Home Blog Page 87

ಜೋಡುರಸ್ತೆ A1ಸೂಪರ್ ಮಾರ್ಟ್ ನಲ್ಲಿ ನವರಾತ್ರಿ-ದೀಪಾವಳಿ ಆಫರ್ ಲಕ್ಕಿ ಕೂಪನ್ ಮೂಲಕ ವಾಷಿಂಗ್ ಮೆಷಿನ್ ಜತೆಗೆ ಹಲವು ಬಹುಮಾನ ಗೆಲ್ಲುವ ಸುವರ್ಣಾವಕಾಶ.

0

A-1ಸೂಪರ್ ಮಾರ್ಟ್ ಜೋಡುರಸ್ತೆ ಯಲ್ಲಿ ನವರಾತ್ರಿ-ದೀಪಾವಳಿ ಆಫರ್.

ಲಕ್ಕಿ ಕೂಪನ್ ಮೂಲಕ ವಾಷಿಂಗ್ ಮೆಷಿನ್ ಜತೆಗೆ ಹಲವು ಬಹುಮಾನ ಗೆಲ್ಲುವ ಸುವರ್ಣಾವಕಾಶ.
ಗ್ರಾಹಕರು 1000 ರೂ. ಮೇಲ್ಪಟ್ಟು ಜೊತೆಗೆ ಏರಿಯಲ್ ಲಿಕ್ವಿಡ್ ಡಿಟರ್ಜೆಂಟ್ ಖರೀದಿಸಿದರೆ ವಾಷಿಂಗ್ ಮೆಷಿನ್ ಸೇರಿದಂತೆ ಹಲವು ಬಹುಮಾನ ಗೆಲ್ಲುವ ಸುವರ್ಣಾವಕಾಶ.

A1 ಸೂಪರ್ ಮಾರ್ಟ್ ಜೋಡುರಸ್ತೆಯಲ್ಲಿ ದಸರಾ ದೀಪಾವಳಿ ಆಫರ್ ಜೊತೆಗೆ “ಬಿಗ್ ವಿನ್“ಆಫರ್

ಕಾರ್ಕಳ ಜೋಡುರಸ್ತೆಯಲ್ಲಿರುವ A1 ಸೂಪರ್ ಮಾರ್ಟ್ ನಲ್ಲಿ ದಸರಾ ದೀಪಾವಳಿ ಹಾಗು ಬಿಗ್ ವಿನ್ ಆಫರ್ ನಡೆಯುತ್ತಿದೆ.ಮನೆಗೆ ಬೇಕಾಗಿರುವ ಎಲ್ಲಾ ಗೃಹೋಪಯೋಗಿ ವಸ್ತುಗಳ ಮೇಲೆ ಬಂಪರ್ ಆಫರ್ ಲಭ್ಯವಿದೆ.

ಒಂದು ಸಾವಿರ ರೂಪಾಯಿ ಮೇಲ್ಪಟ್ಟು ಖರೀದಿ ಜೊತೆಗೆ ಏರಿಯಲ್ ಲಿಕ್ವಿಡ್ ಡಿಟರ್ಜೆಂಟ್ ಕೊಂಡರೆ ಲಕ್ಕಿ ಕೂಪನ್ ಸಿಗಲಿದೆ.ಲಕ್ಕಿ ಕೂಪನ್ ವಿಜೇತರಿಗೆ ವಾಷಿಂಗ್ ಮೆಷೀನ್,ಮಿಕ್ಷರ್ ಗ್ರೈ೦ಡರ್ ಹಾಗು ಸ್ಪಿನ್ ಮಾಪ್ ಬಹುಮಾನವಾಗಿ ಸಿಗಲಿದೆ.

ಜೊತೆಗೆ 1999 ಖರೀದಿ ಮೇಲೆ 1 ಕೆಜಿ ಸಕ್ಕರೆ ₹9/-ಗೆ,
2999 ಖರೀದಿ ಮೇಲೆ 1 ಕೆಜಿ ಗೋಧಿ ಹಿಟ್ಟು ₹19/- ಗೆ ಹಾಗು 3999 ಖರೀದಿ ಮೇಲೆ 1ಲಿ ಸನ್ ಫ್ಲವರ್ ಎಣ್ಣೆ ಕೇವಲ ₹49/- ಗೆ ದೊರೆಯಲಿದೆ.

ನವೆಂಬರ್ 3 ರ ವರೆಗೆ ಈ ಆಫರ್ ನಡೆಯಲ್ಲಿದ್ದು ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-6360078834.

