
ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಮಾಜಿ ಸೈನಿಕ ಮುದ್ರಾಡಿ ಕೇಶವ ಆಚಾರ್ಯ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ನಡೆದಿದೆ.
ಮುದ್ರಾಡಿ ಕೇಶವ ಆಚಾರ್ಯ ಸೇನೆಯಲ್ಲಿ ನಿವೃತ್ತರಾದ ಬಳಿಕ ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಸಮಾಜಮುಖಿ ಚಿಂತನೆಯೊಂದಿಗೆ ಸಮುದಾಯದ ಅಭಿವೃದ್ಧಿಗೆ ಹಲವಾರು ಯೋಜನೆ ಯೋಚನೆಯನ್ನು ಹೊಂದಿದ್ದಾರೆ. ಗೌರವಾಧ್ಯಕ್ಷರಾಗಿ ರಾಮಕೃಷ್ಣ ಆಚಾರ್ಯ ಹೆಬ್ರಿ, ಉಪಾಧ್ಯಕ್ಷರಾಗಿ ಸದಾಶಿವ ಆಚಾರ್ಯ ರಾಗಿಹಕ್ಲು, ಪ್ರಧಾನ ಕಾರ್ಯದರ್ಶಿಯಾಗಿ ಪ್ರೌಢಶಾಲಾ ಶಿಕ್ಷಕ ಹೆಬ್ರಿಯ ಎಚ್.ಎಂ.ಶಶಿಶಂಕರ್, ಜೊತೆ ಕಾರ್ಯದರ್ಶಿಯಾಗಿ ಸುರೇಂದ್ರ ಆಚಾರ್ಯ, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ ಆಚಾರ್ಯ ಮಠದಬೆಟ್ಟು, ಕೋಶಾಧಿಕಾರಿಯಾಗಿ ಎಳಗೋಳಿ ರವೀಂದ್ರ ಪುರೋಹಿತ್ ಹೆಬ್ರಿ, ಸದಸ್ಯರಾಗಿ ರಾಘವೇಂದ್ರ ಆಚಾರ್ಯ ರಾಗಿಹಕ್ಲು, ಜಗನ್ನಾಥ ಆಚಾರ್ಯ ಸೇಳಂಜೆ, ನಾರಾಯಣ ಆಚಾರ್ಯ ಕುಚ್ಚೂರು, ಪತ್ರಕರ್ತ ಸುಕುಮಾರ ಆಚಾರ್ಯ ಖಜಾನೆ, ಗಣೇಶ ಆಚಾರ್ಯ ಹೆಬ್ರಿ, ಪ್ರಶಾಂತ ಆಚಾರ್ಯ ಮಠದಬೆಟ್ಟು, ಭಾಸ್ಕರ ಆಚಾರ್ಯ ಸೀತಾನದಿ, ಗಣಪತಿ ಆಚಾರ್ಯ ಕನ್ಯಾನ ಆಯ್ಕೆಯಾಗಿದ್ದಾರೆ.












