ಉಡುಪಿ:ಜಿಲ್ಲೆಯ ಕಾಪು ನೂತನ ಮಾರಿಗುಡಿಯ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಭಾಗಿಯಾಗಿದ್ದಾರೆ.
ಮಂಡಿ ಕ್ಷೇತ್ರದ ಬಿಜೆಪಿ ಸಂಸದೆಯಾಗಿ ಆಯ್ಕೆಯಾಗಿರುವ ಕಂಗನಾ ರಣಾವತ್, ಕಾಪು ಹೊಸ ಮಾರಿಗುಡಿಗೆ ಬಂದು ದೇವರ ದರ್ಶನಗೈದು ಪ್ರಸಾದ ಸ್ವೀಕರಿಸಿದರು.
ಆರ್‌ಎಸ್‌ಎಸ್ ಮುಖಂಡ ಬಿ.ಎಲ್ ಸಂತೋಷ್ ಕ್ಷೇತ್ರಕ್ಕೆ ಭೇಟಿಕೊಟ್ಟು ದೇವರ ದರ್ಶನ ಮಾಡಿದರು. ಈ ಸಂದರ್ಭದಲ್ಲಿ ಧಾರ್ಮಿಕ ಸಭೆಯಲ್ಲಿ ಭಾಗಿಯಾದರು.