಿವಪುರ ನಿರೂಪಿಸಿ ಮುರ್ಸಾಲು ಮೋಹನದಾಸ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗನ್ನಾಥ ಕುಲಾಲ್ ಸ್ವಾಗತಿಸಿ ಸುಚರಿತಾ ಶೆಟ್ಟಿ ಸನ್ಮಾನಪತ್ರ ವಾಚಿಸಿ ಕೃಷ್ಣ ಎಸ್ ವಂದಿಸಿದರು.




















