ನಿಟ್ಟೆ ಗ್ರಾಮದ ಕಲಂಬಾಡಿ ಪದವು ನಿವಾಸಿ ಗಣೇಶ್ ಬೋಯರ್(31) ಎ.21 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಗಣೇಶ್, ಮದ್ಯಪಾನದ ಅಭ್ಯಾಸ ಹೊಂದಿದ್ದು, ಯಾವಾಗಲೂ ಮನೆಯಲ್ಲಿ ತಾಯಿಯ ಜತೆ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಘಟನೆಯ ದಿನ ಮಧ್ಯಾಹ್ನ ಮದ್ಯಪಾನ ಮಾಡಿ ಬಂದು ಗಲಾಟೆ ಮಾಡುತ್ತಿದ್ದಾಗ ತಾಯಿ ಸಮೀಪವಿದ್ದ ಅಕ್ಕನ ಮಗನನ್ನು ಸಮಾಧಾನಪಡಿಸಲು ಕರೆತರಲು ಹೋಗಿದ್ದರು. ಅವರು ವಾಪಸ್ ಬಂದು ನೋಡುವಷ್ಟರಲ್ಲಿ ಗಣೇಶ್ ಮನೆಯ ಮಾಡಿನ ಜಂತಿಗೆ ನೇಣು ಬಿಗಿದುಕೊಂಡಿದ್ದರು.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲಿ ಪ್ರಕರಣ ದಾಖಲಾಗಿದೆ.




















