Home Blog Page 81

ಕಾರ್ಕಳ:ಡಿ. ಆ‌ರ್. ರಾಜು ನಿಧನ

0

ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ, ಕಾಂಗ್ರೆಸ್‌ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಹಾಗೂ ಉದ್ಯಮಿ ಡಿ. ಆ‌ರ್. ರಾಜು ಪೂಜಾರಿ (64) ಹೃದಯಾಘಾತಕ್ಕೆ ಒಳಗಾಗಿ ನಿನ್ನೆ (ನ.18) ರಾತ್ರಿ ನಿಧನರಾಗಿದ್ದಾರೆ.

ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನಲ್ಲೆಯಲ್ಲಿ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆ ತಲುಪುವ ವೇಳೆಗಾಗಲೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರೆನ್ನಲಾಗಿದೆ.

ರಾಜಕೀಯ ಕ್ಷೇತ್ರ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ನಿನ್ನೆ ಬೆಳಿಗ್ಗೆಯಿಂದಲೇ ಅವರು ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅವರ ನಿಧನಕ್ಕೆ ಎಂ.ಎಲ್.ಸಿ ಮಂಜುನಾಥ್ ಭಂಡಾರಿ,ಮಾಜಿ ಸಚಿವ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್,ಮುನಿಯಾಲು ಉದಯ್ ಕುಮಾರ್ ಶೆಟ್ಟಿ ರಾಜ್ಯ ಕ್ರಷರ್ಸ್ ಅಸೋಸಿಯೇಷನ್ಸ್ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಸೇರಿದಂತೆ ಹಲವು ಗಣ್ಯರು ಸಂತಾಪ ಸಲ್ಲಿಸಿದ್ದಾರೆ.

ಡಿ.ಆರ್ ರಾಜು ಅವರ ಅಂತಿಮ ಕ್ರಿಯೆಯು ಇಂದು ಬೆಳಿಗ್ಗೆ 11.30 ಗಂಟೆಗೆ ಅವರ ಸ್ವಗೃಹದಲ್ಲಿ ನಡೆಯಲಿದೆ.

ಸಿಡಿಲು ಬಡಿದು ಬಾಲಕ ಸಾವು

0

ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ಭಾನುವಾರ ಸಂಜೆ ಕೆದಿಲ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ಇಲ್ಲಿನ ಮುರಿಯಾಜೆ ನಿವಾಸಿ ಚಂದ್ರಹಾಸ ಎಂಬವರ ಪುತ್ರ ಸುಭೋದ್(14) ಎಂದು ಗುರುತಿಸಲಾಗಿದೆ.

ಇಂದು ಸಂಜೆ 5.30ರ ಸುಮಾರಿಗೆ ಮನೆಯ ಸಿಟೌಟ್ ನಲ್ಲಿ ಕುಳಿತ್ತಿದ್ದ ವೇಳೆ ಸಿಡಿಲು ಬಡಿದಿದ್ದು, ತೀವ್ರ ಅಸ್ವಸ್ಥಗೊಂಡಿದ್ದ. ತಕ್ಷಣ ಮನೆಮಂದಿ ಮಾಣಿಯ ಕ್ಲಿನಿಕ್ ವೊಂದಕ್ಕೆ ಕರೆತಂದಿದ್ದು, ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಅದರಂತೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆ ವೇಳೆಗಾಗಲೆ ಬಾಲಕ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

ಬಳಿಕ ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮಾಡಲು ಕಳುಹಿಸಲಾಗಿದೆ. ಶುಭೋದ್ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ 8 ತರಗತಿ ವಿದ್ಯಾರ್ಥಿಯಾಗಿದ್ದ. ಮುಂದಿನ ಪರಿಹಾರ ಕ್ರಮಕ್ಕೆ ತಹಶೀಲ್ದಾರ್ ಅರ್ಚನಾ ಭಟ್ ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮಿಯ್ಯಾರು:ಅಂಗನವಾಡಿ ಶಿಕ್ಷಕಿ ಆತ್ಮಹತ್ಯೆ