ಸೂಪರ್ ಮಾರ್ಟ್ ನ ಆಫರ್ ನವರಾತ್ರಿ ಹಾಗೂ ದೀಪಾವಳಿ ಆಫರ್ ಈ ರೀತಿ ಇದೆ👇

ಸೂಪರ್ ಮಾರ್ಟ್ ನ ಆಫರ್ ನವರಾತ್ರಿ ಹಾಗೂ ದೀಪಾವಳಿ ಆಫರ್ ಈ ರೀತಿ ಇದೆ👇

 

ಕಾರ್ಕಳ:ಕುಸ್ತಿ ಸ್ಪರ್ಧೆಯಲ್ಲಿ ಕ್ರೈಸ್ಟ್ ಕಿಂಗ್ ನ ಪೂರ್ಣಿಮ ಪ್ರಭು ರಾಜ್ಯಮಟ್ಟಕ್ಕೆ ಆಯ್ಕೆ

0

ಕಾರ್ಕಳ:ಕುಸ್ತಿ ಸ್ಪರ್ಧೆಯಲ್ಲಿ ಕ್ರೈಸ್ಟ್ ಕಿಂಗ್ ನ ಪೂರ್ಣಿಮ ಪ್ರಭು ರಾಜ್ಯಮಟ್ಟಕ್ಕೆ ಆಯ್ಕೆ

ಕಾರ್ಕಳ: ಪದವಿಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಉಡುಪಿ ಜಿಲ್ಲೆ ಹಾಗೂ ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕಿಯರ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ಪೂರ್ಣಿಮಾ ಪ್ರಭು ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಇದೇ ಪಂದ್ಯಾಟದಲ್ಲಿ ಸಂಸ್ಥೆಯ ದ್ವಿತೀಯ ವಿಜ್ಞಾನ ವಿಭಾಗದ ಸುದೀಕ್ಷಾ ಕಾಮತ್ ಹಾಗೂ ಪ್ರಥಮ ವಿಜ್ಞಾನ ವಿಭಾಗದ ದಿಶಾ ಡಿ’ಮೆಲ್ಲೊ ದ್ವಿತೀಯ ಸ್ಥಾನ, ಪ್ರಥಮ ವಾಣಿಜ್ಯ ವಿಭಾಗದ ನೇಹಾ ವಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಅಂತರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಮಿಂಚಿದ ಹಿರ್ಗಾನದ ಅದಿತಿ ಶರ್ಮಾ ಹಾಗೂ ರತಿ ಶರ್ಮಾ

0

ಅಂತರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಮಿಂಚಿದ ಹಿರ್ಗಾನದ ಅದಿತಿ ಶರ್ಮಾ ಹಾಗೂ ರತಿ ಶರ್ಮಾ.

ಸೆ 27-28 ರಂದು ಗೋವಾದಲ್ಲಿ ನಡೆದ ಅಂತರಾಷ್ಟ್ರೀಯಮಟ್ಟದ ದಕ್ಷಿಣ ಕೊರಿಯಾದ ರಾಷ್ಟ್ರೀಯ ಕ್ರೀಡೆ ಆಗಿರುವ ” ಟೇಕ್ವಾಂಡೋ ” ಸ್ಪರ್ಧೆಯಲ್ಲಿ ಅದಿತಿ ಶರ್ಮಾ ಅವರು ಪ್ರಥಮ ಸ್ಥಾನ ಹಾಗೂ ರತಿ ಶರ್ಮಾ ಅವರು ದ್ವಿತೀಯ ಸ್ಥಾನಗಳಿಸಿದ್ದಾರೆ. ಇವರು ಸುರೇಶ್ ದೇವಾಡಿಗ ಅವರ ಬಳಿ ಟೇಕ್ವಾಂಡೋ ಅಭ್ಯಾಸ ಮಾಡುತ್ತಿದ್ದಾರೆ.
ಇವರು ಹಿರ್ಗಾನದ ಅನಿಲ್ ಶರ್ಮಾ ಮತ್ತು ನಿತ್ಯ ಬರ್ಕೆ ಅವರ ಪುತ್ರಿಯರು.

 

ಅ.2:ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ 25ನೇ ವರ್ಷಕ್ಕೆ ಪಾದಾರ್ಪಣೆ ರಜತ ವರ್ಷಾಚರಣೆಗೆ ಚಾಲನೆ, ರಜತ ವರ್ಷದ ಲಾಂಛನ ಬಿಡುಗಡೆ & ವಿವಿಧ ಕಾರ್ಯಕ್ರಮಗಳಿಗೆ ಚಾಲನೆ

0
ಅಕ್ಟೋಬರ್ 2ರಂದು ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ 25ನೇ ವರ್ಷಕ್ಕೆ ಪಾದಾರ್ಪಣೆ                                   ರಜತ ವರ್ಷಾಚರಣೆಗೆ ಚಾಲನೆ, ರಜತ ವರ್ಷದ ಲಾಂಛನ ಬಿಡುಗಡೆ & ವಿವಿಧ ಕಾರ್ಯಕ್ರಮಗಳಿಗೆ ಚಾಲನೆ
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಂಸ್ಥೆಯು ಅಕ್ಟೋಬರ್ 2ರಂದು 25ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳಲಿದೆ ಆದಿನ ಮಧ್ಯಾಹ್ನ ಗಂಟೆ ೦೨ಕ್ಕೆ ಸರಿಯಾಗಿ ರಜತ ವರ್ಷಾಚರಣೆಗೆ ಚಾಲನೆ ಕಾರ್ಯಕ್ರಮ ನಡೆಯಲಿದೆ.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಲಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರು ಮತ್ತು ಯಕ್ಷರಂಗದ ಚಾರ್ಲಿ ಚಾಪ್ಲಿನ್ ಖ್ಯಾತಿಯ ಸೀತಾರಾಮ್ ಕುಮಾರ್ ಕಟೀಲು ಅವರು ರಜತ ವರ್ಷಾಚರಣೆಗೆ ಚಾಲನೆ ನೀಡಲಿದ್ದಾರೆ.
ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅವರು ರಜತ ವರ್ಷದ ಲಾಂಛನ ಬಿಡುಗಡೆ ಮಾಡಲಿದ್ದಾರೆ. ಭಾರತೀಯ ಜೇಸಿಐನ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಕೆ. ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಂಗಳೂರು ಕೇಂದ್ರ ಸಮಿತಿ ಕರಾವಳಿ ಭಜನಾ ಸಂಸ್ಕಾರ ವೇದಿಕೆಯ ಪ್ರಧಾನ ಕಾರ್ಯದರ್ಶಿಗಳಾದ ಎರ್ಲಪಾಡಿ ಶ್ರೀನಿವಾಸ ಪೂಜಾರಿ ಅವರು ಸಂಘದ ಹಾಡು ಬಿಡುಗಡೆ ಮಾಡಲಿದ್ದಾರೆ.
ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕರಾದ ಜಯಂತಿ ಆರ್. ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಪ್ರಥ್ವಿರಾಜ್ ಬಲ್ಲಾಳ್ ಅವರಿಗೆ ಸನ್ಮಾನ ಸ್ವೀಕರಿಸಲಿದ್ದಾರೆ. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಅವರು ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಕಾರ್ಯಕ್ರಮದ ವಿಶೇಷತೆ: ರಾಷ್ಟ್ರಪಿತ ಮಹಾತ್ಮಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹೂದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ 25ನೇ ವರ್ಷದ ಸ್ಥಾಪನಾ ದಿನಾಚರಣೆ, ರಜತ ವರ್ಷಾಚರಣೆಗೆ ಚಾಲನೆ, ರಜತ ವರ್ಷದ ಲಾಂಛನ ಬಿಡುಗಡೆ, ಸೇವಾ ಸಂಸ್ಥೆಗಳಿಗೆ ಗೌರವಾರ್ಪಣೆ, ಭಜನಾ ಮಂಡಳಿಗಳಿಗೆ ಸನ್ಮಾನ, ಸಹಾಯಧನ ವಿತರಣೆ, ಸಾಧಕ ವಿದ್ಯಾರ್ಥಿಗಳಿಗೆ ಗೌರವ ಅಭಿನಂದನೆ, ಪೂರ್ವಾಧ್ಯಕ್ಷರುಗಳ ಸನ್ಮಾನ, ಸಂಘದ ಹಾಡು ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಪಿಯು ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟ:ಬೈಲೂರುತಂಡ ರಾಜ್ಯಮಟ್ಟಕ್ಕೆ

0

ಬೈಲೂರುತಂಡ ರಾಜ್ಯಮಟ್ಟಕ್ಕೆ

ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜ್ ಕಲ್ಯಾಣಪುರ ,ಉಡುಪಿ ಇಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪಿಯು ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟದಲ್ಲಿ ಬೈಲೂರು ನೇತೃತ್ವದ ಬಾಲಕರ ತಂಡ ಸತತ ಎರಡನೇ ಬಾರಿಗೆ ಜಿಲ್ಲಾ ಪ್ರಶಸ್ತಿಯನ್ನು ಗೆದ್ದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ತಂಡದ ಮಣಿಕಂಠ ಇವರಿಗೆ ಅತ್ಯುತ್ತಮ ಅಟಾಕರ್, ಸುಜಿತ್ ಇವರಿಗೆ ಅತ್ಯುತ್ತಮ ಲಿಬ್ರೋ ಗೌರವ ಲಭಿಸಿರುತ್ತದೆ. ತಂಡವನ್ನು ತರಬೇತು ಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಫೆಡ್ರಿಕ್ ರೆಬೆಲ್ಲೋ, ಕ್ರೀಡಾ ಸಂಚಾಲಕ ಉಪನ್ಯಾಸಕ ರತ್ನಾಕರ ಪೂಜಾರಿ ಹಾಗೂ ಕಾಲೇಜಿನ ಹೆಮ್ಮೆಯ ಪೂರ್ವ ವಿದ್ಯಾರ್ಥಿಗಳಾದ ಮೊಹಮ್ಮದ್ ಶೇಕ್ ಅಮನ್ ಹಾಗೂ ಮಹಮದ್ ಶೇಕ್ ಅಯಾನ್ ಹಾಗೂ ಕಾಲೇಜಿಗೆ ಕೀರ್ತಿ ತಂದಿರುವ ತಂಡದ ಎಲ್ಲಾ ಸದಸ್ಯರುಗಳಿಗೆ ಪ್ರಾಂಶುಪಾಲರು, ಕಾಲೇಜ್ ಅಭಿವೃದ್ಧಿ ಸಮಿತಿ ಹಾಗೂ ಉಪನ್ಯಾಸಕ ಬಳಗ ಅಭಿನಂದನೆಗಳನ್ನು ಸಲ್ಲಿಸಿದೆ.

ಅಂತಾರಾಷ್ಟೀಯ ಟೇಕ್ವಾoಡೋ ಚಾಂಪಿಯನ್ ಶಿಪ್ ಪರಪು ಸತ್ಯಪ್ರಸಾದ್ ರಾವ್ ಪ್ರಥಮಸ್ಥಾನ

0

ಅಂತಾರಾಷ್ಟೀಯ ಟೇಕ್ವಾoಡೋ ಚಾಂಪಿಯನ್ ಶಿಪ್
ಪರಪು ಸತ್ಯಪ್ರಸಾದ್ ರಾವ್ ಪ್ರಥಮ ಸ್ಥಾನ

ಸೆ.27-28ರಂದು ಗೋವಾದಲ್ಲಿ ನಡೆದ ಅಂತಾರಾಷ್ಟೀಯ ಮಟ್ಟದ ದಕ್ಷಿಣಕೊರಿಯಾದ ರಾಷ್ಟೀಯ ಕ್ರೀಡೆ ಆಗಿರುವ ‘ಟೇಕ್ವಾoಡೋ’ ಸ್ಪರ್ಧೆಯಲ್ಲಿ ಪರಪು ಸತ್ಯಪ್ರಸಾದ್ ರಾವ್ ಪ್ರಥಮ ಸ್ಥಾನ ಗಳಿಸಿದ್ದಾರೆ.ಇವರು ಸುರೇಶ್ ದೇವಾಡಿಗ ಇವರ ಬಳಿ ‘ಟೇಕ್ವಾoಡೋ’ ಅಭ್ಯಾಸ ಮಾಡುತ್ತಿದ್ದಾರೆ.

ಇವರು ಕಾರ್ಕಳದ ಯುವ ಉದ್ಯಮಿ ರಾಜೇಶ್ ರಾವ್ ಪರಪು ಮತ್ತು ಸುನೀತ ರಾವ್ ದಂಪತಿಗಳ ಪುತ್ರ.

ಗಮ್ಮತ್ ಕಲಾವಿದೆರ್ ದುಬೈ ವತಿಯಿಂದ ಸುರಕ್ಷಾ ಸೇವಾಶ್ರಮಕ್ಕೆ ಪಾಕಶಾಲೆಯ ಕೊಡುಗೆ

0

ಗಮ್ಮತ್ ಕಲಾವಿದೆರ್ ದುಬೈ ವತಿಯಿಂದ ಸುರಕ್ಷಾ ಸೇವಾಶ್ರಮಕ್ಕೆ ಪಾಕಶಾಲೆಯ ಕೊಡುಗೆ

ಗಮ್ಮತ್ ಕಲಾವಿದೆರ್ ದುಬೈ ವತಿಯಿಂದ ಸುರಕ್ಷಾ ಸೇವಾಶ್ರಮಕ್ಕೆ ಸುಸಜ್ಜಿತವಾದ ಪಾಕಶಾಲೆಯನ್ನು ನಿರ್ಮಿಸಿ ಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೇಮಾರು ಈಶ ವಿಠಲದಾಸ ಸ್ವಾಮೀಜಿ ದೇವರಿಗೆ ಕೊಟ್ಟ ನೈವೇದ್ಯ ದೇವರಿಗೆ ತಲುಪುತ್ತೋ ಇಲ್ಲವೋ ಗೊತ್ತಿಲ್ಲ,ಆದರೆ ಬಡವರಿಗೆ ಕೊಟ್ಟ ಸಹಾಯ ದೇವರಿಗೆ ತಲುಪುತ್ತದೆ ಎಂದು ಹೇಳಿದರು.

