Home Blog Page 91

ಕಾರ್ಕಳ:ಸಾಧನ ಅಶ್ರಿತ್ ಅವರಿಗೆ ಜೀವಮಾನದ ಸಾಧನ ಪ್ರಶಸ್ತಿ

0

ಸಾಧನ ಅಶ್ರಿತ್ ಅವರಿಗೆ ಜೀವಮಾನದ ಸಾಧನ ಪ್ರಶಸ್ತಿ

ಕಾರ್ಕಳ:ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ಮಾಲಕಿ ಸಾಧನ ಅಶ್ರಿತ್ ರವರಿಗೆ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿಯ ಜೀವಮಾನದ ಸಾಧನ ಪ್ರಶಸ್ತಿ ಲಭಿಸಿದೆ.ಬೆಂಗಳೂರಿನಲ್ಲಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ ವತಿಯಿಂದ ನಡೆದ ಸಮಾರಂಭದಲ್ಲಿ ಕಾರ್ಕಳದ ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ಮಾಲಕಿ ಸಾಧನ ಅಶ್ರಿತ್ ರವರಿಗೆ ಶೈಕ್ಷಣಿಕ,ಸಾಮಾಜಿಕ,ವಸ್ತ್ರವಿನ್ಯಾಸ ಕ್ಷೇತ್ರದಲ್ಲಿನ ತನ್ನ ವೈಯಕ್ತಿಕ ಹಾಗೂ ಮಹಿಳಾ ಸ್ವಾವಲಂಬಿ ಸಾಧನೆಗಾಗಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿಯ ಜೀವಮಾನದ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು

ಲೈಂಗಿಕ ದೌರ್ಜನ್ಯ ಆರೋಪ:ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮೇಲೆ ಎಫ್ಐಆರ್

0

ಲೈಂಗಿಕ ದೌರ್ಜನ್ಯ ಆರೋಪ:ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮೇಲೆ ಎಫ್ಐಆರ್

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ದೂರು

ಲೈಂಗಿಕ ದೌರ್ಜನ್ಯ ಆರೋಪ ಮೇಲೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮೇಲೆ ಎಫ್ಐಆರ್ ದಾಖಲಾಗಿದೆ.

47 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ದಕ್ಷಿಣ ಕನ್ನಡ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

47 ವರ್ಷದ ಮಹಿಳೆಯೊಬ್ಬರು‌ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ದೂರು ದಾಖಲಿಸಿದ್ದಾರೆ. 2023ರ ಜೂನ್ ನಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ. ದೌರ್ಜನ್ಯದ ಫೋಟೋ, ಸೆಲ್ಫಿ ವೀಡಿಯೋ ಮಾಡಿ ಬ್ಲಾಕ್‌ಮೇಲ್‌ ಮಾಡಿದ್ದಾರೆಂದು ಸಹ ಆರೋಪಿಸಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್‌ 417, 354ಎ, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

 

ಅರುಣ್‌ ಪುತ್ತಿಲ ಅವರು, 2023ರಲ್ಲಿ ಪುತ್ತೂರು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿಜೆಪಿಗೆ ಠಕ್ಕರ್‌ ಕೊಟ್ಟು ಹಿಂದುತ್ವದ ಹೆಸರಿನಲ್ಲಿ ಸ್ಪರ್ಧೆ ಮಾಡಿ ಪ್ರಖ್ಯಾತಿ ಪಡೆದಿದ್ದರು. ಪುತ್ತಿಲ ಅವರ ಪ್ರಖ್ಯಾತಿ ಮತ್ತು ಹಿಂದುತ್ವದ ಪ್ರತಿಪಾದನೆಯಿಂದ ಮಹಿಳೆ ಅಭಿಮಾನಿಯಾಗಿದ್ದರು. ಪುತ್ತಿಲಗೆ ಅಭಿಮಾನಿ ಆಗಿ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿದ್ದರು. ಜೊತೆಗೆ ಪುತ್ತಿಲಗೆ ನೈತಿಕ ಬೆಂಬಲವನ್ನೂ ನೀಡುತ್ತಿದ್ದರು. ಬಳಿಕ ಪರಿಚಯವಾದ ಮೇಲೆ ಪುತ್ತಿಲ ಅವರು 2023ರ ಜೂನ್‌ನಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ಗೆ ಕರೆಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿದ್ದಾರೆ. ಬಳಿಕ ದೂರುದಾರರ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.

