Home Blog Page 88

ಶಿಲ್ಪಿ ಕೃಷ್ಣ ನಾಯ್ಕ್‌ ಮೂರ್ತಿ ಮಾಡಬಾರದು ಎಂದಾದರೆ ಕಳಪೆ ಕಾಮಗಾರಿ ಮಾಡಿ ಒಪ್ಪಿಕೊಂಡಿರುವ ಮಾನ್ಯ ಉದಯ್‌ ಕುಮಾರ್‌ ಶೆಟ್ಟಿಯವರೇ ಸರ್ಕಾರದ ಯಾವುದೇ ಕಾಮಗಾರಿ ಮಾಡಲು ನೀವು ಅರ್ಹರಲ್ಲ-ಮಹಾವೀರ ಹೆಗ್ಡೆ.

0
ಶಿಲ್ಪಿ ಕೃಷ್ಣ ನಾಯ್ಕ್‌ ಮೂರ್ತಿ ಮಾಡಬಾರದು ಎಂದಾದರೆ ಕಳಪೆ ಕಾಮಗಾರಿ ಮಾಡಿ ಒಪ್ಪಿಕೊಂಡಿರುವ ಮಾನ್ಯ ಉದಯ್‌ ಕುಮಾರ್‌ ಶೆಟ್ಟಿಯವರೇ ಸರ್ಕಾರದ ಯಾವುದೇ ಕಾಮಗಾರಿ ಮಾಡಲು ನೀವು ಅರ್ಹರಲ್ಲ-ಮಹಾವೀರ ಹೆಗ್ಡೆ.
ಕಾರ್ಕಳ:ಸೆ.19-ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ನೀವು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪರಶುರಾಮ ಥೀಂ ಪಾರ್ಕ್‌ ಕಾಮಗಾರಿ ಕುರಿತು ಪದೇ ಪದೇ ಸುಳ್ಳು ಹೇಳಿ ತಗಾದೆ ಮಾಡುತ್ತಿರುವ ಉದಯ್‌ ಕುಮಾರ್‌ ಶೆಟ್ಟಿಯವರೇ, ಪರಶುರಾಮನ ಮೂರ್ತಿ ಮಾಡುವ ಶಿಲ್ಪಿ GST ಕಟ್ಟಿಲ್ಲ ಎಂಬ ಮಾತ್ರಕ್ಕೆ ಮೂರ್ತಿಯ ನಿರ್ಮಾಣ ಕೆಲಸ ಮಾಡಬಾರದು ಎಂದಾದರೆ, ಸರ್ಕಾರದ ಗುತ್ತಿಗೆದಾರರಾದ ನೀವು ಅನೇಕ ಕಳಪೆ ಕಾಮಗಾರಿಗಳನ್ನು ಮಾಡಿ ಕಳಪೆ ಕಾಮಗಾರಿಯ ಸರದಾರ ಎಂದೇ ಪ್ರಸಿದ್ಧಿ ಪಡೆದವರು. ಅದರಲ್ಲೂ ಒಮ್ಮೆ ನಿಮ್ಮ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದರು ಎಂಬ ಬಗ್ಗೆ ಸುದ್ಧಿಯು ಕೇಳಿ ಬಂದಿತ್ತು. ಅಂತಹ ಕುಖ್ಯಾತಿ ಹೊಂದಿರುವ ನೀವು, ಮತ್ತೆ ಸರ್ಕಾರದ ಕಾಮಗಾರಿಗಳನ್ನು ನಿರ್ವಹಿಸಬಹುದೇ…? ಈ ರಾಜ್ಯದಲ್ಲಿ ಕೃಷ್ಣ ನಾಯ್ಕ್‌ಗೆ ಒಂದು ಕಾನೂನು, ನಿಮಗೊಂದು ಕಾನೂನು ಇದೆಯೆ? ಎಂದು ಜಿಲ್ಲಾ ಭಾರತೀಯ ಜನತಾ ಪಾರ್ಟಿ ಉಪಾಧ್ಯಕ್ಷ  ಮಹಾವೀರ ಹೆಗ್ಡೆ ಪ್ರಶ್ನಿಸಿದ್ದಾರೆ.
ಪರಶುರಾಮ ಥೀಂ ಪಾರ್ಕ್‌ ವಿಷಯದಲ್ಲಿ ಆರಂಭದಿಂದಲೂ ಸುಳ್ಳುಗಳ ಸರಮಾಲೆಯನ್ನೇ ಸೃಷ್ಟಿಸಿದಿರಿ
ಪರಶುರಾಮನ ಮೂರ್ತಿಯ ಮೇಲ್ಭಾಗವನ್ನು ಕದ್ದು-ಮುಚ್ಚಿ ಕೊಂಡೊಯ್ಯಲಾಗಿದೆ ಎಂದು ಯಾಕೆ ಜನರಿಗೆ ಪದೇ ಪದೇ ಸುಳ್ಳು ಹೇಳುತ್ತೀರಿ…? ಮೂರ್ತಿಯ ಭಾಗವನ್ನು ಪೊಲೀಸು ಇಲಾಖೆಯ ಸುಪರ್ದಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತೆಗೆಯಲಾಗಿದ್ದು ನಿಮಗೂ ಗೊತ್ತಿದೆ. ಈ ಬಗ್ಗೆ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ದಾಖಲೆ ಸಮೇತ ಚರ್ಚೆ ಆಗಿದೆ. ಆದರೂ ಕೂಡ ನೀವು ಮೂರ್ತಿ ಕಳವಾಗಿದೆ ಎಂದು ಹಸಿ ಹಸಿ ಸುಳ್ಳು ಹೇಳುತ್ತೀರಿ. ಮೂರ್ತಿ ಪ್ಲಾಸ್ಟಿಕ್‌-ಫೈಬರ್‌ ಎಂದು ಊರೆಲ್ಲಾ ಹೇಳಿದ ನೀವು ಕೋರ್ಟ್‌ನಲ್ಲಿ ಮಾತ್ರ ಪ್ಲಾಸ್ಟಿಕ್‌-ಫೈಬರ್‌ ಅಲ್ಲ ಎಂದು ಒಪ್ಪಿಕೊಂಡಿರುತ್ತೀರಿ. ನಿಮಗೆ ಈ ತರಹ ಸುಳ್ಳು ಹೇಳಲು ನಾಚಿಕೆ ಆಗುವುದಿಲ್ಲವೇ..? ನೀವೊಬ್ಬ ಸರಣಿ ಸುಳ್ಳುಗಾರ ಎಂದು ಖ್ಯಾತಿ ಪಡೆದವರು. ಹೀಗೆಯೆ ಸುಳ್ಳು ಹೇಳುತ್ತಾ ಹೋದರೆ, ನಿಮ್ಮ ಬಗ್ಗೆ ಮಹಾ ಸುಳ್ಳುಗಾರ ಎಂಬ ಪ್ರಬಂಧವನ್ನೇ ಮಂಡಿಸಬಹುದು.
ಕಣ್ಣಿಗೆ ಅಂಟಿದ ರಾಜಕೀಯ ಪೊರೆಯನ್ನು ಕಳಚಿ ಕಾರ್ಕಳದ ಅಭಿವೃದ್ಧಿಯನ್ನು ನೋಡಿ
ಕಾರ್ಕಳದ ಮಾನ್ಯ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ ವಿ ಸುನಿಲ್‌ ಕುಮಾರ್‌ ರವರು ತನ್ನ ಶಾಸಕತ್ವ ಅವಧಿಯಲ್ಲಿ ರಾಜ್ಯದಲ್ಲಿ ತನ್ನ ಸರ್ಕಾರ ಇರಲಿ, ಇಲ್ಲದಿರಲಿ, ಇಡೀ ಕ್ಷೇತ್ರದಲ್ಲಿ ಬರಪೂರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅದು ಕೇವಲ ರಸ್ತೆ ಕಾಮಗಾರಿಗಳಿಗೆ ಸೀಮಿತವಾಗದೇ, ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಕಳ ಅಭಿವೃದ್ಧಿ ಆಗುವಂತೆ ನೋಡಿಕೊಂಡವರು. ಆರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ, ಉದ್ಯಮ, ಪ್ರವಾಸೋದ್ಯಮ, ರಸ್ತೆ, ಸೇತುವೆ, ನೀರಾವರಿ ಅಷ್ಟೇ ಅಲ್ಲದೇ, ಸರ್ಕಾರದ ಅನುದಾನವನ್ನು ಅವಲಂಬಿಸದೇ, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಹಲವಾರು ಕೆರೆಗಳ ಅಭಿವೃದ್ಧಿ, ಉದ್ಯೋಗ ಮೇಳ, ಕೋವಿಡ್‌ ಸಂದರ್ಭದಲ್ಲಿ ಕ್ವಾರಂಟೈನ್‌ ಕೇಂದ್ರ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಹಾಗೂ ಜನಪರ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದವರು. ಇದೆಲ್ಲವನ್ನೂ ಕಣ್ಣಾರೆ ನೋಡಿಯೂ ನೀವು ಕಾರ್ಕಳದಲ್ಲಿ ಅಭಿವೃದ್ಧಿ ಆಗಿಯೇ ಇಲ್ಲ, ಸುನಿಲ್‌ ಕುಮಾರ್‌ ಕೊಡುಗೆ ಕಾರ್ಕಳಕ್ಕೆ ಏನೂ ಇಲ್ಲ ಹೇಳುತ್ತೀರಲ್ಲಾ, ನೀವು ಕಾರ್ಕಳದಲ್ಲಿ ಚುನಾವಣೆ ಬಂದಾಗ ಮಾತ್ರ ಓಡಾಡುತ್ತೀರಿ. ಹಾಗಾಗಿ ನಿಮ್ಮ ಕಣ್ಣಿಗಂಟಿರುವ ರಾಜಕೀಯ ಪೊರೆಯನ್ನು ಕಳಚಿ ಕಾರ್ಕಳದ ಅಭಿವೃದ್ಧಿಯನ್ನು ಒಮ್ಮೆ ನೋಡಿ.
ಸುನಿಲ್‌ ಕುಮಾರ್‌ ರವರ ಹಿಂದುತ್ವದ ಬಗ್ಗೆ ಮಾತಾನಾಡುವ ನೈತಿಕತೆ ನಿಮಗಿಲ್ಲ
ನಮ್ಮ ಶಾಸಕರಾದ ಸುನಿಲ್‌ ಕುಮಾರ್ ರವರ ಹಿಂದುತ್ವದ ಬಗ್ಗೆ ಮಾತಾನಾಡುವ ನೀವು ಅಯೋಧ್ಯೆ ಶ್ರೀ ರಾಮ ಮಂದಿರದ ಪವಿತ್ರ ಮಂತ್ರಾಕ್ಷತೆಯನ್ನು ಅಪಹಾಸ್ಯ ಮಾಡಿದಿರಿ. ಚುನಾವಣೆ ಸಂಧರ್ಭ ಮಸೀದಿಗೆ ತೆರಳಿ  ಅಲಲಿಯ ಮುಖಂಡರೊಂದಿಗೆ ಚರ್ಚಿಸುತ್ತಾ ಮಸೀದಿ ಕಟ್ಟಿಸಿ ಕೊಡುವ ಭರವಸೆ ಕೊಟ್ಟಿದ್ದು ಅಲ್ಲದೆ ಈ ವಿಡಿಯೋ ವೈರಲ್‌ ಮಾಡಬೇಡಿ ಎಂದು ಹೇಳಿದ ನಿಮಗೆ ಹಿಂದುತ್ವವಾದಿ ಸುನಿಲ್‌ ಕುಮಾರ್‌ ರವರ ಹಿಂದುತ್ವದ ಬಗ್ಗೆ ಮಾತಾನಾಡುವ ಯಾವುದೇ ನೈತಿಕತೆಯೂ ಇಲ್ಲ.
ಗೆದ್ದ ಎತ್ತಿನ ಬಾಲ ಹಿಡಿಯುವ ಪ್ರವೃತ್ತಿ
ಮಾನ್ಯ ಉದಯ್‌ ಕುಮಾರ್‌ ಶೆಟ್ಟಿ ನೀವು ಈಗಲಾದರೂ ಸುಳ್ಳು ಹೇಳುವುದನ್ನು ಬಿಡಿ, ಜನ ನಿಮ್ಮ ಈ ಎಲ್ಲಾ ವರ್ತನೆಗಳನ್ನು ಗಮನಿಸುತ್ತಾ ಇದ್ದಾರೆ. ಗೆದ್ದ ಎತ್ತಿನ ಬಾಲ ಹಿಡಿದುಕೊಂಡು ಓಡಾಡುವ ನಿಮ್ಮ ಪ್ರವೃತ್ತಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನತೆ ಕಣ್ಣಾರೆ ಕಂಡಿದ್ದಾರೆ. ಮುಂದೊಂದು ದಿನ ನಿಮ್ಮ ಸುಳ್ಳಿಗೆ, ಇಂತಹ ಅಸಂಬದ್ಧ ಹೇಳಿಕೆಗಳಿಗೆ, ಕಾರ್ಕಳದ ಪ್ರವಾಸೋದ್ಯಮವನ್ನು ಹಾಳು ಮಾಡಿ ಕಾರ್ಕಳದ ಹೆಸರಿಗೆ ಮಸಿ ಬಳಿದು ಅದರ ಮೂಲಕ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೊರಟಿರುವ ನಿಮಗೆ ಕಾರ್ಕಳದ ಪ್ರಬುದ್ಧ ಜನತೆಯೇ ಉತ್ತರಿಸುತ್ತಾರೆ ಎಂದಿದ್ದಾರೆ.