ದೇವರು ಇರುವಾಗ ಯಾರೂ ಅನಾಥರಲ್ಲ,ನಾವು ಬಂದದ್ದು ಒಬ್ಬರೇ ಹೋಗುವುದು ಒಬ್ಬರೇ.ಭೂಮಿಗೆ ಬಂದಿರುವಾಗ ಯಾರು ನಮ್ಮೊಂದಿಗೆ ಇದ್ದಾರೆ ಎನ್ನುವುದು ಮುಖ್ಯವಲ್ಲ ದೇವರೊಂದಿಗೆ ನಾವಿದ್ದೇವೆ ಎಂಬುದು ಮುಖ್ಯ ಎಂದು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕರಾದ ವಿಶ್ವನಾಥ್ ಶೆಟ್ಟಿ ದುಬೈ ಗಮ್ಮತ್ ಕಲಾವಿದೆರ್ UAE ಇದರ ಕುರಿತು ವಿವರಿಸಿದರು.ಅರುಣ್ ಶೆಟ್ಟಿ ಮಂಗಳೂರು, ಸತೀಶ್ ಹೆಗ್ಡೆ ದುಬೈ,ಆಯಿಷಾ ಬಾನು,ಅಮ್ಮನ ನೆರವು ಟ್ರಸ್ಟ್ ನ ಅವಿನಾಶ್ ಜಿ.ಶೆಟ್ಟಿ ಉಪಸ್ಥಿತರಿದ್ದರು.

ಬಡವರ ಬಿಪಿಎಲ್‌ ಪಡಿತರ ಚೀಟಿ ರದ್ದು ಮಾಡಿ ಬಡ ಜನರಿಗೆ ಕಾಂಗ್ರೆಸ್‌ ಸರ್ಕಾರ ದ್ರೋಹ-ನವೀನ್‌ ನಾಯಕ್‌

0

ಬಡವರ ಬಿಪಿಎಲ್‌ ಪಡಿತರ ಚೀಟಿ ರದ್ದು ಮಾಡಿ ಬಡ ಜನರಿಗೆ ಕಾಂಗ್ರೆಸ್‌ ಸರ್ಕಾರ ದ್ರೋಹ

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿನಿಂದ ಒಂದಲ್ಲ ಒಂದು ರೀತಿಯಲ್ಲಿ ವಿವಾದವನ್ನೇ ಮಾಡಿಕೊಂಡು ಬರುತಿದ್ದು, ಇದೀಗ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡುವ ಮೂಲಕ ಬಡವರ ಹೊಟ್ಟೆಗೆ ಹೊಡೆಯಲು ಹೊರಟಿರುವುದು ವಿಷಾದನೀಯ.

ಸರ್ಕಾರವು ಕಾರ್ಕಳ ಮತ್ತು ಹೆಬ್ರಿ ತಾಲೂಕಿನ 7911 ಪಡಿತರ ಚೀಟಿ ರದ್ದತಿಗೆ ಮುಂದಾಗಿದ್ದು, ಕಾರ್ಕಳ ಭಾರತೀಯ ಜನತಾ ಪಾರ್ಟಿಯು, ಬಡವರಿಗೆ ಅನ್ಯಾಯ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಿಲುವನ್ನು ಖಡಾ ಖಂಡಿತವಾಗಿ ಖಂಡಿಸುತ್ತದೆ. ಒಂದು ಕಡೆಯಿಂದ ರಾಜ್ಯದ ಜನತೆಗೆ ಸರಿಯಾಗಿ ಗ್ಯಾರಂಟಿ ಯೋಜನೆಗಳನ್ನು ಕೊಡದೆ ಸತಾಯಿಸುತ್ತಿರುವ ಸರ್ಕಾರ, ಇನ್ನೊಂದು ಕಡೆ ಪಡಿತರ ಚೀಟಿಯನ್ನು ರದ್ದು ಮಾಡುವ ಮೂಲಕ ಜನತೆಗೆ ಬಹುದೊಡ್ಡ ಮೋಸ ಮಾಡಲು ಹೊರಟಿದೆ.

ರಾಜ್ಯದ ಸ್ವತಃ ಮುಖ್ಯಮಂತ್ರಿಗಳೇ ಭ್ರಷ್ಟಾಚಾರದಲ್ಲಿ ತೊಡಗಿದ್ದು ಸಚಿವ ಸಂಪುಟದ ಬಹುತೇಕ ಸಚಿವರುಗಳು ಒಂದಲ್ಲ ಒಂದರಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಪದೇಪದೇ ನಮ್ಮದು ಬಡವರ ಪರ ಸರ್ಕಾರ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ಪಾಲಿಗೆ ವರದಾನವಾಗಿದ್ದ ಬಿಪಿಎಲ್ ಕಾರ್ಡ್ ಅನ್ನು ಕ್ಷುಲ್ಲಕ ಕಾರಣಗಳನ್ನು ನೀಡಿ ರದ್ದುಪಡಿಸಲು ಹೊರಟಿರುವುದು ವಿಷಾದನೀಯ.

