Sunday, April 26, 2026
Google search engine
Homeಕಾರ್ಕಳಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ : ವಾರ್ಷಿಕ ಮಹಾಸಭೆ; ಜಮೀನಿನ ಹಕ್ಕುಪತ್ರ ವಿಳಂಬ ;...

ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ : ವಾರ್ಷಿಕ ಮಹಾಸಭೆ; ಜಮೀನಿನ ಹಕ್ಕುಪತ್ರ ವಿಳಂಬ ; ಸರ್ಕಾರಕ್ಕೆ ಮನವಿ ; ಜಂಟಿ ಸರ್ವೆ

ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮ ಸೇರಿ ವಿವಿದೆಡೆ ವಾಸವಿರುವ ಹಲವು ಕುಟುಂಬಗಳಿಗೆ ಅಕ್ರಮಸಕ್ರಮ ನಮೂನೆಯಲ್ಲಿ ಅರ್ಜಿ ಇದ್ದರೂ ಹಕ್ಕುಪತ್ರ ಲಭಿಸದ ಹಿನ್ನಲೆಯಲ್ಲಿ ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್‌ ವತಿಯಿಂದ ಅರ್ಹರಿಗೆ ಶೀಘ್ರವಾಗಿ ಜಮೀನಿನ ಹಕ್ಕುಪತ್ರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನಲೆಯಲ್ಲಿ ಜಂಟಿ ಸರ್ವೆ ನಡೆಯುತ್ತಿದೆ. ಇದು ನಮ್ಮ ಟ್ರಸ್ಟ್‌ ನ ಜನಸೇವೆ ಎಂದು ಅಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ ಹೇಳಿದರು.

ಅವರು ಶನಿವಾರ ಹೆಬ್ರಿಯ ಚೈತನ್ಯ ಸಭಾಂಗಣದಲ್ಲಿ ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್‌ ನ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನನಾಯಕರಾಗಿದ್ದ ಗೋಪಾಲ ಭಂಡಾರಿಯವರ ಹುಟ್ಟುಹಬ್ಬದ ದಿನ ಜುಲೈ 7ರಂದು ಪ್ರತಿವರ್ಷವು ವಿವಿಧ ಗ್ರಾಮಗಳ ಆದರ್ಶ ಸಾಧಕರಿಗೆ ಗೌರವಾರ್ಪಣೆ, ಎಸ್‌ಎಸ್‌ಎಲ್‌ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಗೌರವ ಮತ್ತು ಗೋಪಾಲ ಭಂಡಾರಿಯವರು ಮತದಾನ ಮತದಾನ ಮಾಡುತ್ತಿದ್ದ ಗಾಂಧಿನಗರ ಶಾಲೆಯ ಸಾಧಕ ವಿದ್ಯಾರ್ಥಿಗೆ ಗೌರವ ಸಮರ್ಪಣೆ ಸಹಿತ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ನೀರೆ ಕೃಷ್ಣ ಶೆಟ್ಟಿ ಹೇಳಿದರು. ವಾರ್ಷಿಕ ಲೆಕ್ಕಾಚಾರ ಮಂಡನೆ, ಟ್ರಸ್ಟಿನ ರೂಪುರೇಷೆ ಮಂಡನೆ ನಡೆಯಿತು. ಇದೇ ಸಂದರ್ಭದಲ್ಲಿ ಕಾರ್ಯಕಾರಿ ನಿರ್ದೇಶಕರ ಸಭೆಯು ನಡೆಯಿತು. ಇತ್ತೀಚೆಗೆ ನಿಧನರಾದ ಟ್ರಸ್ಟ್‌ ಸದಸ್ಯರಾದ ಜಲಜ ಈಶ್ವರ ಭಂಡಾರಿ, ಹುತ್ತುರ್ಕೆ ಸುದೀಪ್‌ ಭಂಡಾರಿ, ಸೀತಾನದಿ ರಮೇಶ ಹೆಗ್ಡೆ, ಗೋಪಾಲ ಭಂಡಾರಿ ಹಿತೈಸಿಗಳಾದ ಸುಂದರ ಶಿರೂರು, ಇಂದಿರಾನಗರ ಶೇಖರ ನಾಯ್ಕ್‌ ಅವರಿಗೆ ಸಂತಾಪ ಸೂಚಿಸಿ ಮೌನಪ್ರಾರ್ಥನೆ ಸಲ್ಲಿಸಲಾಯಿತು.

ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್‌ ಕಾರ್ಯದರ್ಶಿ ದೀಪಾ ಭಂಡಾರಿ, ಕೋಶಾಧಿಕಾರಿ ಜನಾರ್ಧನ್‌ ಹೆಬ್ರಿ, ನಿರ್ದೇಶಕರಾದ ನಾರಾಯಣಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಮುನಿಯಾಲು ಗೋಪಿನಾಥ ಭಟ್‌, ಪ್ರಸನ್ನ ಶೆಟ್ಟಿ ಪಡುಕುಡೂರು, ವಾದಿರಾಜ ಶೆಟ್ಟಿ ಹೆಬ್ರಿ, ಹೆಬ್ರಿ ಭಾಸ್ಕರ ಜೋಯಿಸ್‌, ಜಗದೀಶ ಹೆಗ್ಡೆ ಕಡ್ತಲ, ರಾಘವೇಂದ್ರ ನಾಯ್ಕ್‌ ಇಂದಿರಾನಗರ, ಮೂರ್ಸಾಲು ಮೋಹನದಾಸ ನಾಯಕ್‌ ಶಿವಪುರ, ಪತ್ರಕರ್ತ ಸುಕುಮಾರ್‌ ಮುನಿಯಾಲ್‌, ಪ್ರಕಾಶ ಪೂಜಾರಿ ಮಾತಿಬೆಟ್ಟು, ಬೈಕಾಡಿ ಮಂಜುನಾಥ ರಾವ್‌ ಶಿವಪುರ, ಪ್ರಭಾಕರ ಭಂಡಾರಿ ಶಿವಪುರ, ಜಗನ್ನಾಥ ಕುಲಾಲ್‌ ಶಿವಪುರ, ಹೆಚ್.ಕೆ.ನಾರಾಯಣ ನಾಯ್ಕ್‌, ರಾಜು ಶೆಟ್ಟಿ, ಸಂತೋಷ ನಾಯಕ್‌ ಕನ್ಯಾನ, ರಾಜೇಶ ಭಂಡಾರಿ, ಜಾನ್‌ ಟೆಲ್ಲಿಸ್‌ ಅಜೆಕಾರು, ರಾಘವ ದೇವಾಡಿಗ ಎಳ್ಳಾರೆ, ಮಾಲಿನಿ ರೈ ಕಾರ್ಕಳ, ಶ್ವೇತಕುಮಾರ್‌ ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments