Home Blog Page 71

ಮಾರ್ಚ್‌ 15 ರಂದು 21 ನೇ ವರ್ಷದ ಮಿಯ್ಯಾರು ಲವ ಕುಶ ಕಂಬಳ

0

ಮಾರ್ಚ್‌ 15 ರಂದು 21 ನೇ ವರ್ಷದ ಮಿಯ್ಯಾರು ಲವ ಕುಶ ಕಂಬಳ

ಕಾರ್ಕಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕಂಬಳ ಕೂಟಗಳಲ್ಲಿ ಒಂದಾದ ಮಿಯ್ಯಾರು ಲವಕುಶ ಜೋಡು ಕರೆ ಕಂಬಳ ಕೂಟವು ದಿನಾಂಕ 15-3-2025 ಶನಿವಾರ ಬೆಳಿಗ್ಗೆ 8:00 ಗಂಟೆಯಿಂದ ಪ್ರಾರಂಭವಾಗಲಿದೆ ಎಂದು ಕಂಬಳ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವಾಡಿಕೆಯಂತೆ ಪ್ರತಿವರ್ಷ ಜನವರಿ ತಿಂಗಳ ಮೊದಲ ವಾರದಲ್ಲಿ ನಡೆಯಬೇಕಿದ್ದ ಈ ಕಂಬಳ ಕ್ರೀಡೆ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮುಂದೂಡಲ್ಪಟ್ಟಿತ್ತು.

ಮಾರ್ಚ್ 15ನೇ ತಾರೀಕು ಜಿಲ್ಲೆಯಲ್ಲಿ ಇತರ ಯಾವುದೇ ಕಂಬಳ ಕೂಟ ನಡೆಯದೆ ಇರುವುದರಿಂದ ಜಿಲ್ಲಾ ಕಂಬಳ ಸಮಿತಿ ಮತ್ತು ಸ್ಥಳೀಯ ಸಮಿತಿಯ ನಿರ್ಣಯದಂತೆ ಆ ದಿನದಂದೆ ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಕಂಬಳ ಕೂಟವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮಿಯ್ಯಾರು ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ಕ್ಷೇತ್ರದ ಶಾಸಕರು ಆಗಿರುವ ವಿ ಸುನಿಲ್ ಕುಮಾರ್ ಮತ್ತು ಕಾರ್ಯಾಧ್ಯಕ್ಷರಾಗಿರುವ ಜೀವನ್‌ದಾಸ್‌ ಅಡ್ಯಂತಾಯ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಈ ವರ್ಷ ಕೂಡ ಸುಮಾರು 250ಕ್ಕೂ ಹೆಚ್ಚು ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು 24 ಗಂಟೆಯೊಳಗೆ ಸ್ಪರ್ಧೆಯನ್ನು ಅಂತಿಮ ಹಂತಕ್ಕೆ ತಲುಪಿಸುವ ಎಲ್ಲಾ ಪ್ರಯತ್ನ ಕಂಬಳ ಸಮಿತಿಯಿಂದ ನಡೆಯುತ್ತಿದೆ.

ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿ, ಮಾಜಿ ಮುಖ್ಯಮಂತ್ರಿಗಳಾದ ಡಾ. ಎಂ ವೀರಪ್ಪ ಮೊಯ್ಲಿ, ಡಾ. ಎಂ ಎನ್ ರಾಜೇಂದ್ರ ಕುಮಾರ್, ಜಿಲ್ಲೆಯ ಶಾಸಕರುಗಳು ಮತ್ತು ವಿಧಾನ ಪರಿಷತ್ ಸದಸ್ಯರುಗಳ ಜೊತೆಗೆ ಆನೇಕ ಗಣ್ಯರು ಈ ಜಾನಪದ ಕ್ರೀಡೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಕಂಬಳ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ಕು ಜನ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಈ ಕಂಬಳ ಕ್ರೀಡೋತ್ಸವಕ್ಕೆ ಎಲ್ಲಾ ಕೋಣಗಳ ಯಜಮಾನರಿಗೆ, ಓಟಗಾರರಿಗೆ, ಕಂಬಳ ಕ್ರೀಡಾ ಪ್ರೇಮಿಗಳಿಗೆ ಆತ್ಮೀಯ ಸ್ವಾಗತ ಎಂದು ಪ್ರಕಟಣೆಯಲ್ಲಿ ಕಂಬಳ ಸಮಿತಿ ತಿಳಿಸಿದ್ದಾರೆ.

ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಿಜ್ಞಾನ ಸಂಘದ ಕಾರ್ಯಕ್ರಮ

0

ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಿಜ್ಞಾನ ಸಂಘದ ಕಾರ್ಯಕ್ರಮ

ಕಾರ್ಕಳ:ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಿಜ್ಞಾನ ಸಂಘ ಮತ್ತು ನೇಚರ್ ಕ್ಲಬ್ ವತಿಯಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಗೋವ ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಕಾಲೇಜಿನ ಪೂರ್ವ ವಿದ್ಯಾರ್ಥಿಯೂ ಆದ ಪ್ರೊ.ಕೃಷ್ಣಾನಂದ ಪೈ ಅವರು ಭೂಮಂಡಲದ ಧ್ರುವ ಪ್ರದೇಶಗಳ ವಿಶೇಷತೆಗಳು ಹಾಗೂ ಭೂಮಿಯ ಸಮತೋಲನವನ್ನು ಕಾಪಾಡುವಲ್ಲಿ ಧ್ರುವ ಪ್ರದೇಶಗಳ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಾಚಾರ್ಯರಾದ ಡಾ. ಮಂಜುನಾಥ ಎ. ಕೋಟ್ಯಾನ್ ಅವರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ದತ್ತಾತ್ರೇಯ ಮಾರ್ಪಳ್ಳಿ ಉಪಸ್ಥಿತರಿದ್ದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವಿಜಯಕುಮಾರಿ ಸ್ವಾಗತಿಸಿ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಈಶ್ವರ ಭಟ್ ವಂದಿಸಿದರು.ವಿದ್ಯಾರ್ಥಿನಿ ಕು.ನೇಹಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಕಳ:ಎಂ.ಪಿ.ಎಂ ಸರಕಾರಿ ಕಾಲೇಜು- ಪೋಷಕರ ವೇದಿಕೆ ಸಭೆ

0
ಕಾರ್ಕಳ:ಎಂ.ಪಿ.ಎಂ ಸರಕಾರಿ  ಕಾಲೇಜು- ಪೋಷಕರ ವೇದಿಕೆ ಸಭೆ
ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪೋಷಕರ ವೇದಿಕೆ ಸಭೆಯು ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ್ ರೈ ಕೆ ರವರ ಅಧ್ಯಕ್ಷತೆಯಲ್ಲಿ, ಕಾಲೇಜಿನ ಎಲ್ಲಾ ಉಪನ್ಯಾಸಕರ ಉಪಸ್ಥಿತಿಯಲ್ಲಿ ಜರಗಿತು.
ಪೋಷಕರ ವೇದಿಕೆಯ ಪ್ರಾಮುಖ್ಯತೆ ಹಾಗೂ ಹೊಣೆಗಾರಿಕೆಗಳ ಜೊತೆಗೆ ಸಂಸ್ಥೆಯ ಹಾಗೂ ವಿದ್ಯಾರ್ಥಿಗಳ ಆಗು ಹೋಗುಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. 323 ಮಂದಿ ಪ್ರಥಮ ಪದವಿ ವಿದ್ಯಾರ್ಥಿಗಳ ಪೋಷಕರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ ರವರು ಸಂಸ್ಥೆಯು ಸಾಗುತ್ತಿರುವ ದಾರಿ, ಮಾಡಿರುವ ಸಾಧನೆಗಳು, ಪ್ರಸಕ್ತ ವಿದ್ಯಾಮಾನಗಳು,  ವಿದ್ಯಾರ್ಥಿಗಳ ಶಿಸ್ತು, ವ್ಯಕ್ತಿತ್ವ ನಿರ್ಮಾಣ, ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಗಳ ನೆಲೆಯಲ್ಲಿ ಕಾಲೇಜು ಕೈಗೊಂಡ ಕ್ರಮಗಳು, ಭವಿಷ್ಯದ ಯೋಜನೆ, ಯೋಚನೆ ಹಾಗೂ ಆಶೋತ್ತರಗಳ ಬಗ್ಗೆ ಸಮಗ್ರವಾದ ವಿವರಣೆ ನೀಡಿ ಪೋಷಕರು ಈವರೆಗೆ ನೀಡಿರುವ ಬೆಂಬಲವನ್ನು ಪ್ರಶಂಶಿಸಿ ಮುಂದೆಯೂ ಇನ್ನು ಹೆಚ್ಚಿನ ಸಹಕಾರ ನೀಡಿ ಸಂಸ್ಥೆಯ ಪ್ರಗತಿಯಲ್ಲಿ ಕೈಜೋಡಿಸಿ ನೆರವಾಗುವಂತೆ ವಿನಂತಿಸಿದರು.
ಜೊತೆಗೆ ಈ ವರ್ಷ ನಡೆಯಲಿರುವ ಕಾಲೇಜಿನ ನಾಲ್ಕನೇ ಹಂತದ ನ್ಯಾಕ್ ಮೌಲ್ಯಾಂಕಣ ಪ್ರಕ್ರಿಯೆಯಲ್ಲಿ ಪೋಷಕರ ವೇದಿಕೆಯ ಪಾತ್ರ ಹಾಗೂ ಹೊಣೆಗಾರಿಕೆಗಳ ಮನವರಿಕೆ ಮಾಡಿ ಕೊಟ್ಟರು.
ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಡಾ.ದಿವ್ಯಪ್ರಭು, ನಿರ್ವಹಣಾ ಶಾಸ್ತç ಸಹಾಯಕ ಪ್ರಾಧ್ಯಾಪಕರು ನಡೆಸಿಕೊಟ್ಟರು. 2025-26 ನೇ ಸಾಲಿಗೆ ವೇದಿಕೆ ಅಧ್ಯಕ್ಷರಾಗಿ ರಾಜರಾಮ್ ನಾಯಕ್, ಉಪಾಧ್ಯಕ್ಷರಾಗಿ ಸ್ನೇಹ ಬಳ್ಳಾಳ್, ಕಾರ್ಯದರ್ಶಿಯಾಗಿ ರೂಪ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಜೋಸೆಫ್ ಡಿ ಡಿಸೋಜ, ಕೋಶಾಧಿಕಾರಿಯಾಗಿ ಸುಚಿತ್ರ.ಜಿ.ಭಟ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯಶೋದ ಎಸ್ ಎ, ಪಿ ಶೀನ ಮಿಯ್ಯಾರ್, ಸುಧಾಕರ್, ದಿಶಾ ಹಾಗೂ  ವಿನೋದ ಸರ್ವಾನುಮತದಿಂದ ಆಯ್ಕೆಯಾದರು.
ಕಾಲೇಜಿನ ಪರವಾಗಿ ಶ್ರೀಮತಿ ಸೌಮ್ಯ, ಅರ್ಥಶಾಸ್ತç ಸಹ ಪ್ರಾಧ್ಯಾಪಕರು, ಶ್ರೀ ವಿನಯ್, ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕರು ಹಾಗೂ ಶ್ರೀಮತಿ ಸಂದ್ಯಾ ಭಂಡಾರಿ, ನಿರ್ವಹಣಾ ಶಾಸ್ತç ಸಹಾಯಕ ಪ್ರಾಧ್ಯಾಪಕರು, ಪೋಷಕರ ಕರ್ತವ್ಯ ಹಾಗೂ ಜವಬ್ದಾರಿಗಳ ಬಗ್ಗೆ ವಹಿಸಬೇಕಾದ ಪಾತ್ರದ ಬಗ್ಗೆ, ವಿದ್ಯಾರ್ಥಿಗಳ ಶಿಸ್ತು ನಡವಳಿಕೆಗಳ ಬಗ್ಗೆ ಸಭೆಯಲ್ಲಿ ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದ ಡಾ.ಚಂದ್ರಾವತಿ ಸಭೆಯ ಪ್ರಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಶ್ರೀಮತಿ ಮೈತ್ರಿ ಬಿ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಡಾ. ಸುಬ್ರಹ್ಮಣ್ಯ ಕೆ.ಸಿ ಸ್ವಾಗತಿಸಿದರು ಹಾಗೂ ಐಕ್ಯೂಎಸಿ ಸಂಚಾಲಕರಾದ ಶ್ರೀಮತಿ ಸುಷ್ಮಾ ರಾವ್ ವಂದಿಸಿದರು.ಕಾಲೇಜಿನ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿ‌ ನನ್ನ ನೆಚ್ಚಿನ ನಟ ಎಂದ ರಾಜಸ್ಥಾನ ಮುಖ್ಯಮಂತ್ರಿ

0

ಪ್ರಧಾನಿ ನರೇಂದ್ರ ಮೋದಿ‌ ನನ್ನ ನೆಚ್ಚಿನ ನಟ ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ನೀಡಿದ ಹೇಳಿಕೆ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ವಿರೋಧ ಪಕ್ಷಗಳು ಪ್ರಧಾನಿ ಮತ್ತು ಬಿಜೆಪಿಯನ್ನು ಅಪಹಾಸ್ಯ ಮಾಡಲು ಮುಂದಾಗಿದ್ದಾರೆ.

ಜೈಪುರದಲ್ಲಿ ನಡೆದ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಐಎಫ್‌ಎ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುದ್ದಿಗಾರರೊಂದಿಗಿನ ಸಂವಾದದಲ್ಲಿ ಶರ್ಮಾ ಅವರು ಈ ಹೇಳಿಕೆ ನೀಡಿದ್ದಾರೆ.

ಶರ್ಮಾ ಅವರನ್ನು ಸಂವಾದದ ಸಮಯದಲ್ಲಿ ನಿಮ್ಮ ನೆಚ್ಚಿನ ನಟ ಯಾರು ಎಂದು ಕೇಳಲಾಯಿತು. ನಗುತ್ತಾ ಅವರು ‘ನರೇಂದ್ರ ಮೋದಿ ಜಿ’ ಎಂದು ಉತ್ತರಿಸಿದ್ದಾರೆ. ಈ ಪ್ರತಿಕ್ರಿಯೆಯು ವಿರೋಧ ಪಕ್ಷದ ನಾಯಕರಿಗೆ ಆಹಾರವಾಗಿದೆ. ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ದೋತಾಸ್ರಾ, ಮೋದಿ ಜಿ ನಾಯಕನಲ್ಲ. ಆದರೆ ನಟ ಎಂದು ನಾವು ಬಹಳ ಹಿಂದಿನಿಂದಲೂ ಹೇಳುತ್ತಿದ್ದೇವೆ. ಈಗ, ಬಿಜೆಪಿ ಮುಖ್ಯಮಂತ್ರಿಗಳು ಸಹ ತಡವಾಗಿಯಾದರೂ, ಮೋದಿ ಸಾರ್ವಜನಿಕ ನಾಯಕರಲ್ಲ ಎಂದು ಹೇಳಿದ್ದಾರೆ. ಕ್ಯಾಮೆರಾ ಕೌಶಲ್ಯ, ಟೆಲಿಪ್ರೊಂಪ್ಟರ್‌ಗಳು, ವೇಷಭೂಷಣಗಳು ಮತ್ತು ಭವ್ಯ ಭಾಷಣಗಳಲ್ಲಿ ಮೋದಿ ನಿಪುಣರು ಎಂಬುದನ್ನು ಒಪ್ಪಿಕೊಂಡಿದ್ದಾರೆಂದು ಟಾಂಗ್‌ ಕೊಟ್ಟಿದ್ದಾರೆ.

ಭಜನ್ ಲಾಲ್ ಜಿ, ನೀವು ಸರಿಯಾಗಿಯೇ ಹೇಳಿದ್ದೀರಿ. ಪ್ರಧಾನಿ ಮೋದಿ ಒಳ್ಳೆಯ ನಟ. ಆದರೆ, ಇತ್ತೀಚೆಗೆ ಅವರ ಅತಿ ನಟನೆ ಸ್ವಲ್ಪ ಹೆಚ್ಚುತ್ತಿದೆ ಎಂದು ನೀವು ಭಾವಿಸುವುದಿಲ್ಲವೇ? ಎಂದು ಶರ್ಮಾ ಅವರನ್ನು ಟ್ಯಾಗ್ ಮಾಡಿ ಕಾಂಗ್ರೆಸ್ ನಾಯಕ ಪವನ್ ಖೇರಾ ಪೋಸ್ಟ್‌ ಹಾಕಿದ್ದಾರೆ.

 

ಎಎಪಿ ತನ್ನ ಎಕ್ಸ್‌ ಖಾತೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರನ್ನು ದೇಶದ ಶ್ರೇಷ್ಠ ನಟ. ಭೂತ, ವರ್ತಮಾನ ಅಥವಾ ಭವಿಷ್ಯದಲ್ಲಿ ಅವರನ್ನು ಮೀರಿಸಬಲ್ಲವರು ಯಾರೂ ಇಲ್ಲ ಎಂದು ಬಿಜೆಪಿ ಮುಖ್ಯಮಂತ್ರಿಗಳು ಮತ್ತು ನಾಯಕರು ಸ್ವತಃ ನಂಬುತ್ತಾರೆ ಎಂದು ಕಾಲೆಳೆದಿದೆ.

ಬೆಳ್ಮಣ್‌ ಅನಿತಾ ಡಿಸೋಜಾ ರವರಿಗೆ ನವದೆಹಲಿಯಲ್ಲಿ ನಡೆದ ಶಕ್ತಿ ಸಮ್ಮಾನ್ ಕಾರ್ಯಕ್ರಮದಲ್ಲಿ ಅಭಿನಂದನೆ

0

ಬೆಳ್ಮಣ್‌ ಅನಿತಾ ಡಿಸೋಜಾ ರವರಿಗೆ ನವದೆಹಲಿಯಲ್ಲಿ ನಡೆದ ಶಕ್ತಿ ಸಮ್ಮಾನ್ ಕಾರ್ಯಕ್ರಮದಲ್ಲಿ ಅಭಿನಂದನೆ

ಕಾರ್ಕಳ:ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಸಮಿತಿಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಕಾಂಗ್ರೆಸ್‌ ಸದಸ್ಯತ್ವ ಅಭಿಯಾನದಲ್ಲಿ ಅಧಿಕ ಸಂಖ್ಯೆಯಲ್ಲಿ ಸದಸ್ಯರನ್ನು ನೊಂದಾವಣೆ ಮಾಡಿರುವ, ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ವಿವಿಧ ರಾಜ್ಯದ ಮಹಿಳೆಯರನ್ನು ಅಭಿನಂದಿಸಲಾಯಿತು.

ಉಡುಪಿ ಮಹಿಳಾ ಕಾಂಗ್ರೆಸ್ ಸದಸ್ಯೆ,ಕಾರ್ಕಳ ಮಹಿಳಾ ಕಾಂಗ್ರೆಸ್‌ ಸಮಿತಿಯ ಮಾಜಿ ಅಧ್ಯಕ್ಷೆ ಶ್ರೀಮತಿ ಅನಿತಾ ಡಿಸೋಜಾ ಬೆಳ್ಮಣ್‌ ರವರಿಗೆ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಅಲ್ಕಾ ಲಂಬಾರವರು ಅಭಿನಂದನೆ ಮತ್ತು ಪ್ರಮಾಣಪತ್ರವನ್ನು ನವದೆಹಲಿಯ ಇಂದಿರಾ ಭವನದಲ್ಲಿ ಮಾರ್ಚ್‌ 8ರಂದು ನೀಡಿ ಗೌರವಿಸಿದರು.

ಅನಿತಾ ಡಿಸೋಜಾ ಬೆಳ್ಮಣ್‌ ಅವರು ವಿವಿಧ ಸಂಘಸಂಸ್ಥೆಗಳಲ್ಲಿ ಸದಸ್ಯರಾಗಿ ಸಕ್ರೀಯರಾಗಿ ಸಮಾಜಸೇವೆ ಸಲ್ಲಿಸುತ್ತಿದ್ದಾರೆ

ಕಾರ್ಕಳ:ಕಾರು ಚಾಲಕಿಯ ನಿರ್ಲಕ್ಷ್ಯ,ಜೀವನ್ಮರಣ ಸ್ಥಿತಿಯಲ್ಲಿ ವಿದ್ಯಾರ್ಥಿಗಳು

0

ಕಾರ್ಕಳ:ಕಾರು ಚಾಲಕಿಯ ನಿರ್ಲಕ್ಷ್ಯ,ಜೀವನ್ಮರಣ ಸ್ಥಿತಿಯಲ್ಲಿ ವಿದ್ಯಾರ್ಥಿಗಳು

ಕೆದಿಂಜೆ:ಕಾರು ಚಾಲಾಕಿ ಏಕಾಏಕಿ ಯೂಟರ್ನ್ ಹೊಡೆದುದರ ಪರಿಣಾಮ ಬೈಕ್ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಕೆದಿಂಜೆ ಗ್ರಾಮದ ಸುಂಕಮಾರು ಎಂಬಲ್ಲಿ ನಡೆದಿದೆ.

ಮಾ.4ರಂದು ಸಂಜೆ ಈ ಘಟನೆ ನಡೆದಿದೆ.ವಿದ್ಯಾರ್ಥಿಗಳು ಕಾಪು ದೇವಸ್ಥಾನದಿಂದ ಪಡುಬಿದ್ರಿ ಮಾರ್ಗವಾಗಿ ನಿಟ್ಟೆಗೆ ಬರುತ್ತಿದ್ದ ಸಂದರ್ಭ,ಕೆದಿಂಜೆ ಗ್ರಾಮದ ಸುಂಕಮಾರು ಎಂಬಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರನ್ನು (KA-19-ML-5389) ಅದರ ಚಾಲಕಿಯು ಯಾವುದೇ ಸೂಚನೇ ನೀಡದೇ ನಿರ್ಲಕ್ಷ್ಯತನದಿಂದ ತನ್ನ ಬಲಕ್ಕೆ ತಿರುಗಿಸಿದ್ದಾರೆ.

ಇದರಿಂದಾಗಿ ನಿಯಂತ್ರಣ ತಪ್ಪಿದ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದ್ದು,ಬೈಕ್ ಸಮೇತ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ.ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸಮಾಜಸೇವಕ ಸುಪ್ರೀತ್ ಶೆಟ್ಟಿ ಕೆದಿಂಜೆ ಅಂಬ್ಯುಲೆನ್ಸ್ ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.ಬೈಕ್ ಸವಾರ ವೈಶಾಕ್ ತಲೆ,ಸೊಂಟ ಮತ್ತು ಎಡಕಾಲಿಗೆ ಗಂಭೀರ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂಬದಿ ಸವಾರೆ ಗಂಭೀರ ಗಾಯಗೊಂಡು ಚಿಕಿತ್ಸ್ ಪಡೆಯುತ್ತಿದ್ದಾರೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ್ ಹೈಸ್ಕೂಲ್ ಟ್ರಸ್ಟ್:ನೂತನ ಪಿ.ಆರ್.ಒ ಆಗಿ ರಾಮಚಂದ್ರ ನೆಲ್ಲಿಕಾರು ನೇಮಕ

0

ಮಣಿಪಾಲ್ ಹೈಸ್ಕೂಲ್ ಟ್ರಸ್ಟ್:ನೂತನ ಪಿ.ಆರ್.ಒ ಆಗಿ ರಾಮಚಂದ್ರ ನೆಲ್ಲಿಕಾರು ನೇಮಕ

ಮಣಿಪಾಲ:ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಸಹಭಾಗಿತ್ವದಲ್ಲಿರುವ ಮಣಿಪಾಲ್ ಹೈಸ್ಕೂಲ್ ಟ್ರಸ್ಟ್ನ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿ.ಆರ್.ಒ)ಯಾಗಿ ಶ್ರೀ ರಾಮಚಂದ್ರ ನೆಲ್ಲಿಕಾರು ನೇಮಕಗೊಂಡಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ 33 ವರ್ಷದ ಅನುಭವ ಹೊಂದಿರುವ ಇವರು ಕಳೆದ 12ವರ್ಷಗಳಿಂದ ಪ್ರಾಂಶುಪಾಲರಾಗಿ, ಆಂಗ್ಲಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅನುಭವಿ. ಖ್ಯಾತ ವಾಗ್ಮಿಯಾಗಿರುವ ಶ್ರೀಯುತರು 2ಸಾವಿರಕ್ಕೂ ಅಧಿಕ ಅನೇಕ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಷಣಕಾರರಾಗಿ, ರಾಜ್ಯಮಟ್ಟದಲ್ಲಿ ನಡೆದ ಎನ್.ಎಸ್.ಎಸ್ ಶಿಬಿರದಲ್ಲಿ ಮೂರು ಬಾರಿ ಸಂಪನ್ಮೂಲ ವ್ಯಕಿಯಾಗಿ ಹಾಗೂ ೩೦೦ಕ್ಕೂ ಅಧಿಕ ಎನ್.ಎಸ್.ಎಸ್ ಶಿಬಿರದಲ್ಲಿ ಉಪನ್ಯಾಸಕರಾಗಿಯೂ ಜನಪ್ರಿಯರಾಗಿದ್ದಾರೆ.

ವಿದ್ಯಾರ್ಥಿ ದೆಸೆಯಲ್ಲಿಯೇ ಮೂಡಬಿದ್ರಿಯ ದವಳಾ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ, ತದನಂತರ ವೃತ್ತಿ ಬದುಕಿನಲ್ಲಿ ಕಾರ್ಕಳ-ನಾರಾವಿ ದೇವಾಡಿಗ ಸಂಘದ ಕಾರ್ಯದರ್ಶಿಯಾಗಿ, ಕಾರ್ಕಳದ ಜೆ.ಸಿ.ಐನ ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿಯೂ ಸೇವೆಸಲ್ಲಿಸಿದ ಹೆಗ್ಗಳಿಕೆ ಇವರದ್ದು.

ವೃತ್ತಿಯಲ್ಲಿ ಉಪನ್ಯಾಸಕನಾಗಿದ್ದರೂ, ಪ್ರವೃತ್ತಿಯಲ್ಲಿ ರಂಗಭೂಮಿ ಕ್ಷೇತ್ರದಲ್ಲಿ 300ಕ್ಕೂ ಅಧಿಕ ನಾಟಕಗಳಲ್ಲಿ ಕಲಾವಿದರಾಗಿಯೂ ಜೊತೆಗೆ 8ತುಳು ನಾಟಕಗಳನ್ನು ಬರೆದು ಕಲಾರಸಿಕರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ವಿದ್ಯಾನಗರದ ಮಣಿಪಾಲ್ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯನಿರತ ದಿನಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಶಿಕ್ಷಣಾರ್ಥಿಗಳ ಭೇಟಿಗೆ ಲಭ್ಯವಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಕಾಪು:ನೂತನ ಮಾರಿಗುಡಿಯ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಕಂಗನಾ ರಣಾವತ್ ಭಾಗಿ

0

ಉಡುಪಿ:ಜಿಲ್ಲೆಯ ಕಾಪು ನೂತನ ಮಾರಿಗುಡಿಯ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಭಾಗಿಯಾಗಿದ್ದಾರೆ.

ಮಂಡಿ ಕ್ಷೇತ್ರದ ಬಿಜೆಪಿ ಸಂಸದೆಯಾಗಿ ಆಯ್ಕೆಯಾಗಿರುವ ಕಂಗನಾ ರಣಾವತ್, ಕಾಪು ಹೊಸ ಮಾರಿಗುಡಿಗೆ ಬಂದು ದೇವರ ದರ್ಶನಗೈದು ಪ್ರಸಾದ ಸ್ವೀಕರಿಸಿದರು.

ಆರ್‌ಎಸ್‌ಎಸ್ ಮುಖಂಡ ಬಿ.ಎಲ್ ಸಂತೋಷ್ ಕ್ಷೇತ್ರಕ್ಕೆ ಭೇಟಿಕೊಟ್ಟು ದೇವರ ದರ್ಶನ ಮಾಡಿದರು. ಈ ಸಂದರ್ಭದಲ್ಲಿ ಧಾರ್ಮಿಕ ಸಭೆಯಲ್ಲಿ ಭಾಗಿಯಾದರು.

A1ಸೂಪರ್ ಮಾರ್ಟ್ ನಲ್ಲಿ ಸಮ್ಮರ್ ಸ್ಪೆಷಲ್ ಆಫರ್

0

A1ಸೂಪರ್ ಮಾರ್ಟ್ ನಲ್ಲಿ ಸಮ್ಮರ್ ಸ್ಪೆಷಲ್ ಆಫರ್

ಕಾರ್ಕಳದಲ್ಲಿ ಹರ್ಷ ಕೆಫೆ:99 ವೆರೈಟಿ ದೋಸೆ

0

ಕಾರ್ಕಳದಲ್ಲಿ ಹರ್ಷ ಕೆಫೆ:99 ವೆರೈಟಿ ದೋಸೆ

ಅತ್ಯುತ್ತಮ ವಿನ್ಯಾಸದಿಂದ ಕೂಡಿದ ಗ್ರಾಹಕರನ್ನು ಆಕರ್ಷಿಸುವ ದೋಸಾ 99 ಒಳಗೊಂಡಂತೆ ಇತರ ಎಲ್ಲಾ ಖಾದ್ಯಗಳೊಂದಿಗೆ ಶುದ್ದ ಸಸ್ಯಹಾರಿ ಹರ್ಷ ಕೆಫೆ. ಕಾರ್ಕಳ ಪುಲ್ಕೇರಿ ಬೈಪಾಸ ಕಾರ್ಕಳ ಇನ್ ನಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದೆ.

ಬೆಳೆಯುತ್ತಿರುವ ಕಾರ್ಕಳ ನಗರಕ್ಕೆ ಒಂದು ಕೆಫೆ ಮಾದರಿಯ ಉಪಹಾರ ಮಂದಿರದ ಅಗತ್ಯತೆ ನೆಲೆಯಲ್ಲಿ ಕೆಫೆ ಪ್ರಾರಂಭಿಸಲಾಗಿದೆ