Home Blog Page 85

ಶಿರ್ಲಾಲು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್. ರಾಜು ಶೆಟ್ಟಿ ನಿಧನ

0

ಶಿರ್ಲಾಲು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್. ರಾಜು ಶೆಟ್ಟಿ ನಿಧನ

ಶಿರ್ಲಾಲು ಎಸ್. ರಾಜು ಶೆಟ್ಟಿ (75) ಅವರು ಅ.26 ರಂದು ಶಿರ್ಲಾಲಿನ ಸ್ವಗ್ರಹದಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದರು.ಇವರು 35 ವರ್ಷಗಳ ಕಾಲ ಅಂಚೆ ಇಲಾಖೆ ಯಲ್ಲಿ ಸೇವೆ ಸಲ್ಲಿಸಿ ನಿವೃತ ಜೀವನ ನಡೆಸುತ್ತಿದ್ದರು.ಮೃತರು ಪತ್ನಿ ಓರ್ವ ಪುತ್ರಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.

ರಾಜು ಶೆಟ್ಟಿರವರು ಶಿರ್ಲಾಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ್ದರು.5 ವರ್ಷಗಳ ಕಾಲ ಶಿರ್ಲಾಲ್ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿ ಹಾಲು ಉತ್ಪಾಕರ ಸಹಾಕರಿ ಸಂಘದ ಕಾರ್ಯದರ್ಶಿ ಆಗಿದ್ದರು ಹಾಗೂ ಇನ್ನಿತರ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.

 

ಬಜಗೋಳಿ:ಸ್ವರ್ಣ ಮೊಬೈಲ್ಸ್ ನಲ್ಲಿ ದೀಪಾವಳಿ ಬಂಪರ್ ಆಫರ್ ಟಿವಿ,ಏಸಿ, ಬೈಕ್ ಗೆಲ್ಲುವ ಅವಕಾಶ

0

ಬಜಗೋಳಿ:ಸ್ವರ್ಣ ಮೊಬೈಲ್ಸ್ ನಲ್ಲಿ ದೀಪಾವಳಿ ಬಂಪರ್ ಆಫರ್

ಟಿವಿ,ಏಸಿ, ಬೈಕ್ ಗೆಲ್ಲುವ ಅವಕಾಶ

ಬಜಗೋಳಿಯ ಸ್ವರ್ಣ ಮೊಬೈಲ್ಸ್ ನಲ್ಲಿ ದೀಪಾವಳಿ ಆಫರ್ ಪ್ರಾರಂಭಗೊಂಡಿದೆ.ಒಂದು ಸ್ಮಾರ್ಟ್ ಫೋನ್ ಖರೀದಿಗೆ ಲಕ್ಕಿ ಕೂಪನ್ ದೊರೆಯಲಿದ್ದು ಅದೃಷ್ಟಶಾಲಿಗಳಿಗೆ ಟಿವಿ,ಬ್ಲೂಟೂತ್, ಏಸಿ, ಮಿಕ್ಸಿ ಹಾಗೂ ಏಳು ಬೈಕ್ ಗೆಲ್ಲುವ ಸುವರ್ಣಾವಕಾಶವಿದೆ.

ಯಾವುದೇ ಬ್ರಾಂಡ್ ನ ಮೊಬೈಲ್ ನೊಂದಿಗೆ ಖಚಿತ ಉಡುಗೊರೆ ಜೊತೆಗೆ ಗ್ಲಾಸ್ ಗಾರ್ಡ್, ಪೌಚ್, ನೆಕ್ ಬ್ಯಾಂಡ್, ಪವರ್ ಬ್ಯಾಂಕ್, ಏರ್ ಬಡ್ಸ್ ಉಚಿತವಾಗಿ ಸಿಗಲಿದೆ.

ಎಕ್ಸೆ೦ಜ್ ಆಫರ್ ಜೊತೆಗೆ ಕಡಿಮೆ ಕಂತುಗಳಲ್ಲಿ ಬಡ್ಡಿದರದೊಂದಿಗೆ ಇಎಂಐ ಮೂಲಕ ಮೊಬೈಲ್ ಖರೀದಿಸಬಹುದು.ಸರ್ಟಿಫೈಡ್ ಟೆಕ್ನಿಷಿಯನ್ ಗಳಿಂದ ಉತ್ತಮ ಸರ್ವಿಸ್ ಲಭ್ಯವಿದೆ ಎಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದೇ ಭೇಟಿ ನೀಡಿ ಸ್ವರ್ಣ ಮೊಬೈಲ್ಸ್ ಬಸ್ ನಿಲ್ದಾಣದ ಬಳಿ ಬಜಗೋಳಿ

ದಕ್ಷಿಣ ವಲಯ ಗಣರಾಜ್ಯೋತ್ಸವ ಪೂರ್ವ ಪರೇಡ್ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿ ಸ್ಪೂರ್ತಿ ಬೈಲೂರು

0

ದಕ್ಷಿಣ ವಲಯ ಗಣರಾಜ್ಯೋತ್ಸವ ಪೂರ್ವ ಪರೇಡ್ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿ ಸ್ಪೂರ್ತಿ ಬೈಲೂರು

ಕಾರ್ಕಳ: ಹಾಸನದ ಎಸ್ ಡಿಎಂ ಆಯುರ್ವೇದ ಕಾಲೇಜಿನಲ್ಲಿ ಕಳೆದ ವಾರ ನಡೆದ ರಾಜ್ಯಮಟ್ಟದ ಶಿಬಿರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ ಸ್ಪೂರ್ತಿ ಬೈಲೂರು ಅವರು ದಕ್ಷಿಣ ವಲಯ ಗಣರಾಜ್ಯೋತ್ಸವ ಪೂರ್ವ ಪರೇಡ್ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಅವರು ಈಗ ದಕ್ಷಿಣ ವಲಯ ಆಯ್ಕೆ ಶಿಬಿರದಲ್ಲಿ ಪ್ರತಿಷ್ಠಿತ ದೆಹಲಿ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಸ್ಥಾನಕ್ಕಾಗಿ ಸ್ಪರ್ಧಿಸಲಿದ್ದಾರೆ.

ಹುಟ್ಟಿದ ದಿನದಂದೇ ನಿಧನರಾದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ

0

ಹುಟ್ಟಿದ ದಿನದಂದೇ ನಿಧನರಾದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ

ಹಿರಿಯ ಕಾಂಗ್ರೆಸ್ ಕಾರ್ಯಕರ್ತೆ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಉದ್ಯಾವರ ಅಂಕುದ್ರು ನಿವಾಸಿ ಸರಾಳ ಕೋಟ್ಯಾನ್ ಅಲ್ಪ ಕಾಲದ ಅಸೌಖ್ಯದಿಂದ ಇಂದು (ಅಕ್ಟೋಬರ್ 26) ಮುಂಜಾನೆ ನಿಧನರಾದರು.

40ಕ್ಕೂ ಅಧಿಕ ವರ್ಷ ಗ್ರಾಮೀಣ ಕಾಂಗ್ರೆಸ್ ಪದಾಧಿಕಾರಿಯಾಗಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದ ಇವರು, ಎರಡು ಬಾರಿ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಒಂದು ಅವಧಿಗೆ ಕೆಎಫ್’ಡಿಸಿ ಸದಸ್ಯರಾಗಿಯೂ, 1995 -98 ಅವರಿಗೆ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿಯೂ ಜನಮನ್ನಣೆ ಗಳಿಸಿದ್ದರು.

ಅತ್ಯಂತ ಸರಳ ಸ್ವಭಾವದ ಇವರು ಉದ್ಯಾವರದಲ್ಲಿ ಸರಳಕ್ಕ ಎಂದೇ ಪ್ರಸಿದ್ಧರಾಗಿದ್ದರು. ವಿಪರ್ಯಾಸ ಎಂದರೆ ಇಂದು ಅವರ 75ನೇ ವರ್ಷದ ಹುಟ್ಟಿದ ದಿನ. ಅಮೃತೋತ್ಸವದ ಜನ್ಮದಿನದಂದೆ ನಿಧನರಾದ ಸರಳಾ ಕೋಟ್ಯಾನ್ ಇಬ್ಬರು ಪುತ್ರರು, ಮೊಮ್ಮಕ್ಕಳು, ಸಹೋದರರು – ಸಹೋದರಿ, ಕುಟುಂಬಸ್ಥರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಪರಶುರಾಮ ಪ್ರತಿಮೆ ನಿರ್ಮಾತನ ವಿರುದ್ಧದ ಪ್ರಕರಣ ರದ್ದಿಗೆ ಹೈಕೋರ್ಟ್ ನಕಾರ ಸಿಐಡಿ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನೂ ತೆರವುಗೊಳಿಸಿ ಆದೇಶ ಹೈಕೋರ್ಟ್ ಆದೇಶ ಸ್ವಾಗತಾರ್ಹ- ಶುಭದರಾವ್

