Home Blog Page 10

ಹಲವಾರು ಮೃತದೇಹ ಹೂತು ಹಾಕಿದ ಆರೋಪದ ಪ್ರಕರಣ

0

ಹಲವಾರು ಮೃತದೇಹ ಹೂತು ಹಾಕಿದ ಆರೋಪದ ಪ್ರಕರಣ

ಧರ್ಮಸ್ಥಳ ಗ್ರಾಮ ಪಂಚಾಯತ್ ನ 4 ಮಂದಿ ಮಾಜಿ ಅಧ್ಯಕ್ಷರು ಎಸ್.ಐ.ಟಿ ವಿಚಾರಣೆಗೆ ಹಾಜರು

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಆರೋಪದ ಪ್ರಕರಣ ಸಂಬಂಧ ಎಸ್ ಐ ಟಿ ವಿಚಾರಣೆ ಮುಂದುವರಿದಿದ್ದು ಅಧಿಕಾರಿಗಳು ನಾಲ್ಕು ಮಂದಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಿಗೆ ನೋಟೀಸ್ ನೀಡಿದ್ದು, ಅದರಂತೆ ವಿಚಾರಣೆಗೆ ಹಾಜರಾಗಿದ್ದಾರೆ.

ಧರ್ಮಸ್ಥಳ ಗ್ರಾಮ ಪಂಚಾಯತ್ ನಾಲ್ಕು ಮಂದಿ ಮಾಜಿ ಅಧ್ಯಕರಾದ ಕೇಶವ್ ಬೆಳಾಲ್, ಪ್ರಭಾಕರ ಪೂಜಾರಿ, ಗೀತಾ,ಹಾಗೂ ಚಂದನ್ ಕಾಮತ್ ಇವರು ಸೆ.29 ರಂದು ಎಸ್.ಐ.ಟಿ ವಿಚಾರಣೆ ಹಾಜರಾಗಿದ್ದಾರೆ.

ಈ ನಾಲ್ಕು ಮಂದಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಯುಡಿಆ‌ರ್ ಪ್ರಕರಣದಲ್ಲಿ ಶವ ಹೂತ ಬಗ್ಗೆ ಬಿಲ್‌ ಪಾವತಿಯಾಗಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಹಾಗೂ ತನಿಖೆಗಾಗಿ ಕರೆಸಿರುವುದಾಗಿ ತಿಳಿದು ಬಂದಿದೆ.

ಮಣಿಪಾಲ ಜ್ಞಾನಸುಧಾ: ಎನ್.ಎಸ್.ಎಸ್. ಘಟಕ ಉದ್ಘಾಟನೆ

0

ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಎನ್. ಎಸ್. ಎಸ್. ಸಹಕಾರಿ : ಡಾ. ಗಣನಾಥ ಎಕ್ಕಾರ್

