Home Blog Page 94

ಬೈಲೂರು:ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

0

ಬೈಲೂರು:ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಸರ್ಕಾರಿ ಪದವಿಪೂರ್ವ ಕಾಲೇಜು ಬೈಲೂರು, ಇಲ್ಲಿ 2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ 45 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಇದರೊಂದಿಗೆ ವಿಷಯವಾರು ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಸರಕಾರಿ ಪದವಿ ಪೂರ್ವ ಕಾಲೇಜು – ಸಾಣೂರು ಇಲ್ಲಿಯ ಮಾನ್ಯ ಪ್ರಾಂಶುಪಾಲರಾದ ಸುಚೇತಾ ರವರು ಸನ್ಮಾನಿತ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ಹಾರೈಸುವುದರೊಂದಿಗೆ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಪ್ರೇರಣೆಯಾಗಬೇಕೆಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಗುರುಮೂರ್ತಿ ತಾಮ್ರಗೌರಿ ಯವರು ವಹಿಸಿದ್ದರು. ಹಿರಿಯ ಉಪನ್ಯಾಸಕರಾದ ಸೀತಾರಾಮ ರವರು ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರೆ, ಉಪನ್ಯಾಸಕರಾದ ಮಹೇಶ್ ರವರು ವಂದನಾರ್ಪಣೆಗೈದರು. ಸನ್ಮಾನಿತ ವಿದ್ಯಾರ್ಥಿಗಳ ಪಟ್ಟಿಯನ್ನು ಉಪನ್ಯಾಸಕರಾದ ರತ್ನಾಕರ ಪೂಜಾರಿಯವರು ವಾಚಿಸಿ, ವಿದ್ಯಾರ್ಥಿ ಸಂಘದ ಸಂಚಾಲಕರಾದ ನರಸಿಂಹ ವರ್ಧನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಎಲ್ಲಾ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನಿಟ್ಟೆ:ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ

0

ನಿಟ್ಟೆ:ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ

ಜುಗಾರಿ ಅಡ್ಡಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ಆ.18ರಂದು ನಿಟ್ಟೆ ಗ್ರಾಮ ಹುಣಸೆಕಟ್ಟೆ ಎಂಬಲ್ಲಿ ನಡೆದಿದೆ.ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಉಪನಿರೀಕ್ಷಕ ದಿಲೀಪ್ ಜಿ ಆರ್ ಪೊಲೀಸ್ ನೇತೃತ್ವದಲ್ಲಿ ದಾಳಿ ನಡೆಸಿ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಸದಾನಂದ, ಗಣೇಶ್ , ಪ್ರಥಮ್, ಜಯರಾಜ್, ಸೂರ್ಯ ಮತ್ತು ರಾಜ ಬಂಧಿತರು.ಇಸ್ಪೀಟು ಆಟಕ್ಕೆ ಬಳಸಿದ ನಗದು ಹಣ 10,200 ರೂ. ಹಣ,ಇಸ್ಪೀಟ್ ಎಲೆಗಳು, ನೆಲಕ್ಕೆ ಹಾಸಿದ 2 ಹಳೆಯ ಪ್ಲಾಸ್ಟಿಕ್ ಗೋಣಿ ಚೀಲ, ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದು ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಚಿನಡ್ಕ ಟೋಲ್ ಸಂಗ್ರಹ ವಿರೋಧಿ ಹೋರಾಟಕ್ಕೆ ಕಾರ್ಕಳದಿಂದ 2000 ಬಿಜೆಪಿ ಕಾರ್ಯಕರ್ತರು ಭಾಗಿ-ನವೀನ್ ನಾಯಕ್

0

ಕಂಚಿನಡ್ಕ ಟೋಲ್ ಸಂಗ್ರಹ ವಿರೋಧಿ ಹೋರಾಟಕ್ಕೆ ಕಾರ್ಕಳದಿಂದ 2000 ಬಿಜೆಪಿ ಕಾರ್ಯಕರ್ತರು ಭಾಗಿ-ನವೀನ್ ನಾಯಕ್