2024ರ ಲೋಕಸಭಾ ಚುನಾವಣೆಯ ಬಳಿಕ ನನ್ನೊಂದಿಗೆ ಮಾತುಕತೆ ಕಡಿಮೆಗೊಳಿಸಿದ್ದರು. ನನ್ನನ್ನು ಸಂಪೂರ್ಣವಾಗಿ ಶೋಷಣೆಗೆ ಒಳಪಡಿಸಿ ಅವರ ಆಸೆ ತೀರಿಸಿಕೊಂಡು ನನ್ನನ್ನು ದೂರ ಮಾಡಿದರು. ಆ ಭಯದಿಂದ ನನ್ನ ನಿವಾಸವನ್ನು ಪುತ್ತೂರಿಗೆ ಸ್ಥಳಾಂತರಿಸಿ ಬಾಡಿಗೆ ಮನೆಯಲ್ಲಿ ನನ್ನ ಮಗಳೊಂದಿಗೆ ಉದ್ಯೋಗ ಹಾಗೂ ವರಮಾನವಿಲ್ಲದೇ ಕಷ್ಟಪಡುತ್ತಿದ್ದೇನೆ. ನನಗೆ ಮತ್ತು ನನ್ನ ಮಗಳಿಗೆ ಪುತ್ತಿಲರು ಮಾಡಿದ ದ್ರೋಹ, ಅನ್ಯಾಯ, ಅಕ್ರಮ ವಿಶ್ವಾಸ ದ್ರೋಹಕ್ಕೆ ಕಾನೂನು ಕ್ರಮ ಕೈಗೊಂಡು ನನಗೆ ಮತ್ತು ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಖುರ್ಚಿ ಉಳಿಸಿಕೊಳ್ಳುವ ಭರದಲ್ಲಿ ಜನರ ಸಮಸ್ಯೆ ಹಾಗೂ ಅಭಿವೃದ್ಧಿಯನ್ನು ರಾಜ್ಯ ಸರ್ಕಾರ ಮರೆತುಬಿಟ್ಟಿದೆ-ರೇಷ್ಮಾ ಉದಯ್‌ ಶೆಟ್ಟಿ

0

ಖುರ್ಚಿ ಉಳಿಸಿಕೊಳ್ಳುವ ಭರದಲ್ಲಿ ಜನರ ಸಮಸ್ಯೆ ಹಾಗೂ ಅಭಿವೃದ್ಧಿಯನ್ನು ರಾಜ್ಯ ಸರ್ಕಾರ ಮರೆತುಬಿಟ್ಟಿದೆ-ರೇಷ್ಮಾ ಉದಯ್‌ ಶೆಟ್ಟಿ

ಕಾರ್ಕಳ:ಉಡುಪಿಯಲ್ಲಿ ಈ ಬಾರಿ ಧಾರಾಕಾರಾಗಿ ಸುರಿದ ಮಳೆಗೆ ಜಿಲ್ಲಾಧ್ಯಂತ ಅಪಾರ ಹಾನಿಯಾಗಿದ್ದು, ಜಿಲ್ಲೆಯ ಹೆದ್ದಾರಿಗಳು ಸೇರಿದಂತೆ ನಗರ ಮತ್ತು ಗ್ರಾಮಾಂತರದ ರಸ್ತೆಗಳು ಹಾಳಾಗಿದೆ. ಅಂಗನವಾಡಿ ಶಾಲಾ ಕಟ್ಟಡಗಳು, ಕಾಲುಸಂಕ, ತಡೆಗೋಡೆ, ವಿದ್ಯುತ್ ಕಂಬಗಳಿಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿದ್ದು, ಸುಮಾರು 234 ಕೋಟಿ ರೂಪಾಯಿಗಳಷ್ಟು ಮೌಲ್ಯದ ಹಾನಿಯ ವರದಿಯನ್ನು ಜಿಲ್ಲಾಡಳಿತವು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದರೂ, ಇದುವರೆಗೂ ನಯಾ ಪೈಸೆ ಪರಿಹಾರ ಬಿಡುಗಡೆಯಾಗದೇ ಇರುವುದು ಖಂಡನೀಯ ಎಂದು ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್‌ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೀಗ ತುರ್ತು ಮರು ದುರಸ್ತಿ ಅವಶ್ಯಕತೆ ಇರುವ ಕಾಮಗಾರಿಗಳಿಗೆ ಅನುದಾನವಿಲ್ಲದೆ ವಿದ್ಯಾರ್ಥಿಗಳಿಗೆ, ರೈತರಿಗೆ, ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವರು ಉಡುಪಿಯ ಕಡೆ ತಲೆಹಾಕಿಯೂ ಮಲಗುತ್ತಿಲ್ಲ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳುವ ತಂತ್ರಗಾರಿಕೆಯಲ್ಲಿ ಮಗ್ನರಾಗಿದ್ದರೆ. ಇತರ ಸಚಿವರು ಮುಖ್ಯಮಂತ್ರಿಗಳ ತೆರವಾಗಲಿರುವ ಕುರ್ಚಿಗೆ ಟವೆಲ್ ಹಿಡಿದು ಕಾಯುತ್ತಿದ್ದಾರೆ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರದಲ್ಲಿ ಈ ರೀತಿ ಮಳೆ ಹಾನಿಯಾಗಿದ್ದಾಗ ನ್ಯಾಯಯುತವಾದ ಪರಿಹಾರ ದೊರಕಿರುವುದನ್ನು ಇಂದು ಜನ ಸ್ಮರಿಸುತ್ತಿದ್ದಾರೆ.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಅಸ್ಥಿತ್ವಕ್ಕೆ ಬಂದು 16 ತಿಂಗಳು ಕಳೆದರೂ ಅಭಿವೃದ್ಧಿಯ ಮಾತು ಆರಂಭವೇ ಆಗಿಲ್ಲ. ಹೀಗೆಯೇ ಮುಂದುವರಿದರೆ ಮಳೆ ಪರಿಹಾರ, ಅಭಿವೃದ್ಧಿ ಹಣ ಬಿಡುಗಡೆಗಾಗಿ ಕರಾವಳಿಯ ಜನರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ಬರಬಹುದು ಎಂದು ಅವರು ತಿಳಿಸಿದ್ದಾರೆ

ಮುಡಾರು:ಮನೆಯಲ್ಲಿದ್ದ ಚಿನ್ನಾಭರಣ ಕಳವು

0

ಮುಡಾರು:ಮನೆಯಲ್ಲಿದ್ದ ಚಿನ್ನಾಭರಣ ಕಳವು

ಮನೆಗೆ ನುಗ್ಗಿ ಚಿನ್ನಾಭರಣ ಕಳವುಗೈದ ಘಟನೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆಯಲ್ಲಿ ನಡೆದಿದೆ.ಪ್ರಭಾ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ.

ಪ್ರಭಾರವರು ಮನೆಯ ಬೀಗದ ಕೀಯನ್ನು ಯಾವಾಗಲೂ ತಮ್ಮ ಮನೆಗೆ ಬೀಗ ಹಾಕಿ, ಕೀಯನ್ನು ಹೊರಗೆ ಡಬ್ಬಿಯಲ್ಲಿ ಇರಿಸುತ್ತಿದ್ದುಆ.30ರಂದು ಮಧ್ಯಾಹ್ನ 3:30 ಗಂಟೆಯಿಂದ ಸಾಯಂಕಾಲ 5:00 ಗಂಟೆಯ ಮಧ್ಯೆ ಅವಧಿಯಲ್ಲಿ ಕಳ್ಳತನ ನಡೆದಿದ್ದು ಕಳ್ಳರು ಕೀ ಸಹಾಯದಿಂದ ಮನೆಯ ಬಾಗಿಲನ್ನು ತೆಗೆದು ಮನೆಯೊಳಗೆ ಪ್ರವೇಶಿಸಿ ಮನೆಯ ಬೆಡ್‌ ರೂಮ್‌ನ ಗೋದ್ರೇಜ್ ಲಾಕರನ್ನು ತೆರೆದು ಲಾಕರನಲ್ಲಿರಿಸಿದ್ದ ಚಿನ್ನಾಭರಣಗಳ ಪೈಕಿ ಸುಮಾರು 33 ಪವನ್ ತೂಕದ 10,05,000/- ಅಂದಾಜು ಮೌಲ್ಯದ ವಿವಿಧ ರೀತಿಯ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ದರ್ಶನ್ ಅಭಿಮಾನಿಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಕಿಚ್ಚ!

0

ದರ್ಶನ್ ಅಭಿಮಾನಿಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಕಿಚ್ಚ!

