ಕುಕ್ಕುಂದೂರು ದುರ್ಗಾನಗರದಲ್ಲಿ ಲಾಂಡ್ರಿ ಅಂಗಡಿ ನಡೆಸುತ್ತಿದ್ದ ವ್ಯಕ್ತಿ ಕೆಲಸ ಮುಗಿಸಿ ಬರುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಕುಕ್ಕುಂದೂರು ಅಂಗನಜಾಲು ನಿವಾಸಿ ಸದಾನಂದ ಮಡಿವಾಳ (56) ಮೃತಪಟ್ಟವರು. ಇವರು ದುರ್ಗಾನಗರದ ಪವನ್ ಕಾಂಪ್ಲೆಕ್ಸ್‌ನಲ್ಲಿ ಲಾಂಡ್ರಿ ಅಂಗಡಿ ನಡೆಸುತ್ತಿದ್ದು, ಎ.21ರಂದು ಸಂಜೆ ಕೆಲಸ ಮುಗಿಸಿ ಅಂಗಡಿಯಿಂದ ಹೊರಬ ರುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಅವರನ್ನು ಸ್ಥಳೀಯರಾದ ಗುರುಪ್ರಸಾದ್ ಕಾರ್ಕಳ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರಾದರೂ, ಪರೀಕ್ಷಿಸಿದ ವೈದ್ಯರು, ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತರ ಪುತ್ರ ಸಂದೇಶ್ ಮಡಿವಾಳ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




















