Home Blog Page 5

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: “ಬಾಂಧವ್ಯ” ವಿಶೇಷ ಕಾರ್ಯಕ್ರಮ

0

 

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಕೇವಲ ಸಂಸ್ಥೆಯಾಗಿರದೇ ಸದಸ್ಯರೆಲ್ಲರಲ್ಲಿ ಭಾವನಾತ್ಮಕ ಬಾಂಧವ್ಯ ನಿರ್ಮಿಸಿದೆ – ಸುರೇಶ್ ಅಬ್ಬನಡ್ಕ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಒಂದು ಕೇವಲ ಸಂಸ್ಥೆಯಾಗಿರದೇ ಸದಸ್ಯರೆಲ್ಲರಲ್ಲಿ ಭಾವನಾತ್ಮಕ ಕೌಟುಂಬಿಕ ಬಾಂಧವ್ಯದ ಸಂಬಂಧ ನಿರ್ಮಿಸಿದೆ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಸುರೇಶ್ ಅಬ್ಬನಡ್ಕ ಹೇಳಿದರು.

ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ 26ನೇ ವರ್ಷದ ವರ್ಷಾಚರಣೆಯ ಪ್ರಯುಕ್ತ ಜರಗಿದ “ಬಾಂಧವ್ಯ” ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಂದು ಸಾಧನೆಯೂ ಒಂದು ಕನಸಿನಿಂದ ಹುಟ್ಟಿಕೊಳ್ಳುತ್ತದೆ. ಅಂತಹ ನೂರಾರು ಕನಸನ್ನು ಹೊತ್ತಂತಹ ನಮ್ಮ ಗ್ರಾಮೀಣ ಭಾಗದ ಯುವ ಪ್ರತಿಭೆಗಳಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ಅವರ ಪ್ರತಿಭೆ ಸೂಕ್ತ ವೇದಿಕೆ ನಿರ್ಮಿಸಲು ನಮ್ಮ ಸಂಸ್ಥೆಯೂ ಯೋಜನೆಯನ್ನು ರೂಪಿಸುತ್ತಿದೆ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ನಿಕಟ ಪೂರ್ವಾಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕಾರ್ಯದರ್ಶಿ ಸತೀಶ್ ಅಬ್ಬನಡ್ಕ, ಮಹಿಳಾ ಸಂಘಟನಾ ಕಾರ್ಯದರ್ಶಿ ಸುಲೋಚನಾ ಕೋಟ್ಯಾನ್ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಸಂಘದ ಪೂರ್ವಾಧ್ಯಕ್ಷರುಗಳಾದ ಆನಂದ ಪೂಜಾರಿ, ಜೊತೆ ಕಾರ್ಯದರ್ಶಿ ಮಂಜುನಾಥ ಆಚಾರ್ಯ, ಕೋಶಾಧಿಕಾರಿ ಪ್ರದೀಪ್ ಸುವರ್ಣ, ಸದಸ್ಯರಾದ ಕೀರ್ತನ್ ಬೋಳ, ಪದ್ಮಶ್ರೀ ಪೂಜಾರಿ, ಪುಷ್ಪ ಕುಲಾಲ್, ವೀಣಾ ಪೂಜಾರಿ, ಹರಿಣಿ ಪೂಜಾರಿ, ವೀಣಾ ಆಚಾರ್ಯ, ಹರಿಣಾಕ್ಷಿ ಪೂಜಾರಿ, ಯೋಗೀಶ್ ಆಚಾರ್ಯ, ಶ್ರೀಕಾಂತ್ ಆಚಾರ್ಯ, ಸುಭಾಸ್ ಕೆಮ್ಮಣ್ಣು, ಕಿರಣ್ ಬೋಳ ಮೊದಲಾದವರಿದ್ದರು.

