ಹುಟ್ಟಿದ ದಿನದಂದೇ ನಿಧನರಾದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ

0

ಹುಟ್ಟಿದ ದಿನದಂದೇ ನಿಧನರಾದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ

ಹಿರಿಯ ಕಾಂಗ್ರೆಸ್ ಕಾರ್ಯಕರ್ತೆ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಉದ್ಯಾವರ ಅಂಕುದ್ರು ನಿವಾಸಿ ಸರಾಳ ಕೋಟ್ಯಾನ್ ಅಲ್ಪ ಕಾಲದ ಅಸೌಖ್ಯದಿಂದ ಇಂದು (ಅಕ್ಟೋಬರ್ 26) ಮುಂಜಾನೆ ನಿಧನರಾದರು.

40ಕ್ಕೂ ಅಧಿಕ ವರ್ಷ ಗ್ರಾಮೀಣ ಕಾಂಗ್ರೆಸ್ ಪದಾಧಿಕಾರಿಯಾಗಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದ ಇವರು, ಎರಡು ಬಾರಿ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಒಂದು ಅವಧಿಗೆ ಕೆಎಫ್’ಡಿಸಿ ಸದಸ್ಯರಾಗಿಯೂ, 1995 -98 ಅವರಿಗೆ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿಯೂ ಜನಮನ್ನಣೆ ಗಳಿಸಿದ್ದರು.

ಅತ್ಯಂತ ಸರಳ ಸ್ವಭಾವದ ಇವರು ಉದ್ಯಾವರದಲ್ಲಿ ಸರಳಕ್ಕ ಎಂದೇ ಪ್ರಸಿದ್ಧರಾಗಿದ್ದರು. ವಿಪರ್ಯಾಸ ಎಂದರೆ ಇಂದು ಅವರ 75ನೇ ವರ್ಷದ ಹುಟ್ಟಿದ ದಿನ. ಅಮೃತೋತ್ಸವದ ಜನ್ಮದಿನದಂದೆ ನಿಧನರಾದ ಸರಳಾ ಕೋಟ್ಯಾನ್ ಇಬ್ಬರು ಪುತ್ರರು, ಮೊಮ್ಮಕ್ಕಳು, ಸಹೋದರರು – ಸಹೋದರಿ, ಕುಟುಂಬಸ್ಥರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here