ಕಾರ್ಕಳ:ಕಾರ್ಕಳ-ಬೆಳ್ಮಣ್-ಪಡುಬಿದ್ರಿ ರಸ್ತೆಯ ಕಂಚಿನಡ್ಕದಲ್ಲಿ ರಾಜ್ಯ ಸರ್ಕಾರ ಟೋಲ್ ಸಂಗ್ರಹಕ್ಕೆ ಆದೇಶ ಮಾಡಿರುವುದನ್ನು ಕಾರ್ಕಳ ಭಾರತೀಯ ಜನತಾ ಪಾರ್ಟಿಯು ಪ್ರತಿ ಬಾರಿಯೂ ವಿರೋಧಿಸುತ್ತಾ, ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸುತ್ತಾ ಬಂದಿದೆ. ಆದರೂ ಕೂಡ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರ ಭಾವನೆಗಳಿಗೆ ಬೆಲೆ ಕೊಡದೇ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರವು ಜನಪರ ಸರ್ಕಾರ ಅಲ್ಲ, ಜನ ವಿರೋಧಿ ಸರ್ಕಾರ ಎಂದು ಸಾಭೀತಾಗಿದೆ.

ಟೋಲ್ ಸಂಗ್ರಹಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿ ಆಗಸ್ಟ್ 24 ಶನಿವಾರದಂದು ನಂದಳಿಕೆ ಸುಹಾಸ್ ಹೆಗ್ಡೆ ನೇತೃತ್ವದ ಸ್ಥಳೀಯ ಟೋಲ್ ಸಂಗ್ರಹ ವಿರೋಧಿ ಹೋರಾಟ ಸಮಿತಿಯ ಬೃಹತ್ ಸಾರ್ವಜನಿಕ ಪ್ರತಿಭಟನೆ ಗೆ ಕರೆ ನೀಡಿದ್ದು, ಈ ಪ್ರತಿಭಟನೆಯಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಕಳದಿಂದ ಎರಡು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಾಹನ ಸವಾರರಿಗೆ ಬರ ಎಳೆಯಲು ಮುಂದಾಗಿರುವ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿರುವ ಬಿಜೆಪಿ ಪಕ್ಷವು ನಿರಂತರ ಜನರ ಪರವಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಬಿಜೆಪಿ ಕಾರ್ಕಳ ಮಂಡಲ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ತಿಳಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿಯೂ ಭಾರತದ ಸ್ವಾತಂತ್ರ್ಯ ಸಂಭ್ರಮಾಚರಣೆ

0

ಸೌದಿ ಅರೇಬಿಯಾದಲ್ಲಿಯೂ ‘ಭಾರತ ಸ್ವಾತಂತ್ರ್ಯ ಸಂಭ್ರಮಾಚರಣೆ’

Friendly cricketers Al AHSA ಇದರ ಪರವಾಗಿ 78ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಮಾಜ ಸೇವಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಲೀಲ್ ಕೃಷ್ಣಾಪುರ ವಹಿಸಿದ್ದರು,ಸಮಾಜ ಸೇವಕರಾಗಿ ಗುರುತಿಸಿಕೊಂಡ ಮೊಹಮ್ಮದ್ ಆಲಿ ಜಿನ್ನಾ ತಮಿಳುನಾಡು,ಮೊಹಿದ್ದೀನ್ ಬಾತಿಷಾ ಜಿಕೆ, ಇವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಸಲೀಂ ಗುರುವಾಯನಕೆರೆ,ಗಲ್ಫ್ ಕಮಿಟಿ ಇದರ ಅಧ್ಯಕ್ಷರು ಸ್ವಾತಂತ್ರ್ಯದ ಬಗ್ಗೆ ಒಂದೆರಡು ಹಿತವಚನಗಳನ್ನು ನೀಡಿದರು.ವೇದಿಕೆಯಲ್ಲಿ ಇಸಾಕ್ ಕಣ್ಣೂರ್, ಶಾಮಿಲ್ ಕೈಕಂಬ, ಅಬ್ಬು ಬಜಗೋಳಿ,ಮುಶೀರ್ ಖಾನ್ ಕಾರ್ಕಳ,ನೌಶಾದ್,ಬಷೀರ್,ಶಾಭಿತ್ ಹಾಜರಿದ್ದರು.