0

ಪರಶುರಾಮ ಪ್ರತಿಮೆ ನಿರ್ಮಾತನ ವಿರುದ್ಧದ ಪ್ರಕರಣ ರದ್ದಿಗೆ ಹೈಕೋರ್ಟ್ ನಕಾರ

ಸಿಐಡಿ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನೂ ತೆರವುಗೊಳಿಸಿ ಆದೇಶ

ಹೈಕೋರ್ಟ್ ಆದೇಶ ಸ್ವಾಗತಾರ್ಹ- ಶುಭದರಾವ್

ಪರಶುರಾಮ ಕಂಚಿನ ಪ್ರತಿಮೆ ಎಂದು ನಂಬಿಸಿ ನಕಲಿ ಪ್ರತಿಮೆ ನಿರ್ಮಾಣ ಮಾಡಿದ ಪರಿಣಾಮ ಕಾರ್ಕಳ ನಗರ ಠಾಣೆಯಲ್ಲಿ ತನ್ನ ವಿರುದ್ದ ದಾಖಲಾಗಿರುವ ಎಫ್ಐಆರ್ ರದ್ದು ಮಾಡಬೇಕು ಎಂದು ಪ್ರತಿಮೆ ನಿರ್ಮಾತ ಕೃಷ್ಣ ನಾಯಕ್ ಸಲ್ಲಿಸಿರುವ ಮೇಲ್ಮನವಿಯನ್ನು ತಿರಸ್ಕರಿಸಿ ಹೈಕೋರ್ಟ್ ನೀಡಿದ ತೀರ್ಪನ್ನು ಗೌರವ ಪೂರ್ವಕವಾಗಿ ಸ್ವಾಗತಿಸುತ್ತೇವೆ, ಹಾಗೂ ಪ್ರತಿಮೆ ಬಗ್ಗೆ ಮೊದಲಿನಿಂದಲೂ ನಾವು ಮಾಡುತ್ತಿದ್ದ ಅರೋಪ ಸತ್ಯವಾದದ್ದು ಎಂಬುದು ನ್ಯಾಯಾಧೀಶರು ತನ್ನ ಆದೇಶದಲ್ಲಿ ನೀಡಿದ ವಿವರಣೆಯಿಂದ ಸ್ಪಷ್ಟವಾಗುತ್ತದೆ ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ತಿಳಿಸಿದ್ದಾರೆ.

ಕಳಪೆ ಗುಣಮಟ್ಟದ ಮೂರ್ತಿ ತಯಾರಿಗೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಅದ್ದರಿಂದ ಪ್ರಕರಣದ ತನಿಖೆ ನಡೆಸುವುದು ಅಗತ್ಯತೆ ಇದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಧೀಶರು ಸಿಐಡಿ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನೂ ತೆರವುಗೊಳಿಸಿ ನೀಡಿದ ಆದೇಶ ಸತ್ಯಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿಮೆ ನಿರ್ಮಾಣದ ಪ್ರಕರಣ ಕೇವಲ ಭ್ರಷ್ಠಾಚಾರ ಮಾತ್ರವಲ್ಲದೆ ಇದೊಂದು ಧಾರ್ಮಿಕ ನಂಬಿ ದ್ರೋಹದ ಪ್ರಕರಣವಾಗಿದೆ ಶಾಸಕರೊಬ್ಬರು ತನ್ನ ರಾಜಕೀಯ ತೆವಲಿಗೆ ಮುಗ್ದ ಜನರು, ಅಧಿಕಾರಿಗಳು, ಹಾಗೂ ಕಲಾವಿದರನ್ನು ಹೇಗೆ ಬಳಸಿಕೊಳ್ಳತ್ತಾರೆ ಮತ್ತು ಆ ಮೂಲಕ ಅವರನ್ನು ಹೇಗೆ ಬಲಿ ಪಡೆಯುತ್ತಾರೆ ಎಂಬುದಕ್ಕೆ ಈ ಪ್ರಕರಣ ಬಹುದೊಡ್ಡ ಸಾಕ್ಷಿಯಾಗಿದೆ, ಪ್ರತಿಮೆ ನಿರ್ಮಾತ ಕೃಷ್ಣ ನಾಯಕ್ ಮತ್ತು ಅಮಾನತು ಆಗಿರುವ ನಿರ್ಮಿತಿ ಕೇಂದ್ರ ಅಧಿಕಾರಿಯನ್ನು ತಕ್ಷಣ ಬಂಧಿಸಿ ವಿಚಾರಣೆ ನಡೆಸಿದರೆ ಉಳಿದ ಸತ್ಯವೂ ಹೊರಬರುತ್ತದೆ ಉಡುಪಿ ಎಸ್ಪಿಯವರು ಅದನ್ನು ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