ಬಿಪಿಎಲ್ ಕಾರ್ಡುದಾರರಿಗೆ ಅನ್ನಭಾಗ್ಯವಲ್ಲದೆ ಇತರ ಅನೇಕ ಸರ್ಕಾರದ ಸವಲತ್ತುಗಳಿಗೆ ಬಿಪಿಎಲ್‌ ಕಾರ್ಡೇ ಮಾನದಂಡವಾಗಿದ್ದು, ಇದರ ಆಧಾರದಲ್ಲಿ ರಾಜ್ಯದಲ್ಲಿ ಲಕ್ಷಾಂತರ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇನ್ನು ಮುಂದೆ ಪಡಿತರ ಚೀಟಿ ರದ್ದಾದಲ್ಲಿ ಬಡ ಮಕ್ಕಳು ಗುಣಮಟ್ಟದ ವಿದ್ಯಾಭ್ಯಾಸದಿಂದ ವಂಚಿತರಾಗಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಕೇಂದ್ರ ಸರ್ಕಾರದ ಆಯುಷ್ಮಾನ್ ಆರೋಗ್ಯ ಯೋಜನೆಯ ಮೂಲಕ ಬಡವರಿಗೆ ಹೃದಯ ಸಂಬಂಧಿ ಹಾಗೂ ಇನ್ನಿತರ ಗಂಭೀರ ಖಾಯಿಲೆಗಳು ಬಂದಾಗ ಈ ಯೋಜನೆಯಿಂದ ಬಹಳಷ್ಟು ಅನುಕೂಲವಾಗುತ್ತಿದೆ.

ಈ ಯೋಜನೆಯ ಅನುಕೂಲವನ್ನು ಪ್ರಸ್ತುತ ಲಕ್ಷಾಂತರ ಬಡ ಜನರು ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ತೆತ್ತು ಚಿಕಿತ್ಸೆ ಪಡೆಯುವುದೇ ಕಷ್ಟಕರ. ಇಂತಹ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಪಡಿತರ ಚೀಟಿ ರದ್ದು ಮಾಡಲು ಹೊರಟಿರುವುದು, ಹೇಳುವುದೊಂದು, ಮಾಡುವುದು ಇನ್ನೊಂದು ಎಂಬ ಗಾದೆಯಂತಿದೆ. ಸರ್ಕಾರದ ಈ ನಿಲುವಿನಿಂದ ರಾಜ್ಯದಲ್ಲಿ 25 ಲಕ್ಷಕ್ಕೂ ಅಧಿಕ ಬಡವರು ಇಂತಹ ಜನಪರ ಯೋಜನೆಯಿಂದ ವಂಚಿತರಾಗಲಿದ್ದಾರೆ. ಸರ್ಕಾರದಿಂದ ಬಡವರಿಗೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ.

ಸರ್ಕಾರ ಪಡಿತರ ಚೀಟಿ ರದ್ದು ಮಾಡಲು ಮುಂದಾಗಿರುವ ನಿರ್ಧಾರವನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಕಾರ್ಕಳ ಭಾರತೀಯ ಜನತಾ ಪಾರ್ಟಿಯ ಕ್ಷೇತ್ರ ಅಧ್ಯಕ್ಷರಾದ ನವೀನ್‌ ನಾಯಕ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿಯ ಪರಂಪರಾನುಗತ ಅಧಿಕಾರ ದಾಹದ ಷಢ್ಯಂತ್ರಕ್ಕೆ ಮೂಡ ಪ್ರಕರಣ ಸಾಕ್ಷಿ-ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ

0

ಬಿಜೆಪಿಯ ಪರಂಪರಾನುಗತ ಅಧಿಕಾರ ದಾಹದ ಷಢ್ಯಂತ್ರಕ್ಕೆ ಮೂಡ ಪ್ರಕರಣ ಸಾಕ್ಷಿ-ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ

ಸಾಮಾಜಿಕ ನ್ಯಾಯದ ಹರಿಕಾರ ಸಿದ್ಧರಾಮಯ್ಯನವರ ತೇಜೋವಧೆ ಮಾಡಿ ರಾಜ್ಯದ ಕಾಂಗ್ರೆಸ್ ಪಕ್ಷದ ಸರಕಾರವನ್ನು ಅತಂತ್ರಗೊಳಿಸುವ ಬಿಜೆಪಿಯ ಪರಂಪರಾನುಗತ ಅಧಿಕಾರ ದಾಹದ ಷಢ್ಯಂತ್ರಕ್ಕೆ ಮೂಡ ಪ್ರಕರಣ ಸಾಕ್ಷಿಯಾಗಿದೆ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೂಡಾ ಪ್ರಕರಣವನ್ನು ಬಳಸಿಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಇಳಿಸಿ ಕಾಂಗ್ರೆಸ್ ಪಕ್ಷದಲ್ಲಿ ಆಂತರೀಕ ಗೊಂದಲ ಸೃಷ್ಢಿಸಿ ಅಧಿಕಾರಕ್ಕೆ ಬರುವ ರಾಜ್ಯ ಬಿಜೆಪಿಯ ವ್ಯರ್ಥ ಹುನ್ನಾರದ ಹಿಂದೆ ಕೇಂದ್ರದ ವ್ಯವಸ್ಥಿತ ಕೈವಾಡವಿದೆ. ಇದಕ್ಕೆ ಹರ್ಯಾಣದ ಸೋನಿಪತ್ ನಲ್ಲಿ ಪ್ರಧಾನಿ ಮೋದಿ ರಾಜ್ಯದ ಮೂಡ ಪ್ರಕರಣವನ್ನು ಉಲ್ಲೇಖಿಸಿ ಮಾಡಿದ ಚುನಾವಣಾ ಪ್ರಚಾರ ಭಾಷಣವನ್ನು ಒಂದು ಉದಾಹರಣೆಯಾಗಿದೆ. ಅಪರಾದ ಸಾಬೀತಾಗದೆ ಕಾಂಗ್ರೆಸ್ ಪಕ್ಷವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಮಾತನಾಡಿರುವುದು ಎಷ್ಟು ಸರಿ ಎನ್ನುವುದು ಉಲ್ಲೇಖನೀಯ ಎಂದು ಹೇಳಿದ್ದಾರೆ.

ಕಳೆದ ತನ್ನ 10 ವರ್ಷಗಳ ಆಡಳಿತಾವಧಿಯಲ್ಲಿ ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳ 10ಕ್ಕೂ ಹೆಚ್ಚು ವಿರೋಧ ಪಕ್ಷಗಳ ಚುನಾಯಿತ ಸರಕಾರಗಳನ್ನು ಬೀಳಿಸಿದ, ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿ 400ಕ್ಕೂ ಅಧಿಕ ಕಾಂಗ್ರೆಸ್ ಹಾಗೂ ಅನ್ಯಪಕ್ಷಗಳ ಶಾಸಕರನ್ನು ತನ್ನ ಪಕ್ಷಕ್ಕೆ ಪಕ್ಷಾಂತರಿಸಿದ, ರಾಷ್ಟ್ರೀಯ ತನಿಖಾ ಸಂಸ್ಥೆಗಳಿಂದ ಭ್ರಷ್ಠಾಚಾರಿಗಳೆಂದು ಪ್ರಕರಣ ದಾಖಲಿಸಿಕೊಂಡವರಿಗೆ ಅಧಿಕಾರದ ಹುದ್ಧೆಕೊಟ್ಟು ಸಂವಿಧಾನದ ಮೌಲ್ಯಗಳನ್ನು ಉಲ್ಲಂಘಿಸಿದವರಿಗೆ ಅದು ದೇಶದ ಪ್ರಧಾನಿಗಾಗಲಿ, ಬಿಜೆಪಿಯ ಯಾವುದೇ ನಾಯಕನಿಗಾಗಲಿ ಮೂಡಾ ಪ್ರಕರಣದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಸಿದ್ಧರಾಮಯ್ಯನವರ ಮೇಲಿನ ಅಪವಾಧ ವಾಸ್ತವತೆ ತನಿಖೆಯಿಂದ ಹೊರಬರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

ಉದ್ಯಮಿ ವಿನಾಯಕ್ ನಾಯ್ಕ ಹತ್ಯೆ ಪ್ರಕರಣ:ಪ್ರಮುಖ ಆರೋಪಿ ಗೋವಾದಲ್ಲಿಆತ್ಮಹತ್ಯೆ

0

ಕಾರವಾರದ ಹಣಕೋಣ ಉದ್ಯಮಿ ವಿನಾಯಕ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಗೋವಾದಲ್ಲಿಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬದಲ್ಲಿನ ದ್ವೇಷಕ್ಕೆ ಎರಡು ಜೀವಗಳು ಬಲಿಯಾಗಿವೆ.