ಮಕ್ಕಳಿಗೆ ಆಟೋಟ ಸ್ಪರ್ಧೆ ಹಾಗೂ ಹಿರಿಯರಿಗೆ ಕ್ರಿಕೆಟ್ ಪಂದ್ಯಾ ಕೂಟವನ್ನು ಆಯೋಜಿಸಲಾಗಿತ್ತು ಪ್ರಥಮ ಸ್ಥಾನವನ್ನು ಮುಶೀರ್ ವಾರಿಯರ್ಸ್ ಹಾಗೂ ದ್ವಿತೀಯ ಸ್ಥಾನವನ್ನು ಜಲೀಲ್ ಸ್ಟ್ರೈಕರ್ಸ್ ತನ್ನದಾಗಿಸಿಕೊಂಡಿತು,ಪಂದ್ಯಶ್ರೇಷ್ಠ ಮುಶೀರ್ ಪಾಲಾದರೆ ಸರಣಿಶ್ರೇಷ್ಠ ನೂರಿಸ್ ಪಡೆದುಕೊಂಡರು.ಸ್ವಾಗತ ಭಾಷಣ ಎಂ.ಜಿ. ನಝೀರ್ ನೆರವೇರಿಸಿದರು,ಅಬ್ದುಲ್ ಸಮದ್ ಕಾರ್ಯಕ್ರಮವನ್ನು ನಿರೂಪಿಸಿದರು,ನೂರಿಸ್ ಬಜಾಲ್ ವಂದಿಸಿದರು.

ಕಾರ್ಕಳ:ಬಿಜೆಪಿ ಅಧ್ಯಕ್ಷ ನವೀನ್ ನಾಯಕ್ ವಿರುದ್ಧ ಮಣಿಪಾಲ ಠಾಣೆಯಲ್ಲಿ ದೂರು ದಾಖಲು

0

ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ದೂರು ದಾಖಲಿಸಿದ್ದಾರೆ.

ಕಾರ್ಕಳ:ಬಿಜೆಪಿ ಅಧ್ಯಕ್ಷ ನವೀನ್ ನಾಯಕ್ ವಿರುದ್ಧ ಮಣಿಪಾಲ ಠಾಣೆಯಲ್ಲಿ ದೂರು ದಾಖಲು

ಕಾರ್ಕಳ ಬಿಜೆಪಿ ಅಧ್ಯಕ್ಷ ನವೀನ್ ನಾಯಕ್ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ದೂರು ದಾಖಲಿಸಿದ್ದಾರೆ.

ಆ.5ರಂದು ಪರಶುರಾಮ ಥೀಮ್‌ ಪಾರ್ಕ್‌ ನ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಕಾರ್ಕಳ ವೃತ್ತ ನಿರೀಕ್ಷಕರ ಕುರಿತಂತೆ ಏಕವಚನದಲ್ಲಿ ಬೈದು ಅವಮಾನ ಮಾಡಿದ್ದಲ್ಲದೆ,ಮನಸ್ಸಿಗೆ ಘಾಸಿಯಾಗುವ ರೀತಿಯಲ್ಲಿ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ : 200/2024 ಕಲಂ: ಕಲಂ 224 ಬಿ ಎನ್ ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.