ಶ್ರಮಯೇವ ಜಯತೆ ಎನ್ನುವ ಧ್ಯೇಯದೊಂದಿಗೆ ದೇಶದಲ್ಲಿ ಅತೀ ಹೆಚ್ಚು ಸದಸ್ಯರ ಸಂಘಟನೆ ಎನ್. ಎಸ್. ಎಸ್.. ಅಂತಹ ಸುಭದ್ರ ತಳಹದಿಯ ಸಂಘಟನೆ ಸದಸ್ಯರಾಗಿರುವುದೇ ಹೆಮ್ಮೆಯ ವಿಷಯ. ಯುವಜನತೆಗೆ ವಿಧ್ಯಾಭ್ಯಾಸದ ಜೊತೆಗೆ ಸಾಮಾಜಿಕ ಜವಾಬ್ದಾರಿ ಸೇವಮಾನೋಭಾವನೆ ರೂಢಿಸಲು ಸೃಷ್ಟಿಯಾದ ಎನ್.ಎಸ್.ಎಸ್. ಕ್ರಾಂತಿಕಾರಿ ಸಾಧನಾ ಪಥದಲ್ಲಿ ಸಾಗುತ್ತಾ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುತ್ತಿದೆ. ಎಂದು ಕರ್ನಾಟಕ ಸರಕಾರ(ಎನ್.ಎಸ್.ಎಸ್ ಕೋಶ)ದ ನಿಕಟಪೂರ್ವ ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಡಾ. ಗಣನಾಥ ಎಕ್ಕಾರ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಹೊಸ ಘಟಕ ಉದ್ಘಾಟಿಸಿ ಮಾತನಾಡಿದರು. ಎನ್.ಎಸ್.ಎಸ್. ಇತಿಹಾಸ ಹಾಗೂ ಪ್ರಸಕ್ತ ಸಾಧನೆಗಳ ವಿವರಣೆ ನೀಡಿ ಮಣಿಪಾಲ ಜ್ಞಾನಸುಧಾ ಹೊಸ ಎನ್.ಎಸ್.ಎಸ್. ಘಟಕಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ವಿಭಾಗ) ಮಂಗಳೂರು ವಿಭಾಗದ ಎನ್.ಎಸ್.ಎಸ್. ವಿಭಾಗಾಧಿಕಾರಿ ಸವಿತಾ ಎರ್ಮಾಳ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪೂರ್ವ ವಿದ್ಯಾರ್ಥಿನಿ ಎನ್.ಎಸ್.ಎಸ್. ರಾಜ್ಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ ಸಮಿಯ ಹೆಗ್ಡೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಹೊಸ ಎನ್.ಎಸ್. ಎಸ್. ಘಟಕಕ್ಕೆ ಶುಭ ಹಾರೈಸಿ, ವಿದ್ಯಾರ್ಥಿಗಳು ಸಮಾಜದ ಕೊಡುಗೆಗಳಾಗಿ ಮೂಡಿ ಬರಬೇಕು ಎಂದರು.

ಎನ್.ಎಸ್.ಎಸ್. ದಿನಾಚರಣೆಯ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಜೆಕಾರು ಪದ್ಮಾಗೋಪಾಲ್ ಎಜುಕೇಶನ್ ಟ್ರಸ್ಟ್(ರಿ)ನ ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಬಂಡಿ, ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್, ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಶೆಟ್ಟಿ, ಎನ್.ಎಸ್.ಎಸ್. ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಪ್ರೀತ್ ಹಾಗೂ ಸಿಂಚನ ವೇದಿಕೆಯಲ್ಲಿದ್ದರು. ಉಪಪ್ರಾಂಶುಪಾಲರಾದ ಹೇಮಂತ್, ಉಪನ್ಯಾಸಕ ಬಳಗ ಉಪಸ್ಥಿತರಿದ್ದರು.

ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಹಾಗೂ ಕಾಲೇಜಿನ ಉಪ ಪ್ರಾಂಶುಪಾಲರಾದ ರವಿ ಜಿ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ನಿರೂಪಿಸಿ ವಂದಿಸಿದರು.

ನಿಟ್ಟೆ: ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕೆಡೆಟ್ ಪ್ರಾಂಜಲ್ ಉಪಾಧ್ಯಾಯ

0

 

ಸೆ. 8 ರಿಂದ 15 ರವರೆಗೆ ಒಡಿಸ್ಸಾದ ಐಎನ್ಎಸ್ ಚಿಲ್ಕಾದಲ್ಲಿ ನಡೆದ ಅಖಿಲ ಭಾರತ ವಿಹಾರ ನೌಕೆ ರೆಗಟ್ಟಾ 2025 ರಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ 6 ಕೆ.ಎ.ಆರ್ ನೌಕಾ ಉಪಘಟಕ ಎನ್.ಸಿ.ಸಿ, ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕೆಡೆಟ್ ಪ್ರಾಂಜಲ್ ಉಪಾಧ್ಯಾಯ (ಕಂಪ್ಯೂಟರ್ ಸೈನ್ಸ್ (ಸೈಬರ್ ಸೆಕ್ಯೂರಿಟಿ) 3 ನೇ ಸೆಮಿಸ್ಟರ್ ವಿದ್ಯಾರ್ಥಿ) ಅವರು ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದರು.