ಹರಿಯಾಣದಲ್ಲಿ ಬರೋಬ್ಬರಿ 25 ಲಕ್ಷ ಮತಗಳು ಕಳ್ಳತನ-ರಾಹುಲ್‌ ಗಾಂಧಿ ಸೀಮಾ, ಸ್ವೀಟಿ, ಸರಸ್ವತಿ ಹೆಸರಿನಲ್ಲಿ 22 ಬಾರಿ ಮತ ಚಲಾಯಿಸಿದ ಬ್ರೇಜಿಲ್‌ನ ಮಾಡೆಲ್‌

0

ಹರಿಯಾಣದಲ್ಲಿ ಬರೋಬ್ಬರಿ 25 ಲಕ್ಷ ಮತಗಳು ಕಳ್ಳತನ-ರಾಹುಲ್‌ ಗಾಂಧಿ

ಸೀಮಾ, ಸ್ವೀಟಿ, ಸರಸ್ವತಿ ಹೆಸರಿನಲ್ಲಿ 22 ಬಾರಿ ಮತ ಚಲಾಯಿಸಿದ ಬ್ರೇಜಿಲ್‌ನ ಮಾಡೆಲ್‌

2024ರ ವಿಧಾನಸಭಾ ಚುನಾವಣೆ ವೇಳೆ ಹರಿಯಾಣದಲ್ಲಿ ಬರೋಬ್ಬರಿ 25 ಲಕ್ಷ ಮತಗಳು ಕಳ್ಳತನ ಆಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೊಸ ಬಾಂಬ್‌ ಸಿಡಿಸಿದರು.

ನವದೆಹಲಿಯ ಎಐಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾತನಾಡಿದ ಅವರು, 2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿದೆ. ಬಿಜೆಪಿ ಗೆದ್ದಿರೋದು ನಕಲಿ ಮತಗಳಿಂದ ಅನ್ನೋದು ಖಚಿತವಾಗಿದೆ. ಮಹಾದೇವಪುರ, ಆಳಂದ ಆದ್ಮೇಲೆ ಇದು ಕೆಲವು ಕ್ಷೇತ್ರಗಳಿಗಷ್ಟೇ ಸೀಮಿತವಾಗಿಲ್ಲ, ಇಡೀ ರಾಜ್ಯ, ದೇಶವನ್ನೇ ಆವರಿಸಿಕೊಂಡಿದೆ ಅನಿಸಿತು. ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢದಲ್ಲೂ ಇದೇ ರೀತಿಯ ದೂರು ಬಂದಿದ್ದವು. ಈಗ ನಾವು ಹರಿಯಾಣವನ್ನ ಕೇಂದ್ರೀಕರಿಸಿದ್ದೇವೆ ಎಂದು ತಿಳಿಸಿದ್ರು.

ಹರಿಯಾಣ ಚುನಾವಣೆ ವೇಳೆ ಎಲ್ಲಾ ಸಮೀಕ್ಷೆಗಳಲ್ಲೂ ಕಾಂಗ್ರೆಸ್‌ 52 ರಿಂದ 62 ಸ್ಥಾನಗಳಷ್ಟು ಮುಂದಿತ್ತು. ಅದರಂತೆ ಹರಿಯಾಣ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಸ್ವೀಪ್ ಮಾಡಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೆ ಫಲಿತಾಂಶ ಸಂಪೂರ್ಣ ವಿಭಿನ್ನವಾಗಿತ್ತು. ಹರಿಯಾಣದಲ್ಲಿ ಫಸ್ಟ್‌ ಟೈಮ್‌ ಅಂಚೆ ಮತಗಳು ಮತ್ತು ಸಾಮಾನ್ಯ ಮತಗಳಲ್ಲಿ ವ್ಯತ್ಯಾಸ ಆಗಿರುವುದು ಕಂಡುಬಂದಿತು ಎಂದು ಆರೋಪಿಸಿದರು.

ಕಾಂಗ್ರೆಸ್‌ ಕೇವಲ 22,779 ಮತಗಳಿಂದ ಸೋತಿದೆ. ಆದ್ರೆ ಒಟ್ಟು 1.18 ಲಕ್ಷ ಮತಗಳು ವ್ಯತ್ಯಾಸ ಇದೆ. ಅಷ್ಟೇ ಅಲ್ಲ ಹರಿಯಾಣದಲ್ಲಿ 25 ಲಕ್ಷ ಮತಗಳ ಕಳ್ಳತನ ನಡೆದಿದೆ. ಶೇ.12.5 ರಷ್ಟು ನಕಲಿ ಮತಗಳು, 93,000 ವಿಳಾಸಗಳು ಅಮಾನ್ಯವಾದವುಗಳು ಎಂದು ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ.

ಒಬ್ಬ ಮಹಿಳೆಯಿಂದ 22 ಬಾರಿ ವೋಟ್‌
ಒಬ್ಬ ಮಹಿಳೆ ಸೀಮಾ, ಸ್ವೀಟಿ, ಸರಸ್ವತಿ ಸೇರಿದಂತೆ ಹಲವು ಹೆಸರಿನಲ್ಲಿ 22 ಬಾರಿ ಮತ ಚಲಾಯಿಸಿದ್ದಾಳೆ, 10 ಬೂತ್ ನಲ್ಲಿ ಮತ ಚಲಾವಣೆಯಾಗಿದೆ. ಈ ಮಹಿಳೆ ಬ್ರೇಜಿಲ್‌ನ ಮಾಡೆಲ್‌ ಅನ್ನೋದು ನಂತರ ಗೊತ್ತಾಗಿದೆ. 25 ಲಕ್ಷ ಮತ ಕಳ್ಳತನ ಆಗಿದೆ ಅನ್ನೋದಕ್ಕೆ ಈಕೆಯೇ ಉದಾಹರಣೆ ಎಂದು ದಾಖಲೆ ಸಮೇತ ಸತ್ಯ ಸಂಗತಿಯನ್ನ ಬಿಚ್ಚಿಟ್ಟರು.

ಒಂದೇ ಗುರುತಿನಲ್ಲಿ ಹಲವು ಮತಗಳನ್ನ ಚಲಾಯಿಸಲು ನಕಲಿ ಫೋಟೋಗಳನ್ನ ಬಳಸಲಾಗಿದೆ. ಹರಿಯಾಣ ಚುನಾವಣೆಯ 2 ಕೋಟಿ ಮತಗಳಲ್ಲಿ 25 ಲಕ್ಷ ಮತಗಳು ಕಳ್ಳತನವಾಗಿದೆ. ಪ್ರತಿ 8 ಮತದಾರರಲ್ಲಿ ಒಂದು ಮತ ನಕಲಿ ಆಗಿದೆ. ಒಂದು ಗುರುತಿನ ಚೀಟಿಯಲ್ಲಿ ಒಂದೇ ಕ್ಷೇತ್ರದಲ್ಲಿ ನೂರು ಮತಗಳು ಕಂಡುಬಂದಿವೆ ಇವೆಲ್ಲವೂ ಮತಗಳ್ಳತನಕ್ಕೆ ಉದಾಹರನೆ ಎಂದು ರಾಗಾ ಬಾಂಬ್‌ ಹಾಕಿದರು.

