Home Blog Page 26

ಕಾರ್ಕಳ‌ ಕಾಂಗ್ರೆಸ್ ಆಶ್ರಯದಲ್ಲಿ ನಾರಾಯಣಗುರು ಜಯಂತಿ

0

 

ಸಮಾಜದ ಶೋಷಿತ ವರ್ಗಗಳ ಬದುಕಿನ ಹೊಸ ಜೀವನೋತ್ಸಾಹದ ಮಾರ್ಗಾನ್ವೇಷಣೆಯೇ ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕಿನ ಹೋರಾಟದ ಗುರಿಯಾಗಿತ್ತುಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ ಚಂದ್ರಪಾಲ್ ನಕ್ರೆ ಅವರು ಬ್ಲಾಕ್ ಕಾಂಗ್ರೆಸ್ ಸಹಯೋಗದಲ್ಲಿ ಪಳ್ಳಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಳಿಕ ಮುಂದುವರಿಸಿ, ಆ ಹೋರಾಟದಲ್ಲಿ ಅಂಧ ಶ್ರದ್ಧೆಗಳ ನಿವಾರಣೆ, ಶೈಕ್ಷಣಿಕ ಸಾಮಾಜಿಕ ಸ್ವಾತಂತ್ರ್ಯ, ಬದುಕಿನ ಸ್ವಾಯತ್ತತೆ ಅಡಗಿತ್ತು. ಆ ನೆಲೆಯಲ್ಲಿ 1924 ರಲ್ಲಿ ಗುರುಗಳ ನೇತೃತ್ವದಲ್ಲಿ ನಡೆದ ವೈಖಂ ಚಳವಳಿ ಮಹಾತ್ಮ ಗಾಂಧೀಜಿಯವರ ಮನಗೆದ್ದದ್ದಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷ ಈ ಹೋರಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವಂತೆ ಮಾಡಿತ್ತು. ಸ್ವಾತಂತ್ರ್ಯ ಹೋರಾಟದ ಕ್ವಿಟ್ ಇಂಡಿಯಾ ಚಳವಳಿಗೆ ಇದು ಸ್ಪೂರ್ತಿ ನೀಡಿತ್ತು ಎಂದರು.

ಹಿರಿಯ ನ್ಯಾಯವಾದಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖರ ಮಡಿವಾಳ ಮಾತನಾಡಿ ಜನಾಂಗೀಯ ಸಂಕುಚಿತತೆ, ದ್ವೇಷ, ಮತೀಯತೆ, ಅಸೂಯೆಗಳನ್ನು ಬದಿಗಿಟ್ಟು ಶೈಕ್ಷಣಿಕ ಔಧ್ಯೋಗಿಕ ಸಾಮಾಜಿಕ ಕ್ರಾಂತಿಯ ಮೂಲಕ ಸಮ ಸಮಾಜವನ್ನು ಕಟ್ಟಬೇಕೆನ್ನುವುದು ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯವಾಗಿತ್ತು. ಬಹು:ಶ ಕಾಂಗ್ರೆಸ್ ಪಕ್ಷ ತನ್ನ ಆಡಳಿತದಲ್ಲಿ ಗುರುಗಳ ಆಶಯವನ್ನು ಈಡೇರಿಸುತ್ತ ಬಂದಿರುವ ದೇಶದ ಏಕಮೇವ ಪಕ್ಷ ಎನ್ನುವುದು ಉಲ್ಲೇಖನೀಯ. ಬಡವರಿಗೆ ಕೊಡಮಾಡುವ ನಿವೇಶನ ಆಶ್ರಯ ಮನೆಗಳು, ವೃದ್ದಾಪ್ಯ, ವಿಧವಾ ವೇತನಗಳು, ಅನ್ನಭಾಗ್ಯ, ಪಂಚ ಗ್ಯಾರಂಟಿ ಯೋಜನೆಗಳು ನಾರಾಯಣ ಗುರುಗಳ ಮನದಾಶಯದ ಯೋಜನೆಗಳು. ಇವುಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಬಲಪಡಿಸೋಣ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದಾ ರಾವ್ ಬ್ರಹ್ಮಶ್ರೀ ನಾರಾಯಣ ಗುರುಗಳು ಸರ್ವ ಜನಾಂಗದ ಗುರು. ಅಜ್ಞಾನದ ಅಂಧಕಾರದಲ್ಲಿ ಮುಳುಗಿ ಹುಚ್ಚರ ಆಸ್ಪತ್ರೆಯಂತಿದ್ದ ಕೇರಳವನ್ನು ಇದೀಗ ದೇಶದಲ್ಲಿಯೇ ಅತೀ ಮುಂದುವರಿದ ಶೈಕ್ಷಣಿಕ ಕೇಂದ್ರವನ್ನಾಗಿ ಪರಿವರ್ತಿಸಿದ ನಾರಾಯಣ ಗುರುಗಳು ಶೈಕ್ಷಣಿಕ ಕ್ರಾಂತಿಯ ಹರಿಕಾರ. ಅವರು ಹಾಕಿಹೋದ ಮನುಕುಲದ ಅಭ್ಯುದಯದ ದಾರಿಯಲ್ಲಿ ನಡೆಯುವುದು ನಮ್ಮ ಕರ್ತವ್ಯ. ಆ ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಅವರು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳನ್ನು ತನ್ನ ಆಡಳಿತದ ಜನಪರ ಚಿಂತನೆಯ ರಾಜಧರ್ಮವನ್ನಾಗಿ ಮಾಡಿಕೊಂಡಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದು ಹೇಳಿದರು.

ತಾಲೂಕು ಗ್ಯಾರಂಟಿ ‌ಸಮಿತಿ‌ ಅದ್ಯಕ್ಷ‌ ಅಜಿತ್ ಹೆಗ್ಡೆ ‌ಅವರು ಶ್ರೀ ನಾರಾಯಣ ಗುರುಗಳ ಬಗ್ಗೆ ಕೆಲ ಹಿತವಚನಗಳನ್ನು ನುಡಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ ಕೋಟ್ಯನ್, ರಾಜ್ಯ ಕೃಷಿ ಘಟಕದ ಕಾರ್ಯದರ್ಶಿ ಗ್ರಾಮ ಉಸ್ತುವಾರಿ ಉದಯ ಶೆಟ್ಟಿ ಕುಕ್ಕುಂದೂರು, ಮಹಿಳಾ ಕಾಂ ಅದ್ಯಕ್ಷೆ ಭಾನು ಬಾಸ್ಕರ ಪೂಜಾರಿ ಸಂಧರ್ಭೋಚಿತ ಮಾತಾಡಿದರು.ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರು ವಿಶ್ವನಾಥ ಭಂಡಾರಿ ನಿಂಜೂರು, ಕಾರ್ಕಳ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು ಸೂರಜ್ ಶೆಟ್ಟಿ ನಕ್ರೆ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೋಗಿ, ಪಳ್ಳಿ – ನಿಂಜೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿಲ್ಸನ್ ಲೋಬೊ ಹಿರಿಯ ಕಾಂಗ್ರೆಸ್ಸಿಗ ಪಳ್ಳಿ – ನಿಂಜೂರು ಗ್ರಾಮೀಣ ಕಾಂಗ್ರೆಸ್ ಕೃಷಿ ಘಟಕದ ಅಧ್ಯಕ್ಷ ಸುಬ್ಬಯ್ಯ ಶೆಟ್ಟಿ ನಿಂಜೂರು, ಗ್ಯಾರಂಟಿ ಸಮಿತಿ ಸದಸ್ಯರಾದ ಸಂತೋಷ ಶೆಟ್ಟಿ ನಿಂಜೂರು, ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಆಚಾರ್ಯ ಪಳ್ಳಿ, ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸುಜೀತ್ ಪೂಜಾರಿ ನಿಂಜೂರು, ಪಳ್ಳಿ- ನಿಂಜೂರು ಬೂತ್ ಅಧ್ಯಕ್ಷರು, ಮಹಿಳಾ ಬೂತ್ ಅಧ್ಯಕ್ಷರು, ಯುವ ಬೂತ್ ಅಧ್ಯಕ್ಷರು, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಪಳ್ಳಿ ಪಂಚಾಯತ್ ಸದಸ್ಯರಾದ ವಿಜಯ ಎಮ್ ಶೆಟ್ಟಿ ಪಳ್ಳಿ ಸ್ವಾಗತಿಸಿದರು, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ದಿನಕರ ಶೆಟ್ಟಿ ಧನ್ಯವಾದವಿತ್ತರು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾರ್ಕಳ ಬ್ಲಾಕ್ ಮಾಜಿ ಅಧ್ಯಕ್ಷ ರಘುಶ್ಚಂದ್ರನಾಥ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಕಾರ್ಕಳ : ಫುಟ್ಬಾಲ್ ನಲ್ಲಿ ಜ್ಞಾನಸುಧಾ ತಂಡ ಜಿಲ್ಲಾಮಟ್ಟಕ್ಕೆ

0

 

ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದೆ.

ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಶ್ರೀ ನಾರಾಯಣಗುರು ಜಯಂತಿ ಆಚರಣೆ

0

 

ಕಾರ್ಕಳದ ಬಿಜೆಪಿ ಕಚೇರಿಯಲ್ಲಿ ಶ್ರೀ ನಾರಾಯಣ ಗುರು ಜಯಂತಿಯನ್ನು ಭಕ್ತಿ ಮತ್ತು ಗೌರವದಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ನವೀನ್ ನಾಯಕ್, ಉಪಾಧ್ಯಕ್ಷ ಅನಂತಕೃಷ್ಣ ಶೆಣೈ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಪ್ರಸಾದ್ ಐಸಿರ, ನಿರಂಜನ್ ಜೈನ್, ಪ್ರಶಾಂತ್ ಕೋಟ್ಯಾನ್, ಅಶೋಕ್ ಸುವರ್ಣ, ರಾಮಚಂದ್ರ ನಾಯಕ್, ರವೀಂದ್ರ ಮೊಯಿಲಿ, ಪ್ರಕಾಶ್ ರಾವ್, ಸುರೇಶ್ ಕಾಬೆಟ್ಟು, ಭಾರತಿ ಅಮೀನ್, ಮೀನಾಕ್ಷಿ ಗಂಗಾಧರ್, ನಗರ ಮಹಿಳಾ ಮೋರ್ಚಾದ ಅಧ್ಯಕ್ಷರು ಮತ್ತಿತರ ಪಕ್ಷದ ಪ್ರಮುಖರು,ಕಾರ್ಯಕರ್ತರು ಮತ್ತು ಸ್ಥಳೀಯರು ಭಾಗವಹಿಸಿ ಗುರುವರ್ಯರ ಸಾಮಾಜಿಕ ಸುಧಾರಣೆ ಹಾಗೂ ಸಮಾನತೆಗಾಗಿ ನೀಡಿದ ಅಮೂಲ್ಯ ಸೇವೆಯನ್ನು ಪುಷ್ಪಾರ್ಚನೆ ಗೈದು ಸ್ಮರಿಸಿದರು.

ಸಾಮಾಜಿಕ ಸುಧಾರಕ, ತತ್ವಜ್ಞಾನಿ ಹಾಗೂ ಧಾರ್ಮಿಕ ನಾಯಕರೆಂದು ಪ್ರಸಿದ್ಧರಾದ ಶ್ರೀ ನಾರಾಯಣ ಗುರುಗಳು, ವರ್ಣ ವ್ಯವಸ್ಥೆಯಿಂದ ಉಂಟಾದ ಅಸಮಾನತೆಗಳನ್ನು ವಿರೋಧಿಸಿ, ಹಿಂದುಳಿದ ಸಮುದಾಯಗಳ ಉದ್ಧಾರಕ್ಕಾಗಿ ಅವರು ಶ್ರಮಿಸಿದರು. “ಒಂದು ಜಾತಿ, ಒಂದು ಧರ್ಮ, ಒಂದು ದೇವರು ಎಲ್ಲರಿಗೂ” ಮಾನವೀಯ ಏಕತೆ ಹಾಗೂ ಸಾಮರಸ್ಯದ ಸಂದೇಶವನ್ನು ಸಾರಿದ್ದರು. ಅವರು ಎಲ್ಲರಿಗೂ ಪ್ರವೇಶಿಸಬಹುದಾದ ದೇವಾಲಯಗಳನ್ನು ಸ್ಥಾಪಿಸಿದರು ಹಾಗೂ ಶಿಕ್ಷಣದ ಮೂಲಕ ಸಮುದಾಯದ ಶಕ್ತಿಯನ್ನು ಹೆಚ್ಚಿಸಲು ಕಾರ್ಯನಿರ್ವಹಿಸಿದರು. ಅವರ ಸೇವೆ ಇಂದು ಕೂಡ ಸಾಮಾಜಿಕ ನ್ಯಾಯದ ಚಳವಳಿಗಳಿಗೆ ಮಾರ್ಗದರ್ಶಿಯಾಗಿದೆ.

ಈ ಕಾರ್ಯಕ್ರಮವು ಸಾಮಾಜಿಕ ಸಮಾನತೆ, ಒಗ್ಗಟ್ಟು ಹಾಗೂ ಸಹಿಷ್ಣುತೆಯನ್ನು ಪ್ರತಿಬಿಂಬಿಸಿತು. ಶ್ರೀ ನಾರಾಯಣ ಗುರುವರ್ಯರ ಜೀವನ ಸಂದೇಶವನ್ನು ಮುಂದುವರಿಸಲು ಎಲ್ಲರಿಗೂ ಪ್ರೇರಣೆ ನೀಡುವಂತಾಯಿತು ಎಂದು ಕಾರ್ಕಳ ಬಿಜೆಪಿ ಕಚೇರಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಾರ್ಕಳ:’ಹೋಟೆಲ್ ಕಾರ್ಕಳ ಇನ್’ ಬಾರ್ ಅಂಡ್ ರೆಸ್ಟೋರೆಂಟ್ ಶುಭಾರಂಭ

0

ಕಾರ್ಕಳ:’ಹೋಟೆಲ್ ಕಾರ್ಕಳ ಇನ್’ ಬಾರ್ ಅಂಡ್ ರೆಸ್ಟೋರೆಂಟ್ ಶುಭಾರಂಭ

ಕಾರ್ಕಳ:ಕಾರ್ಕಳದ ಪುಲ್ಕೇರಿ ಬೈಪಾಸ್ ಜಂಕ್ಷನ್ ನಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ‘ಹೋಟೆಲ್ ಕಾರ್ಕಳ ಇನ್’ ಬಾರ್ ಅಂಡ್ ರೆಸ್ಟೋರೆಂಟ್ ಸೆ.6ರಂದು ಶುಭಾರಂಭಗೊಳ್ಳಲಿದೆ.