ಸುಳ್ಳು ಸ್ವಲ್ಪ ಸಮಯ ವಿಜ್ರಂಬಿಸಬಹುದು ಆದರೆ ಸತ್ಯವನ್ನು ಹೆಚ್ಚು ದಿನಗಳ ಕಾಲ ಮುಚ್ಚಿಡಲು ಸಾದ್ಯವಿಲ್ಲ ಅದೇ ಪ್ರಕೃತಿ ನಿಯಮ ಹೈಕೋರ್ಟ್ ನೀಡಿರುವ ಈ ಆದೇಶದಿಂದ ಉಳಿದಿರುವ ಎಲ್ಲಾ ಸತ್ಯ ಹೊರ ಬರುವ ಸಂಪೂರ್ಣ ಬರವಸೆ ಇದೆ ಎಂದರು

ಕಾರ್ಕಳ ಶಿಲ್ಪ ಕಲೆಯ ತವರೂರು ವಿಶ್ವದ ಅನೇಕ ಕಡೆಗಳಲ್ಲಿ ಪೂಜಿಸಲ್ಪಡುವ ಮತ್ತು ಗೌರವಿಸಲ್ಪಡುವ ಪ್ರತಿಮೆಗಳು ,ಮೂರ್ತಿಗಳು ನಮ್ಮೂರಿನಲ್ಲೇ ನಿರ್ಮಾಣವಾದ ಭವ್ಯ ಇತಿಹಾಸವಿದೆ, ಅಂತಹ ಅನುಭವಿ ಶಿಲ್ಪಿಗಳಿಂದ ಪ್ರತಿಮೆ ನಿರ್ಮಾಣ ಮಾಡದೆ ಏನೂ ತಿಳಿಯದ ವ್ಯಕ್ತಿಯ ಬಳಿ ಪ್ರತಿಮೆ ಮಾಡಿಸಿ ಶಿಲ್ಪ ಕಲೆ ಹಾಗೂ ಶಿಲ್ಪಿಗಳಿಗೂ ಮಾಡಿದ ಅವಮಾನವಾಗಿದೆ ಎಂದು ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಕಾರ್ಕಳ:ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಮುಗಿಸಿದ ರೀಲ್ಸ್ ರಾಣಿ ಪ್ರತಿಮಾ

 

ಕಾರ್ಕಳ:ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಮುಗಿಸಿದ ರೀಲ್ಸ್ ರಾಣಿ ಪ್ರತಿಮಾ

0

ಪ್ರಿಯಕರನ ಜೊತೆ ಸೇರಿಕೊಂಡು ಪತಿಗೆ ವಿಷವುಣಿಸಿ ಕೊಂದ ಘಟನೆ ಕಾರ್ಕಳ ಅಜೆಕಾರು ದೆಪ್ಪುಜೆಯಲ್ಲಿ ನಡೆದಿದೆ.

ಪ್ರತಿಮಾ ಎಂಬಾಕೆಯೇ ತನ್ನ ಪತಿಗೆ ವಿಷವುಣಿಸಿ ಕೊಂದ ಅರೋಪಿಯಾಗಿದ್ದಾಳೆ.ಈಕೆಗೆ ಕೆಲವು ವರ್ಷಗಳ ಹಿಂದೆ ಬಾಲಕೃಷ್ಣ ಎನ್ನುವವರ ಜೊತೆಗೆ ಮದುವೆಯಾಗಿತ್ತು.ಈಕೆಗೆ ಈ ಹಿಂದಿನಿಂದಲೂ ಹಿರ್ಗಾನದ ದಿಲೀಪದ ಎನ್ನುವವನ ಜೊತೆಗೆ ಸಂಭಂದವಿತ್ತು.ರೀಲ್ಸ್ ಹುಚ್ಚು ಹಚ್ಚಿಕೊಂಡಿದ್ದ ಪ್ರತಿಮಾಳಿಗೆ ಗಂಡ ಹಲವು ಬಾರಿ ಎಚ್ಚರಿಕೆ ಕೂಡ ಕೊಟ್ಟಿದ್ದರು ಎನ್ನಲಾಗಿದೆ.