ಕಾರ್ಕಳ:ಕ್ರಿಕೆಟ್ ಪಂದ್ಯಾಟದಲ್ಲಿ ಕ್ರೈಸ್ಟ್ ಕಿಂಗ್ ನ ಮೂವರು ವಿದ್ಯಾರ್ಥಿಗಳು ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆ

0

ಕ್ರೈಸ್ಟ್ ಕಿಂಗ್: ಕ್ರಿಕೆಟ್ ಪಂದ್ಯಾಟದಲ್ಲಿ ಮೂವರು ವಿದ್ಯಾರ್ಥಿಗಳು ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆ

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಉಡುಪಿ ಜಿಲ್ಲೆ, ಜಿಲ್ಲಾ ಪಂಚಾಯತ್ ಉಡುಪಿ ಇವರ ಆಶ್ರಯದಲ್ಲಿ ಎಸ್.ಎಂ.ಎಸ್ ಪ್ರೌಢಶಾಲೆ ಬ್ರಹ್ಮಾವರ ಇಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ ಕಾರ್ಕಳ ತಾಲೂಕು ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದ್ದು ತಂಡವನ್ನು ಪ್ರತಿನಿಧಿಸಿದ್ದ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಎಂಟನೇ ತರಗತಿಯ ಮನನ್ ವಿ ಜೈನ್, ತನ್ಮಯ್ ಯು ಶೆಟ್ಟಿ, ಏಳನೇ ತರಗತಿಯ ವಿನೀತ್ ಪೂಜಾರಿ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದಾರೆ.

ನಾರಾವಿ:ಮಹಾ ಚಂಡಿಕಾ ಯಾಗ-ಪೋಸ್ಟರ್ ಬಿಡುಗಡೆ

0

ನಾರಾವಿ:ಮಹಾ ಚಂಡಿಕಾ ಯಾಗ – ಪೋಸ್ಟರ್ ಬಿಡುಗಡೆ

ನಾರಾವಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ನಡೆಯಲಿರುವ ಮಹಾ ಚಂಡಿಕಾ ಯಾಗದ ಪೋಸ್ಟರ್ ಬಿಡುಗಡೆ ಸೆ.22ರಂದು ರವಿವಾರ ಬೆಳಗ್ಗೆ 9-30 ಕ್ಕೆ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿನಡೆಯಲಿದೆ.

 

ಕಡ್ತಲ ಗ್ರಾಮ ಪಂಚಾಯತ್ ಸದಸ್ಯ ಅರವಿಂದ ಹೆಗ್ಡೆ ನಿಧನ

0

ಕಡ್ತಲ ಗ್ರಾಮ ಪಂಚಾಯತ್ ಸದಸ್ಯ ಅರವಿಂದ ಹೆಗ್ಡೆ ನಿಧನ

ಕುಕ್ಕುಜೆ – ದೊಂಡೇರಂಗಡಿ ನಿವಾಸಿ, ಕಡ್ತಲ ಗ್ರಾಮ ಪಂಚಾಯತ್ ಸದಸ್ಯರಾದ ಅರವಿಂದ ಹೆಗ್ಡೆ ( 58 ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ಸೆ.18ರಂದು  ಬೆಳಗ್ಗೆ ನಿಧನರಾದರು. ಮೃತರು ಪತ್ನಿ, ತಾಯಿ, ಇಬ್ಬರು ಸಹೋದರರು, ಒಬ್ಬರು ಸಹೋದರಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಇವರು ಪ್ರಸ್ತುತ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು, ಶಾಲಾ ಅಭಿವೃದ್ಧಿ ಸಮಿತಿ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಯಶಸ್ವಿ ಗೆಳೆಯರ ಬಳಗದ ಕಾರ್ಯದರ್ಶಿಯಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು.

ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ:ಕಾರ್ಕಳ ಜ್ಞಾನಸುಧಾದ ಇಬ್ಬರು ರಾಜ್ಯಮಟ್ಟಕ್ಕೆ ಆಯ್ಕೆ

0

ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ:ಕಾರ್ಕಳ ಜ್ಞಾನಸುಧಾದ ಇಬ್ಬರು ರಾಜ್ಯಮಟ್ಟಕ್ಕೆ ಆಯ್ಕೆ
ಉಡುಪಿ :ಶಾಲಾ ಶಿಕ್ಷಣ ಇಲಾಖೆ ಮತ್ತು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಇಲ್ಲಿ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ವಿಶ್ವ ವಿನಾಯಕ ಹಾಗೂ ಅನನ್ಯ ವಿ. ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.

ಇವರ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು, ಸಿ.ಇ.ಒ ಮತ್ತು ಪ್ರಾಂಶುಪಾಲ ದಿನೇಶ್ ಎಂ. ಕೊಡವೂರುರವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

ಕೊಲೆ,ಕಳ್ಳತನ ಆರೋಪಿ ಬೆಳ್ಮಣ್ ಮೂಲದ ರೋಹಿತ್ ಮಥಾಯಿಸ್ ಬಂಧನ ಕಂಕನಾಡಿ ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ನಾಗರಾಜ್ ಟಿ.ಡಿ ನೇತೃತ್ವದ ತಂಡದಿಂದ ಕಾರ್ಯಾಚರಣೆ

0

ಕೊಲೆ,ಕಳ್ಳತನ ಆರೋಪಿ ಬೆಳ್ಮಣ್ ಮೂಲದ ರೋಹಿತ್ ಮಥಾಯಿಸ್ ಬಂಧನ

ಕಂಕನಾಡಿ ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ನಾಗರಾಜ್ ಟಿ.ಡಿ ನೇತೃತ್ವದ ತಂಡದಿಂದ ಕಾರ್ಯಾಚರಣೆ

ಮಂಗಳೂರು:ಕುಲಶೇಖರ ಮನೆಯೊಂದರಲ್ಲಿ 2021 ರಂದು ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣದ ಆರೋಪಿಯನ್ನು ಕಂಕನಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಕಳ ಬೆಳ್ಮಣ್ ಮಟ್ಕಕೆರೆ ಹೌಸ್ ರೋಹಿತ್ ಮುತ್ತಾಯಸ್ ಬಂಧಿತ ಆರೋಪಿ.ಆತನಿಂದ ಪ್ರಕರಣಕ್ಕೆ ಸಂಬಂಧಿಸಿದ 7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ರೋಹಿತ್ ಮಥಾಯೀಸ್ ನು 2019 ರಲ್ಲಿ ಕಾರ್ಕಳ ಗ್ರಾಮಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಣ ಮತ್ತು ಚಿನ್ನಾಭರಣಗಳ ಆಸೆಗಾಗಿ ತನ್ನ ನೆರೆಕರೆಯವಾರದ ಶ್ರೀಮತಿ ಭರತಲಕ್ಷ್ಮಿ (ನಿವೃತ್ತ ಪಿ.ಡಿ.ಓ) ರವರನ್ನು ಬೆಳ್ಮಣ ಗ್ರಾಮದಲ್ಲಿನ ಮನೆಯಲ್ಲಿ ಕೊಲೆ ಮಾಡಿ, ಅವರ ಮೃತ ದೇಹವನ್ನು ಕಲ್ಯಾದ ಬಾವಿಯೊಂದರಲ್ಲಿ ಪ್ಲಾಸ್ಟಿಕ್ ನಲ್ಲಿ ಸುತ್ತಿ ಎಸೆದು ಹೋದ ಪ್ರಕರಣದಲ್ಲಿ ಬಂಧನವಾಗಿ ಜೈಲುವಾಸ ಅನುಭವಿಸಿ, ನಂತರ ಪ್ರಕರಣದ ವಿಚಾರಣೆಗೆ ಸಿಗದೇ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈತನು ತನ್ನ ಸಮುದಾಯಯ ಮಹಿಳೆಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಿಸಿಕೊಂಡು ಅವರ ವಿಶ್ವಾಸಗಳಿಸಿ, ನಂತರ ಅವರ ನಗದು ಹಣ ಹಾಗೂ ಚಿನ್ನಾಭರಣಗಳನ್ನುಕಳವು ಮಾಡಿಕೊಂಡು ಪರಾರಿಯಾಗುವ ಸ್ವಭಾವದವನಾಗಿದ್ದ. ಈ ಪ್ರಯತ್ನದಲ್ಲಿರುವಾಗಲೇ ಕಂಕನಾಡಿ ನಗರ ಪೊಲೀಸರು ಮಾಹಿತಿಗಳ ಆಧಾರದಲ್ಲಿ ಮುಂಬೈನಿಂದ ಮಂಗಳೂರಿಗೆ ಬಂದಿರುವ ಮಾಹಿತಿ ಆಧಾರದಲ್ಲಿ ವಶಕ್ಕೆ ಪಡೆದುಕೊಂಡಿರುವುದಾಗಿದೆ.