ನಿಟ್ಟೆ: ಎನ್.ಸಿ.ಸಿ ಕೆಡೆಟ್ ಗಳ ಸಾಧನೆ

0

 

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 6 ಕೆ.ಎ.ಆರ್ ನೌಕಾ ಉಪಘಟಕದ ಕೆಡೆಟ್ಗಳಾದ ಕೆಡೆಟ್ ಕ್ಯಾಪ್ಟನ್ ಸ್ವಸ್ತಿಕ್ ಎಸ್ ದೇವಾಡಿಗ (7 ನೇ ಸೆಮಿಸ್ಟರ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಡೇಟಾ ಸೈನ್ಸ್ ವಿಭಾಗ), ಪಿಒ ಕೆಡೆಟ್ ರಿಶೋನ್ ಆರೋಲ್ ಮಸ್ಕರೇನ್ಹಾಸ್ (7 ನೇ ಸೆಮಿಸ್ಟರ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗ) ಮತ್ತು ಲೀಡಿಂಗ್ ಕೆಡೆಟ್ ಮೊನಿಶ್ ಪಿ ಎಂ (5 ನೇ ಸೆಮಿಸ್ಟರ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗ), ಅಖಿಲ ಭಾರತ ನೌಕಾ ಸೈನಿಕ ಶಿಬಿರ 2025 ರಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದರು.

ಸೆಪ್ಟೆಂಬರ್ 1 ರಿಂದ 12 ರ ನಡುವೆ ಲೋನಾವಾಲಾದ ಐಎನ್ಎಸ್ ಶಿವಾಜಿಯಲ್ಲಿ ಈ ಶಿಬಿರವು ನಡೆಯಿತು. ಆರೋಗ್ಯ ಮತ್ತು ನೈರ್ಮಲ್ಯ ಪರೀಕ್ಷೆಯಲ್ಲಿ ಪಿಒ ಕೆಡೆಟ್ ರಿಶೋನ್ ಆರೋಲ್ ಮಸ್ಕರೇನ್ಹಾಸ್ ಮತ್ತು ಲೀಡಿಂಗ್ ಕೆಡೆಟ್ ಮೋನಿಶ್ ಪಿಎಂ ಕಂಚಿನ ಪದಕಗಳನ್ನು ಗೆದ್ದರು. ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವು AINSC2025 ರ ಒಟ್ಟಾರೆ ಅತ್ಯುತ್ತಮ ನಿರ್ದೇಶನಾಲಯ ಗೌರವವನ್ನು ಗೆದ್ದುಕೊಂಡಿತು.

ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಮುದ್ರಾಡಿ ಕೇಶವ ಆಚಾರ್ಯ ಆಯ್ಕೆ

0

 

ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಮಾಜಿ ಸೈನಿಕ ಮುದ್ರಾಡಿ ಕೇಶವ ಆಚಾರ್ಯ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ನಡೆದಿದೆ.