ಕಾರ್ಕಳ:ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೃಷ್ಣ ಶೆಟ್ಟಿ ಬಜಗೋಳಿ ಸ್ಪರ್ಧೆ

0

ಕಾರ್ಕಳ:ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೃಷ್ಣ ಶೆಟ್ಟಿ ಬಜಗೋಳಿ ಸ್ಪರ್ಧೆ

ಯುವ ಕಾಂಗ್ರೆಸ್​ನಲ್ಲಿ ಸದಸ್ಯತ್ವ ನೋಂದಣಿ ಹಾಗೂ ಪಕ್ಷದ ಆಂತರಿಕ ಚುನಾವಣೆ ನಡೆಯಲಿದ್ದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೃಷ್ಣ ಶೆಟ್ಟಿ ಬಜಗೋಳಿ ಸ್ಪರ್ಧಿಸುತ್ತಿದ್ದಾರೆ.

ಕಾರ್ಕಳ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ,ಉಡುಪಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ,ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಜೊತೆಗೆ ಶಾರದಾ ಮಹೋತ್ಸವ ಸಮಿತಿ ಬಜಗೋಳಿ ಇದರ ಪ್ರಧಾನ ಕಾರ್ಯದರ್ಶಿಯಾಗಿ,ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತ ರಕ್ಷಣಾ ಸಮಿತಿ(ರಿ.) ಇದರ ಅಧ್ಯಕ್ಷರಾಗಿ, ಪೂರ್ವ ವಿದ್ಯಾರ್ಥಿ ಸಂಘ ನಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿನ ಪ್ರಧಾನ ಕಾರ್ಯದರ್ಶಿಯಾಗಿ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ ಮಾಸುವ ಮುನ್ನವೇ ಉತ್ತರಪ್ರದೇಶದಲ್ಲಿ ನರ್ಸ್ ಮೇಲೆ ಅತ್ಯಾಚಾರವೆಸಗಿ ಕೊಲೆ

0

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ನಡುವೆ, ನರ್ಸ್ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಬಿಲಾಸ್‌ಪುರದ ಕಾಶಿಪುರ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ ನರ್ಸ್, ಪಕ್ಕದ ರಾಜ್ಯ ಉತ್ತರಾಖಂಡದ ಉಧಮ್ ನಗರ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.

ಜುಲೈ 30ರ ಸಂಜೆ ಆಸ್ಪತ್ರೆಯಿಂದ ಹೊರಬಂದ ನರ್ಸ್, ಉತ್ತಾರಾಖಂಡದ ರುದ್ರಪುರದ ಇಂದ್ರ ಚೌಕ್‌ನಿಂದ ಇ-ರಿಕ್ಷಾ ಹತ್ತಿ ಮನೆ ಕಡೆ ಹೊರಟ್ಟಿದ್ದರು. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಆದರೆ, ಆಕೆ ಮನೆ ತಲುಪಿರಲಿಲ್ಲ.

ಮರುದಿನ ನರ್ಸ್ ಸಹೋದರಿ ತನ್ನ ಅಕ್ಕ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಇದಾಗಿ 8 ದಿನಗಳ ಬಳಿಕ, ಆಗಸ್ಟ್ 8ರಂದು ಉತ್ತರ ಪ್ರದೇಶ ಪೊಲೀಸರು ದಿಬ್ದಿಬಾ ಗ್ರಾಮದ ಆಕೆಯ ಮನೆಯಿಂದ ಸುಮಾರು 1.5 ಕಿಮೀ ದೂರದಲ್ಲಿರುವ ಖಾಲಿ ಜಾಗದಲ್ಲಿ ಶವ ಪತ್ತೆ ಹಚ್ಚಿದ್ದಾರೆ.

ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಹಂತಕನ ಪತ್ತೆಗೆ ತಂಡ ರಚಿಸಿದ್ದರು. ಮೃತ ಮಹಿಳೆಯ ಕಳವಾದ ಮೊಬೈಲ್ ಫೋನ್ ಅನ್ನು ಪೊಲೀಸರು ಟ್ರೇಸ್ ಮಾಡಿದಾಗ ಅದು ಧರ್ಮೇಂದ್ರ ಕುಮಾರ್ ಎಂಬಾತನ ಬಳಿ ಇರುವುದು ಗೊತ್ತಾಗಿದೆ. ಇದರಿಂದ ಅತ್ಯಾಚಾರ ಮತ್ತು ಕೊಲೆ ಆರೋಪಿ ಧರ್ಮೇಂದ್ರ ಎಂಬುವುದು ಪೊಲೀಸರಿಗೆ ಖಚಿತವಾಗಿದೆ.

ಪೊಲೀಸರು ಆರೋಪಿ ಧರ್ಮೇಂದ್ರ ಕುಮಾರ್ ಅನ್ನು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ಆತ
ಉತ್ತರ ಪ್ರದೇಶದ ಬರೇಲಿಯ ದಿನಗೂಲಿ ಕಾರ್ಮಿಕ ಎಂದು ತಿಳಿದು ಬಂದಿದೆ.

ಪೊಲೀಸರ ಪ್ರಕಾರ, ಜುಲೈ 30ರಂದು ಆಸ್ಪತ್ರೆಯಲ್ಲಿ ಕೆಲಸ ಮುಗಿಸಿದ ನರ್ಸ್ ಒಂಟಿಯಾಗಿ ಮನೆಗೆ ಮರಳುತಿದ್ದರು. ಈ ವೇಳೆ ಧರ್ಮೇಂದ್ರ ಕುಮಾರ್ ಆಕೆಯನ್ನು ಅಡ್ಡಗಟ್ಟಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ.

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಉಧಮ್‌ ನಗರ ಎಎಸ್‌ಪಿ ಮಂಜುನಾಥ್ ಟಿಸಿ “ನರ್ಸ್ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಅದರಂತೆ ತನಿಖೆ ನಡೆಸಿದಾಗ, ದಾಳಿ ನಡೆಯುವುದಕ್ಕೂ ಮುನ್ನವೇ ಆಕೆ ತಮ್ಮ ಗ್ರಾಮಕ್ಕೆ ತೆರಳಿದ್ದಾರೆ ಎಂಬುವುದು ತಿಳಿದು ಬಂದಿತ್ತು. ನಂತರ ಆಗಸ್ಟ್ 8ರಂದು ಆಕೆಯ ಗ್ರಾಮದ ಸಮೀಪ ಪೊದೆಯಲ್ಲಿ ಶವ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಬಂಧಿತ ಆರೋಪಿಯು ಮಾದಕ ವ್ಯಸನಿಯಾಗಿದ್ದು, ಆತನಿಗೆ ನರ್ಸ್ ಪರಿಚಯವಿರಲಿಲ್ಲ. ಆಕೆ ಹೋಗುತ್ತಿರುವುದನ್ನು ನೋಡಿ ತಡೆದಿದ್ದ. ಆತನಿಂದ ತಪ್ಪಿಸಿಕೊಳ್ಳಲು ನರ್ಸ್ ಪ್ರಯತ್ನಪಟ್ಟರೂ ಆಗಿಲ್ಲ. ಆರೋಪಿ ಅತ್ಯಾಚಾರವೆಸಗಿ, ಕತ್ತು ಹಿಸುಕಿ ಕೊಲೆ ಮಾಡಿದ್ದ. ಕೃತ್ಯದ ಬಳಿಕ ಆಕೆಯ ಮೊಬೈಲ್, 3 ಸಾವಿರ ರೂಪಾಯಿ ದುಡ್ಡು ಮತ್ತಿತರ ವಸ್ತುಗಳನ್ನು ದೋಚಿ ಪರಿಯಾಗಿದ್ದಾನೆ ಎಂದು ಎಎಸ್‌ಪಿ ಹೇಳಿದ್ದಾರೆ.