ಕಂಕನಾಡಿ ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ನಾಗರಾಜ್ ಟಿ.ಡಿ ರವರ ನೇತೃತ್ವದಲ್ಲಿ ಪಿ.ಎಸ್.ಐ ರವರುಗಳಾದ ವಿನಾಯಕ ಭಾವಿಕಟ್ಟಿ, ಶಿವಕುಮಾರ್, ಯೊಗೀಶ್ವರನ್ ಹಾಗೂ ಹೆಚ್.ಸಿ ಜಯಾನಂದ ಮತ್ತು ಸಿಬ್ಬಂಧಿಗಳಾದ ರಾಘವೇಂದ್ರ, ಗಂಗಾಧರ್, ರಾಜೆಸಾಬ ಮುಲ್ಲಾ, ಚೇತನ್, ಮುತ್ತಣ್ಣ ಮತ್ತು ಪ್ರವೀಣ್ ರವರು ಆರೋಪಿತನ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ನಿಟ್ಟೆ:ಜಸ್ಟೀಸ್ ಕೆ ಎಸ್ ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯ ನಿರ್ದೇಶಕರಾಗಿ ಡಾ| ಸುಧೀರ್ ಎಂ.

0

ನಿಟ್ಟೆ:ಜಸ್ಟೀಸ್ ಕೆ ಎಸ್ ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯ ನಿರ್ದೇಶಕರಾಗಿ ಡಾ| ಸುಧೀರ್ ಎಂ.

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಾದ ಜಸ್ಟೀಸ್ ಕೆ ಎಸ್ ಹೆಗ್ಡೆ ಉದ್ಯಮಾಡಳಿತ (ಎಂ.ಬಿ.ಎ) ಸಂಸ್ಥೆಯ ನಿರ್ದೇಶಕರಾಗಿ ಅದೇ ಸಂಸ್ಥೆಯ ಪ್ರಥಮ ವರ್ಷದ ಬ್ಯಾಚ್ ಹಳೆ ವಿದ್ಯಾರ್ಥಿ ಡಾ| ಸುಧೀರ್ ಎಂ ಅಧಿಕಾರ ಸ್ವೀಕರಿಸಿದರು.

ಡಾ| ಸುಧೀರ್ ಎಂ ಅವರು ಇಪತ್ತನಾಲ್ಕು ವರ್ಷಗಳ ಸುಧೀರ್ಘ ಅಧ್ಯಾಪನ, ಸಂಶೋಧನಾ ಮತ್ತು ಆಡಳಿತಾತ್ಮಕ ಪಾತ್ರಗಳನ್ನು ಯಶಸ್ಸಾಗಿ ನೆರವೇರಿಸಿದ್ದು, ಅವರು ತನ್ನ ಎಂ.ಬಿ.ಎ ಮಾರ್ಕೆಟಿಂಗ್, ಸ್ಟ್ರಾಟೆಜಿ, ಸಿ ಎಸ್ ಆರ್ ಮತ್ತು ಗ್ರಾಹಕರ ವರ್ತನೆಗೆ ಸಂಬಂಧಿಸಿ ಸಾಕಷ್ಟು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವುದಲ್ಲದೆ, ಕಲಿಕಾ ವಿನೂತನ ಪ್ರಯೋಗಗಳನ್ನು ಅನುಭವೀ ಕಲಿಕೆ ಮತ್ತು ಕಾರ್ಪರೇಟ್ ಕತೆಗಳನ್ನು ಸಮನ್ವಯಗೊಳಿಸಿ ಸಾಕಷ್ಟು ಆವಿಷ್ಕಾರಗಳನ್ನು ಕೈಗೊಂಡಿರುತ್ತಾರೆ.

ಮಾರ್ಕೆಟಿಂಗ್, ಗ್ರಾಹಕ ಸಂಬಂಧಗಳು, ಟೀಂ ನಿರ್ವಹಣೆ, ನಾಯಕತ್ವ, ವೈಯಕ್ತಿಕ ಉತ್ಕ್ರಷ್ಟತೆ ಇತ್ಯಾದಿ ವಿಷಯಗಳ ಕುರಿತು ಡಾ| ಸುಧೀರ್ ಎಂ ಅವರು ಕಾರ್ಪರೇಟು ತರಬೇತುದಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

 

ಪರಶುರಾಮ ಥೀಮ್ ಪಾರ್ಕ್ ಅಕ್ರಮ ವಿರುದ್ದದ ಹೋರಾಟದ ರೂವಾರಿ ಕೃಷ್ಣ ಶೆಟ್ಟಿ ಸೋಲಿಸಲು ಸಂಚು? ಬಿಜೆಪಿ ಶಾಸಕರೊಂದಿಗೆ ಕಾಂಗ್ರೆಸ್ ಜಿಲ್ಲಾ ಯುವ ಕಾಂಗ್ರೆಸ್ ಅಭ್ಯರ್ಥಿಯ ಫೋಟೋ ಹುಟ್ಟುಹಾಕಿದೆ ಅನುಮಾನ…!

0

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ:ಕೃಷ್ಣ ಶೆಟ್ಟಿ ಸೋಲಿಸಲು ಬೆಂಬಲ ಪಡೆದರೇ ಕಾಂಗ್ರೆಸ್ ಅಭ್ಯರ್ಥಿ?