ಈ ಮದ್ಯೆ ದಿಲೀಪ್ ಹೆಗ್ಡೆ ಜೊತೆಗಿರುವ ಸಂಭಂಧ ಬಗ್ಗೆ ಗಂಡನಿಗೆ ಸಂಶಯ ಉಂಟಾಗಿತ್ತು.ಹೀಗಾಗಿ ತಮ್ಮಿಬ್ಬರ ಸಂಭಂದಕ್ಕೆ ಅಡ್ಡಿಯಾಗುವ ಗಂಡನ್ನನ್ನು ಮುಗಿಸಲು ಇಬ್ಬರು ಸ್ಕೆಚ್ ಹಾಕಿದ್ದಾರೆ.ಪ್ರಿಯಕರ ದಿಲೀಪ್ ವಿಷ ಪದಾರ್ಥವನ್ನು ಪ್ರತಿಮಳ ಕೈಗೆ ಕೊಟ್ಟಿದ್ದು ,ಅದನ್ನ ಆಹಾರದಲ್ಲಿ ಬೆರೆಸಿ ಕೊಟ್ಟಿದ್ದಾರೆ.ಸ್ಲೋ ಪಾಯಿಸನ್ ನಿಂದಾಗಿ ಬಾಲಕೃಷ್ಣರಿಗೆ ವಾಂತಿ ಭೇದಿ ಶುರುವಾಗಿದೆ.

ಪ್ಲಾನ್ ಪ್ರಕಾರ ಬಾಲಕೃಷ್ಣ ನ್ನು ಸ್ಥಳೀಯ ಅಸ್ಪತ್ರೆಗೆ ದಾಖಲಿಸಿದ್ದಾರೆ.ಅಲ್ಲಿಂದ ಕಾಮಾಲೆ ರೋಗ ಇದೆ ಎಂದು ಮಣಿಪಾಲ ಅಸ್ಪತ್ರೆ ,ಅಲ್ಲಿಂದ ವೆನ್ಲಾಕ್ ಅಲ್ಲಿಂದ ಬೆಂಗಳೂರಿನ ವಿಕ್ಟೋರಿಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅಕ್ಟೋಬರ್ 19 ರಂದು ಮನೆಗೆ ಕರೆದುಕೊಂಡು ಬಂದಿದ್ದು,ಬಳಿಕ ಅಕ್ಟೋಬರ್ 20 ರಂದು ಬೆಳಗ್ಗೆ ತನ್ನ ಪ್ರಿಯಕರ ಜೊತೆ ಸೇರಿಕೊಂಡು ಬೆಡ್ ಶೀಟ್ ನಿಂದ ಉಸಿರುಗಟ್ಟಿ ಸಾಯಿಸಿದ್ದಾರೆ.

ಬಳಿಕ ಬಾಲಕೃಷ್ಣ ಅಸೌಖ್ಯದಿಂದ ಸಾವನ್ನಾಪ್ಪಿದ್ದಾರೆ ಎಂದು ಹೇಳಿ ನಂಬಿಸಿದ್ದರು.ಅದ್ರೆ ಬಾಲಕೃಷ್ಣ ಕುಟುಂಬಸ್ಥರಿಗೆ ಈ ಬಗ್ಗೆ ಸಂಶಯ ಮೂಡಿದ ಕಾರಣ ಪೊಲೀಸರಿಗೆ ದೂರು ನೀಡಿದ್ದರು.ಆದರೆ ಅಸಲಿ ವಿಚಾರ ಹೊರ ಬಿದ್ದಿದ್ದು,ತಾವು ಸ್ಲೋ ಪಾಯಿಸನ್ ಕೊಟ್ಟು ಕೊಲೆ ಮಾಡಿರುವುದಾಗಿ ಪ್ರತಿಮಾ ಒಪ್ಪಿಕೊಂಡಿದ್ದಾರೆ.ಪೊಲೀಸರು ಪ್ರತಿಮಾ ಹಾಗೂ ಆಕೆಗೆ ಪ್ರಿಯಕರ ದಿಲೀಪ್ ಹೆಗ್ಡೆ ಎಂಬುವವನನ್ನು ವಶಕ್ಕೆ ಪಡೆದಿದ್ದಾರೆ.

 

ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಅವಿನಾಶ್ ಜಿ. ಶೆಟ್ಟಿ

0

ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್ ನ 2024-25ನೇ ಸಾಲಿನ ಅಧ್ಯಕ್ಷರಾಗಿ ಅವಿನಾಶ್ ಜಿ. ಶೆಟ್ಟಿ ಆಯ್ಕೆಯಾಗಿದ್ದಾರೆ.

ಕಳೆದ 2 ವರ್ಷಗಳಿಂದ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷರಾಗಿದ್ದ ಅವರು ಈ ವರ್ಷವೂ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಬಜಗೋಳಿ ಟೈಗರ್ಸ್-ಹುಲಿವೇಷದ ಉಳಿದ ಹಣ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಹಸ್ತಾಂತರ

0

ಬಜಗೋಳಿ ಟೈಗರ್ಸ್ ಹುಲಿವೇಷದ ಉಳಿದ ಹಣ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಹಸ್ತಾಂತರ

ಬಜಗೋಳಿ ಟೈಗರ್ಸ್ ವತಿಯಿಂದ ಊರಿನ ಸಮಸ್ತ ಸಹಕಾರದಿಂದ ದಸರಾ ಮಹೋತ್ಸವದ ಸಂದರ್ಭದಲ್ಲಿ ಹುಲಿವೇಷದ ಮೂಲಕ ಸಂಗ್ರಹವಾಗಿ ಉಳಿದ ಮೊತ್ತವನ್ನು ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು.

 

ಐಟಿ ಕುಸಿತ, ಬರಗಾಲದ ನಡುವೆಯೂ ರಾಜ್ಯದ ಜಿಡಿಪಿ ದೇಶದಲ್ಲಿಯೇ ಅಧಿಕ-ಸಿಎಂ ಸಿದ್ದರಾಮಯ್ಯ ಸಂತಸ

0

ಐಟಿ ಕುಸಿತ, ಬರಗಾಲದ ನಡುವೆಯೂ ರಾಜ್ಯದ ಜಿಡಿಪಿ ದೇಶದಲ್ಲಿಯೇ ಅಧಿಕ-ಸಿಎಂ ಸಿದ್ದರಾಮಯ್ಯ ಸಂತಸ

ಬೆಂಗಳೂರು: ರಾಜ್ಯವು 2023-24ನೇ ಸಾಲಿನಲ್ಲಿ ಶೇ 10.2 ರಷ್ಟು ಜಿಎಸ್‌ಡಿಪಿ ಪ್ರಗತಿ ದಾಖಲಿಸಿದ್ದು, ಇದು ಇಡೀ ದೇಶದಲ್ಲೇ ಅತ್ಯಧಿಕವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.

ಗ್ಯಾರಂಟಿಗಳು ಸೇರಿದಂತೆ ರಾಜ್ಯ ಕಾಂಗ್ರೆಸ್‌ ಸರಕಾರದ ಹಲವು ಜನಪರ ಯೋಜನೆಗಳು ಹಾಗೂ ಅಭಿವೃದ್ಧಿಯ ಫಲ ಎಲ್ಲ ವರ್ಗಗಳಿಗೂ ತಲುಪಿರುವುದನ್ನು ಇದು ಖಾತರಿಪಡಿಸಿದೆ. ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಗತಿಯನ್ನು ಒಂದುಗೂಡಿಸುವ ‘ಕರ್ನಾಟಕದ ಆರ್ಥಿಕ ಮಾದರಿ’ಯ ಯಶಸ್ಸನ್ನು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿಗಳು, ”ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಈ ಅವಧಿಯಲ್ಲಿದೇಶದ ಸರಾಸರಿ ಜಿಎಸ್‌ಡಿಪಿ ಶೇ.8.2 ಇದೆ. ಕಳೆದ ವರ್ಷ ರಾಜ್ಯವು ತೀವ್ರ ಬರಗಾಲಕ್ಕೆ ತುತ್ತಾಗಿ ಜಾಗತಿಕವಾಗಿ ಐಟಿ ಮಾರುಕಟ್ಟೆ ಹಿನ್ನಡೆ ಅನುಭವಿಸಿದ್ದರೂ ಕರ್ನಾಟಕ ಆರ್ಥಿಕವಾಗಿ ಉತ್ತಮ ಬೆಳವಣಿಗೆ ದಾಖಲಿಸಿದೆ,” ಎಂದು ತಿಳಿಸಿದ್ದಾರೆ.

”ನ್ಯಾಷನಲ್‌ ಸ್ಟಾಟಿಸ್ಟಿಕಲ್‌ ಎಸ್ಟಿಮೇಟ್‌ (ಎನ್‌ಎಸ್‌ಸಿ) ಆರಂಭದಲ್ಲಿ ಕರ್ನಾಟಕದ ಜಿಎಸ್‌ಡಿಪಿ ಅಭಿವೃದ್ಧಿ ದರವನ್ನು ಶೇ.4 ರಷ್ಟು ಅಂದಾಜಿಸಿತ್ತು. ಆದರೆ, ಹಣಕಾಸು ವರ್ಷದ ಅಂತ್ಯಕ್ಕೆ ರಾಜ್ಯದ ಅಭಿವೃದ್ಧಿಯ ದರ ಶೇ 13.1 ರಷ್ಟಾಗಿದೆ. ಎನ್‌ಎಸ್‌ಸಿ ಕರ್ನಾಟಕದ ಪ್ರಗತಿಯನ್ನು ತಪ್ಪಾಗಿ ಅಂದಾಜಿಸಿರುವುದು ಇದರಿಂದ ಸ್ಪಷ್ಟವಾಗಿದೆ,” ಎಂದಿದ್ದಾರೆ.

”2024-25ನೇ ಹಣಕಾಸು ವರ್ಷಕ್ಕೆ ಎನ್‌ಎಸ್‌ಸಿ ಕರ್ನಾಟಕ ರಾಜ್ಯದಲ್ಲಿ ಶೇ 9.4 ಜಿಎಸ್‌ಡಿಪಿ ಪ್ರಗತಿಯನ್ನು ಅಂದಾಜಿಸಿದ್ದು, ಇದು ರಾಷ್ಟ್ರೀಯ ಸರಾಸರಿ ಶೇ 10.5ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಆದರೆ ಹಣಕಾಸು ಸಚಿವಾಲಯ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ಅವಧಿಯಲ್ಲಿ ಕರ್ನಾಟಕದ ಜಿಎಸ್‌ಡಿಪಿ ದರವನ್ನು ಶೇ.14ರಷ್ಟು ಅಂದಾಜಿಸಿದೆ. 2024ರ ಸೆಪ್ಟೆಂಬರ್‌ವರೆಗೆ ರಾಜ್ಯದ ಜಿಎಸ್‌ಟಿ ಸಂಗ್ರಹದಲ್ಲಿ ವರ್ಷದಿಂದ ವರ್ಷಕ್ಕೆ ಶೇ.10 ಹಾಗೂ ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಶೇ.24ರಷ್ಟು ಹೆಚ್ಚಳ ದಾಖಲಿಸಿದೆ. ಇದು ಉತ್ತಮ ಆರ್ಥಿಕತೆಯನ್ನು ದೃಢಪಡಿಸುತ್ತದೆ. ಉತ್ತಮ ಆಡಳಿತ ಹಾಗೂ ಬಹುವಲಯಗಳ ಅಭಿವೃದ್ಧಿಯಿಂದ ರಾಜ್ಯದ ಆರ್ಥಿಕತೆ ಸ್ಥಿರವಾಗಿರುವುದು ಕಂಡು ಬಂದಿದೆ,” ಎಂದು ಸಿಎಂ ಹೇಳಿದ್ದಾರೆ.

ಕರ್ನಾಟಕದ ತಲಾ ಜಿಎಸ್‌ಡಿಪಿ ದೇಶದಲ್ಲೇ ಅತ್ಯಧಿಕವಾಗಿದೆ. ಗ್ಯಾರಂಟಿ ಸೇರಿದಂತೆ ರಾಜ್ಯ ಸರ್ಕಾರದ ಹಲವು ಜನಪರ ಯೋಜನೆಗಳು ಅಭಿವೃದ್ಧಿಯ ಫಲ ಎಲ್ಲಾ ವರ್ಗಗಳಿಗೂ ತಲುಪುವುದನ್ನು ಖಾತ್ರಿಪಡಿಸಿವೆ. ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಗತಿಯನ್ನು ಒಂದುಗೂಡಿಸುವ ಕರ್ನಾಟಕದ ಆರ್ಥಿಕ ಮಾದರಿಯ ಯಶಸ್ಸನ್ನು ಇದು ತೋರಿಸುತ್ತದೆ. ಐಟಿ ವಲಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿರುವುದು ದೇಶದ ಡಿಜಿಟಲ್‌ ಮತ್ತು ಆರ್ಥಿಕ ರಂಗದಲ್ಲಿ ಪ್ರಮುಖ ಪಾತ್ರ ವಹಿಸಲು ಕಾರಣವಾಗಿದೆ ಎಂದು ಉದ್ಯಮ ರಂಗದ ತಜ್ಞರ ಅಭಿಪ್ರಾಯವಾಗಿದೆ ಎಂದು ಸಿಎಂ ಹೇಳಿದ್ದಾರೆ.