ಕೆನರಾ ಮ್ಯಾರಥಾನ್ ನಲ್ಲಿ ನಿಟ್ಟೆ ವಿದ್ಯಾರ್ಥಿಗಳ ಸಾಧನೆ

0

ಕೆನರಾ ಮ್ಯಾರಥಾನ್ ನಲ್ಲಿ ನಿಟ್ಟೆ ವಿದ್ಯಾರ್ಥಿಗಳ ಸಾಧನೆ

ನಿಟ್ಟೆ: ಆಗಸ್ಟ್ 15 ರಂದು ಮಣಿಪಾಲದಲ್ಲಿ ಕೆನರಾ ಬ್ಯಾಂಕ್ ನಡೆಸಿದ ಪ್ರತಿಷ್ಠಿತ 3 ನೇ ಆವೃತ್ತಿಯ ಕೆನರಾ ಮ್ಯಾರಥಾನ್ ನಲ್ಲಿ ನಿಟ್ಟೆ ಕ್ರೀಡಾಪಟುಗಳು ಹಲವಾರು ಪದಕಗಳು ಮತ್ತು ನಗದು ಬಹುಮಾನವನ್ನು ಗೆದ್ದಿದ್ದಾರೆ. ಡಾ. ಎನ್.ಎಸ್.ಎ.ಎಂ ಪ್ರಥಮದರ್ಜೆ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ನಂದಿನಿ ಹಾಫ್ ಮ್ಯಾರಥಾನ್ (ಮುಕ್ತ ವಿಭಾಗ) ನಲ್ಲಿ ಚಿನ್ನದ ಪದಕವನ್ನು ಪಡೆದರು.

ತೃತೀಯ ಬಿಕಾಂ ವಿದ್ಯಾರ್ಥಿನಿ ಪ್ರತೀಕ್ಷಾ 3 ಕಿ.ಮೀ (ಮುಕ್ತ ವಿಭಾಗ) ನಲ್ಲಿ ಚಿನ್ನದ ಪದಕವನ್ನು ಪಡೆದರು. ಡಾ.ಎನ್.ಎಸ್.ಎ.ಎಂ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ದೀಪಿಕಾ 3 ಕಿ.ಮೀ (ಜೂನಿಯರ್ ವಿಭಾಗ) ವಿಭಾಗದಲ್ಲಿ ಬೆಳ್ಳಿ ಪದಕ ಪಡೆದರು. ಜೂನಿಯರ್ ವಿಭಾಗದಲ್ಲಿ 9 ನೇ ತರಗತಿಯ ರಕ್ಷಿತ್ ಕಂಚಿನ ಪದಕ ಪಡೆದರು. ಇದರೊಂದಿಗೆ ಕ್ರೀಡಾಪಟುಗಳು ಒಟ್ಟು 27,000 ರೂ.ಗಳ ನಗದು ಬಹುಮಾನವನ್ನು ಗೆದ್ದು ವಿದ್ಯಾಸಂಸ್ಥೆಗೆ ಕೀರ್ತಿ ತಂದಿರುವರು.

ಕಾರ್ಕಳ:ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ,ಸವಾರ ಗಂಭೀರ

0

ಕಾರ್ಕಳ:ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ,ಸವಾರ ಗಂಭೀರ

ಸವಾರನ ನಿಯಂತ್ರಣ ತಪ್ಪಿ ಸ್ಕೂಟಿ ರಸ್ತೆಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಸವಾರ ಗಂಭೀರ ಗಾಯಗೊಂಡ ಘಟನೆ ಎರ್ಲಪಾಡಿ ಗ್ರಾಮದ ಜಾರ್ಕಳ ಬಳಿ ನಡೆದಿದೆ.ಪರಿಣಾಮವಾಗಿ ಸವಾರ ಸುಧೀರ್ ಗಂಭೀರ ಗಾಯಗೊಂಡಿದ್ದಾರೆ.

ಆ.15ರಂದು ಸುಧೀರ್‌ ರವರು ಮಣಿಪಾಲದಲ್ಲಿ ಕೆಲಸ ಮುಗಿಸಿ ಬೆಳಿಗ್ಗಿನ ಜಾವ 4:00 ಗಂಟೆಗೆ ಎರ್ಲಪಾಡಿ ಗ್ರಾಮದ ಜಾರ್ಕಳ ಬಳಿ ಬರುತ್ತಿರುವಾಗ ಸ್ಕೂಟಿ ಹತೋಟಿ ತಪ್ಪಿ ರಸ್ತೆಯ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸುಧೀರ್‌ ರವರ ತಲೆಗೆ ಗಂಭೀರ ಗಾಯವಾಗಿತ್ತು.

ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯರು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರದಿಂದ 5 ಖಾತರಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ-ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

0

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಾಗೂ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜಭವನದ ಅಂಗಳದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು.

ರಾಜಭವನದ ಅಂಗಳದಲ್ಲಿರುವ ಮಹಾತ್ಮಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ನಂತರ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಭದ್ರತಾ ಅಧಿಕಾರಿ ಎಸಿಪಿ ನಿಂಗಾರೆಡ್ಡಿ ನೇತೃತ್ವದ ಪೊಲೀಸ್ ತಂಡದಿಂದ ಗೌರವ ರಕ್ಷೆ ನೀಡಲಾಯಿತು.

ಕರ್ನಾಟಕದ ಜನತೆಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಆಗಸ್ಟ್ 15 ನಮಗೆ ಐತಿಹಾಸಿಕ ದಿನ ಮತ್ತು ನಮಗೆ ಸ್ವಾತಂತ್ರ್ಯ ನೀಡಿದ ಆ ಮಹಾಪುರುಷರು ಮತ್ತು ಹುತಾತ್ಮರನ್ನು ಸ್ಮರಿಸುವ ದಿನ. ಈ ದಿನ ಅವರಿಂದ ಸ್ಫೂರ್ತಿ ಪಡೆದು ಹೊಸ ಹಾದಿ ಮತ್ತು ಹೊಸ ಸಂಕಲ್ಪದೊಂದಿಗೆ ಮುನ್ನಡೆಯಲು ಅವಕಾಶವಿದೆ ಎಂದರು.

ಕರ್ನಾಟಕ ದೇಶದ ಪ್ರಗತಿಪರ ರಾಜ್ಯ. ಕರ್ನಾಟಕ ರಾಜ್ಯವು ಅಭಿವೃದ್ಧಿ ಉಪಕ್ರಮಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಗುರಿಯೊಂದಿಗೆ ಮೂಲ ಸೇವೆಗಳಿಗೆ ಪ್ರವೇಶ ಸೇರಿದಂತೆ ವಿವಿಧ ನವೀನ ಮತ್ತು ಅಂತರ್ಗತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನಮ್ಮ ರಾಜ್ಯವು ಪ್ರವರ್ತಕವಾಗಿದೆ ಎಂದು ತಿಳಿಸಿದರು.

ಮಹಿಳೆಯರು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕಾಗಿ ಮತ್ತು ನಿರುದ್ಯೋಗಿ ಯುವಕರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರದಿಂದ 5 ಖಾತರಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. ಸ್ವಾತಂತ್ರ್ಯಾನಂತರ ದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಸರ್ವತೋಮುಖ ಅಭಿವೃದ್ಧಿಯಾಗಿದ್ದು, ದೇಶದ ಆರ್ಥಿಕತೆ ಸಾಕಷ್ಟು ಬಲಿಷ್ಠವಾಗಿದೆ. ಇಂದು ನಮ್ಮ ಆರ್ಥಿಕತೆಯು ವಿಶ್ವದ ಪ್ರಮುಖ ದೇಶಗಳಲ್ಲಿ 5 ನೇ ಸ್ಥಾನದಲ್ಲಿದೆ. ಸ್ವಾತಂತ್ರ್ಯದ 100 ನೇ ವರ್ಷಾಚರಣೆಯ ಸಂದರ್ಭದಲ್ಲಿ ಭಾರತವು 100% ವಿದ್ಯಾವಂತರಾಗಿ, ಆರ್ಥಿಕವಾಗಿ ಸದೃಢವಾಗಬೇಕು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿರಬೇಕು ಎಂಬುದು ಭಾರತದ ಜನರ ನಿರೀಕ್ಷೆಯಾಗಿದೆ. ಇದಕ್ಕಾಗಿ ನಾವೆಲ್ಲರೂ ದೇಶಕ್ಕಾಗಿ ನಮ್ಮ ಕರ್ತವ್ಯಗಳನ್ನು ಭಕ್ತಿ ಮತ್ತು ಸಮರ್ಪಣಾ ಭಾವದಿಂದ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ಪ್ರಸ್ತುತ ದೇಶ ಮತ್ತು ವಿಶ್ವದಲ್ಲಿ ಪರಿಸರ ಅಸಮತೋಲನದ ಗಂಭೀರ ಸಮಸ್ಯೆ ಇದೆ. ಪರಿಸರವನ್ನು ರಕ್ಷಿಸುವ ಮತ್ತು ಸುಧಾರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ‘ಅಮ್ಮನ ಹೆಸರಲ್ಲಿ ಒಂದು ಮರ’ ಅಭಿಯಾನದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡಬೇಕು. ಪ್ಯಾರಿಸ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದು ಉತ್ತಮ ಪ್ರದರ್ಶನ ನೀಡಿದ ಎಲ್ಲಾ ಭಾರತೀಯ ಕ್ರೀಡಾಪಟುಗಳಿಗೆ ಅಭಿನಂದನೆಗಳು ಎಂದು ಅವರು ಹೇಳಿದರು.

ನಮ್ಮ ದೇಶದ ಆರ್ಥಿಕತೆಯನ್ನು ಬಲಪಡಿಸಲು, ಪರಿಸರವನ್ನು ಸಂರಕ್ಷಿಸಲು ಮತ್ತು ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮುಂಚೂಣಿಗೆ ತರಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಮತ್ತು ದೇಶದ ಭವಿಷ್ಯದ ಪೀಳಿಗೆಗಳು ನಮ್ಮ ಬಗ್ಗೆ ಉತ್ತಮ ಗ್ರಹಿಕೆಯನ್ನು ಬೆಳೆಸಿಕೊಳ್ಳುವಂತೆ ಶ್ರಮಿಸೋಣ ಎಂದು ಗೌರವಾನ್ವಿತ ರಾಜ್ಯಪಾಲರು ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಜಭವನದ ವಿಶೇಷ ಕಾರ್ಯದರ್ಶಿಗಳಾದ ಪ್ರಭುಶಂಕರ್, ರಾಜ್ಯಪಾಲರ ಆಪ್ತ ಕಾರ್ಯದರ್ಶಿಗಳಾದ ಪಂಕಜ್ ಮೆಹ್ತಾ, ಉಪ ಕಾರ್ಯದರ್ಶಿಗಳ ಯೋಗೇಶ್ ಉಪಧ್ಯಾಯ್,ಎಡಿಸಿ ಸಾಬುಥಾಮಸ್, ಎಡಿಸಿ ಸಂದೀಪ್ ಶರ್ಮಾ, ಒಎಸ್ ಡಿಗಳಾದ ಶಂಕರ್ ಲಾಲ್ ಗುಜರ್, ಆದರ್ಶ್ ಪಾಸ್ವಾನ್ ಸೇರಿದಂತೆ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.