ಯಶ್ ಪಾಲ್ ಸುವರ್ಣಗೂ ಯುವ ಕಾಂಗ್ರೆಸ್ ಆಂತರಿಕ ಚುನಾವಣೆಗೂ ಏನು ಸಂಭಂದ?

ಕೃಷ್ಣ ಶೆಟ್ಟಿ ಬಜಗೋಳಿಗೆ ಮತ ಚಲಾಯಿಸದಂತೆ ಕಾಂಗ್ರೆಸ್ ನ ಮಾಜಿ ಸಚಿವರ ಆಪ್ತನಿಂದಲೇ ಧಮ್ಕಿ?ಆಡಿಯೋ ವೈರಲ್

ಯುವ ಕಾಂಗ್ರೆಸ್ ಆಂತರಿಕ ಚುನಾವಣೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ಎದುರಾಳಿಯನ್ನು ಸೋಲಿಸಲು ಬಿಜೆಪಿ ಶಾಸಕರೋರ್ವರ ಬೆಂಬಲ ಕೋರಿದ್ದಾರೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಈ ಕುರಿತಾಗಿ ಫೋಟೋ ಒಂದು ವೈರಲ್ ಆಗುತ್ತಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಅರ್ಜುನ್ ನಾಯರಿ ಎಂಬುವವರು ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಎಂಬುವವರ ಬೆಂಬಲ ಕೋರಿದ್ದಾರೆ ಎಂದು ಹೇಳಲಾಗುತ್ತಿದೆ.ಯಶ್ ಪಾಲ್ ಜತೆಗಿನ ಫೋಟೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ಸಿಗರು ಗರಂ ಆಗಿದ್ದಾರೆ.ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಸೋಲಿಸಿದ್ದ ಯಶ್ಪಾಲ್ ಸುವರ್ಣ ಹಿಜಾಬ್ ಗಲಾಟೆ ಸಂದರ್ಭದಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದವರು.ಅಲ್ಲದೆ ಇತ್ತೀಚಿಗೆ ಸಿಎಂ ಸಿದ್ದರಾಮಯ್ಯರವರ ಪ್ರತಿಕೃತಿ ದಹನ ಪ್ರಕರಣದಲ್ಲಿ ಯಶಪಾಲ್ ಸುವರ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು.ಇಂತಹವರೊಂದಿಗೆ ಕಾಂಗ್ರೆಸ್ ನ ಅಭ್ಯರ್ಥಿ ಅರ್ಜುನ್ ನಾಯರಿಗೆ ಏನು ಕೆಲಸ ಎಂದು ಕಾಂಗ್ರೆಸಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಆಮಂತ್ರಣ ನೀಡಲು ಹೋಗಿದ್ದರು.
ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆ ನೀಡಲು ಬಿಜೆಪಿ ಶಾಸಕ ಯಶಪಾಲ್ ಸುವರ್ಣರನ್ನು ಭೇಟಿ ಮಾಡಿದ್ದರು.ಈ ಸಂದರ್ಭದಲ್ಲಿ ತೆಗೆದಿದ್ದ ಫೋಟೋ ಇದಾಗಿದೆ.ಆದರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಿಂತ ಅಭ್ಯರ್ಥಿಯೋರ್ವ ಬಿಜೆಪಿ ಶಾಸಕರೊಂದಿಗೆ ಪ್ರತ್ಯಕ್ಷವಾಗಿರುವುದು ಮಾತ್ರ ಕಾಂಗ್ರೆಸಿಗರಿಗೆ ಅನುಮಾನ ಹುಟ್ಟುಹಾಕಿದೆ.

ಕೃಷ್ಣ ಶೆಟ್ಟಿ ಸೋಲಿಸಲು ಬಿಜೆಪಿ ಸಾಥ್?
ಉಡುಪಿ ಜಿಲ್ಲೆಯ ಯುವ ಕಾಂಗ್ರೆಸ್ ಜಿಲ್ಲಾದ್ಯಕ್ಷ ಸ್ಥಾನಕ್ಕೆ ಐದು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.ಆದರೆ ಇದರಲ್ಲಿ ಪ್ರಬಲ ಸ್ಪರ್ಧಿಯಾಗಿ ಕೃಷ್ಣ ಶೆಟ್ಟಿ ಬಜಗೋಳಿ ಹೊರಹೊಮ್ಮಿದ್ದಾರೆ.ಕೃಷ್ಣ ಶೆಟ್ಟಿ ಬಜಗೋಳಿ ಕಾರ್ಕಳದಲ್ಲಿ ನಡೆದಿದೆ ಎನ್ನಲಾದ ಪರಶುರಾಮ ಮೂರ್ತಿ ಅಕ್ರಮ ವಿವಾದದಲ್ಲಿ ಅವಿರತವಾಗಿ ಹೋರಾಟ ಮಾಡಿದವರು. ಕಾರ್ಕಳ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ,ಉಡುಪಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ,ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿರುವ ಕೃಷ್ಣ ಶೆಟ್ಟಿ ಉಡುಪಿ ಜಿಲ್ಲಾಧ್ಯಕ್ಷ ಸ್ಥಾನದ ಪ್ರಬಲ ಸ್ಪರ್ಧಿ.

ಪರಶುರಾಮ ಥೀಮ್ ಪಾರ್ಕ್ ವಿವಾದ ರಾಜ್ಯದ ಗಮನ ಸೆಳೆದು ಬಿಜೆಪಿಯನ್ನೇ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಪರಶುರಾಮ ಥೀಮ್ ಪಾರ್ಕ್ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡದ್ದೇ ಈ ಕೃಷ್ಣ ಶೆಟ್ಟಿ ಬಜಗೋಳಿ .ಪರಶುರಾಮ ಥೀಮ್ ಪಾರ್ಕ್ ಸಂರಕ್ಷಣಾ ಸಮಿತಿ ಯನ್ನು ಕಟ್ಟಿ ಹೋರಾಟವನ್ನು ಕಾನೂನು ದಿಕ್ಕಿಗೆ ತಿರುಗಿಸಿದ್ದರು.ಕೇವಲ ಹೇಳಿಕೆಗಳಿಗೆ ಸೀಮಿತವಾಗಿದ್ದ ವಿಚಾರವನ್ನು ಕೋರ್ಟ್ ಕಟಕಟೆಗೆ ಎಳೆದು ತರುವಲ್ಲಿ ಯಶಸ್ವಿಯಾಗಿದ್ದರು.ಬಿಜೆಪಿಗೆ ನುಂಗಲಾರದ ತುತ್ತಾಗಿರುವ ಪರಶುರಾಮ ವಿಚಾರದ ಮುಂಚೂಣಿ ವ್ಯಕ್ತಿ ಕೃಷ್ಣ ಶೆಟ್ಟಿಯನ್ನು ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲಿಸಲು ಬಿಜೆಪಿಯವರೂ ಸಾಥ್ ನೀಡಿದ್ದಾರೆ ಎಂಬ ಗುಮಾನಿ ಇದೆ.

ಆನ್ಲೈನ್ ಮೂಲಕ ನಡೆಯುವ ವೋಟ್ ಆದುದರಿಂದ ಯಾರೂ ಕೂಡ ವೋಟ್ ಮಾಡಬಹುದು.ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲದೆ ಬೇರೆ ಪಕ್ಷದ ಕಾರ್ಯಕರ್ತರೂ ವೋಟ್ ಹಾಕಬಹುದು.ಈ ವ್ಯವಸ್ಥೆಯ ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚು.ಇದನ್ನೇ ಬಂಡವಾಳವನ್ನಾಗಿಸಿಕೊಳ್ಳುವ ಅವಕಾಶ ಹೆಚ್ಚಾಗಿದ್ದು ಕೃಷ್ಣ ಶೆಟ್ಟಿಯನ್ನು ಶತಾಯಗತಾಯ ಸೋಲಿಸಲೇ ಬೇಕೆಂಬ ಸಂಚು ಹೂಡಲಾಗಿದೆ ಎನ್ನಲಾಗುತ್ತಿದೆ.

ಆಡಿಯೋ ವೈರಲ್!
ಕೃಷ್ಣ ಶೆಟ್ಟಿ ಬಜಗೋಳಿಯವರಿಗೆ ವೋಟ್ ಹಾಕದಂತೆ ಸ್ವತಃ ಕಾಂಗ್ರೆಸ್ ನ ಮಾಜಿ ಸಚಿವರೋರ್ವರ ಆಪ್ತನಿಂದ ಕಾಂಗ್ರೆಸ್ ನ ಕಾರ್ಯಕರ್ತರಿಗೆ ಬೆದರಿಕೆ ಕರೆ ಬಂದಿದೆ ಎನ್ನಲಾಗುತ್ತಿದ್ದು ಇದೀಗ ಆ ಆಡಿಯೋ ವಾಟ್ಸಾಪ್ ಗ್ರೂಪ್ ಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.ಹಗಲು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ರಾತ್ರಿ ಬಿಜೆಪಿಯವರೊಂದಿಗೆ ಸೇರುವ ಅವಕಾಶವಾದಿ,ಸೈದ್ದಂತಿಕ ಸ್ಪಷ್ಟತೆ ಇಲ್ಲದ ಇಂತಹ ನಾಯಕರು ಕಾಂಗ್ರೆಸ್ ಪಕ್ಷವನ್ನು ಪಾತಾಳಕ್ಕೆ ತಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕಾಂಗ್ರೆಸಿಗರು ಆಡಿಕೊಳ್ಳುತ್ತಿದ್ದ್ದಾರೆ.

ಸದ್ಯ ವೈರಲ್ ಆಗುತ್ತಿರುವ ಫೋಟೋ ಮತ್ತು ಆಡಿಯೋದ ಅಸಲಿಯತ್ತು ಬಯಲಾಗಬೇಕು ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆಶಯವಾಗಿದ್ದು ಈ ನಿಟ್ಟಿನಲ್ಲಿ ಕೆಪಿಸಿಸಿ ಗಮನಹರಿಸಬೇಕಾಗಿದೆ.ಇಲ್ಲದಿದ್ದಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಹೊಡೆದಾಡಿಕೊಳ್ಳುವ ದಿನ ದೂರವಿಲ್ಲ.

 

ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣರವರೊಂದಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅರ್ಜುನ್ ನಾಯರಿರವರ ಫೋಟೋ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣರವರೊಂದಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅರ್ಜುನ್ ನಾಯರಿರವರ ಫೋಟೋ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣರವರೊಂದಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅರ್ಜುನ್ ನಾಯರಿರವರ ಫೋಟೋ ವೈರಲ್ ಆಗುತ್ತಿದೆ.

ಕಾರ್ಕಳ : ಹೋಂದಾಣಿಕೆ ರಾಜಕಾರಣ ಪಕ್ಷ ಎಂದಿಗೂ ಸಹಿಸುವುದಿಲ್ಲ- ರಕ್ಷಿತ್ ಶಿವರಾಂ

0

ಕಾರ್ಕಳ : ಹೋಂದಾಣಿಕೆ ರಾಜಕಾರಣ ಪಕ್ಷ ಎಂದಿಗೂ ಸಹಿಸುವುದಿಲ್ಲ- ರಕ್ಷಿತ್ ಶಿವರಾಂ
ಕಾರ್ಕಳ :ಹೋಂದಾಣಿಕೆ ರಾಜಕಾರಣ ಪಕ್ಷ ಎಂದಿಗೂ ಸಹಿಸುವುದಿಲ್ಲ .ಪಕ್ಷವನ್ನು ಮತ್ತೊಮ್ಮೆ ತಳ ಮಟ್ಟದಿಂದ ಕಟ್ಟ ಬೇಕಾಗಿದೆ ಪ್ರತಿಯೊಬ್ಬ ನಾಯಕರೂ ಕೂಡ ಪಕ್ಷದ ನೆಲೆಯಲ್ಲಿ ಕೆಲಸ ಮಾಡಬೇಕಿದೆ ಎಂದು
ಕಾರ್ಕಳ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾಗಿ ನೇಮಕಗೊಂಡಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ ತಿಳಿಸಿದರು.ಅವರು ಉಸ್ತುವಾರಿಯಾಗಿ ಪ್ರಥಮ ಬಾರಿ ಕಾರ್ಕಳಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪಕ್ಷದ ಪದಾಧಿಕಾರಿಗಳು ಮತ್ತು ಪಕ್ಷದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಪಕ್ಷ ಸಂಘಟನೆಯ ದೃಷ್ಟಿಯಿಂದ ಹಲವು ಮಾಹಿತಿಯನ್ನು ಪಡೆದುಕೊಂಡರು. ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ಅಹವಾಲು ಸ್ವೀಕರಿಸಿ ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಹಲವು ಮಹತ್ವದ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಸಮಿತಿ ಉಪಾಧ್ಯಕ್ಷ ಡಿ ಆರ್ ರಾಜು ಸಾಂದರ್ಭಿಕವಾಗಿ ಪಕ್ಷದ ಅಭಿವೃದ್ದಿ ಹಾಗೂ ಬಲವರ್ಧನೆ ಬಗ್ಗೆ ಮಾತನಾಡಿದರು
ಕಾಂಗ್ರೆಸ್ ಮುಂದಾಳು ಉದಯ ಕುಮಾರ ಶೆಟ್ಟಿ ಮಾತನಾಡಿ ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಕಾಂಗ್ರೆಸ್ ಮುಖಂಡ ಸುರೇಂದ್ರ ಶೆಟ್ಟಿ, ಹೆಬ್ರಿ ಬ್ಲಾಕ್‌ ಅಧ್ಯಕ್ಷ ಚಂದ್ರಶೇಖರ್ ಬಾಯರಿ, ಕಾರ್ಕಳ ಬ್ಲಾಕ್ ಅಧ್ಯಕ್ಷ
ಸದಾಶಿವ ದೇವಾಡಿಗ, ಹಿರಿಯ ನಾಯಕರಾದ ಪ್ರಭಾಕರ ಬಂಗೇರ ಉಪಸ್ಥಿತರಿದ್ದರು
ಕಾರ್ಕಳ ,ಹೆಬ್ರಿ ಬ್ಲಾಕ್ ಹಿರಿಯ ಮುಖಂಡರು
ಹಾಗೂ ಪಕ್ಷದ ಪ್ರಮುಖರು ಭಾಗಿಯಾಗಿದರು. ಕಾಂಗ್ರೆಸ್ ವಕ್ತಾರ ಶುಭದ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು

ಬೈಲೂರು:ವಾಲಿಬಾಲ್ ಪಂದ್ಯಾಟದಲ್ಲಿ ಹ್ಯಾಟ್ರಿಕ್ ಗೆಲುವು

0

ಬೈಲೂರು:ವಾಲಿಬಾಲ್ ಪಂದ್ಯಾಟದಲ್ಲಿ ಹ್ಯಾಟ್ರಿಕ್ ಗೆಲುವು

ಬೈಲೂರು: ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಇಲ್ಲಿನ ಬಾಲಕರ ತಂಡ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಬಜೆಗೋಳಿಯಲ್ಲಿ ನಡೆದ ತಾಲೂಕು ಮಟ್ಟದ ಈ ಪಂದ್ಯಾಟದಲ್ಲಿ ಸಂಸ್ಥೆಯ ಬಾಲಕಿಯರ ತಂಡವು ದ್ವಿತೀಯ ಸ್ಥಾನ ಪಡೆದಿದೆ. ಸಾಧಕ ಉಭಯ ತಂಡದ ಸದಸ್ಯರಿಗೆ ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಸಂಸ್ಥೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ಮಾರ್ಗದರ್ಶಕರಾದ ದೈಹಿಕ ಶಿಕ್ಷಣ ನಿರ್ದೇಶಕ ಫ್ರೆಡ್ರಿಕ್ ರೇಬೆಲ್ಲೂ, ಕಾಲೇಜಿನ ಕ್ರೀಡಾ ಸಂಚಾಲಕ-ಉಪನ್ಯಾಸಕ ರತ್ನಾಕರ ಪೂಜಾರಿ, ತರಬೇತುದಾರರಾದ ಮಹಮ್ಮದ್ ಶೇಕ್ ಅಯಾನ್, ಮಹಮ್ಮದ್ ಶೇಕ್ ಅಮನ್ ಹಾಗೂ ಗುರುರಾಜ್ ರವರಿಗೆ ಸಂಸ್ಥೆ ಅಭಿವಂದನೆ ಸಲ್ಲಿಸಿದೆ.