ಸಿನಿಮಾಗೆ ಬರೋಲ್ಲ, ಸಿನಿಮಾ ನೋಡಲ್ಲ ಎನ್ನುವಾಗಲೇ ಗತ್ತು-ಗಾಂಭೀರ್ಯದಿಂದ ನುಗ್ಗಲಿಲ್ವಾ ಎರಡು ಸಿನಿಮಾ ಎನ್ನುವ ಮೂಲಕ ದರ್ಶನ್ ಅಭಿಮಾನಿಗಳಿಗೆ ನಟ ಸುದೀಪ್ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುದೀಪ್, ಸಿನಿಮಾಗೆ ಬರೊಲ್ಲ, ಸಿನಿಮಾ ನೋಡೊಲ್ಲ ಅನ್ನೋವಾಗ್ಲೆ. ಗತ್ತು ಗಾಂಭಿರ್ಯದಿಂದ ನುಗ್ಗಲಿಲ್ವಾ ಎರಡು ಸಿನಿಮಾ? ಯಾರು ಬರೊಲ್ಲ, ಬರೊಲ್ಲ ಅಂತಾ ಹೇಳ್ತಿದ್ರಲ್ಲ ಸಿನಿಮಾಗೆ ಈಗೇನ್ ಹೇಳ್ತೀರಾ? ಗಣೇಶ್, ದುನಿಯಾ ವಿಜಯ್ ಸಿನಿಮಾಗಳು ಸಕ್ಸಸ್ ಆಯ್ತಲ್ಲ ಎಂದು ಚಾಟಿ ಬೀಸಿದರು.

ಬಳ್ಳಾರಿ ಜೈಲಲ್ಲಿ ದರ್ಶನ್ ಬಗ್ಗೆ ಕೇಳಿದ ಪ್ರಶ್ನೆ ಕುರಿತು ಮಾತನಾಡಿ, ದರ್ಶನ್ ಅವರು ಹೊರಗಡೆ ಕರ್ಸಿ ಅಂತ ನಾ? ನಾನು ಒಳಗಡೆ ಹೋಗ್ಲಿ ಅಂತಾ ನಾ? ದರ್ಶನ್ ಅವರಿಗೆ ಅಂತಾ ಫ್ಯಾನ್ಸ್ ಇದ್ದಾರೆ, ಕುಟುಂಬ ಇದೆ. ಯಾರಿಗೂ ನೋವು ಕೊಡೋದಕ್ಕೆ ಇಷ್ಟ ಪಡುವುದಿಲ್ಲ. ರಾಜಕೀಯವಾಗಿ ಮಾತಾಡ್ತಿದ್ದೀನಿ ಅನ್ಕೋಬೇಡಿ. ಈ ದೇಶದಲ್ಲಿ ಇದೀವಿ ಅಂದ್ರೆ ಕಾನೂನಿನ ಮೇಲೆ ನಂಬಿಕೆ ಇರಬೇಕು ಎಂದು ಹೇಳಿದರು.

ಕಾನೂನು, ಸರ್ಕಾರದ ಮೇಲೆ ನಂಬಿಕೆಯಿದೆ. ನಿಮ್ಮ ಮಾಧ್ಯಮಗಳ ಮೂಲಕವೇ ನಮಗೆ ವಿಚಾರ ಗೊತ್ತಾಗ್ತಿರೋದು. ಆಗಬೇಕಾಗಿರೋದು ಆಗುತ್ತೆ. ಕೋರ್ಟ್ ಅಂತಾ ಇರುತ್ತೆ ಎಂದು ಮಾತನಾಡಿದರು.ರಾಜಕೀಯಕ್ಕೆ ಬರ್ತಾರಾ ಸುದೀಪ್ ಎಂದು ಕೇಳಿದ ಪ್ರಶ್ನೆಗೆ, ನಾನು ಎಲ್ಲಿದ್ರೂ ಮಹಾರಾಜನೇ.ಎಲ್ಲಾ ಪಕ್ಷದಿಂದ ಆಫರ್ ಬಂದಿದೆ. ಅವಶ್ಯಕತೆ ಇದ್ದಾಗ ಕಾದು ನೋಡೋಣ ಸರ್ ಎಂದು ಉತ್ತರಿಸಿದರು.

 

ಚೆಸ್ ಪಂದ್ಯಾಟ:ಕಾರ್ಕಳ ಜ್ಞಾನಸುಧಾದ ಮೂವರು ರಾಜ್ಯಮಟ್ಟಕ್ಕೆ ಆಯ್ಕೆ ಕು.ಯಶಸ್ವಿಯವರಿಗೆ ಪ್ರಥಮ ಸ್ಥಾನ

0

ಚದುರಂಗ ಸ್ಪರ್ಧೆ : ಕಾರ್ಕಳ ಜ್ಞಾನಸುಧಾದ ಮೂವರು ರಾಜ್ಯಮಟ್ಟಕ್ಕೆ ಆಯ್ಕೆ
ಕು.ಯಶಸ್ವಿಯವರಿಗೆ ಪ್ರಥಮ ಸ್ಥಾನ

ಕಾರ್ಕಳ : ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸರಕಾರಿ ಪ.ಪೂ.ಕಾಲೇಜು ಕೋಟೇಶ್ವರದಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯುಸಿ ವಿಜ್ಞಾನ ವಿಭಾಗದ ಯಶಸ್ವಿ ಪ್ರಥಮ ಸ್ಥಾನವನ್ನು, ನಿಹಾರ್ ಜೆ.ಎಸ್ ಚತುರ್ಥ ಸ್ಥಾನವನ್ನು, ಸಾತ್ವಿಕ್‌ಬಿ. ಆಚಾರ್ಯ೫ನೇ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಕಾಲೇಜಿನ ದೈ.ಶಿ.ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆ ಮಾರ್ಗದರ್ಶನ ನೀಡಿದ್ದರು.

ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

ಕಾರ್ಕಳ:ಚೆಸ್ ಸ್ಪರ್ಧೆಯಲ್ಲಿ ಕ್ರೈಸ್ಟ್ ಕಿಂಗ್ ನ ಶಾನ್ವಿ ಬಲ್ಲಾಳ್ ರಾಜ್ಯಮಟ್ಟಕ್ಕೆ ಆಯ್ಕೆ ಸತತ 6ನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ದಾಖಲೆ ಮೆರೆದ ವಿದ್ಯಾರ್ಥಿನಿ

0

ಕ್ರೈಸ್ಟ್ ಕಿಂಗ್: ಚೆಸ್ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಶಾನ್ವಿ ಬಲ್ಲಾಳ್ ರಾಜ್ಯಮಟ್ಟಕ್ಕೆ ಆಯ್ಕೆ

ಸತತ 6ನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ದಾಖಲೆ ಮೆರೆದ ವಿದ್ಯಾರ್ಥಿನಿ

ಕಾರ್ಕಳ:ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ ನಡೆದ ಪದವಿಪೂರ್ವ ವಿಭಾಗದ ಉಡುಪಿ ಜಿಲ್ಲಾಮಟ್ಟದ ಚೆಸ್ ಸ್ಪರ್ಧೆಯಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಙಾನ ವಿಭಾಗದ ಶಾನ್ವಿ ಬಲ್ಲಾಳ್ ದ್ವಿತೀಯ ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಈ ಮೂಲಕ ಶಿಕ್ಷಣ ಇಲಾಖೆಯ ಪಂದ್ಯಾಟದಲ್ಲಿ ನಿರಂತರವಾಗಿ 6ನೇ ಬಾರಿಗೆ ಆಯ್ಕೆಯಾಗುವುದರ ಮೂಲಕ ಶಾನ್ವಿ ಬಲ್ಲಾಳ್ ದಾಖಲೆಯೊಂದನ್ನು ಬರೆದಂತಾಗಿದೆ.

ಶಿವಾಜಿ ಪ್ರತಿಮೆ ವಿಚಾರ ಪ್ರಧಾನಿ ಮೋದಿಯವರು ಕ್ಷಮೆ ಕೋರಿದಂತೆ ಶಾಸಕ ಸುನೀಲ್ ಕುಮಾರ್ ಕ್ಷಮೆ ಕೋರಲಿ

0

ಶಿವಾಜಿ ಪ್ರತಿಮೆ ವಿಚಾರ ಪ್ರಧಾನಿ ಮೋದಿಯವರು ಕ್ಷಮೆ ಕೋರಿದಂತೆ ಶಾಸಕ ಸುನೀಲ್ ಕುಮಾರ್ ಕ್ಷಮೆ ಕೋರಲಿ

ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದಾನ ಮಂತ್ರಿಯವರು ಮರಾಠಿಗರ ಕ್ಷಮೆ ಕೋರಿದಂತೆ ಪರಶುರಾಮನ ಪ್ರತಿಮೆ ವಿಚಾರವಾಗಿ ಶಾಸಕ ಸುನೀಲ್ ಕುಮಾರ್ ನಾಡಿನ ಜನತೆಯ ಕ್ಷಮೆಯಾಚಿಸಲಿ ಎಂದು ಕಾರ್ಕಳ ಕಾಂಗ್ರೆಸ್ ಆಗ್ರಹಿಸಿದೆ

ಲೋಕಸಭಾ ಚುನಾವಣಾ ಪೂರ್ವದಲ್ಲಿ ಮಹಾರಾಷ್ಟ್ರದಲ್ಲಿ ಉದ್ಘಾಟನೆಗೊಂಡ ಶಿವಾಜಿ ಪ್ರತಿಮೆ ಕುಸಿದ ಪ್ರಕರಣ ಕಾರ್ಕಳದ ಪರಶುರಾಮನ ಕಂಚಿನ ಪ್ರತಿಮೆ ಪ್ರಕರಣವನ್ನೇ ಹೋಲುತ್ತದೆ ಇಲ್ಲಿಯೂ ವಿಧಾನಸಭಾ ಚುನಾವಣೆಯ ಉದ್ದೇಶದಿಂದ ಕಾಮಗಾರಿ ಪೂರ್ಣವಾಗುವ ಮೊದಲೇ ತುರಾತುರಿಯಲ್ಲಿ ಉದ್ಘಾನೆಗೊಂಡಿದೆ ಅಲ್ಲಿ ಪ್ರಕರಣವನ್ನು ತನಿಖೆಗೆ ಒಪ್ಪಿಸಲಾಗಿ ಒಬ್ಬನ ಬಂಧನವಾಗಿದ್ದರೆ ಇಲ್ಲಿಯೂ ಸಿಐಡಿ ತನಿಕೆಗೆ ಆದೇಶ ನೀಡಲಾಗಿದ್ದು ಒಬ್ಬ ಅಧಿಕಾರಿಯ ಅಮಾನತು ಆಗಿದೆ, ಶಿವಾಜಿ ಪ್ರತಿಮೆಯನ್ನು ಉದ್ಘಾಟಿಸಿದ ಪ್ರದಾನಿ ತಪ್ಪೊಪ್ಪಿಕೊಂಡು ಮರಾಠಿಗರ ಕ್ಷಮೆಯಾಚಿಸಿದ್ದಾರೆ ಆದರೆ ವಿಪರ್ಯಾಸವೆಂದರೆ ಇಲ್ಲಿ ಶಾಸಕ ಸುನೀಲ್ ಕುಮಾರ್ ನಾನು ಮಾಡಿದ್ದೇ ಸರಿ ಎಂದು ಸಮರ್ಥನೆ ನೀಡುತ್ತಾ ಪ್ರಶ್ನಿಸಿದವರನ್ನೇ ಟಾರ್ಗೇಟ್ ಮಾಡುತ್ತಿದ್ದಾರೆ, ಶಾಸಕರಿಗೆ ಪ್ರದಾನಿಗಳ ಮೇಲೆ ಕಿಂಚಿತ್ತು ಗೌರವವಿದ್ದರೆ ಅವರಂತೆ ಇವರೂ ಕ್ಷಮೆಯಾಚಿಸಲಿ ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಆಗ್ರಹಿಸಿದ್ದಾರೆ

ಶಾಸಕರ ಒಂದು ತಪ್ಪಿನಿಂದ ಕ್ಷೇತ್ರದ ಬಹಳಷ್ಟು ಜನ ಅನುಭನಿಸುವಂತಾಯಿತು, ಪಕ್ಷದ ಪಧಾದಿಕಾರಿಗಳಿಗೆ ಇಷ್ಟವಿಲ್ಲದಿದ್ದರೂ ಸಮರ್ಥಿಸುವುದು ಅನಿವಾರ್ಯವಾಯಿತು ಪ್ರತಿಭಟನೆ ಸತ್ಯಾಗ್ರಹಗಳು ನಡೆದು ಅಮಾಯಕರ ಮೇಲೆ ಅನಾವಶ್ಯಕ ಪೋಲೀಸ್ ಕೇಸುಗಳು ದಾಖಲಾದವು ತನಿಖೆಯ ಕಾರಣಗಳಿಂದ ಅಧಿಕಾರಿಗಳಿಗೂ ಒತ್ತಡಗಳಾದವು, ಸಾಮಾಜಿಕ ಜಾಲತಾಣದಲ್ಲಿ‌ ಪರಸ್ಪರ ಅರೋಪ ಪ್ರತ್ಯಾರೋಪಗಳು ನಡೆದು ದೈಹಿಕ ಹಲ್ಲೆಗೂ ಕಾರಣವಾಯಿತು, ಅಂದೇ ಈ ಬಗ್ಗೆ ಸ್ಪಷ್ಟನೆ ನೀಡಿ ಒಪ್ಪಿಕೊಂಡಿದ್ದರೆ ಎಲ್ಲಾ ರಾದ್ದಾಂತಗಳನ್ನು ತಡೆಯಬಹುದಿತ್ತು ಎಂದು ಅವರು ಬೇಸರ ವ್ಯಕ್ತ ಪಡಿಸಿದ್ದಾರೆ,

ಇನ್ನೂ ಕಾಲ ಮಿಂಚಿಲ್ಲ ಪ್ರದಾನಿ ಮೋದಿಯವರನ್ನು ಮಾದರಿಯಾಗಿಸಿ ಇವರೂ ನಾಡಿನ ಜನತೆಯಲ್ಲಿ ಕ್ಷಮೆಯಾಚಿಸು ಆಗ್ರಹಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆರ್ವಾಶೆ:ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಪಾಲ್ದಾಕ್ಯಾರು ಇದರ 24ನೇ ವರ್ಷದ ಮೊಸರು ಕುಡಿಕೆ ಮತ್ತು ಭಜನಾ ಕಾರ್ಯಕ್ರಮ

0

ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಪಾಲ್ದಾಕ್ಯಾರು ಕೆರ್ವಾಶೆ ಇದರ 24ನೇ ವರ್ಷದ ಮೊಸರು ಕುಡಿಕೆ ಮತ್ತು ಭಜನಾ ಕಾರ್ಯಕ್ರಮವು ನಡೆಯಿತು.ಬೆಳಿಗ್ಗೆಯಿಂದ ಸಂಜೆಯವರೆಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಧ.ಗ್ರಾ.ಯೋ.(ರಿ.) ಮಿಯ್ಯಾರು ಇದರ ವಲಯಾಧ್ಯಕ್ಷರಾದ ಅಶ್ವಥ್ ನಾರಾಯಣ್ ನಾಯ್ಕ್ ರವರು ಉದ್ಘಾಟಿಸಿ ಉಗ್ಗಪ್ಪ ಪರವರವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಸಂಜೆ ಧಾರ್ಮಿಕ ಸಭೆ,ಬಹುಮಾನ ವಿತರಣೆ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಜನಾ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ಪೂಜಾರಿಯವರು ಮುಂದಿನ ವರ್ಷಕ್ಕೆ ಭಜನಾ ಮಂಡಳಿಯ ಜೀರ್ಣೋದ್ದಾರದ ಕೆಲಸ ಕಾರ್ಯಗಳು ಅಗಲಿದ್ದು ತಮ್ಮೆಲ್ಲರ ಸಹಕಾರ ಕೋರಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಭಜನಾ ಮಂಡಳಿಯ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ಪ್ರಭುರವರು ಮಾಹಿತಿ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು.ಸಮಾರಂಭದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ವೇದಿಕೆಯಲ್ಲಿ ಭಜನಾ ಮಂಡಳಿಯ ಗೌರವಾಧ್ಯಕ್ಷ ಜಯರಾಮ್ ಬಂಗೇರ,ಗ್ರಾಮಪಂಚಾಯತ್ ಅಧ್ಯಕ್ಷೆ ಸುನೀತಾ,ಗ್ರಾಮಪಂಚಾಯತ್ ಉಪಾಧ್ಯಕ್ಷ ಸುನೀಲ್ ಶೆಟ್ಟಿ,ಗ್ರಾಮ ಪಂಚಾಯತ್ ಸದಸ್ಯರಾದ ಸುಚೇತಾ,ಭಜನಾ ತರಭೇತುದಾರರಾದ ನಿತಿನ್ ಪೂಜಾರಿ ಮಾಳ,ಶ್ರೀಕಾಂತ್ ಕುಮಾರ್,ಹಿರಿಯ ಕೃಷಿಕರಾದ ನೇಮಿರಾಜ್ ಜೈನ ಉಪಸ್ಥಿತರಿದ್ದರು.

ಕ್ರೀಡಾಕೂಟದ ಬಹುಮಾನದ ಪ್ರಾಯೋಜಕತ್ವವನ್ನು ವಹಿಸಿದ್ದ ಪ್ರಶಾಂತ್ ಶೆಣೈ ಬಾಲಾಜಿ ಮೊಬೈಲ್ಸ್ ಕಾರ್ಕಳ ಇವರನ್ನು ಅಭಿನಂದಿಸಲಾಯಿತು.ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾಲ್ದಾಕ್ಯಾರು ಇಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕಿ ಶ್ರೀಲತಾರವರಿಗೆ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲ ಅತಿಥಿಗಳಿಗೆ ಗಿಡಗಳನ್ನು ಸ್ಮರಣಿಕೆಯಾಗಿ ನೀಡಲಾಯಿತು.ಶಶಿಧರ್ ಕುಲಾಲ್ ಸ್ವಾಗತಿಸಿ ಕೌಸಲ್ಯರವರು ಧನ್ಯವಾದಗೈದರು.

ಮಾಳ ಗ್ರಾಮ ಪಂಚಾಯತ್ ವತಿಯಿಂದ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಕ್ತಪರೀಕ್ಷೆಯ ಉಪಕರಣ ಹಸ್ತಾಂತರ

0

ಮಾಳ ಗ್ರಾಮ ಪಂಚಾಯತ್ ವತಿಯಿಂದ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಕ್ತಪರೀಕ್ಷೆಯ ಉಪಕರಣ ಹಸ್ತಾಂತರ

ಮಾಳ ಗ್ರಾಮ ಪಂಚಾಯತ್ ವತಿಯಿಂದ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲಿಗೆ ಸುಮಾರು 2.25 ಲಕ್ಷ ರೋ ಗಳ CBC ANALISER ಎಂಬ ಎಲ್ಲ ಮಾದರಿಯ ರಕ್ತಪರೀಕ್ಷೆ ಯ ಉಪಕರಣವನ್ನು ಮಾಳ ಗ್ರಾಮಸ್ಥರ ಉಪಯೋಗಕ್ಕಾಗಿ ಪಂಚಾಯತ್ ವಿಷೇಶ ಅನುದಾನದಿಂದ ಮತ್ತು ವಿಶೇಷ ಕಾಳಜಿ ಯಿಂದ ,ಮಾಳ ಪಂಚಾಯತ್ ಅಧ್ಯಕ್ಷರು ಉಮೇಶ್ ಪೂಜಾರಿ ಇವರು ಹಸ್ತಾಂತರಿಸಿದರು.

ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ದಿಶಾ ಕಿಶನ್,ತಾಲೂಕ್ ಆರೋಗ್ಯ ಅಧಿಕಾರಿ ಸಂದೀಪ್ ಕುಡ್ವ, ಪಂಚಾಯತ್ ಉಪಾಧ್ಯಕ್ಷೆ ವಿಮಲಾ, ಅಶೋಕ್ ಬರ್ವೇ,ಅಜಿತ್ ಹೆಗ್ಡೆ, ನೀಲು, ಅನಿಲ್ ಎಸ್ ಪೂಜಾರಿ, ರಘುರಾಮ್ ಶೆಟ್ಟಿ,ದಿನೇಶ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಹಾಗು ಶಿರ್ಲಾಲು ಪಂಚಾಯತ್ ಅಧ್ಯಕ್ಷರು ಶ್ರೀಮತಿ ಭಾರತಿ ದೇವಾಡಿಗ, ರಮಾನಂದ ಪೂಜಾರಿ, ಸದಾನಂದ ಸಾಲಿಯಾನ್ ಹಾಗೂ ಎಲ್ಲಾ ಗ್ರಾಮದ ಪಂಚಾಯತ್ ಸದಸ್ಯರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.ಮಾಳ, ಶಿರ್ಲಾಲು ಕೆರ್ವಾಷೆ ಮತ್ತು ಮುಂಡ್ಲಿ ಗ್ರಾಮದ ಗ್ರಾಮಸ್ಥರು ಇದರ ಪ್ರಯೋಜನ ಪಡೆಯಬೇಕಾಗಿ ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.