ಮುದ್ರಾಡಿ ಕೇಶವ ಆಚಾರ್ಯ ಸೇನೆಯಲ್ಲಿ ನಿವೃತ್ತರಾದ ಬಳಿಕ ಪೊಲೀಸ್‌ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಸಮಾಜಮುಖಿ ಚಿಂತನೆಯೊಂದಿಗೆ ಸಮುದಾಯದ ಅಭಿವೃದ್ಧಿಗೆ ಹಲವಾರು ಯೋಜನೆ ಯೋಚನೆಯನ್ನು ಹೊಂದಿದ್ದಾರೆ. ಗೌರವಾಧ್ಯಕ್ಷರಾಗಿ ರಾಮಕೃಷ್ಣ ಆಚಾರ್ಯ ಹೆಬ್ರಿ, ಉಪಾಧ್ಯಕ್ಷರಾಗಿ ಸದಾಶಿವ ಆಚಾರ್ಯ ರಾಗಿಹಕ್ಲು, ಪ್ರಧಾನ ಕಾರ್ಯದರ್ಶಿಯಾಗಿ ಪ್ರೌಢಶಾಲಾ ಶಿಕ್ಷಕ ಹೆಬ್ರಿಯ ಎಚ್.ಎಂ.ಶಶಿಶಂಕರ್‌, ಜೊತೆ ಕಾರ್ಯದರ್ಶಿಯಾಗಿ ಸುರೇಂದ್ರ ಆಚಾರ್ಯ, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ ಆಚಾರ್ಯ ಮಠದಬೆಟ್ಟು, ಕೋಶಾಧಿಕಾರಿಯಾಗಿ ಎಳಗೋಳಿ ರವೀಂದ್ರ ಪುರೋಹಿತ್‌ ಹೆಬ್ರಿ, ಸದಸ್ಯರಾಗಿ ರಾಘವೇಂದ್ರ ಆಚಾರ್ಯ ರಾಗಿಹಕ್ಲು, ಜಗನ್ನಾಥ ಆಚಾರ್ಯ ಸೇಳಂಜೆ, ನಾರಾಯಣ ಆಚಾರ್ಯ ಕುಚ್ಚೂರು, ಪತ್ರಕರ್ತ ಸುಕುಮಾರ ಆಚಾರ್ಯ ಖಜಾನೆ, ಗಣೇಶ ಆಚಾರ್ಯ ಹೆಬ್ರಿ, ಪ್ರಶಾಂತ ಆಚಾರ್ಯ ಮಠದಬೆಟ್ಟು, ಭಾಸ್ಕರ ಆಚಾರ್ಯ ಸೀತಾನದಿ, ಗಣಪತಿ ಆಚಾರ್ಯ ಕನ್ಯಾನ ಆಯ್ಕೆಯಾಗಿದ್ದಾರೆ.

ನಿಟ್ಟೆ : ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿಗೆ 5,000 ಮತ್ತು 3,000 ಮೀ. ಓಟದಲ್ಲಿ ಬೆಳ್ಳಿ

0

 

ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಸೆಪ್ಟೆಂಬರ್ 23 ರಿಂದ 25 ರವರೆಗೆ ನಡೆದ ದಕ್ಷಿಣ ವಲಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 20 ವರ್ಷದೊಳಗಿನ ವಿಭಾಗದಲ್ಲಿ ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ನಂದಿನಿ 5,000 ಮೀಟರ್ ಓಟ ಮತ್ತು 3,000 ಮೀಟರ್ ಓಟದಲ್ಲಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಇದೇ ವಯೋವಿಭಾಗದಲ್ಲಿ 100 ಮೀಟರ್ ಓಟ ಮತ್ತು 4×100 ಮೀ ರಿಲೇಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸ್ತುತಿ ಪಿ ಶೆಟ್ಟಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿರುವರು.

ಸಮುದಾಯದ ಅಭಿವೃದ್ಧಿಗೆ ಇದು ಅವಶ್ಯವಾಗಿದೆ

0

 

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಹಕರಿಸುವಂತೆ‌ ಶುಭದರಾವ್‌ ಮನವಿ

ರಾಜ್ಯ ಸರಕಾರ ಹಮ್ಮಿಕೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಕಳದಲ್ಲಿ ಪ್ರಾರಂಭವಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಶಾಲಾ ಶಿಕ್ಷಕರು ಮನೆ ಮನೆಗೆ ತೆರಳಿ ಕುಟುಂಬದ ‌ಸದಸ್ಯರ ಮಾಹಿತಿ ಸಂಗ್ರಹಿಸುತ್ತಿದ್ದು, ಯಾವುದೇ ಗೊಂದಲಗಳಿಲ್ಲದೆ ತಮ್ಮ ಸೇವೆಯಲ್ಲಿ ಮುಂದುವರೆಯುತ್ತಿರುವುದು ಕಂಡು ಬಂದಿದೆ.