ಕ್ರಿಯೇಟಿವ್ ಕಾಲೇಜಿನಲ್ಲಿ ಸ್ಪೂರ್ತಿ ಮಾತು 12ನೇ ಸರಣಿ ಕಾರ್ಯಕ್ರಮ

0

ಜೀವನವನ್ನು ಬೆಳಗಿಸಬೇಕೆಂದರೆ ಆತ್ಮವಿಶ್ವಾಸ ಮತ್ತು ದೃಢನಿಶ್ಚಯ ಮುಖ್ಯ – ಎನ್.ಆರ್.ದಾಮೋದರ ಶರ್ಮ

ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಫೂರ್ತಿ ಮಾತು ಸರಣಿ ಕಾರ್ಯಕ್ರಮ – 12ನ್ನು ನ. 3 ರಂದು ಆಯೋಜಿಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ವಾಗ್ಮಿಗಳಾದ ಎನ್.ಆರ್. ದಾಮೋದರ ಶರ್ಮ ರವರು ‘ಬೆಳಕಾಗಲಿ ಬಾಳು’ ಶೀರ್ಷಿಕೆಯಡಿಯಲ್ಲಿ ಪ್ರೇರಣೆಯ ಮಾತುಗಳನ್ನಾಡುತ್ತಾ, “ಜೀವನವನ್ನು ಬೆಳಗಿಸಬೇಕೆಂದರೆ ಆತ್ಮವಿಶ್ವಾಸ ಮತ್ತು ದೃಢ ನಿಶ್ಚಯ ಮುಖ್ಯ. ಪ್ರತಿದಿನ ಹೊಸದಾಗಿ ಕಲಿಯುವ ಮನಸ್ಸು ಬೆಳೆಸಿಕೊಳ್ಳಿ. ಜೀವನದಲ್ಲಿ ಸಣ್ಣ ಪ್ರಯತ್ನವೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಕ್ಷಣಿಕ ಸಂತೋಷಕ್ಕೆ ಹಾತೊರೆಯುವ ಮನಸ್ಸನ್ನು ನಿಯಂತ್ರಿಸಿ, ಜೀವನವನ್ನು ಯಶಸ್ಸಿನ ದಡಕ್ಕೆ ಕರೆದೊಯ್ಯಬೇಕು. ಇತರರ ಮಾತಿಗೆ ಕಿವಿಯಾಗುವ ಮೊದಲು ಆತ್ಮದ ಮಾತನ್ನು ಆಲಿಸೋಣ. ತಾಯಿಯ ತ್ಯಾಗಕ್ಕೆ ಸಮನಾದ ತ್ಯಾಗ, ಪ್ರೀತಿ ಬೇರೊಂದಿಲ್ಲ. ತಂದೆಯ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಭಾರತದ ಜ್ಞಾನ ಪರಂಪರೆ ನಮಗೆ ಹೇಳಿರುವ ಉಪದೇಶಗಳನ್ನು ಅರಿತುಕೊಳ್ಳೋಣ. ಮಾತೃಭೂಮಿಯ ಬಗೆಗಿನ ಪ್ರೀತಿ ಗೌರವ ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತವೆ ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಹಾಗೂ ಅಶ್ವತ್ ಎಸ್.ಎಲ್ ರವರು ಗೌರವ ಉಪಸ್ಥಿತಿ ವಹಿಸಿದ್ದರು. ಬೋಧಕ-ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂಸ್ಥೆಯ ವತಿಯಿಂದ ಎನ್. ಆರ್. ದಾಮೋದರ ಶರ್ಮರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಕೃತ ಉಪನ್ಯಾಸಕಿ ಡಾ. ಸೌಂದರ್ಯ ಲಕ್ಷ್ಮಿರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರ ಹಸ್ತಾಂತರ

0

 

ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆಯವರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಅಲೆವೂರು ಹರೀಶ್ ಕಿಣಿಯವರಿಗೆ ಹಸ್ತಾಂತರಿಸಿದರು.

ಬೆಂಗಳೂರಿನ ಕ್ರೀನ್ಸ್ ರಸ್ತೆಯಲ್ಲಿರುವ ಕೆ.ಪಿ.ಸಿ.ಸಿ ಕಛೇರಿಯಲ್ಲಿ ನಡೆದ ವಿವಿಧ ಜಿಲ್ಲಾದ್ಯಕ್ಷರುಗಳ ಮತ್ತು ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಸಹ ಅಧ್ಯಕ್ಷರಾದ ಮಾಜಿ ರಾಜ್ಯ ಸಭಾ ಸದಸ್ಯ ಹನುಮಂತಯ್ಯ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಉಸ್ತುವಾರಿ,ರಾಜ್ಯ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್, ಇನ್ನೊರ್ವ ರಾಜ್ಯ ಉಪಾಧ್ಯಕ್ಷ (ಆಡಳಿತ)ಮುನೀರ್ ಜನ್ಸಾಲೆ ಮೊದಲಾದವರು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳಲ್ಲಿ ಅಲೆವೂರು ಹರೀಶ್ ಕಿಣಿ ಅಧ್ಯಕ್ಷರು, ದಿನಕರ್ ಶೆಟ್ಟಿ ಸುಧಾಕರ್ ಪೂಜಾರಿ ಉಪಾಧ್ಯಕ್ಷರು, ಶ್ರೀಧರ್ ಪಿ.ಎಸ್, ಐಡಾ ಗಿಲ್ಬರ್ಟ್ ಡಿ ಸೋಜ, ಗಣೇಶ್ ರಾಜ್,ಅನಿಲ್ ಎಸ್. ಪೂಜಾರಿ ಜಿಲ್ಲಾ ಸಂಯೋಜಕರು, ಅನಿಲ್ ಶೆಟ್ಟಿ ಸರಸ್ಕೃತಿ ವಿನಾಯ್, ಸುಮನ ಎಸ್., ಅಭಿಷೇಕ್ ಎನ್.ಮೂರ್ತಿ ಜಂಟಿ ಸಂಯೋಜಕರಾಗಿ ಆಯ್ಕೆ ಗೊಂಡರೆ ದಯಾನಂದ ಡಿ. ಜಿಲ್ಲಾ ಖಜಾಂಚಿ, ಸದಸ್ಯರಾಗಿ ಗಣೇಶ್, ಬಿ. ಶ್ರೀಧರ್ ಶೇಟ್, ಯೋಗೀಶ್ ಆಚಾರ್ಯ,ಗೋವರ್ಧನ್ ಜೋಗಿ, ಇಕ್ಯಾಲ್ ಮನ್ನ ಸುಪ್ರೀತ್ ಶೆಟ್ಟಿ, ಜಯ ಶೇರಿಗಾರ್, ಪ್ರಭಾಕರ್ ಆಚಾರ್ಯ, ಆದರ್ಶ್ ಯು, ಚಂದ್ರಿಕಾ ಶೆಟ್ಟಿ,ಎಮ್ ಪ್ರೇಮಾನಂದ ಮಿನೇಜಸ್ ಆಗಿ ನೇಮಕಗೊಡರು.

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ರಸ್ತೆ ರಿಪೇರಿ ಅಬ್ಬನಡ್ಕದ ಯುವಕರಿಂದ ರಸ್ತೆ ರಿಪೇರಿ ಮಾಡುವ ಮೂಲಕ ಮರುಡಾಮರೀಕರಣಕ್ಕೆ ಆಗ್ರಹ

0

 

ನಿರಂತರ ತನ್ನದೇ ಆದ ವಿಶೇಷ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಪರಿಸರದಾದ್ಯಂತ ಮನೆ ಮಾತಾಗಿರುವ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ ಸಂಘದ 26ನೇ ವರ್ಷಾಚರಣೆ ಅಂಗವಾಗಿ ಸ್ವಾತಂತ್ಯ ಹೋರಾಟಗಾರರು, ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲರ 150ನೇ ಜನ್ಮ ದಿನಾಚರಣೆ ಹಾಗೂ 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅಬ್ಬನಡ್ಕ ರಸ್ತೆಯಲ್ಲಿ ಹಲವಾರು ಗುಂಡಿಗಳು ಬಿದ್ದು ವಾಹನ ಸವಾರರಿಗೆ ಸಂಚಾರಿಸಲು ಬಹಳಷ್ಟು ಕಷ್ಟವಾಗುತ್ತಿದ್ದನ್ನು ಮನಗಂಡ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ಸದಸ್ಯರೆಲ್ಲರೂ ಕಾಯಕವೇ ಕೈಲಾಸವೆಂಬಂತೆ ಎಲ್ಲರೂ ಒಟ್ಟು ಸೇರಿ ರಸ್ತೆಯಲ್ಲಿರುವ ಗುಂಡಿಗಳಿಗೆ ಮಣ್ಣು ಹಾಕುವ ಕೆಲಸ ಕಾರ್ಯವನ್ನು ನಡೆಸಿದರು.

ಮೂರು ಗ್ರಾಮಕ್ಕೆ ಸಂಪರ್ಕದ ಕೊಂಡಿಯಾಗಿರುವ ಅಬ್ಬನಡ್ಕ ರಸ್ತೆ

ಕೆದಿಂಜೆಯಿಂದ ಬೋಳ ಹಾಗೂ ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಂಪರ್ಕ ಪಡೆಯುವ ಅಬ್ಬನಡ್ಕ ರಸ್ತೆ ಇತ್ತೀಚೆಗೆ ತೀವ್ರ ಹದ್ದಗೆಟ್ಟಿದ್ದು, ಹೊಂಡಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಮಸ್ಯೆ ಸೃಷ್ಟಿಯಾಗಿದೆ. ಅಬ್ಬನಡ್ಕ ರಸ್ತೆ ನಂದಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ್ದು, ಹೊಂಡಗುಂಡಿಗಳ ಕೂಪದಿಂದಾಗಿ ವಾಹನದಿಂದ ಬಿದ್ದು ಅಪಘಾತಗಳು ನಡೆಯುತ್ತಲೇ ಇದೆ. ಮಳೆಗಾಲ ಸಂದರ್ಭದಲ್ಲಿ ಹೊಂಡಗಳಲ್ಲಿ ನೀರು ತುಂಬಿರುವುದರಿಂದ ರಸ್ತೆಯನ್ನು ಗುರುತಿಸಲು ವಾಹನ ಚಾಲಕರು ಹರಸಾಹಸ ಪಡವಂತಾಗಿದೆ.

ಈ ರಸ್ತೆಯಿಂದ ನಾಲ್ಕು ಗ್ರಾಮಕ್ಕೆ ಅನೂಕೂಲ
ಅಬ್ಬನಡ್ಕ ರಸ್ತೆಗೆ ಮರುಡಾಮರೀಕರಣವಾದರೆ ನಂದಳಿಕೆ, ಕೆದಿಂಜೆ, ಬೆಳ್ಮಣ್ಣು, ಬೋಳ ಹೀಗೆ ನಾಲ್ಕು ಗ್ರಾಮದ ಗಡಿ ಭಾಗದಲ್ಲಿ ಹಾದು ಹೋಗುತ್ತಿದ್ದು, ನಾಲ್ಕು ಗ್ರಾಮದ ಗ್ರಾಮಸ್ಥರಿಗೆ ತುಂಬಾ ಅನುಕೂಲಕರವಾಗಲಿದೆ. ಆದರೆ ಹೊಂಡ ಗುಂಡಿಗಳೇ ಅಧಿಕವಾಗಿರುವ ಈ ರಸ್ತೆಯಲ್ಲಿ ಸಂಚರಿಸಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದು, ಅಪಘಾತ, ವಾಹನ ಸ್ಕೀಡ್ ಆಗುವ ಕುರಿತು ಭೀತಿ ಇದೆ.

ಹಲವು ಪ್ರಸಿದ್ಧ ದೇವಳಕ್ಕೆ ಹೋಗುವ ಪ್ರಮುಖ ರಸ್ತೆ
ಕೆದಿಂಜೆ ಮಂಜರಪಲ್ಕೆ ಮೂಲಕ ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮುಂಡ್ಕೂರು ದೇವಸ್ಥಾನ, ಕಟೀಲು ದೇವಸ್ಥಾನ, ಕಜೆ ಮಾರಿಗುಡಿ, ಬೋಳ ಶ್ರೀ ರುದ್ರ ಸೋಮನಾಥೇಶ್ವರ ದೇವಾಲಯ, ಬೋಳ ವೀರ ಮಾರುತಿ ದೇವಸ್ಥಾನ, ಕೊಡ್ಯಡ್ಕ, ಕಡಂದಲೆ, ಸಚ್ಚೇರಿಪೇಟೆ, ಬೋಳ ಜೈನ ಬಸದಿ, ಬೋಳ ಡೋನ್ ಬೋಸ್ಕೋ ಚರ್ಚ್, ಬಜಪೆ ವಿಮಾನ ನಿಲ್ದಾಣಕ್ಕೂ ಪ್ರಮುಖ ಸಂಪರ್ಕ ರಸೆ ಇದಾಗಿದೆ. ಸಣ್ಣಪುಟ್ಟ ವಾಹನಗಳಲ್ಲಿ ಸಂಚರಿಸುವವರಿಗೆ ಈ ರಸ್ತೆ ನರಕಯಾತನೆ ನೀಡುತ್ತಿದೆ. ಹೊಂಡಗಳನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡಿಕೊಡುವಂತೆ ಜನಪ್ರತಿನಿಧಿಗಳಲ್ಲಿ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿಕೊಂಡರೂ ಈವರೆಗೆ ಪ್ರತಿಕ್ರಿಯೆ ಶೂನ್ಯ.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ
ಈ ಮಾರ್ಗದಲ್ಲಿ ಸರಕಾರಿ ಹಾಗೂ ಖಾಸಗಿ ಬಸ್ ಸೌಲಭ್ಯ ಇಲ್ಲದಿರುವುದರಿಂದ ಸ್ಥಳೀಯ ಗ್ರಾಮಗಳ ವಿದ್ಯಾರ್ಥಿಗಳು ಅನಿವಾರ್ಯವಾಗಿ ನಡೆದುಕೊಂಡೇ ಶಾಲಾ, ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಈ ಸಂದರ್ಭದಲ್ಲಿ ವಾಹನ ಸಂಚಾರದಿಂದ ಹೊಂಡಗಳಲ್ಲಿರುವ ಕೆಸರು ವಿದ್ಯಾರ್ಥಿಗಳ ಮೇಲೆ ಸಿಡಿಯುತ್ತಿದೆ. ವಿದ್ಯಾರ್ಥಿಗಳೂ ಈ ಕುರಿತು ತೀವ್ರ ಅಸಮಾಧಾನ ವ್ಯಕ್ರಪಡಿಸುತ್ತಿದ್ದಾರೆ.

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸದಸ್ಯರಿಂದಲೇ ಶ್ರಮದಾನ ಗ್ರಾಮಸ್ಥರಿಂದ ಮೆಚ್ಚುಗೆ

ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷ ಸುರೇಶ್ ಅಬ್ಬನಡ್ಕ ನೇತೃತ್ವದಲ್ಲಿ ನಡೆದ ಶ್ರಮದಾನ ಕಾರ್ಯಕ್ರಮದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಿಕಟ ಪೂರ್ವಾಧ್ಯಕ್ಷರಾದ ದಿನೇಶ್ ಪೂಜಾರಿ ಬೀರೊಟ್ಟು, ಕಾರ್ಯದರ್ಶಿ ಸತೀಶ್ ಅಬ್ಬನಡ್ಕ, ಸದಸ್ಯರಾದ ಪದ್ಮಶ್ರೀ ಪೂಜಾರಿ, ಹರೀಶ್ ಪೂಜಾರಿ, ಪ್ರದೀಪ್ ಸುವರ್ಣ, ಯೋಗೀಶ್ ಆಚಾರ್ಯ, ಕಿರಣ್ ಬೋಳ, ಸುಭಾಸ್ ಕೆಮ್ಮಣ್ಣು, ಶ್ರೀಕಾಂತ್ ಆಚಾರ್ಯ, ಅಭೀಷೇಕ್ ಕುಲಾಲ್, ಅನ್ನಪೂರ್ಣ ಕಾಮತ್, ಅವಿನಾಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಅಬ್ಬನಡ್ಕ ಮಾರ್ಗದಲ್ಲಿ ಹೊಂಡಗಳದ್ದೇ ಸಂಖ್ಯೆ ಹೆಚ್ಚಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಅಬ್ಬನಡ್ಕ ರಸ್ತೆ ದುರಸ್ಥಿ ಬಗ್ಗೆ ಮನವಿ ನೀಡುತಿದ್ದರೂ ಅಧಿಕಾರಿಗಳು ಪೊಳ್ಳು ಭರವಸೆ ನೀಡುತಿದ್ದಾರೆಯೇ ಹೊರತು ದುರಸ್ಥಿಗೊಳಿಸುವತ್ತ ಆಸಕ್ತಿ ವಹಿಸುತಿಲ್ಲ. ದುರಸ್ಥಿ ಕಾರ್ಯ ಶೀಘ್ರವೇ ಆರಂಭಿಸದಿದ್ದರೆ ಗ್ರಾಮಸ್ಥರ ಜೊತೆಗೆ ಹೋರಾಟ ಮಾಡುತ್ತೇವೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಲೇ ಇರುತ್ತವೆ. ರಸ್ತೆಗಳ ಹೊಂಡ ಮುಚ್ಚಿ ಮರುಡಾಮರೀಕರಣವನ್ನು ಅಧಿಕಾರಿಗಳು ಕೂಡಲೇ ಮಾಡುವಲ್ಲಿ ಮುತುವರ್ಜಿ ವಹಿಸಬೇಕಿದೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಸುರೇಶ ಅಬ್ಬನಡ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಗುಡ್ಡಗಾಡು ಓಟದ ಸ್ಪರ್ಧೆ : ಕಾರ್ಕಳ ಜ್ಞಾನಸುಧಾದ ಇಬ್ಬರು ರಾಜ್ಯಮಟ್ಟಕ್ಕೆ

0

 

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಡಾ.ಎನ್.ಎಸ್.ಎ.ಎಂ ಪದವಿ ಪೂರ್ವ ಕಾಲೇಜು ನಿಟ್ಟೆ ಇವರ ಜಂಟಿ ಆಶ್ರಯದಲ್ಲಿ ಜರುಗಿದ ಉಡುಪಿ ಜಿಲ್ಲಾ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿಯ ಶ್ರೀಶಾಂತ್ ಕೆ ಮತ್ತು ದ್ವಿತೀಯ ಪಿಯುಸಿಯ ಪ್ರಜ್ವಲ್ ಎಸ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಾಧಕ ವಿದ್ಯಾರ್ಥಿಯನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ, ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.

ಮಣಿಪಾಲ ಜ್ಞಾನಸುಧಾದ ಪಾರ್ಥ ವಾಟರ್ ಪೋಲೊ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

 

ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ ಬಸವನಗುಡಿ ಬೆಂಗಳೂರಿನಲ್ಲಿಆಯೋಜಿಸಿದ ರಾಜ್ಯಮಟ್ಟದ ವಾಟರ್ ಪೋಲೊ ಸ್ಪರ್ಧೆಯಲ್ಲಿ ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು, ವಿದ್ಯಾ ನಗರದ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪಾರ್ಥ ಜೆ ಗೌಡ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.

ಇವರು ಹಾಸನ ಜಿಲ್ಲೆಯ ಅರಸೀಕೆರೆಯ ದಾಸನಹಳ್ಳಿಯ ಡಿ.ಜೆ. ಜಗದೀಶ್ ಹಾಗೂ ಸುಜಾತ ಎಸ್.ಎಸ್. ದಂಪತಿಗಳ ಸುಪುತ್ರ. ಸಾಧಕ ವಿದ್ಯಾರ್ಥಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರು, ಹಾಗೂ ಬೋಧಕ ಬೋಧಕೇತರ ವರ್ಗ ಅಭಿನಂದಿಸಿದ್ದಾರೆ.

ಮಣಿಪಾಲ ಜ್ಞಾನಸುಧಾದ ಚಿರಾಗ್ ಅಥ್ಲೆಟಿಕ್ಸ್ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗದಿಂದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ನಲ್ಲಿ ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು, ವಿದ್ಯಾ ನಗರದ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚಿರಾಗ್ ಸಿ. ಪೂಜಾರಿ ಇವರು 100ಮೀ. ಹಾಗೂ 200 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.

ಇವರು ಹೆಬ್ರಿ ಸಂತೆಕಟ್ಟೆಯ ಚಂದ್ರ ಪೂಜಾರಿ ಹಾಗೂ ಜಯಲಕ್ಷ್ಮಿ ದಂಪತಿಗಳ ಸುಪುತ್ರ. ಸಾಧಕ ವಿದ್ಯಾರ್ಥಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರು, ಹಾಗೂ ಬೋಧಕ ಬೋಧಕೇತರ ವರ್ಗ ಅಭಿನಂದಿಸಿದ್ದಾರೆ.

ಕ್ರೈಸ್ಟ್ ಕಿಂಗ್: ರಾಜ್ಯಮಟ್ಟದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಶ್ರಾವ್ಯ ಶೆಟ್ಟಿ ಹಾಗೂ ವರುಣ ಶೆಟ್ಟಿ ಪ್ರಥಮ ಸ್ಥಾನ

0

 

ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ರಾಮನಗರ ಜಿಲ್ಲೆ ಹಾಗೂ ಗ್ರಾಮಾಂತರ ಪ.ಪೂ ಕಾಲೇಜು, ಕನಕಪುರ ಇವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವರುಣ ಶೆಟ್ಟಿ ಹಾಗೂ ಪ್ರಥಮ ವಿಜ್ಞಾನ ವಿಭಾಗದ ಶ್ರಾವ್ಯ ಶೆಟ್ಟಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಮಣಿಪಾಲ ಜ್ಞಾನಸುಧಾ ವಿದ್ಯಾರ್ಥಿನಿ ನೈಜ ವಾಲಿಬಾಲ್ ನಲ್ಲಿ ರಾಷ್ಟ್ರಮಟ್ಟಕ್ಕೆ

0

ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ವತಿಯಿಂದ ರಾಮನಗರದಲ್ಲಿ ಅ.31 ಹಾಗೂ ನ.1 ರಂದು ನಡೆದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮಣಿಪಾಲ್ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ವಿದ್ಯಾನಗರದ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನೈಜ ಆರ್ ಹೆಗ್ಡೆ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕುಕ್ಕೆಹಳ್ಳಿ ರಾಜೇಶ್ ಹೆಗ್ಡೆ ಹಾಗೂ ಸಂಧ್ಯಾ ಕುಮಾರಿ ಶೆಟ್ಟಿಯವರ ಸುಪುತ್ರಿ.

ಸಾಧಕ ವಿದ್ಯಾರ್ಥಿನಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರು, ಹಾಗೂ ಬೋಧಕ ಬೋಧಕೇತರ ವರ್ಗ ಅಭಿನಂದಿಸಿದ್ದಾರೆ.