ಉತ್ತರ ಕನ್ನಡಜಿಲ್ಲೆಯ ಕಾರವಾರದ ಹಣಕೋಣದಲ್ಲಿ ಪುಣೆಯ ಉದ್ಯಮಿಯ ಭೀಕರ ಕೊಲೆ ನಡೆದ ಮೂರು ದಿನದಲ್ಲಿ ಖಾಕಿ ಪಡೆ ಆರೋಪಿಗಳ ಬೇಟೆಯಾಡಿದೆ. ಬಿಹಾರದ ಮೆಹೆಂದರ್ ಪುರ್‌ನ ಅಜ್ಮಲ್ ಜಾಬಿರ್ ,ಮಾಸುಮ್ ಮಂಜೂರ್ ,ಅಸ್ಸಾಂನ ಬರುವದಾಲ್ನಿ ಲಕ್ಷ್ ಜ್ಯೋತಿನಾಥ್ ಆರೋಪಿಗಳಾದರೆ ಪ್ರಮುಖ ಆರೋಪಿ ಉದ್ಯಮಿ ಗುರುಪ್ರಸಾದ್ ರಾಣೆ ಗೋವಾದಲ್ಲಿ ಮಾಂಡವಿ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧಿಕಾರಿ ಎಂ.ನಾರಾಯಣ್ ಮಾಹಿತಿ ನೀಡಿದ್ದಾರೆ.

ಘಟನೆ ಏನು?
ಪುಣೆಯ ಉದ್ಯಮಿ ವಿನಾಯಕ ನಾಯ್ಕ ಹಾಗೂ ಗೋವಾದ ಉದ್ಯಮಿ ಗುರುಪ್ರಸಾದ್ ರಾಣೆ ಮೂಲತಃ ಕಾರವಾರದವರಾಗಿದ್ದು ಇಬ್ಬರೂ ಸಂಬಂಧಿಕರಾಗಿದ್ದರು. ಆದರೇ ಕೌಟುಂಬಿಕ ಕಲಹ ಇಬ್ಬರ ದಾಂಪತ್ಯ ಕೆಡುವಂತೆ ಮಾಡಿತ್ತು. ಇದಲ್ಲದೇ ವಿನಾಯಕ್ ನಾಯ್ಕ ಪತ್ನಿ ವೃಷಾಲಿಗೆ ವಿಚ್ಛೇದನ ನೀಡುವ ಹಂತಕ್ಕೆ ಹೋಗಿದ್ದು ಹಿರಿಯರ ಮಧ್ಯಸ್ಥಿಕೆಯಲ್ಲಿ ಸರಿಯಾಗಿತ್ತು.

ಆದರೆ ಈ ಕೌಟುಂಬಿಕ ಜಗಳ ಗೋವಾ ಉದ್ಯಮಿ ಗುರುಪ್ರಸಾದ್ ರಾಣೆಯ ಬದುಕನ್ನು ಹಾಳುಗೆಡಿಸಿತ್ತು. ಹೀಗಾಗಿ ಕಳೆದ ಆರು ತಿಂಗಳಿಂದ ತನ್ನ ಬಂಟರ ಮೂಲಕ ಹತ್ಯೆಗೆ ಸಂಚು ರೂಪಿಸಿದ್ದು, ತಾಯಿಯ ಶ್ರಾದ್ಧ ಹಾಗೂ ಊರಿನ ದೇವರ ಉತ್ಸವಕ್ಕೆ ಆಗಮಿಸಿದ್ದ ವಿನಾಯಕ್ ನಾಯ್ಕ ಮರಳಿ ಪುಣೆಗೆತೆರಳಲು ಸಿದ್ದರಾಗಿದ್ದಾಗ ಸೆ.22 ಭಾನುವಾರ ಮುಂಜಾನೆ ಸ್ವಿಫ್ಟ್ ಕಾರಿನ ಮೂಲಕ ಬಂದ ಮೂರು ಜನ ಮುಸುಕುದಾರಿಗಳು ಮನೆಗೆ ನುಗ್ಗಿ ಮಚ್ಚು ಮತ್ತು ರಾಡ್‌ನಿಂದ ವಿನಾಯಕ್ ನಾಯ್ಕ ಹತ್ಯೆ ಮಾಡಿದರು. ತಡೆಯಲು ಬಂದ ಆತನ ಪತ್ನಿ ವೃಷಾಲಿಗೆ ತಲೆಗೆ ರಾಡ್‌ನಿಂದ ಹೊಡೆದು ಹಲ್ಲೆ ಮಾಡಿ ಪರಾರಿಯಾಗಿದ್ದರು.

ಇದೀಗ ಮುಖ್ಯ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಕೌಟುಂಬಿಕ ಕಲಹ ಇರುವುದರಿಂದ ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ ಎಂದು ಎಸ್‌ಪಿ ಎಂ.ನಾರಾಯಣ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.