ಅತ್ಯುತ್ತಮವಾದ ಸೇವೆ ಹಾಗೂ ಖಾದ್ಯದ ಮೂಲಕ ಗ್ರಾಹಕರ ಸೇವೆಗೆ ತಯಾರಾಗಿರುವ ಅನಘ ಗ್ರಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ.

ಕ್ಯಾಬಿನ್,ಹವಾನಿಯಂತ್ರಿತ ಕ್ಯಾಬಿನ್,ಫ್ಯಾಮಿಲಿ ಕ್ಯಾಬಿನ್ ಪ್ರತ್ಯೇಕ ವ್ಯವಸ್ಥೆ ಹಾಗೂ ಸಭೆ ಸಮಾರಂಭ ಮತ್ತು ಪಾರ್ಟಿಯ ವ್ಯವಸ್ಥೆಗೆ ಪಾರ್ಟಿ ಹಾಲ್ ಹಾಗೂ ಓಪನ್ ಗಾರ್ಡನ್ ಸೌಲಭ್ಯವಿರುತ್ತದೆ. ಲಿಫ್ಟ್ ಹಾಗೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ
ಕೆಳ ಅಂತಸ್ತಿನಲ್ಲಿ ಬಾರ್ ಕೌಂಟರ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪುತ್ತೂರು: ಅತ್ಯಾಚಾರ, ವಂಚನೆ ಪ್ರಕರಣ: ಬಿಜೆಪಿ ನಾಯಕನ ಪುತ್ರನಿಗೆ ಹೈಕೋರ್ಟ್‌‌ನಿಂದ ಜಾಮೀನು

0

ಪುತ್ತೂರು: ಅತ್ಯಾಚಾರ, ವಂಚನೆ ಪ್ರಕರಣ: ಬಿಜೆಪಿ ನಾಯಕನ ಪುತ್ರನಿಗೆ ಹೈಕೋರ್ಟ್‌‌ನಿಂದ ಜಾಮೀನು

ನಂಬಿಸಿ, ಅಕ್ರಮ ದೈಹಿಕ ಸಂಬಂಧ ಬೆಳೆಸಿ ಸಹಪಾಠಿ ವಿದ್ಯಾರ್ಥಿನಿಯನ್ನು ಗರ್ಭವತಿಯನ್ನಾಗಿ ಮಾಡಿ ಮದುವೆಯಾಗಲು ನಿರಾಕರಿಸಿ ವಂಚಿಸಿರುವ ಆರೋಪದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಬಪ್ಪಳಿಗೆಯ 21 ವರ್ಷದ ಶ್ರೀಕೃಷ್ಣ ಜೆ ರಾವ್‌ಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ನ್ಯಾಯಾಲಯದಲ್ಲಿ ಜಾಮೀನಿಗೆ ಸಂಬಂಧಿಸಿದ ಭದ್ರತೆ ಮತ್ತಿತರ ಪ್ರಕ್ರಿಯೆಗಳನ್ನು ಸೆ.4ರಂದು ಪೂರ್ಣಗೊಂಡ ನಂತರ ಗುರುವಾರ ಶ್ರೀಕೃಷ್ಣ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಪೊಲೀಸರ ಪ್ರಕಾರ, ಬಿಜೆಪಿ ನಾಯಕ ಜಗನ್ನಿವಾಸ ರಾವ್ ಅವರ ಮಗನಾಗಿರುವ ಆರೋಪಿ, 21 ವರ್ಷದ ಮಹಿಳೆಗೆ ಮದುವೆ ಭರವಸೆ ನೀಡಿದ ನಂತರ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ. ಆಕೆ ಗರ್ಭಿಣಿಯಾದಾಗ, ಆಕೆಯನ್ನು ಮದುವೆಯಾಗಲು ಅವನು ನಿರಾಕರಿಸಿದನೆಂದು ಆರೋಪಿಸಲಾಗಿದೆ.

ಇದರ ನಂತರ, ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಅವನ ವಿರುದ್ಧ ಅತ್ಯಾಚಾರ ಮತ್ತು ವಿಶ್ವಾಸ ದ್ರೋಹದ ಪ್ರಕರಣ ದಾಖಲಾಗಿತ್ತು.

ಗಣೇಶೋತ್ಸವದಿಂದ ಸಂಘಟನೆ ಮತ್ತು ಸಾಮರಸ್ಯ ಸಾಧ್ಯ-ಕೆ.ಬಾಲಕೃಷ್ಣ ರಾವ್

0

ಗಣೇಶೋತ್ಸವದಿಂದ ಸಂಘಟನೆ ಮತ್ತು ಸಾಮರಸ್ಯ ಸಾಧ್ಯ-ಕೆ.ಬಾಲಕೃಷ್ಣ ರಾವ್

“ಲೋಕಮಾನ್ಯ ಭಾಲಗಂಗಾಧರ ತಿಲಕ್ ರವರು ಆರಂಭಿಸಿದ ಗಣೇಶೋತ್ಸವ ಇಂದು ಲೋಕಾವ್ಯಾಪಿಯಾಗಿದೆ. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಲು ಆರಂಭಿಸಿದ ಗಣೇಶೋತ್ಸವ ಮೊದಲು ಮುಂಬೈ ಹತ್ತಿರದ ಪುಣೆ ಯಲ್ಲಿನಡೆಯಿತು.ಕಾರ್ಕಳದ ಜೋಡುರಸ್ತೆ ಯಲ್ಲಿ ಆರಂಭಿಸಿದ ಗಣೇಶೋತ್ಸವಕ್ಕೆ ಈಗ 42 ವರ್ಷ ಆದರೆ ಈ ವರ್ಷದ ವಿಶೇಷ ವೇನಂದರೆ ಗಣೇಶ ದೇವರಿಗೆ ಬೆಳ್ಳಿಯ ಪ್ರಭಾವಳಿಯ ಸಮರ್ಪಣೆ. ಐದು ದಿನಗಳ ವರೆಗೆ ನಡೆದ ಗಣೇಶೋ ತ್ಸವದ ಲ್ಲಿ ದಿನ ವೂ ತ್ರಿಕಾಲ ಪೂಜೆ, ಭಜನೆಕುಣಿತ, ಯಕ್ಷಗಾನ ತಾಳಮದ್ದಳೆ, ಸಾಕ್ಸೋ ಫೋನ್ ವಾದನ, ಪ್ರತಿಭಾ ಪುರಸ್ಕಾರ, ವಿವಿಧ ಕ್ರಿಡೆಗಳಲ್ಲಿ ಭಾಗವಹಿಸಿದ ಕ್ರೀಡಾ ಪಟುಗಳಿ ಗೆ ಬಹುಮಾನ ವಿತರಣೆ, ರೋ ಗಿಗಳಿಗೆ ಧನಸಹಾಯ, ದಾನಿಗಳಿಗೆ ಸನ್ಮಾನ, ಅಧಿಕ ಅಂಕಗಳನ್ನು ಪಡೆದ ಕುಕ್ಕುಂದೂರು ಗ್ರಾಮದ ಮೂರು ಶಾಲೆಯ ವಿದ್ಯಾರ್ಥಿ ಗಳಿಗೆ ಸನ್ಮಾನ, ಈ ರೀತಿ ಹತ್ತು ಹಲವು ರಂಗಗಳಲ್ಲಿ ಸಾಧನೆ ಮಾಡಿದ ಗ್ರಾಮಸ್ತರಿಗೆ ಸನ್ಮಾನ, ಇವುಗಲೆಲ್ಲವೂ ಪ್ರಶಂಶನಿಯ. 25 ಲಕ್ಷಗಳು ಬೆಲೆ ಬಾಳುವ ದೇವರಿಗೆ ಅರ್ಪಿ ತವಾದ ಬೆಳ್ಳಿಯ ಪ್ರಾಭಾವಳಿ ಕಾರ್ಯಕರ್ತರಾದ, ಗಣೇಶೋತ್ಸವದ ಸಮಿತಿಯ ಅಧ್ಯಕ್ಷರಾದ ಸಂತೋಷ್ ರಾವ್ ಅಭಿನಂದನಾರ್ಹರು.” ಎಂದು ಕೆ. ಎಮ್. ಇ. ಎಸ್ ಸಂಸ್ತೆ ಯ ಪ್ರಿನ್ಸಿಪಾಲ್ ಮತ್ತು ಸಾಹಿತಿ ಯಾಗಿರುವ ಕೆ. ಬಾಲಕೃಷ್ಣ ರಾವ್ ರವರು ತಮ್ಮ ಅಧ್ಯಕ್ಷ ಭಾಷಣ ದ ಲ್ಲಿ ಹೇಳಿದರು.

ಸೌ.ಅಶ್ವಿನಿ ನಾಯಕ್ ರವರು ಮಾತನಾಡಿ “ಭಾರತದಲ್ಲಿ ಸನಾತನ ಧರ್ಮ ಉಳಿದರೆ ದೇಶ ಉಳಿಯುವುದು. ಇಂದು ಗಣೇಶನನ್ನ ಪ್ರತಿಯೊಬ್ಬರು ಪೂಜಿಸುತಾರೆ. ಗಣೇಶನ ವಿಗ್ರಹದ ಪ್ರತಿಯೊಂದು ಅಂಗಾಗಗಳಿಗೂ ವಿಶೇಷ ಅರ್ಥ ಇದೆ ” ಎಂದರು.