0

ಕಳೆದ ತಿಂಗಳ ಹಿಂದೆ ಗಂಡ ತೀರಿಕೊಂಡ ಬಳಿಕ ಮಾನಸಿಕವಾಗಿ ಕೊರಗುತ್ತಿದ್ದಂತ ಅಂಗನವಾಡಿ ಟೀಚರ್ ಮನೆ ಸಮೀಪದ ಬಾವಿಗೆಹಾರಿ ಆತ್ಮಹತ್ಯೆಗೈದ ಘಟನೆ ಮಿಯ್ಯಾರು ಕುಂಟಿಬೈಲ್ ಮಂಜಡ್ಕ ಎಂಬಲ್ಲಿ ನಡೆದಿದೆ.ಸೌಮ್ಯ(39) ಎಂಬವರು ಆತ್ಮಹತ್ಯೆಗೆ ಶರಣಾದವರು.

ಮಿಯ್ಯಾರು ಚರ್ಚ್ ಬಳಿಯ ಅಂಗನವಾಡಿಯಲ್ಲಿ ಟೀಚರ್ ಆಗಿ ಕಳೆದ 15 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದ ಇವರ ಪತಿ ಒಂದು ತಿಂಗಳ ಹಿಂದೆ ಮೃತಪಟ್ಟಿದ್ದರು. ಇದರಿಂದ ನೊಂದಿದ್ದ ಸೌಮ್ಯ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿಟ್ಟೆ:ರಾಜ್ಯಮಟ್ಟದ ಅಂತರಕಾಲೇಜು ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಿಟ್ಟೆ ವಿದ್ಯಾರ್ಥಿಗಳ ಸಾಧನೆ

0

ರಾಜ್ಯಮಟ್ಟದ ಅಂತರಕಾಲೇಜು ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಿಟ್ಟೆ ವಿದ್ಯಾರ್ಥಿಗಳ ಸಾಧನೆ

ನಿಟ್ಟೆ: ಮೂಡಬಿದಿರೆಯ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನ.12ರಂದು ನಡೆದ 2024ರ ವಿಟಿಯು ರಾಜ್ಯಮಟ್ಟದ ಅಂತರ ಕಾಲೇಜು ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಿಟ್ಟೆ ಪುರುಷರ ತಂಡ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

67 ಕೆಜಿ ವಿಭಾಗದಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ನ 7ನೇ ಸೆಮಿಸ್ಟರ್ ನ ಬಿ.ಸೂರಜ್ ಭಂಡಾರಿ ದ್ವಿತೀಯ ಸ್ಥಾನ,7ನೇ ಸೆಮಿಸ್ಟರ್ ಮಾಹಿತಿ ವಿಜ್ಞಾನದ ರೋಹನ್ ಕುಮಾರ್ 89 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ,7ನೇ ಸೆಮಿಸ್ಟರ್ ಸಿವಿಲ್ ಇಂಜಿನಿಯರಿಂಗ್ ನ ಅಜಯ್ ಶೆಟ್ಟಿ 102 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ,7ನೇ ಸೆಮಿಸ್ಟರ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ನ ಸಮರ್ಜೀತ್ ಅಮೀನ್ +109 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ತಂಡವು ಒಟ್ಟಾರೆ ಚಾಂಪಿಯನ್ ಶಿಪ್ ನಲ್ಲಿ 14 ಅಂಕಗಳೊಂದಿಗೆ 1ನೇ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಈ ಮಕ್ಕಳ ದಿನಾಚರಣೆದಂದು ನಿಮ್ಮ ಮಕ್ಕಳ ಭವಿಷ್ಯಕ್ಕೆ ಚಿನ್ನದ ಹೂಡಿಕೆ ಮಾಡಿ! ಸ್ವರ್ಣ ಪ್ರಕಾಶ್ ಜುವೆಲ್ಲರ್ಸ್ ಪರಿಚಯಿಸುತ್ತಿದೆ ವಿಶೇಷ ಚಿನ್ನದ ಖರೀದಿ ಯೋಜನೆ

0

ಈ ಮಕ್ಕಳ ದಿನಾಚರಣೆದಂದು ನಿಮ್ಮ ಮಕ್ಕಳ ಭವಿಷ್ಯಕ್ಕೆ ಚಿನ್ನದ ಹೂಡಿಕೆ ಮಾಡಿ!