ಈ ಸಮೀಕ್ಷೆಯು ರಾಜ್ಯದ ಎಲ್ಲಾ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಸಮೀಕ್ಷೆಯ ಸಂದರ್ಭದಲ್ಲಿ ಕೇಳುವ ಸರಳ ಪ್ರಶ್ನೆಗಳಿಗೆ ಜನತೆ ಸೂಕ್ತ ಮಾಹಿತಿಯನ್ನು ಯಾವುದೇ ಅಂಜಿಕೆ ಇಲ್ಲದೆ ನೀಡುವ ಮೂಲಕ ಸರಕಾರದ ಈ ಜನಗಣತಿಗೆ

ಸಿವಿಲ್ ಎಂಜಿನಿಯರಿಂಗ್ ನಲ್ಲಿ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳ ಕುರಿತು ಜ್ಞಾನ ಹಂಚಿಕೆ ಅಧಿವೇಶನ: ವಾಸ್ತು ಶಾಸ್ತ್ರದ ಒಳನೋಟ

0

 

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗವು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್ (ಐಕೆಎಸ್) ಸಹಯೋಗದೊಂದಿಗೆ “ಸಿವಿಲ್ ಎಂಜಿನಿಯರಿಂಗ್ ನಲ್ಲಿ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳು: ವಾಸ್ತು ಶಾಸ್ತ್ರದ ಒಳನೋಟಗಳು” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಸೆ.೨೫ ರಂದು ಆಯೋಜಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಸಿವಿಲ್ ಎಂಜಿನಿಯರ್ ಎ.ಆರ್. ಸತೀಶ್ ರಾವ್ ಇಡ್ಯ ಕಾರ್ಯಕ್ರಮಕ್ಕೆ ಶುಭಕೋರಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ಪ್ರಾಚೀನ ವಾಸ್ತುಶಿಲ್ಪದ ಜ್ಞಾನವನ್ನು ಆಧುನಿಕ ಸಿವಿಲ್ ಎಂಜಿನಿಯರಿಂಗ್ ಅಭ್ಯಾಸಗಳೊಂದಿಗೆ ಬೆರೆಸುವ ಮಹತ್ವವನ್ನು ವಿವರಿಸಿದರು.

ತಾಂತ್ರಿಕ ಅಧಿವೇಶನಗಳಲ್ಲಿ ಸಿವಿಲ್ ಎಂಜಿನಿಯರ್ ಎ.ಆರ್. ಸತೀಶ್ ರಾವ್ ಇಡ್ಯ ಅವರು “ಪರಿಹಾರ ವಾಸ್ತು: ಪ್ರಾಯೋಗಿಕ ದೃಷ್ಟಿಕೋನ” ಕುರಿತು ಗೋಷ್ಠಿಯನ್ನು ನೀಡಿದರು. ಇದು ಸಾಮಾನ್ಯ ನಿರ್ಮಾಣ ಸವಾಲುಗಳಿಗೆ ಪರಿಹಾರಗಳನ್ನು ತೋರಿಸಿತು.

ಉಡುಪಿಯ ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ.ಗೋಪಾಲಾಚಾರ್ ಅವರು ವಾಸ್ತು ಶಾಸ್ತ್ರ ತತ್ವಗಳ ಅನಿವಾರ್ಯತೆಯ ಬಗ್ಗೆ ವಿದ್ವತ್ಪೂರ್ಣ ಒಳನೋಟಗಳನ್ನು ಒದಗಿಸುವ ಮೂಲಕ “ವಾಸ್ತುವಿನ ಅನಿವಾರ್ಯತೆ” ಕುರಿತು ಮಾತನಾಡಿದರು.