ಮತೋರ್ವ ಮುಖ್ಯ ಅತಿಥಿ ಶಾಂತಾ. ಪಿ. ಸಾಲಿಯಾನ್ ಮಾತನಾಡಿ “42 ವರುಷಗಳಿಂದ ನಿರಂತರವಾಗಿ ಇದೇ ಸ್ಥಳದಲ್ಲಿ ಗಣೇಶೋತ್ಸವ ಆಚರಣೆಯನ್ನು ಮಾಡುವುದು ಪ್ರಶಂಸನೀಯ. ಎಲ್ಲರಿಗೂ ಆ ದೇವರ ಅನುಗ್ರಹ ನಿರಂತರವಾಗಿ ಇರಲಿ ” ಎಂದು ಹಾರೈಸಿದರು.

ಮತೋರ್ವ ಮುಖ್ಯ ಅತಿಥಿ ದೀಪ. ಕೆ. ವಿಶ್ವನಾಥ್ ಮಾತನಾಡಿ ” ನನ್ನನ್ನು ಬೆಂಗಳೂರಿನಿಂದ ಇಲ್ಲಿವರೆಗೆ ಕರೆಯಿಸಿ ಸಮಾರಂಭದಲ್ಲಿ ಭಾಗವಹಿಸುವಂತೆ ಮಾಡಿದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ್ ರಾವ್ ಅವರಿಗೆ ಧನ್ಯವಾದಗಳು ” ಎಂದು ಹೇಳಿದರು.

ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ್ ರಾವ್ ರವರು ಸ್ವಾಗತಿಸಿದರು. ಕೋಶಧಿಕಾರಿ ಕಿಶೋರ್ ಕುಮಾರ್ ಧನ್ಯವಾದ ಸಮರ್ಪಣೆ ಮಾಡಿದರು. ರವಿ ಶೆಟ್ಟಿಯವರು ಬಹುಮಾನ ಪಡೆದವರ ಪಟ್ಟಿಯನ್ನು ಓದಿದರು. ಪ್ರಧಾನ ಕಾರ್ಯದರ್ಶಿ ಪ್ರಸಾದ್ ಐಸಿರ ಕಾರ್ಯಕ್ರಮದ ನಿರೂಪಣೆ ಮಾಡಿದರು.
ದೇವರಿಗೆ ಮಹಾಪೂಜೆ ನಡೆದ ಬಳಿಕ ಬಂಡಿಮಠದ ವರೆಗೆ ಅದ್ದೂರಿಯ ಭವ್ಯ ಮೆರವಣಿಗೆ ನಡೆಯಿತು. ನಂತರ ಜೋಗಿನಕೆರೆಯಲ್ಲಿ ಗಣಪತಿ ವಿಗ್ರಹದ ವಿಸರ್ಜನೆ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು.

ಕ್ರೈಸ್ಟ್ ಕಿಂಗ್ : ವಿಶ್ವಶಾಲಾ ಮಕ್ಕಳ ವಾಲಿಬಾಲ್ ಪಂದ್ಯಾಟದ ರಾಷ್ಟ್ರೀಯ ಅರ್ಹತಾ ತಂಡಕ್ಕೆ ಕರ್ನಾಟಕದ ಏಕೈಕ ಸ್ಪರ್ಧಿಯಾಗಿ ಒಂಬತ್ತನೇ ತರಗತಿಯ ಶಗುನ್ ಎಸ್ ವರ್ಮ ಹೆಗ್ಡೆ ಆಯ್ಕೆ

0

ಇಲ್ಲಿನ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಶಗುನ್ ಎಸ್. ವರ್ಮ ಹೆಗ್ಡೆ ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಫೆಡರೇಶನ್‌ನವರು ನಡೆಸುವ 15ರ ವಯೋಮಿತಿಯ ವಿಶ್ವಾಶಾಲಾ ಬಾಲಕಿಯರ ವಿಭಾಗದ ವಿಶ್ವವಾಲಿಬಾಲ್ ಪಂದ್ಯಾಟದ ರಾಷ್ಟ್ರೀಯ ಅರ್ಹತಾ ತಂಡಕ್ಕೆ ಆಯ್ಕೆಯಾಗಿದ್ದಾಳೆ.

ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ರಾಷ್ಟ್ರೀಯ ತಂಡದ ಆಯ್ಕೆ ಶಿಬಿರದಲ್ಲಿ ಸುಮಾರು 200 ಸ್ಪರ್ಧಾಳುಗಳು ಸ್ಪರ್ಧಿಸಿದ್ದು ಇದರಲ್ಲಿ 23 ಸ್ಪರ್ಧಾಳುಗಳು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು ಅದರಲ್ಲಿ ಶಗುನ್ ಎಸ್ ವರ್ಮ ಹೆಗ್ಡೆ ಎರಡನೆಯವಳಾಗಿ ಆಯ್ಕೆಯಾದದ್ದಲ್ಲದೆ ಕರ್ನಾಟಕದಿಂದ ಏಕೈಕ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾಳೆ. ಇದಕ್ಕೂ ಮೊದಲು ರಾಜ್ಯದಿಂದ ಅರ್ಹತಾ ಶಿಬಿರಕ್ಕೆ ಉಡುಪಿ ಜಿಲ್ಲೆಯಿಂದ ಏಕೈಕ ಆಟಗಾರಳಾಗಿ ಶಗುನ್ ವರ್ಮ ಆಯ್ಕೆಯಾಗಿದ್ದಳು. ಈಗ ಕರ್ನಾಟಕದ ಎಂಟು ಸ್ಪರ್ಧಿಗಳಲ್ಲಿ ಶಗುನ್ ಎಸ್ ವರ್ಮ ರಾಷ್ಟೀಯ ತಂಡದಲ್ಲಿ ಸ್ಥಾನ ಪಡೆದ ರಾಜ್ಯದ ಏಕೈಕ ಆಟಗಾರ್ತಿಯಾಗಿದ್ದಾಳೆ. ಅಂತರಾಷ್ಟ್ರೀಯ ಪಂದ್ಯವು ಇದೇ ವರ್ಷ ಡಿಸೆಂಬರ್ ತಿಂಗಳ 4 ರಿಂದ 13 ನೇ ತಾರೀಖಿನವರೆಗೆ ಚೀನಾದ ಶಾಂಗ್ಲೋದಲ್ಲಿ ನಡೆಯಲಿದೆ.

ಶಗುನ್ ಎಸ್ ವರ್ಮ ಹೆಗ್ಡೆ ಕಲ್ಲೊಟ್ಟೆ ನಿವಾಸಿ ಸಂದೇಶ್ ವರ್ಮ ಹಾಗೂ ಶ್ರೀಮತಿ ಶ್ರುತಿರಾಜ್ ದಂಪತಿಗಳ ಸುಪುತ್ರಿಯಾಗಿದ್ದಾಳೆ.

ಕ್ರೈಸ್ಟ್ ಕಿಂಗ್ : ಕ್ರಿಕೆಟ್ ಪಂದ್ಯಾಟದಲ್ಲಿ ಪ್ರೌಢಶಾಲಾ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

 

ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕಾರ್ಕಳ ಇವರ ಸಹಯೋಗದಲ್ಲಿ ಶ್ರೀಮದ್ ಭುವನೇಂದ್ರ ಪ್ರೌಢಶಾಲೆ ಕಾರ್ಕಳ ಇಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಆಯ್ಕೆಗೊಂಡಿದೆ. ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ರಸಾದ್ ತಂಡವನ್ನು ತರಬೇತುಗೊಳಿಸಿದ್ದರು.

ಹೆಬ್ರಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಫಲಿತಾಂಶ ಪ್ರಕಟ, ಬಹುಮಾನ ವಿತರಣೆ

0

 

ಚಾಣಕ್ಯ ಚಿತ್ರಕಲಾ ತರಬೇತಿ ಕೇಂದ್ರ ಹೆಬ್ರಿ ಇದರ ನೇತೃತ್ವದಲ್ಲಿ ನೇತಾಜಿ ಫ್ರೆಂಡ್ಸ್ ಕ್ಲಬ್ ಮುದ್ರಾಡಿ , ಬಂಟರ ಸಂಘ ಹೆಬ್ರಿ, ಲಯನ್ಸ್ ಕ್ಲಬ್ ಹೆಬ್ರಿ ಸಿಟಿ, ಜೆಸಿಐ ಹೆಬ್ರಿ ಇವರ ಸಹಯೋಗದೊಂದಿಗೆ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ನಡೆದ 9ನೇ ವರ್ಷದ ಹೆಬ್ರಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.

ಹೆಬ್ರಿ ತಾಲೂಕು ವ್ಯಾಪ್ತಿಯ ಸುಮಾರು 90ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಸಬ್ ಜೂನಿಯರ್ ವಿಭಾಗದಲ್ಲಿ ಹೆಬ್ರಿ ಎಸ್. ಆರ್ ಸ್ಕೂಲ್ ನ ಶಾರ್ವಿ ಪ್ರಥಮ, ಅಮೃತ ಭಾರತಿಯ ಸಮರ್ಥ್ ದ್ವಿತೀಯ, ಎಸ್ ಆರ್ ಸ್ಕೂಲ್ ನ ಅರ್ವಿ ಎಸ್. ಭಂಡಾರಿ ತೃತೀಯ ಸ್ಥಾನ ಪಡೆದುಕೊಂಡಿದ್ದು ಚಿರಾಯು ಆರ್. ಪೂಜಾರಿ, ಸಾನಿಧ್ಯ, ಪರಿನ್ ಕೆ.ಎ.ಗೌಡ, ಜಾನ್ನವಿ, ಆಯುಷಿ ವಿ. ಶೆಟ್ಟಿ ತೀರ್ಪುಗಾರರ ಮೆಚ್ಚುಗೆ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಜೂನಿಯರ್ ವಿಭಾಗದಲ್ಲಿ ಸ್ತುತಿ ಆಚಾರ್ಯ, ಕೆಪಿಎಸ್ ಮುನಿಯಾಲು ಪ್ರಥಮ, ಸುಗೊಶ್ ಜೆಎನ್ ವಿ ಚಾರ ದ್ವಿತೀಯ, ಸಮೃದ್ಧಿ ಭಟ್ ಎಸ್ ಆರ್ ಸ್ಕೂಲ್ ಹೆಬ್ರಿ ತೃತೀಯ ಸ್ಥಾನ ಪಡೆದುಕೊಂಡಿದ್ದು, ನಕ್ಷತ್ರ ಪಿ. ಶೆಟ್ಟಿ, ತ್ರಿಷಾ ಆಚಾರ್ಯ, ಸ್ಪರ್ಶ ಶೆಟ್ಟಿ, ಸುಯೋಗ್ ಆರ್. ಶೆಟ್ಟಿ, ಧನ್ಯ ಯು.ಶೆಟ್ಟಿ, ರಿಯಾನ್, ಅನೀಶ್, ಹಾರ್ದಿಕಾ, ಹೃಥ್ವಿಕ್ ಹೆಬ್ಬಾರ್ , ಹಾರ್ದಿಕ್ ಹೆಬ್ಬಾರ್, ಶೈನಿ, ಪ್ರಧನ್ವಿ, ಗಗನ್ ಜಿ. ತೀರ್ಪುಗಾರರ ಮೆಚ್ಚುಗೆ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.

ಸೀನಿಯರ್ ವಿಭಾಗದಲ್ಲಿ ಅಮೃತ ಭಾರತಿ ಶಾಲೆಯ ಕೃಷ್ಣಪ್ರಸಾದ್ ಭಟ್ ಪ್ರಥಮ, ಕೆಪಿಎಸ್ ಮುನಿಯಾಲಿನ ವಂಶಿತ್ ಆಚಾರ್ಯ ದ್ವಿತೀಯ, ಎಸ್. ಆರ್. ಸ್ಕೂಲ್ ನ ಪ್ರಣಮ್ ಮತ್ತು ಅಮೃತ ಭಾರತಿಯ ಆಶಿಶ್ ಎಚ್ ತೃತೀಯ ಸ್ಥಾನ ಪಡೆದುಕೊಂಡಿದ್ದು, ಶ್ರೇಯ, ಮಂಗಲ ರೈ, ಮನ್ವಿತ್ ಬಿ. ಎಲ್, ಸಾನ್ವಿ ಸಂತೋಷ್, ಅಂಕಿತ್, ಆಯುಷ್ ಎಸ್. ಭಂಡಾರಿ, ಶೋಬಿತ್, ಕಿರಣ್ಮಯಿ, ಸ್ಪರ್ಶ ನಾಯಕ್, ಅಜಯ್ ಕುಮಾರ್, ಸಮರ್ಥ್ ಎಸ್. ತೀರ್ಪುಗಾರರ ಮೆಚ್ಚುಗೆ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭ ಸೆ. 5ರಂದು ಮಧ್ಯಾಹ್ನ 2 ಗಂಟೆಗೆ ಹೆಬ್ರಿ ಶ್ರೀಮತಿ ಶೀಲಾ ಸುಭೋದ್ ಬಂಟರ ಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಉಡುಪಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ : ಬಾಲಕಿಯರ ವಿಭಾಗದಲ್ಲಿ ಮಣಿಪಾಲ ಜ್ಞಾನಸುಧಾ ಚಾಂಪಿಯನ್

0

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಸಹಯೋಗದೊಂದಿಗೆ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾನಗರದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಬಾಲಕಿಯರ ತಂಡ ಪ್ರಥಮ ಸ್ಥಾನಗಳಿಸಿ ಉಡುಪಿ ಜಲ್ಲಾ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸಂಸ್ಥೆಯ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ನಮೃತಾ ಎನ್ ಆರ್, ಧೃತಿ ಕೆ. ಶೆಟ್ಟಿ, ಆಧ್ಯಾ ಲೋಕೇಶ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿನಿಯರನ್ನು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಮತ್ತು ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್(ರಿ.)ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರು ಹಾಗೂ ಬೋಧಕ-ಬೋಧಕೇತರ ವರ್ಗ ಅಭಿನಂದಿಸಿರುತ್ತಾರೆ.