ಚಿನ್ನದ ಬೆಲೆ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ, ಚಿನ್ನದ ಖರೀದಿ ಹಲವರಿಗೆ ಕಷ್ಟಕರವಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ, ಸ್ವರ್ಣ ಪ್ರಕಾಶ್ ಜುವೆಲ್ಲರ್ಸ್ ನಿಮಗೆ ವಿಶೇಷ ಚಿನ್ನದ ಖರೀದಿ ಯೋಜನೆಯನ್ನು ಪರಿಚಯಿಸುತ್ತಿದೆ.

ಯೋಜನೆಯ ವಿವರಗಳು:

ಹೂಡಿಕೆ ಅವಧಿ: 11 ತಿಂಗಳು
ತಿಂಗಳ ಸಂಭಾವನೆ: ರೂ. 500
ಬೋನಸ್: 2 ತಿಂಗಳ ಸಂಭಾವನೆಗೆ ಸಮ
ಖರೀದಿ ಆಯ್ಕೆ: ಚಿನ್ನದ ಆಭರಣ ಅಥವಾ ಚಿನ್ನದ ನಾಣ್ಯ
ಈ ಯೋಜನೆಯ ಮೂಲಕ, ನೀವು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಸುರಕ್ಷಿತ ಹೂಡಿಕೆ ಮಾಡಬಹುದು. ಚಿನ್ನವು ಸದಾಕಾಲ ಮೌಲ್ಯವನ್ನು ಹೊಂದಿರುವ ಆಸ್ತಿಯಾಗಿದೆ.

ಹೂಡಿಕೆಯ ಪ್ರಯೋಜನಗಳು:

ಸುಲಭವಾದ ಹಣಕಾಸು ಯೋಜನೆ: ತಿಂಗಳಿಗೆ ಕೇವಲ ರೂ. 500
ಉತ್ತಮ ವಾರ್ಷಿಕ ಇಳುವರಿ: 18.18% ವರೆಗೆ
ಭವಿಷ್ಯಕ್ಕಾಗಿ ಸುರಕ್ಷಿತ ಹೂಡಿಕೆ: ಚಿನ್ನದ ಮೌಲ್ಯವು ಸದಾಕಾಲ ಏರುತ್ತಿರುತ್ತದೆ
ಮಕ್ಕಳಿಗೆ ಹಣಕಾಸಿನ ಶಿಕ್ಷಣ: ಹಣಕಾಸಿನ ಜವಾಬ್ದಾರಿಯನ್ನು ಕಲಿಯುವ ಅವಕಾಶ
ಈ ಬಾಲ ದಿನದಂದು ನಿಮ್ಮ ಮಕ್ಕಳ ಭವಿಷ್ಯಕ್ಕೆ ಹೂಡಿಕೆ ಮಾಡಿ. ಇಂದೇ ನೋಂದಾಯಿಸಿ!

ಸ್ವರ್ಣ ಪ್ರಕಾಶ್ ಜ್ಯುವೆಲರ್ಸ್
‘A1 ಸೂಪರ್ ಮಾರ್ಕೆಟ್’ ಎದುರು
ಜೋಡುರಸ್ತೆ,
ಕಾರ್ಕಳ
7204429777 ಗೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ

ಗಿರಿಜಾ ಸರ್ಜಿಕಲ್ಸ್ ಐದನೇ ಶೋರೂಂ ಮಣಿಪಾಲದಲ್ಲಿ ಉದ್ಘಾಟನೆ

0

ಗಿರಿಜಾ ಸರ್ಜಿಕಲ್ಸ್ ಐದನೇ ಶೋರೂಂ ನವೆಂಬರ್ 10 ರ ಭಾನುವಾರದಂದು ಮಣಿಪಾಲದಲ್ಲಿ ಅದ್ದೂರಿಯಾಗಿ ಉದ್ಘಾಟನೆಗೊಂಡಿತು.