 

 

 

ಕಾರ್ಕಳ:ದೀಪಾವಳಿ ಹಬ್ಬದೊಳಗೆ ಪಡಿತರ ಚೀಟಿ ನೀಡದಿದ್ದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು-ಸಂತೋಷ್ ಅಮೀನ್ ಎಚ್ಚರಿಕೆ

0

ಕಾರ್ಕಳ:ದೀಪಾವಳಿ ಹಬ್ಬದೊಳಗೆ ಪಡಿತರ ಚೀಟಿ ನೀಡದಿದ್ದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು-ಸಂತೋಷ್ ಅಮೀನ್ ಎಚ್ಚರಿಕೆ

ಕಾರ್ಕಳ:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ಬಂದದ್ದಿನಿಂದ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದಾಗಿ ರಾಜ್ಯ ದಿವಾಳಿಯತ್ತ ಸಾಗುತ್ತಿದೆ. ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದೀಚೆಗೆ ಯಾವುದೇ ಅಭಿವೃದ್ಧಿ ಚಟುವಟಿಕೆ ಮರೀಚಿಕೆಯಾಗಿದೆ.ಪಡಿತರ ವಿತರಣೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿದ್ದರೂ, ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಸರಿಯಾಗಿ ಪಡಿತರ ಅಕ್ಕಿ ನೀಡದೆ ವಿಳಂಭ ಮಾಡುತ್ತಿದೆ. ಯಾವುದೇ ಸುಳ್ಳು ಕಾರಣ ನೀಡಿ ಬಡ ಜನರಿಗೆ ಕಾಂಗ್ರೆಸ್ ಸರ್ಕಾರ ವಂಚನೆ ಮಾಡುತಿದ್ದೆ. ಈ ತಿಂಗಳ ಪಡಿತರ ಅಕ್ಕಿಯನ್ನು ಈವರೆಗೂ ನೀಡಿಲ್ಲ. ಈ ತಿಂಗಳ ಕೊನೆಯಲ್ಲಿ ದೀಪಾವಳಿ ಹಬ್ಬ ಬರಲಿದೆ. ಕನಿಷ್ಠ ಹಬ್ಬದ ಮೊದಲಾದರೂ ಪಡಿತರ ಅಕ್ಕಿಯನ್ನು ನೀಡಬೇಕು. ಒಂದು ವೇಳೆ ಹಬ್ಬದ ಒಳಗೆ ಅಕ್ಕಿ ನೀಡದಿದ್ದರೆ, ಗ್ರಾಮ ಪಂಚಾಯತ್ ಸದಸ್ಯರೆಲ್ಲರೂ ಒಟ್ಟಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಅಮೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಪಡಿತರ ಮಾತ್ರವಲ್ಲದೆ, ಸರ್ಕಾರದ ಇನ್ನಿತರ ಸವಲತ್ತಿಗಳೂ ಕೂಡ ಬಡ ಜನರಿಗೆ ನೀಡುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯ ನವರ, ಮಾತೆತ್ತಿದರೆ ನಾವು ಬಡವರ ಪರ, ಬಡವರ ಸರ್ಕಾರ ಎಂದು ಹೇಳುತ್ತಿದ್ದಾರೆ. ಬಡವರ ಹೆಸರು ಹೇಳಿಕೊಂಡು, ಅಧಿಕಾರ ಪಡೆದ ಸಿದ್ದರಾಮಯ್ಯ ಈಗ ಬಡವರನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಪ್ರಸ್ತುತ ತನ್ನ ಕುರ್ಚಿ ಗಟ್ಟಿ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಸ್ಥಳೀಯವಾಗಿ ಸರ್ಕಾರದ ಸವಲತ್ತುಗಳನ್ನು ನಂಬಿಕೊಂಡು ಬರುತ್ತಿರುವ ಬಡ ಜನರ ಪಾಡು ಕಷ್ಟದಾಯಕವಾಗಿದೆ. ಸರ್ಕಾರ ಈ ಕೂಡಲೇ ಎಚ್ಛೆತ್ತುಕೊಳ್ಳದಿದ್ದರೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.