ಮಧ್ಯಾಹ್ನದ ಅಧಿವೇಶನಗಳಲ್ಲಿ, ಮಣಿಪಾಲದ ಮುನಿಯಾಲ್ ಆಯುರ್ವೇದಿಕ್ ಕಾಲೇಜಿನ ಪ್ರೊ.ಹರಿ ಪ್ರಸಾದ್ ಭಟ್ಹೆ ರ್ಗಾ, ಮನೆ ನಿರ್ಮಾಣದ ಪ್ರಾಯೋಗಿಕ ಸಲಹೆಗಳೊಂದಿಗೆ “ವಸತಿ ಕಟ್ಟಡ ವಾಸ್ತು ಮಾರ್ಗದರ್ಶನ” ವನ್ನು ಹಂಚಿಕೊಂಡರು.

ವಾಸ್ತು ಸಲಹೆಗಾರ ಮತ್ತು ಸಿವಿಲ್ ಎಂಜಿನಿಯರ್ ಎ.ಮುರಳೀಧರ್ ಹೆಗಡೆ ಅವರ ಸಮಾರೋಪ ತಾಂತ್ರಿಕ ಉಪನ್ಯಾಸವು “ವಾಸ್ತು ಕುರಿತ ಆಧುನಿಕ ದೃಷ್ಟಿಕೋನಗಳು” ಸಾಂಪ್ರದಾಯಿಕ ಜ್ಞಾನವನ್ನು ಸಮಕಾಲೀನ ಎಂಜಿನಿಯರಿಂಗ್ ಪರಿಹಾರಗಳೊಂದಿಗೆ ಬೆಸೆಯಿತು.

ಐಕೆಎಸ್ ನಿರ್ದೇಶಕ ಡಾ.ಸುಧೀರ್ ರಾಜ್ ಕೆ ಅವರು ಸಿವಿಲ್ ಎಂಜಿನಿಯರಿಂಗ್ ನ ಭವಿಷ್ಯವನ್ನು ಹೆಚ್ಚಿಸುವಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳ ಪ್ರಸ್ತುತತೆಯನ್ನು ತಿಳಿಸಿದರು. ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರದೀಪ್ ಕಾರಂತ್ ಹಾಗೂ ತುಷಾರ್ ಎಸ್ ಶೆಟ್ಟಿ ಕಾರ್ಯಾಗಾರವನ್ನು ಸಂಯೋಜಿಸಿದರು.

ಕಾರ್ಕಳ: ಜೇಸಿಐ ಕಾರ್ಕಳ ರೂರಲ್‌ ವತಿಯಿಂದ ವಿದ್ಯಾರ್ಥಿಗಳಿಗೆ ನ್ಯಾಯಾಲಯದ ವಿವಿಧ ಅಂಗಗಳು ಹಾಗೂ ಕಾರ್ಯ ವೈಖರಿ ಪರಿಚಯ ಕಾರ್ಯಕ್ರಮ

0

 

ಜೇಸಿಐ ಕಾರ್ಕಳ ರೂರಲ್‌ ಹಾಗೂ ಎಸ್.ಡಿ.ಎಂ.ಸಿ. ಯ ಸಹಯೋಗದೊಂದಿಗೆ ಸುಂದರ ಪುರಾಣಿಕ ಸಂಯುಕ್ತ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನ್ಯಾಯಾಲಯದ ವಿವಿಧ ಅಂಗಗಳು ಹಾಗೂ ಕಾರ್ಯ ವೈಖರಿ ಪರಿಚಯಿಸುವ ಕಾರ್ಯಕ್ರಮವು ಕಾರ್ಕಳದ ನ್ಯಾಯಾಲಯದ ಸಂಕೀರ್ಣ ದಲ್ಲಿ ಯಶಸ್ವಿಯಾಗಿ ನಡೆಯಿತು.

10ನೇ ತರಗತಿಯ ಸುಮಾರು 100 ವಿದ್ಯಾರ್ಥಿಗಳಿಗೆ ಹಿರಿಯ ವಕೀಲರಾದ ಸನತ್ ಕುಮಾರ್ ಜೈನ್ ರವರು ಕಾನೂನಿನ ಬಗ್ಗೆ ಅರಿವು ಮೂಡಿಸಿದರು.