ಕೆಎಂಸಿ ಆಸ್ಪತ್ರೆ ಎದುರಿನ ಮಣಿಪಾಲ ವಾಣಿಜ್ಯ ಸಂಕೀರ್ಣದ ನೆಲ ಮಹಡಿಯಲ್ಲಿರುವ ನೂತನ ಶೋರೂಂ ಅನ್ನು ಮಣಿಪಾಲದ ಡಾ ಟಿ.ಎಂ.ಎ.ಪೈ ಫೌಂಡೇಶನ್ ಅಧ್ಯಕ್ಷ ಟಿ. ಅಶೋಕ್ ಪೈ ಅವರು ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ,ಉಜ್ವಲ್ ಡೆವಲಪರ್ಸ್‌ನ ಪುರುಷೋತ್ತಮ ಶೆಟ್ಟಿ,ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ,ಸರಳಬೆಟ್ಟು ವಾರ್ಡ್ ನ ನಗರ ಸಭಾ ಸದಸ್ಯೆ ವಿಜಯಲಕ್ಷ್ಮಿ,ಉಡುಪಿ ಜಿಲ್ಲಾ ಕೆಮಿಸ್ಟ್ ಆಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ನ ಅಧ್ಯಕ್ಷರಾದ ಅಮ್ಮುಂಜೆ ರಮೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಟಿ ಅಶೋಕ್ ಪೈ ಅವರು ಗಿರಿಜಾ ಸರ್ಜಿಕಲ್ಸ್ ಈಗ ಒದಗಿಸುತ್ತಿರುವ ಶಸ್ತ್ರಚಿಕಿತ್ಸಾ ಉಪಕರಣಗಳಿಗೆ ಸೇಲ್ಸ್ ನಲ್ಲಿ ಮಾಡಿದ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಗ್ರಾಹಕರು ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಬಾಡಿಗೆಗೆ ಪಡೆಯಲು ಹೆಣಗಾಡುತ್ತಾರೆ.ನಾನು ಒಮ್ಮೆ ಬೆಂಗಳೂರಿನಿಂದ ಅಂತಹ ಉಪಕರಣಗಳನ್ನು ಖರೀದಿಸಬೇಕಾಗಿತ್ತು, ಆದರೆ ಈಗ ಅದು ಇಲ್ಲಿಯೇ ಮಣಿಪಾಲದಲ್ಲಿ ಲಭ್ಯವಿದೆ, ಇದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದು ಪೈ ಹೇಳಿದರು.ಅಲ್ಲದೆ ಉಪಕರಣಗಳು ಬಾಡಿಗೆಗೆ ಕೂಡಾ ಸಿಗುತ್ತಿರುವುದು ಜನ ಸಮ್ಸನ್ಯರಿಗೆ ಉತ್ತಮ ಸಹಕಾರಿ ಎಂದು ಹೇಳಿದರು.

ಸುಧಾರಿತ ವೈದ್ಯಕೀಯ ಉಪಕರಣಗಳು ರೋಗಿಗಳ ಆರೈಕೆಯನ್ನು ಹೇಗೆ ಸರಾಗಗೊಳಿಸುತ್ತಿವೆ ಎಂಬುದರ ಕುರಿತು ಅವರು ಮಾತನಾಡಿದರು.”ಪಾಶ್ಚಿಮಾತ್ಯ ಪ್ರಪಂಚದ ಅನೇಕ ಭಾಗಗಳಲ್ಲಿ, ರೋಗಿಗಳನ್ನು ಚಿಕಿತ್ಸೆಯ ನಂತರ ಶೀಘ್ರದಲ್ಲೇ ಮನೆಗೆ ಬಿಡುಗಡೆ ಮಾಡಲಾಗುತ್ತದೆ, ಸುಧಾರಿತ ಮೋಟಾರು ಉಪಕರಣಗಳ ಮೂಲಕ ಕಾಳಜಿಯನ್ನು ಮುಂದುವರಿಸಲಾಗುತ್ತದೆ. ಈ ಮಾದರಿಯನ್ನು ಇಲ್ಲಿಯೂ ಅಳವಡಿಸಿಕೊಳ್ಳುವುದನ್ನು ನೋಡುವುದು ಉತ್ತೇಜನಕಾರಿಯಾಗಿದೆ, ”ಎಂದು ಅವರು ಹೇಳಿದರು.

ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅವರು ಮಣಿಪಾಲದಲ್ಲಿ ಗಿರಿಜಾ ಸರ್ಜಿಕಲ್ಸ್ ಅಗತ್ಯವನ್ನು ಪೂರೈಸಿದಕ್ಕಾಗಿ ಅಭಿನಂದಿಸಿದ್ದಾರೆ. ಈ ಪ್ರದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಸೌಲಭ್ಯ ಅಗತ್ಯವಾಗಿದ್ದು, ಭವಿಷ್ಯದಲ್ಲಿ ಗಿರಿಜಾ ಸರ್ಜಿಕಲ್ಸ್ ಉತ್ತಮ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ ಎಂದರು.

ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ ಮಾತನಾಡಿ, ”ಆರೋಗ್ಯದ ಮಹತ್ವ ಮತ್ತು ಅದನ್ನು ಕಾಪಾಡುವಲ್ಲಿ ಆರೋಗ್ಯ ಉತ್ಪನ್ನಗಳು ವಹಿಸುವ ಪಾತ್ರವಿದೆ.ಗಿರಿಜಾ ಸರ್ಜಿಕಲ್ಸ್ ನಮ್ಮ ಜಿಲ್ಲೆಯಲ್ಲಿ ಚಿರಪರಿಚಿತ ಹೆಸರು. ಆರೋಗ್ಯವು ಜೀವನದ ಅಡಿಪಾಯವಾಗಿದೆ, ಮತ್ತು ವೈದ್ಯರ ಆರೈಕೆಯ ಜೊತೆಗೆ ಆರೋಗ್ಯವರ್ಧಕ ಉತ್ಪನ್ನಗಳು ಆರೋಗ್ಯಕರ ಜೀವನವನ್ನು ಖಚಿತಪಡಿಸಿಕೊಳ್ಳಲು ಅವಶ್ಯಕವಾಗಿದೆ” ಎಂದು ಅವರು ಟೀಕಿಸಿದರು.

ಉಡುಪಿ ಜಿಲ್ಲಾ ಕೆಮಿಸ್ಟ್ಸ್ ಮತ್ತು ಡ್ರಗ್ಗಿಸ್ಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಅಮ್ಮುಂಜೆ ರಮೇಶ್ ನಾಯಕ್, ಗಿರಿಜಾ ಸರ್ಜಿಕಲ್ಸ್ ಗ್ರಾಹಕರೊಂದಿಗೆ ವೈಯಕ್ತಿಕ ವಿಧಾನವನ್ನು ಶ್ಲಾಘಿಸಿದರು.

ಗಿರಿಜಾ ಸರ್ಜಿಕಲ್ಸ್ ನ ಮಾಲಕರಾದ ರವೀಂದ್ರ ಕೆ.ಶೆಟ್ಟಿ ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ರಾಘವೇಂದ್ರ ಪ್ರಭು ಕರ್ವಾಲ್ ಸಂಯೋಜಿಸಿದರು ಮತ್ತು ಸುರೇಖಾ ಶೆಟ್ಟಿ, ಹರೀಶ್ ಕುಮಾರ್ ಮತ್ತು ಗಿರಿಜಾ ಗ್ರೂಪ್ಸ್ ಆಫ್ ಕನ್ಸರ್ನ್ಸ್‌ನ ಇತರ ಪಾಲುದಾರರು ಭಾಗವಹಿಸಿದ್ದರು.

 

ಕಾರ್ಕಳ:ಗ್ರಾಮ ಪಂಚಾಯತ್ ಉಪಚುನಾವಣೆ; ನಿಷೇಧಾಜ್ಞೆ ಜಾರಿ

0

ಗ್ರಾಮ ಪಂಚಾಯತ್‌ಗಳ ಸಾರ್ವತ್ರಿಕ ಉಪ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ಸದಸ್ಯರ ರಾಜೀನಾಮೆ, ನಿಧನ ಮುಂತಾದ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮೂಲಕ ಭರ್ತಿ ಮಾಡಲು ಕುಂದಾಪುರ ತಾಲೂಕಿನ ಅಮಾಸೆಬೈಲು, ಬ್ರಹ್ಮಾವರ ತಾಲೂಕಿನ ಕೋಟ, ಉಡುಪಿ ತಾಲೂಕಿನ ಬೊಮ್ಮಾರಬೆಟ್ಟು ಹಾಗೂ ಕೊಡಿಬೆಟ್ಟು ಹಾಗೂ ಕಾರ್ಕಳ ತಾಲೂಕಿನ ಈದು, ನಲ್ಲೂರು, ನಿಟ್ಟೆ, ನೀರೆ, 5-ಕೆರ್ವಾಶೆ ಹಾಗೂ ಕಡ್ತಲ ಗ್ರಾಮ ಪಂಚಾಯತಿಗಳ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ನಿಗಧಿಪಡಿಸಿ, ನವೆಂಬರ್ 23 ರಂದು ಮತದಾನ ನಡೆಸಲು ರಾಜ್ಯ ಚುನಾವಣಾ ಆಯೋಗವು ಆದೇಶಿಸಿರುತ್ತದೆ.

ಈ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಮುಕ್ತ ಮತ್ತು ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ನವೆಂಬರ್ 21 ರ ಸಂಜೆ 5 ರಿಂದ ನವೆಂಬರ್ 23 ರಂದು ಮತದಾನ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಈ ಮೇಲ್ಕಂಡ ಗ್ರಾಮ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಪ್ರದೇಶಗಳಲ್ಲಿನ ಮತದಾನ ಕೇಂದ್ರಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.

ಈ ಸಂದರ್ಭದಲ್ಲಿ ಮತಗಟ್ಟೆ ವ್ಯಾಪ್ತಿಯಲ್ಲಿ 05 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ಹಾಗೂ ಚುನಾವಣಾ ಅಭ್ಯರ್ಥಿ/ಬೆಂಬಲಿಗರು ಸೇರಿ 05 ಜನರಿಗಿಂತ ಹೆಚ್ಚಿನ ಸಂಖ್ಯೆಯ ಜನರು ಸೇರುವುದನ್ನು ನಿಷೇಧಿಸಲಾಗಿರುತ್ತದೆ.

ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ದೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ಅವುಗಳೊಂದಿಗೆ ತಿರುಗಾಡುವುದನ್ನು ಪ್ರತಿಬಂಧಿಸಲಾಗಿರುತ್ತದೆ ಹಾಗೂ ಈ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಝೆರಾಕ್ಸ್ ಅಂಗಡಿ, ಬುಕ್‌ಸ್ಟಾಲ್, ಸೈಬರ್ ಕೆಫೆಗಳನ್ನು ನಿರ್ಬಂಧಿಸಲಾಗಿರುತ್ತದೆ.

ಮತದಾನ ದಿನದಂದು ಮತಗಟ್ಟೆಗಳ 200 ಮೀಟರ್ ಒಳಗೆ ಚುನಾವಣಾ ಪ್ರಚಾರ ಮಾಡುವುದನ್ನು ಹಾಗೂ ಕಲ್ಲುಗಳನ್ನು, ಕ್ಷಾರ ಪದಾರ್ಥ ಇಲ್ಲವೆ ಸ್ಫೋಟಕ ವಸ್ತುಗಳು, ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿರುತ್ತದೆ.

ಕಲ್ಲುಗಳನ್ನು ಮತ್ತು ಎಸೆಯುವಂತಹ ವಸ್ತುಗಳನ್ನು ಎಸೆಯುವ ಅಥವಾ ಬಿಡುವ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದ್ದು, ಮನುಷ್ಯ ಶವಗಳ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳ ಪ್ರದರ್ಶನ/ದಹನ ಮಾಡುವುದನ್ನು ಪ್ರತಿಬಂಧಿಸಲಾಗಿದೆ ಹಾಗೂ ಈ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಇರುವುದಿಲ್ಲ.

ಸದರಿ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಆಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿರುತ್ತದೆ.

ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿರುತ್ತದೆ.

ಯಾವುದೇ ವ್ಯಕ್ತಿ ಬಹಿರಂಗವಾಗಿ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಫೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿರುವುದು ಕಂಡುಬಂದಲ್ಲಿ ಕೂಡಲೇ ಅವುಗಳನ್ನು ವಶವಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಅಂಥಹ ಮಾರಕಾಸ್ತ್ರಗಳನ್ನು ಸರಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು. ಅಲ್ಲದೇ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.

ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ಆಜ್ಞೆ ಅನ್ವಯಿಸುದಿಲ್ಲ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳಲ್ಲಿ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ಕ್ರಮ ವಹಿಸಬೇಕು.

ಮೇಲ್ಕಂಡ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಸಭೆಗಳನ್ನು ಕೈಗೊಳ್ಳುವಂತಿಲ್ಲ ಹಾಗೂ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ಮುಖಂಡರುಗಳು ಕಡ್ಡಾಯವಾಗಿ ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಹೋಗಬೇಕು.

ಮತದಾನದ ದಿನದಂದು ಮತಗಟ್ಟೆಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಫೋನ್, ಕಾರ್ಡ್ಲೆಸ್ ಫೋನ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿರುತ್ತದೆ (ಚುನಾವಣಾ ಕಾರ್ಯದಲ್ಲಿ ನಿರತರಾದ ಅಧಿಕಾರಿಗಳು/ ಸಿಬ್ಬಂದಿ ಹೊರತುಪಡಿಸಿ). ಮತದಾನ ದಿನದಂದು ಮತಗಟ್ಟೆಗಳ ಸುತ್ತ 200 ಮೀಟರ್ ಪರಿಮಿತಿಯಲ್ಲಿ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟರ್/ಬ್ಯಾನರ್ ಅಥವಾ ಇನ್ನಾವುದೇ ವಸ್ತುಗಳನ್ನು ಬಳಸುವಂತಿಲ್ಲ.

ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ಹೋಟೆಲ್‌ಗಳು ಮತ್ತು ಅತಿಥಿ ಗೃಹಗಳಲ್ಲಿ ವಾಸ್ತವ್ಯ ಮಾಡಿರುವವರ ಪಟ್ಟಿಗಳ ಪರಿಶೀಲನೆ ಮಾಡಿ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ವ್ಯಕ್ತಿಗಳನ್ನು ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಕಳುಹಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಪಳ್ಳಿ – ನಿಂಜೂರು ಗ್ರಾಮಸ್ಥರಿಗೆ ಸಂತಸದ ಕ್ಷಣ-ದಿನಕರ ಶೆಟ್ಟಿ

0

ಪಳ್ಳಿ – ನಿಂಜೂರು ಗ್ರಾಮಸ್ಥರಿಗೆ ಸಂತಸದ ಕ್ಷಣ.

ನಮ್ಮ ಊರಿಗೆ ಸರಕಾರಿ ಬಸ್ಸು ಬಂದಿದೆ. ಹಲವಾರು ವರ್ಷದ ಕನಸು ನನಸಾಗಿದೆ. ಎಲ್ಲರಿಗು ಸಂತಸದ ಸುದ್ಧಿ ಅದರಲ್ಲೂ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಎಲ್ಲಿಲ್ಲದ ಖುಷಿ. ಯಾಕೆಂದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯಲ್ಲಿ ಒಂದಾದ ಶಕ್ತಿ ಯೋಜನೆಯ ಸರಕಾರಿ ಬಸ್ಸುಗಳಲ್ಲಿ ಉಚಿತ ಬಸ್ಸು ಪ್ರಯಾಣ ಸೌಲಭ್ಯ ಸಿಕ್ಕಿದಂತಾಗುತ್ತದೆ. ನಾಳೆ ಬೆಳಿಗ್ಗೆ 10 ಗಂಟೆಗೆ ಪಳ್ಳಿ- ನಿಂಜೂರು ಗ್ರಾಮಸ್ಥರು ಎಲ್ಲರು ಸೇರಿ ಪಳ್ಳಿ ಜೋಡುರಸ್ತೆಯಲ್ಲಿ ಸರಕಾರಿ ಬಸ್ಸು ಗೆ ಅರ್ಚಕರ ಮೂಲಕ ಪೂಜೆ ಮಾಡಿಸಿ ಸ್ವಾಗತಿಸಲಿದ್ದಾರೆ.

ಈ ಬಸ್ಸು ಬರಲು ಕಾರಣಕರ್ತರಾದ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಂಸದರಾದ ಜಯ ಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಹಾಗು ಕಾರ್ಕಳ ಕಾಂಗ್ರೆಸ್ ನಾಯಕರಾದ ಶ್ರೀ ಉದಯ ಶೆಟ್ಟಿ ಮುನಿಯಾಲು ಅವರಿಗೆ ಪಳ್ಳಿ – ನಿಂಜೂರು ಗ್ರಾಮಸ್ಥರ ಪರವಾಗಿ ತುಂಬು ಹೃದಯದ ಧನ್ಯವಾದಗಳು.

ಈ ಶುಭ ಕಾರ್ಯಕ್ರಮಕ್ಕೆ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು ಹಾಗು ಕಾರ್ಕಳ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾದ ಶುಭದ ರಾವ್ ಮತ್ತು ಇನ್ನಿತರ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.ಪಳ್ಳಿ – ನಿಂಜೂರು ಹೆಚ್ಚಿನ ಗ್ರಾಮಸ್ಥರು ಸಮಯವಕಾಶ ಮಾಡಿಕೊಂಡು ಬಂದು ಈ ಶುಭ ಸಂದರ್ಭದಲ್ಲಿ ಬಾಗವಹಿಸಬೇಕಾಗಿ ವಿನಯ ಪೂರ್ವಕವಾಗಿ ವಿನಂತಿಸುತ್ತೇನೆ.

ದಿನಕರ ಶೆಟ್ಟಿ
ಪಳ್ಳಿ – ನಿಂಜೂರು

‘ಬೈಲೂರು-ಪಳ್ಳಿ ಸರಕಾರಿ ಬಸ್ ಕಾಂಗ್ರೆಸ್ ಸರಕಾರದ ಕೊಡುಗೆ’ ರಾಜ್ಯ ಸರಕಾರಕ್ಕೆ ಧನ್ಯವಾದ ಸಲ್ಲಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್

0

‘ಬೈಲೂರು-ಪಳ್ಳಿ ಸರಕಾರಿ ಬಸ್ ಕಾಂಗ್ರೆಸ್ ಸರಕಾರದ ಕೊಡುಗೆ’
ರಾಜ್ಯ ಸರಕಾರಕ್ಕೆ ಧನ್ಯವಾದ ಸಲ್ಲಿಸಿದ ಶುಭದ ರಾವ್

ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಕಾರ್ಕಳದ ಶಾಸಕ ವಿ.ಸುನೀಲ್ ಕುಮಾರ್ ರಾಜ್ಯ ಸರಕಾರದಲ್ಲಿ ಪ್ರಮುಖ ಖಾತೆ ಹೊಂದಿದ್ದರು ಆದರೂ ಸರಕಾರಿ ಬಸ್ಸ್ ಬಿಡಲು ಅವರಿಂದ ಸಾದ್ಯವಾಗಲಿಲ್ಲ.

ಈಗ ಕಾಂಗ್ರೆಸ್ ಸರಕಾರ ನೀಡಿದ ಭರವಸೆಗಳು ಅನುಷ್ಠಾನಗೊಂಡು ಜನರ ಆಶೋತ್ತರಗಳು ಈಡೇರಿಕೆಯಾಗಿದೆ. ಉಚಿತ ಯೋಜನೆಗಳ ಕುರಿತು ಬಿಜೆಪಿಗರಿಂದಲೇ ಟೀಕೆ ಬಂತು.ಆದರೂ ಎದೆಗುಂದಲಿಲ್ಲ.ಉಚಿತ ಯೋಜನೆಯ ಫಲವಾಗಿ ಬೈಲೂರು-ಪಳ್ಳಿ ಮಾರ್ಗವಾಗಿ ಕೆಎಸ್ಆರ್ ಟಿಸಿ.ಸರ್ಕಾರೀ ಬಸ್ ಓಡಾಡುತ್ತಿದೆ.

ನುಡಿದಂತೆ ನಡೆಯುವ ಸರಕಾರ ಇದ್ದರೆ ಅದು ಕಾಂಗ್ರೆಸ್ ಸರಕಾರ ಎಂಬುವುದನ್ನು ಕಾರ್ಕಳ ಜನತೆ ಅರಿತುಕೊಂಡಿದ್ದಾರೆ. ಸರಕಾರಿ ಬಸ್ಸ್ ಕೊಡುಗೆ ನೀಡಿದ ಕರ್ನಾಟಕ ಸರಕಾರಕ್ಕೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಧನ್ಯವಾದ ಸಲ್ಲಿಸಿದ್ದಾರೆ.

.

0

.