ಈ ಕಾರ್ಯಕ್ರಮದಲ್ಲಿ ಜೆಸಿಐ ಕಾರ್ಕಳ ರೂರಲ್ ನ ಅಧ್ಯಕ್ಷರಾದ ಜೆಸಿ ಅರುಣ್ ಪೂಜಾರಿ ಮಾಂಜ, ಎಸ್ ಡಿ ಎಂ ಸಿ ಯ ಉಪಾಧ್ಯಕ್ಷರು ಹಾಗೂ ಪೂರ್ವಧ್ಯಕ್ಷರಾದ ಜೆಸಿ ವೀಣಾ ರಾಜೇಶ್, ಹಿರಿಯ ವಕೀಲರಾದ ಸನತ್ ಕುಮಾರ್ ಜೈನ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಆನoದ್ರಾಯ ನಾಯಕ್ ,ಮುಖ್ಯೋಪಾಧ್ಯಾಯರಾದ ದಿವಾಕರ್ ಪಟ್ಲ, ಶಿಕ್ಷಕರಾದ ಪ್ರತಿಮಾ ನಾಯಕ್, ಸುಪ್ರಿಯಾ, ಜೆಜೆಸಿ ರಿಯಾ ಹಾಗೂ ಜೆಸಿಐ ಸದಸ್ಯರು ಉಪಸ್ಥಿತರಿದ್ದರು.

 

ಕ್ರೈಸ್ಟ್ ಕಿಂಗ್: ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಜೀವ ವಿಮೆಯ ವಿಧಗಳು ಮತ್ತು ಅಗತ್ಯತೆ ಉಪನ್ಯಾಸ ಕಾರ್ಯಕ್ರಮ

0

 

ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಜೀವ ವಿಮೆಯ ವಿಧಗಳು ಮತ್ತು ಅವುಗಳ ಅಗತ್ಯತೆಯ ಕುರಿತು ಉಪನ್ಯಾಸ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ವಿಭಾಗದ ಅಭಿವೃದ್ಧಿ ಅಧಿಕಾರಿ ಅಶ್ವಿತ್ ನಾಯ್ಕ್ ಅವರು ಸಂಪನ್ಮೂಲ ಅಧಿಕಾರಿಗಳಾಗಿ ಮಾತನಾಡಿ “ಆಧುನಿಕ ಕಾಲಘಟ್ಟದಲ್ಲಿ ನೆಮ್ಮದಿಯ ಜೀವನಕ್ಕೆ ಜೀವವಿಮೆಗಳು ಅಗತ್ಯವಾಗಿದ್ದು, ವಿಮೆ ಮಾಡಿಸುವ ಮೊದಲು ಅದರ ನಿಯಮ ನಿಬಂಧನೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ವಿಮಾಕ್ಷೇತ್ರದಲ್ಲಿ ಪೂರ್ಣಕಾಲಿಕ, ಅರೆಕಾಲಿಕ ಮುಂತಾದ ಅನೇಕ ಉದ್ಯೋಗಾವಕಾಶಗಳಿದ್ದು, ವಿದ್ಯಾರ್ಥಿಗಳು ಉದ್ಯೋಗ ಕ್ಷೇತ್ರ ಪ್ರವೇಶಿಸುವಾಗ ಇವುಗಳನ್ನು ಬಳಸಿಕೊಳ್ಳಬೆಕು” ಎಂದು ಹೇಳಿ ವಿಮಾ ಕ್ಷೇತ್ರದ ಸಂಪೂರ್ಣ ಮಾಹಿತಿ ನೀಡಿದರು.

ಸಂಸ್ಥೆಯ ಉಪಪ್ರಾಚಾರ್ಯ ಡಾ.ಪ್ರಕಾಶ್ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಶ್ರೇಯಾ ಸ್ವಾಗತಿಸಿ ಲೆರಿಕ್ ವಂದಿಸಿದರು. ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು