Home Blog Page 74

ರೇಷನ್ ಕಾರ್ಡು ತಿದ್ದುಪಡಿ ಅಂತಿಮ ಗಡು ಇನ್ನೊಂದು ತಿಂಗಳು ವಿಸ್ತರಣೆ ಮಾಡಲು ದಿನಕರ ಶೆಟ್ಟಿ ಮನವಿ

0

ರೇಷನ್ ಕಾರ್ಡು ತಿದ್ದುಪಡಿ ಅಂತಿಮ ಗಡು ಇನ್ನೊಂದು ತಿಂಗಳು ವಿಸ್ತರಣೆ ಮಾಡಲು ಮನವಿ

ರೇಷನ್ ಕಾರ್ಡು ತಿದ್ದುಪಡಿ ಅಂತಿಮ ಗಡುವನ್ನು ರಾಜ್ಯ ಸರಕಾರ ಹಾಗು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಇನ್ನೊಂದು ತಿಂಗಳು ವಿಸ್ತರಣೆ ಮಾಡಿದಲ್ಲಿ ಜನರಿಗೆ ತುಂಬಾ ಅನುಕೂಲವಾಗಲಿದೆ.

ಇನ್ನು ಬಾಕಿ ಉಳಿದ ಆನೇಕ ಕಾರ್ಡ್ ಗಳ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈ ಮೊದಲು ರೇಷನ್ ಕಾರ್ಡು ತಿದ್ದುಪಡಿಗೆ ಡಿಸೆಂಬರ್ 31 ಅಂತಿಮ ಗಡುವನ್ನು ನೀಡಿತ್ತು. ಆದರೆ ಸಾರ್ವಜನಿಕರ ಹಿತ ದೃಷ್ಟಿಯಿಂದ ತಿದ್ದುಪಡಿ ಸಾಕಷ್ಟು ಬಾಕಿ ಉಳಿದ ಹಿನ್ನಲೆಯಲ್ಲಿ ಜನವರಿ 31 ರ ತನಕ ತಿದ್ದುಪಡಿ ದಿನಾಂಕ ಮುಂದುವರೆಸಿದ್ದಾರೆ.

ಪಡಿತರ ಚೀಟಿಯಲ್ಲಿ ಮನೆ ಯಜಮಾನರ ಹೆಸರು ಬದಲಾವಣೆ, ಹೆಸರು ಸೇರಿಸುವುದು, ಹೆಸರು ಸರಿಪಡಿಸಿಕೊಳ್ಳುವುದು, ಹೆಸರು ತೆಗೆಯುವುದು ಹಾಗು ಇನ್ನಿತರ ವಿಷಯಕ್ಕೆ ಆವಕಾಶ ಮಾಡಿಕೊಟ್ಟಿದ್ದಾರೆ. ಸಾಧ್ಯತೆ ಇದ್ದಲ್ಲಿ, ಅಂತಿಮ ಗಡುವನ್ನು ಫೆಬ್ರವರಿ 28ರ ತನಕ ವಿಸ್ತರಿಸುವುದರಿಂದ ಜನರಿಗೆ ತುಂಬಾ ಉಪಕಾರವಾದಿತು. ರಾಜ್ಯ ಸರಕಾರ ಮತ್ತು ಸಂಬಂಧ ಪಟ್ಟ ಇಲಾಖೆ ಇದರ ಬಗ್ಗೆ ಗಮನ ಹರಿಸಬೇಕಾಗಿ ಕಾರ್ಕಳ ವಿಧಾನಭಾ ಕ್ಷೇತ್ರ NSUI ಮಾಜಿ ಅಧ್ಯಕ್ಷ ದಿನಕರ್ ಶೆಟ್ಟಿ ವಿನಂತಿಸಿದ್ದಾರೆ.

ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವಕ್ಕೆ ಭಕ್ತರ ಮಹಾಪ್ರವಾಹ

0

ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವಕ್ಕೆ ಭಕ್ತರ ಮಹಾಪ್ರವಾಹ

ಕಾರ್ಕಳ, ಅತ್ತೂರು:ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವವು ಇಂದು ಭಕ್ತರ ಅಭೂತಪೂರ್ವ ಮಹಾಪ್ರವಾಹವನ್ನು ಕಂಡಿತು. ಸಾವಿರಾರು ಭಕ್ತರು ಹರಕೆಗಳನ್ನು ಈಡೇರಿಸಲು ಮತ್ತು ತಮ್ಮ ಬಿನ್ನಹಗಳನ್ನು ಸಲ್ಲಿಸಲು ಪುಣ್ಯಕ್ಷೇತ್ರಕ್ಕೆ ಆಗಮಿಸಿದರು.

ಬಸಿಲಿಕಾದ ವಠಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ವಿಶಿಷ್ಟ ಬೆಳಕು ಮತ್ತು ಆಕರ್ಷಕ ಅಲಂಕಾರಗಳಿಂದ ಶೃಂಗಾರಗೊಂಡು ಭಕ್ತರ ಮನಸೆಳೆಯುವಂತಾಗಿತ್ತು.

ಸರ್ವಧರ್ಮ ಸೌಹಾರ್ದತೆ
ಈ ವರ್ಷದ ಮಹೋತ್ಸವದ ಕೇಂದ್ರ ವಿಷಯ “ಭರವಸೆ ನಮ್ಮನ್ನು ನಿರಾಸೆ ಮಾಡುವುದಿಲ್ಲ” (ರೋಮಾ 5:5) ಆಗಿದ್ದು, ಸರ್ವಧರ್ಮ ಸೌಹಾರ್ದತೆಯನ್ನು ಹೆಚ್ಚಿಸುತ್ತದೆ. ಬಿನ್ನಹ ಸಲ್ಲಿಸಲು ಮತ್ತು ಸಂತ ಲಾರೆನ್ಸ್ ಅವರ ಪವಾಡಗಳನ್ನು ಸ್ಮರಿಸಲು ವಿವಿಧ ಧರ್ಮದ ಜನರು ಭಾಗವಹಿಸಿದ್ದರು.

ಪ್ರಮುಖ ಬಲಿಪೂಜೆಗಳು
ಮಹೋತ್ಸವದ ಮೂರನೇ ದಿನದಲ್ಲಿ ಹತ್ತು ಬಲಿಪೂಜೆಗಳು ನಡೆದಿದ್ದು, ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪರಮಪೂಜ್ಯ ಅ/ವಂ/ ಡಾ/ ಲೋರೆನ್ಸ್ ಮುಕ್ಕುಝಿ ಮುಖ್ಯ ಬಲಿಪೂಜೆಯನ್ನು ನೆರವೇರಿಸಿದರು. ಧಾರ್ಮಿಕ ಬೋಧನೆಯಲ್ಲಿ ಅವರು, “ಭರವಸೆ ಎಂದಿಗೂ ಆಶಭಂಗ ಮಾಡದು; ಕ್ರಿಸ್ತನಲ್ಲಿ ಒಂದಾಗಿ ಭರವಸೆಯ ಯಾತ್ರಾರ್ಥಿಗಳಾಗಿ ಸಾಗಬೇಕು” ಎಂದು ಸಾರಿದರು.

ಗಣ್ಯರ ಭೇಟಿ
ಮಹೋತ್ಸವದಲ್ಲಿ ಹಲವು ರಾಜಕೀಯ ಮತ್ತು ಸಾರ್ವಜನಿಕ ಗಣ್ಯರು ಪಾಲ್ಗೊಂಡರು. ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ರಮಾನಾಥ್ ರೈ ಮತ್ತು ವಿಧಾನಪರಿಷತ್ ಸದಸ್ಯ ಐವನ್ ಉಪಸ್ಥಿತಿ ಮೆರೆದರು.

ಪಾದಯಾತ್ರೆ ಮತ್ತು ಭಕ್ತರ ಚಟುವಟಿಕೆಗಳು
ಶಿರ್ವ, ಪಾಂಬೂರು, ಮತ್ತು ಮೂಡುಬೆಳ್ಳೆಯಿಂದ ಬಹಳಷ್ಟು ಜನ ಪಾದಯಾತ್ರೆ ಗೈದು ಅತ್ತೂರಿನ ಪುಣ್ಯಕ್ಷೇತ್ರವನ್ನು ತಲುಪಿದರು. ಪುಷ್ಕರಣಿಗೆ ಭೇಟಿ, ಮೊಂಬತ್ತಿ ಬೆಳಗುವಿಕೆ, ಪೂಜಾ ಬಿನ್ನಹ ಸಲ್ಲಿಕೆ, ಬಲಿಪೂಜೆ, ಪಾಪ ನಿವೇದನೆ ಸಂಸ್ಕಾರ, ಮತ್ತು ಪುಷ್ಪತೀರ್ಥದಲ್ಲಿ ಭಾಗವಹಿಸುವ ಮೂಲಕ ಭಕ್ತರು ತಮ್ಮ ಧಾರ್ಮಿಕ ನಂಬಿಕೆಯನ್ನು ದೃಢಪಡಿಸಿದರು.

ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವವು, ಭಕ್ತರ ಆತ್ಮಸಂತೃಪ್ತಿಯೊಂದಿಗೆ ಧಾರ್ಮಿಕ ನಂಬಿಕೆ, ಸೌಹಾರ್ದತೆ ಮತ್ತು ಸಮುದಾಯ ಭಾವೈಕ್ಯತೆಯನ್ನು ಮತ್ತಷ್ಟು ಘನಗೊಳಿಸಿತು.

 

ಭ್ರಷ್ಟ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಪ್ರತಿಭಟನೆಯ ಅನಿವಾರ್ಯತೆ:ವಿ.ಸುನಿಲ್ ಕುಮಾರ್

0

ಭ್ರಷ್ಟ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಪ್ರತಿಭಟನೆಯ ಅನಿವಾರ್ಯತೆ :ವಿ.ಸುನಿಲ್ ಕುಮಾರ್

ಕಾರ್ಕಳ:ತನ್ನ ವಿವಿಧ ಯೋಜನೆ, ಅವೈಜ್ಞಾನಿಕ ನೀತಿಯಿಂದಾಗಿ ಜನತೆಯನ್ನು ದಿನೆ ದಿನೇ ಆರ್ಥಿಕವಾಗಿ ಹೀನಾ ಸ್ಥಿತಿಗೆ ಕೊಂಡೊಯ್ಯುತ್ತಿರುವ, ಹೆಸರಿಗಷ್ಟೆ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಭ್ರಷ್ಟ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಪ್ರತಿಭಟನೆ ನಡೆಸುವ ಅನಿವಾರ್ಯತೆಯಿದೆ ಎಂದು ಕಾರ್ಕಳದ ಶಾಸಕರಾದ ವಿ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.

ಬೆಲೆ ಏರಿಕೆ                                                                                                          ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಹಾಲು, ಪೆಟ್ರೋಲ್‌, ಡಿಸೇಲ್‌, ಬಸ್‌ ದರ, ರೈತರ ಪಹಣಿ, ವಿದ್ಯುತ್‌ ದರ, ಅಬಕಾರಿ, ಸರಕಾರಿ ಪ್ರಮಾಣ ಪತ್ರ, ದತ್ತು ಡೀಡ್‌ ಹೀಗೆ ಎಲ್ಲಾ ವಿಭಾಗಗಳಲ್ಲೂ ನಿರಂತರವಾಗಿ ಬೆಲೆ ಏರಿಕೆ ನಡೆಸುತ್ತಲೇ ಇದೆ.

ಬಡವರ ರೇಷನ್‌ ಕಾರ್ಡ್‌ ರದ್ಧತಿ
ಬಡ ಕುಟುಂಬಗಳು ವಿದ್ಯಾಭ್ಯಾಸ ಹಾಗೂ ಆರೋಗ್ಯ ಭದ್ರತೆ ದೃಷ್ಟಿಯಲ್ಲಿ ಅನುಕೂಲವಾಗುತ್ತಿದ ಅನೇಕ BPL ಕಾರ್ಡುಗಳನ್ನು ವಿವಿಧ ನೆಪಗಳನ್ನು ನೀಡಿ ಕಾಂಗ್ರೆಸ್ ರದ್ದು ಮಾಡುತ್ತಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಸುಮಾರು 7000 ಕ್ಕೂ ಅಧಿಕ ಬಿ.ಪಿ.ಎಲ್. ಕಾರ್ಡ್‌ಗಳನ್ನು ರದ್ದುಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಇದರಲ್ಲಿ ಈಗಾಗಲೇ ಅನೇಕ ಬಿ.ಪಿ.ಎಲ್. ಕಾರ್ಡ್ ಗಳನ್ನು ರದ್ದುಗೊಳಿಸಿದ್ದಾರೆ.

ಯಾವುದೇ ರೀತಿಯ ಅಭಿವೃದ್ಧಿಗೆ ಅನುದಾನವಿಲ್ಲ, ಅಕ್ರಮ ಸಕ್ರಮ ಅರ್ಜಿ ತಿರಸ್ಕೃತ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಸಿಗುವ ಕೆಂಪುಕಲ್ಲು ಹಾಗೂ ಮರಳು ಪೂರೈಕೆಗೆ ಸರಿಯಾದ ನೀತಿಗಳನ್ನು ಮಾಡದೇ ಎಲ್ಲದಕ್ಕೂ ತಡೆ, ಹೀಗೆ ಎಲ್ಲಾ ರೀತಿಯಿಂದಲೂ ಜನರನ್ನು ದರೋಡೆ ಮಾಡುತ್ತಿರುವ, ಕರ್ನಾಟಕವನ್ನು ದಿವಾಳಿ ಮಾಡುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಭಷ್ಟತೆಯ ವಿರುದ್ಧ ರಾಜ್ಯದ ಜನೆತೆ ಹೋರಾಟ ನಡೆಸುವ ಅನಿವಾರ್ಯತೆಯಿದೆ ಎಂದು ಗುಡುಗಿದ್ದಾರೆ.

ಈ ಸಂದರ್ಭದಲ್ಲಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌, ಗೇರು ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷರಾದ  ಮಣಿರಾಜ್‌ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಮಹಾವೀರ ಹೆಗ್ಡೆ,  ಜಯರಾಮ್‌ ಸಾಲ್ಯಾನ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೇಷ್ಮಾ ಉದಯ ಶೆಟ್ಟಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿಗಳಾದ  ಬೋಳ ಸತೀಶ್‌ ಪೂಜಾರಿ ಸ್ವಾಗತಿಸಿ, ಶಿವಪುರ ಸುರೇಶ್‌ ಶೆಟ್ಟಿ ಧನ್ಯವಾದವಿತ್ತರು. ಪಳ್ಳಿ ಗ್ರಾಮ ಪಂಚಾಯತ್‌ ಸದಸ್ಯ  ಶ್ರೀಕಾಂತ್‌ ನಿರೂಪಿಸಿದರು.

 

ಕಾರ್ಕಳದ ರಸ್ತೆ,ಸೇತುವೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 13 ಕೋಟಿ ರೂಪಾಯಿ ಅನುದಾನ ಬಿಡುಗಡೆ: ಅಭಿವೃದ್ಧಿ ಶೂನ್ಯ ಎನ್ನುತ್ತಿದ್ದ ಸುನೀಲ್ ಕುಮಾರ್,ಗೆ ಕಪಾಳ ಮೋಕ್ಷ-ಶುಭದರಾವ್

0

ಕಾರ್ಕಳದ ರಸ್ತೆ,ಸೇತುವೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 13 ಕೋಟಿ ರೂಪಾಯಿ ಅನುದಾನ ಬಿಡುಗಡೆ: ಅಭಿವೃದ್ಧಿ ಶೂನ್ಯ ಎನ್ನುತ್ತಿದ್ದ ಸುನೀಲ್ ಕುಮಾರ್,ಗೆ ಕಪಾಳ ಮೋಕ್ಷ-ಶುಭದರಾವ್

ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯೊಳಗಿನ ಲೋಕೋಪಯೋಗಿ ಇಲಾಖೆಯ ಅಧೀನಕ್ಜೊಳಪಟ್ಟ ಪ್ರಮುಖ ರಸ್ತೆಗಳು, ಸೇತುವೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರವು ಸುಮಾರು 13 ಕೋಟಿ ರೂಪಾಯಿಗಳಷ್ಟು ಮೊತ್ತದ ಅನುದಾನವನ್ನು ಮಂಜೂರು ಮಾಡಿರುವುದು ಸಂತಸದ ವಿಚಾರವಾಗಿದೆ, ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಶೂನ್ಯ ಎಂದು ಹೇಳಿಕೆ ನೀಡುತ್ತಿದ್ದ ಕಾರ್ಕಳ ಶಾಸಕ ಸುನೀಲ್ ಕುಮಾರ್,ಗೆ ರಾಜ್ಯ ಸರ್ಕಾರದ ಅನುದಾನ ಬಿಡುಗಡೆಯು ಕಪಾಳ ಮೋಕ್ಷ ಮಾಡಿದಂತಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜನಪ್ರಿಯ ಗ್ಯಾರಂಟಿ ಯೋಜನೆಗಳ ಮೂಲಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದ ಪ್ರತೀ ಕ್ಷೇತ್ರಗಳಿಗೆ ತಲಾ 250 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಿದ್ದು ಆ ಅನುದಾನಗಳು ಕಾರ್ಕಳ ಕ್ಷೇತ್ರದ ಜನತೆಗೆ ನೇರವಾಗಿ ದೊರಕುತ್ತದೆ.ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಗಾಗಿ ಕಾರ್ಕಳ ವಿಭಾಗದಲ್ಲಿ 17 ತಿಂಗಳಿಂದ 54.18 ಕೋಟಿ ರೂಪಾಯಿಗಳ ವಿದ್ಯುತ್, ಗಳನ್ನು ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ನೀಡಿದೆ ಎಂದು ಸಂಬಂದಪಟ್ಟ ಇಲಾಖೆಗಳ ಅಂಕಿ ಅಂಶಗಳು ಸಾಕ್ಷಿ ಹೇಳುತ್ತಿವೆ.

ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಇತರ ರಾಜ್ಯಗಳಲ್ಲಿ ಬಿಜೆಪಿ ತನ್ನ ಪ್ರಮುಖ ಚುನಾವಣಾ ಪ್ರಣಾಳಿಕೆ ಅಂಶವಾಗಿ ಘೋಷಿಸಿಕೊಂಡಿವೆ ಇದು ಗ್ಯಾರಂಟಿ ಯೋಜನೆಗಳು ಎಷ್ಟು ಪ್ರಭಾವಿಯಾಗಿವೆ ಎನ್ನುವುದಕ್ಕೆ ದೊಡ್ಡ ಉದಾಹರಣೆಯಾಗಿದೆ ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಶೂನ್ಯ ಎನ್ನುತ್ತಾ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಅಪಹಾಸ್ಯ ಮಾಡುತ್ತಾ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಅವಹೇಳನ ಮಾಡುತ್ತಿದ್ದ ಶಾಸಕ ಸುನೀಲ್ ಕುಮಾರ್ ಇನ್ನಾದರೂ ಕಣ್ಣು ತೆರೆದು ನೋಡಲಿ ಎಂದು ಶುಭದರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆ: ವಾರ್ಷಿಕ ಭಜನಾ ಮಂಗಲೋತ್ಸವ

0

ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆ: ವಾರ್ಷಿಕ ಭಜನಾ ಮಂಗಲೋತ್ಸವ

ಕಾರ್ಕಳ:ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆಯ 7ನೇ ವಾರ್ಷಿಕೋತ್ಸವ ಮತ್ತು ಭಜನಾ ಮಂಗಲೋತ್ಸವ ಶ್ರೀ ಕ್ಷೇತ್ರ ಎಳ್ಳಾರೆಯಲ್ಲಿ ನಡೆಯಿತು.ದೀಪ ಪ್ರಜ್ವಲನೆ ಮಾಡುವ ಮೂಲಕ ಭಜನಾ ಮಂಗಲಕ್ಕೆ ಅರ್ಚಕ ಶ್ರೀನಿವಾಸ್ ಭಟ್ ಅವರು ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಯೋಗೀಶ್ ಮಲ್ಯ,ಉದ್ಯಮಿ ದಿನೇಶ್ ಕಿಣಿ,ಶ್ರೀನಾಥ್ ಅಡಿಗ,ಭಜನಾ ಪರಿಷತ್ ಅಧ್ಯಕ್ಷ ಹರೀಶ್ ಹೆಗ್ಡೆ,ಹಿರಿಯರಾದ ಗೋಪಾಲ್ ಸೇರಿಗಾರ್,ಭಜನಾ ಮಂಡಳಿಯ ಸಂಸ್ಥಾಪಕರಾದ ದೇವೇಂದ್ರ ಕಾಮತ್ ಎಳ್ಳಾರೆ,ಅಧ್ಯಕ್ಷೆ ಶಾಂತಿ ಪ್ರಭು ಉಪಸ್ಥಿತರಿದ್ದರು.
ವಿವಿಧ ಮಂಡಳಿಗಳ ಭಜನಾ ಸೇವೆಯೊಂದಿಗೆ ಮಂಗಲೋತ್ಸವವು ವೈಭವದಿಂದ ಸಂಪನ್ನಗೊಂಡಿತು.

ಸಾಧನೆ,ಪರಿಶ್ರಮಗಳ ತಪಸ್ಸಿನಿಂದ ಭವ್ಯ ಕಲಾಕೃತಿ ನಿರ್ಮಾಣ:ಕಾರ್ಕಳ ಕಮಲಾಕ್ಷ ಕಾಮತ್

0

ಸಾಧನೆ ,ಪರಿಶ್ರಮಗಳ ತಪಸ್ಸಿನಿಂದ ಭವ್ಯ ಕಲಾಕೃತಿ ನಿರ್ಮಾಣ:ಕಾರ್ಕಳ ಕಮಲಾಕ್ಷ ಕಾಮತ್

ಕಾರ್ಕಳ: ಚಾಕ್ ಪೀಸ್ ಮಾಧ್ಯಮದಲ್ಲಿ ಗೀತೋಪದೇಶ ಮಂಟಪ ರಚನೆ ಒಂದು ಅಪೂರ್ವ ಕಲಾಕೃತಿಯಾಗಿದೆ . ಅನೇಕ ವರ್ಷಗಳ ಸಾಧನೆ , ಪರಿಣತಿ , ಪರಿಶ್ರಮಗಳ ತಪಸ್ಸಿನಿಂದ ಇಂತಹ ಭವ್ಯ ಕೃತಿಗಳು ಮೈದಳೆಯುತ್ತವೆ. ದೇವರ ಅನುಗ್ರಹವಿದ್ದಾಗ ಮಾತ್ರ ಇಂತಹ ಅತ್ಯಂತ ವಿರಳ ಎನ್ನ ಬಹುದಾದ ಸಾಧನೆ ಸಾಧ್ಯ . 1200 ಚಾಕ್ ಪೀಸ್ ಉಪಯೋಗಿಸಿ ರಚಿಸಿದ ಸಮಗ್ರ ಗೀತೋಪದೇಶ ಮಹತ್ವ ಸಾರುವ ಈ ಕೃತಿ ಸಂಗ್ರಹಯೋಗ್ಯ ಎಂದು ನಿವೃತ್ತ ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್ ಹೇಳಿದರು.

1200 ಚಾಕ್ ಪೀಸ್ ಬಳಸಿ ಗೀತೋಪದೇಶ ಕಲಾಕೃತಿ ನಿರ್ಮಿಸಿದ 73ರ ಹರೆಯದ ಹಿರಿಯ ಕಲಾವಿದ ಚೋಲ್ಪಾಡಿ ರಾಮಕೃಷ್ಣ ಕಾಮತ್ ಅವರನ್ನು ಎಸ್ ವಿ ಟಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.

ಎಸ್ ವಿ ಟಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಪಿ. ಶೆಣೈ, ಎಸ್ ವಿ ಟಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನೇಮಿರಾಜ್ ಶೆಟ್ಟಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಯೋಗೇಂದ್ರ ನಾಯಕ್ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಹೊಸಸಂಜೆ ಬಳಗದ ಅಧ್ಯಕ್ಷ ಆರ್ . ದೇವರಾಯ ಪ್ರಭು ಸ್ವಾಗತಿಸಿದರು.ಶಿವಾ ಜಾಹೀರಾತು ಸಂಸ್ಥೆಯ ಮಾಲಕ ವರದರಾಯ ಪ್ರಭು ಕಾರ್ಯಕ್ರಮ ನಿರೂಪಿಸಿದರು .ಚೋಲ್ಪಾಡಿ ಸದಾಶಿವ ಕಾಮತ್ ವಂದಿಸಿದರು.

 

 

ಯಕ್ಷಗಾನ ಪ್ರದರ್ಶನ ಅನುಮತಿ ನಿಯಮ ಸರಳೀಕರಿಸಲು ಪ್ರಯತ್ನ-ಶಾಸಕ ಸುನೀಲ್‌ ಕುಮಾರ್ ಅರುಣ್‌ ಜಾರ್ಕಳಗೆ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ 

0

ಯಕ್ಷಗಾನ ಪ್ರದರ್ಶನ ಅನುಮತಿ ನಿಯಮ ಸರಳೀಕರಿಸಲು ಪ್ರಯತ್ನ-ಶಾಸಕ ಸುನೀಲ್‌ ಕುಮಾರ್

ಅರುಣ್‌ ಜಾರ್ಕಳಗೆ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ

ಕಾರ್ಕಳ: ರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ಕಾನೂನಿನ ಆತಂಕ ಎದುರಾಗುತ್ತಿರುವ ನಿಟ್ಟಿನಲ್ಲಿ ಎಲ್ಲ ಮೇಳಗಳಿಗೂ ಯಕ್ಷಗಾನ ಪ್ರದರ್ಶನಕ್ಕೆ ಏಕಗಂಟಿನಲ್ಲಿ ಅನುಮತಿ ನೀಡುವ ವ್ಯವಸ್ಥೆ ಆಗಬೇಕು. ಈ ನಿಟ್ಟಿನಲ್ಲಿ ಸರಕಾರ ನಿಯಮ ರೂಪಿಸಲು ಪ್ರಯತ್ನಿಸುವುದಾಗಿ ಶಾಸಕ ವಿ. ಸುನೀಲ್‌ ಕುಮಾರ್‌ ಹೇಳಿದರು.

ಹಿರ್ಗಾನ ಶ್ರೀಕುಂದೇಶ್ವರ ಕ್ಷೇತ್ರದಲ್ಲಿ ಹಾಸ್ಯಗಾರ ಅರುಣ್‌ ಕುಮಾರ್‌ ಜಾರ್ಕಳ ಅವರಿಗೆ ಶ್ರೀ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಯಕ್ಷಗಾನ ನಮ್ಮ ಸಂಸ್ಕೃತಿ. ನಮ್ಮ ಅಸ್ಮಿತೆಗೆ ಧಕ್ಕೆಯಾಗುವ ನಿಯಮಗಳನ್ನು ಸಡಿಲಿಸಿ, ಯಕ್ಷಗಾನ ಪ್ರದರ್ಶನಗಳಿಗೆ ಯಾವುದೇ ಅಡೆತಡೆ ಇಲ್ಲದೆ ಅನುಮತಿ ನೀಡುವ ಬೇಡಿಕೆಯನ್ನು ಈಡೇರಿಕೆಗೆ ಸರಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದರು ಹಾಸ್ಯ ಕಲಾವಿದ ಅರುಣ್‌ ಕುಮಾರ್‌ ಜಾರ್ಕಳ ಅವರ ತಾಯಿಯ ಹೆಸರಲ್ಲಿ ಮಂಜೂರಾದ ಅಕ್ರಮ ಸಕ್ರಮ ಜಾಗ ತಡೆ ಹಿಡಿದಿರುವ ಕುರಿತು ಪರಿಶೀಲನೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಿದರು.

ಧಾರ್ಮಿಕವಾಗಿ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಋಷಿಯಂತೆ ಬದುಕನ್ನು ಸವೆಸಿದ ದಿ.ರಾಘವೇಂದ್ರ ಭಟ್ಟರ ನೆನಪಲ್ಲಿ ಕ್ಷೇತ್ರದ ವತಿಯಿಂದ ನೀಡಲಾಗುತ್ತಿರುವ ಈ ಪ್ರಶಸ್ತಿಗೆ ಯಕ್ಷಗಾನ ರಂಗದಲ್ಲಿಯೇ ವಿಶಿಷ್ಟ ಮನ್ನಣೆ, ಗೌರವ ಇದೆ ಎಂದು ಪ್ರಸಿದ್ದ ಯಕ್ಷಗಾನ ಕಲಾವಿದ ನ್ಯಾಯವಾದಿ ಶ್ರೀರಮಣಾಚಾರ್‌ ಹೇಳಿದರು. ರಾತ್ರಿ ಹತ್ತು ಗಂಟೆ ಮೇಲೆ ಯಕ್ಷಗಾನವನ್ನು ಪ್ರದರ್ಶಿಸುವುದು ಕಾನೂನಿನ ತೊಡಕಾಗಿ ಪರಿಣಮಿಸಿದೆ. ತಲೆ ತಲಾಂತರಗಳಿಂದ ಪ್ರದರ್ಶನವಾಗುತ್ತಿರುವ ಯಕ್ಷಗಾನ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಹಲವು ಅನುಮತಿ ಪಡೆಯುವ ವ್ವಯಸ್ಥೆಯನ್ನು ಸರಳೀಕರಿಸುವಂತೆ ಮನವಿ ಮಾಡಿದರು.

ಕುಂದೇಶ್ವರ ಸಮ್ಮಾನ್‌ ಸ್ವೀಕರಿಸಿದ ಅರುಣ್‌ ಕುಮಾರ್‌ ಜಾರ್ಕಳ ಮಾತನಾಡಿ, ಅತಿಯಾದ ನೋವು ಇದ್ದವರು ಮಾತ್ರ ಇತರರನ್ನು ನಗಿಸಲು ಸಾಧ್ಯ, ಅವರು ಹಾಸ್ಯದ ಮೂಲಕ ಖುಷಿ ಕೊಡಬಲ್ಲರು ಎಂದ ಅವರು. ಬದುಕಿನ ಕಟು ಸತ್ಯವೇ ಹಾಸ್ಯ ಎಂದು ವಿಶ್ಲೇಷಿಸಿದರು.

ತೆಲಂಗಾಣ ಮೂಲದ ನಾನು ಹುಟ್ಟಿ ಬೆಳೆದದ್ದು ತುಳುನಾಡಿನಲ್ಲಿ. ಜಾರ್ಕಳದಲ್ಲಿ ತಾಯಿಯ ಹೆಸರಲ್ಲಿ ಅಕ್ರಮ ಸಕ್ರಮ ಜಾಗ ಮಂಜೂರಾಗಿದೆ. ಆದರೆ ತಾಯಿ ತೀರಿ ಹೋಗಿದ್ದಾರೆ, ಈಗ ಜಾಗ ನೀಡುತ್ತಿಲ್ಲ. ೨೬೬ ಸನ್ಮಾನ ಸ್ವೀಕರಿಸಿದ್ದೇನೆ ಆದರೆ ಕುಂದೇಶ್ವರ ಸನ್ಮಾನ ಘೋಷಣೆಯಾದ ಬಳಿಕ ರಾಜ್ಯಾದ್ಯಂತ ಅಭಿನಂದನೆಗಳ ಮಹಾಪೂರವೇ ಬಂದಿದ. ಯಕ್ಷಗಾನ ಶೆಟ್ರುಗಳಿಗೆ ಮತ್ತು ಭಟ್ರುಗಳಿಗೆ ಮಾತ್ರ ಎಂಬ ಮಾತಿದೆ. ಆದರೆ ಯಕ್ಷಗಾನ ರಂಗದಲ್ಲಿ ಹಾಗಿಲ್ಲ. ತೆಲುಗಿನವ, ತಮಿಳಿನವ ಎಂದೆಣಿಸದೆ, ವಶೀಲಿ ಬಾಜಿ ಇಲ್ಲದೆ ಇಲ್ಲದೆ ಈ ರಂಗದವರು ನಮ್ಮನ್ನೆಲ್ಲ ಬೆಳೆಸಿ ಗೌರವಿಸಿದ್ದಾರೆ ಎಂದರು.

ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ಅಭಿನಂದಿಸಿ ಮಾತನಾಡಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌, ಗಂಗಾ ರಾಘವೇಂದ್ರ ಭಟ್‌, ಧರ್ಮದರ್ಶಿಗಳಾದ ಕೃಷ್ಣರಾಜೇಂದ್ರ ಭಟ್‌, ರವೀಂದ್ರ ಭಟ್‌, ಸುಧೀಂದ್ರ ಭಟ್‌, ಯಕ್ಷಕೂಟದ ಸಂಚಾಲಕ ಎಲ್ಲೂರು ರಾಮಚಂದ್ರ ರಾವ್‌, ಸಿದ್ಧಕಟ್ಟೆ ವೈಭವ್‌ ಮೆಡಿಕಲ್ಸ್‌ನ ಸಚ್ಚಿದಾನಂದ ಎಡಮಲೆ, ನವೀನ್‌ ಟಿ.ಆರ್., ನ್ಯೂಸ್‌ ಕಾರ್ಕಳ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಬರೆಪ್ಪಾಡಿ, ನಿರ್ದೇಶಕ ಅರುಣ್‌ ಮಾಂಜ, ಬೆಂಕಿನಾಥ ಮೇಳದ ಸಂಚಾಲಕ ಸುರೇಂದ್ರನಾಥ ಮಲ್ಲಿ, ಬ್ರಹ್ಮವಾಹಕ ಕದ್ರಿ ಕೃಷ್ಣ ಭಟ್‌,ಉದ್ಯಮಿಗಳಾದ ಕುಂಜತ್ತೋಡಿ ವಾಸುದೇವ ಅಲೆವೂರಾಯ, ರವಿಕಾಂತ ಭಟ್‌, ಬಜಗೋಳಿ ಸರಕಾರಿ ಕಾಲೇಜು ಪ್ರಾಂಶುಪಾಲ ಕೆ.ಪಿ.ಲಕ್ಷ್ಮೀನಾರಾಯಣ, ರಂಜಿನಿ ಉಪಸ್ಥಿತರಿದ್ದರು.

ವರ್ಷಾವಧಿ ಉತ್ಸವಳ ಕುಂದೇಶ್ವರ ಕ್ಷೇತ್ರದಲ್ಲಿ ರಂಗಪೂಜೆ, ಸುತ್ತುಬಲಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು, ರಕ್ತೇಶ್ವರಿ ನೇಮ ಭಕ್ತಿ ಸಂಭ್ರಮದಿಂದ ನಡೆಯಿತು. ಬೆಂಕಿನಾಥೇಶ್ವರ ಮೇಳದಿಂದ ಶ್ರೀದೇವಿ ಅಗ್ನಿ ಕಲ್ಲುರ್ಟಿ ಯಕ್ಷಗಾನ ಬಯಲಾಟ ನಡೆಯಿತು. ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಜಿತ್‌ ಹೆಗ್ಡೆ ಮಾಳ, ದಕ ಫೋಟೋಗ್ರಾಫರ್‌ ಅಸೋಸಿಯೇಶನ್‌ ಅಧ್ಯಕ್ಷ ಪದ್ಮಪ್ರಸಾದ್‌ ಜೈನ್‌, ಉದ್ಯಮಿಗಳಾದ ಬೋಳ ಅಜಿತ್‌ ಕಾಮತ್‌, ಸಿರಿಯಣ್ಣ ಶೆಟ್ಟಿ ಮೊದಲಾದವರು ಆಗಮಿಸಿದರು.

ಕಾರ್ಕಗಳ ಹಿರ್ಗಾನ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಜಾತ್ರೆ ಸಂದರ್ಭ ಹಾಸ್ಯಗಾರ ಅರುಣ್‌ ಕುಮಾರ್‌ ಜಾರ್ಕಳ ಅವರಿಗೆ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಕಳ:ಜೋಡುರಸ್ತೆಯಲ್ಲಿ ಜ್ಯೂಸ್ & ಐಸ್ ಕೆಫೆ ಶುಭಾರಂಭ

0

ಕಾರ್ಕಳ:ಜೋಡುರಸ್ತೆಯಲ್ಲಿ ಜ್ಯೂಸ್ & ಐಸ್ ಕೆಫೆ ಶುಭಾರಂಭ

ಕಾರ್ಕಳ:ಜೋಡುರಸ್ತೆಯಲ್ಲಿ ಜ್ಯೂಸ್ & ಐಸ್ ಕೆಫೆ ಶುಭಾರಂಭಗೊಂಡಿದೆ.

ಕೆಫೆಯ ಉದ್ಘಾಟನೆ ಸಮಾರಂಭವು ಸ್ಥಳೀಯ ಗಣ್ಯರು, ವ್ಯಾಪಾರಿಗಳು, ಹಾಗೂ ಜನಸಾಮಾನ್ಯರ ಸಡಗರದ ನಡುವೆ ನಡೆಯಿತು.

ಕೆಫೆಯ ವಿಶೇಷತೆಗಳು:
ಬೆಲ್ಲ ಚಹಾ,ತಾಜಾ ಹಣ್ಣುಗಳ ಜ್ಯೂಸ್‌ಗಳು,ಆರೋಗ್ಯಕರ ಪಾನೀಯಗಳು,ಐಸ್‌ ಕ್ರೀಮ್ ಡೆಲೈಟ್ಸ್,ಮಿಲ್ಕ್‌ಶೇಕ್‌ಗಳು ಮತ್ತು ಕೋಲ್ಡ್ ಕಾಫಿ,ಸ್ನ್ಯಾಕ್ಸ್ ಕ್ರಿಸ್ಪಿ ಬೈಟ್ಸ್‌ ಕೆಫೆಯಲ್ಲಿ ಸಿಗಲಿದೆ.

ವಿಳಾಸ:ಜ್ಯೂಸ್ & ಐಸ್ ಕೆಕಫೆ, ಅಧಿಧನ್ ದುರ್ಗಾ ಎನ್ಕ್ಲೇವ್,ಬಿಟಿಕೆ ಪೆಟ್ರೋಲ್ ಪಂಪ್ ಎದುರು,ಜೋಡುರಸ್ತೆ, ಕಾರ್ಕಳ

ಹೆಚ್ಚಿನ ಮಾಹಿತಿಗೆ ಅಥವಾ ಆರ್ಡರ್‌ಗಳಿಗೆ ಸಂಪರ್ಕಿಸಿ: +91 8123006118

ಕಾರ್ಕಳ:ಜೋಡುರಸ್ತೆಯಲ್ಲಿ ‘ಜ್ಯೂಸ್ & ಐಸ್’ ಕೆಫೆ ಶುಭಾರಂಭ

0

ಕಾರ್ಕಳ:ಜೋಡುರಸ್ತೆಯಲ್ಲಿ ‘ಜ್ಯೂಸ್ & ಐಸ್’ ಕೆಫೆ ಶುಭಾರಂಭ

ಕಾರ್ಕಳ:ಜೋಡುರಸ್ತೆಯಲ್ಲಿ ಜ್ಯೂಸ್ & ಐಸ್ ಕೆಫೆ ಶುಭಾರಂಭಗೊಂಡಿದೆ.

ಕೆಫೆಯ ವಿಶೇಷತೆಗಳು:
ಬೆಲ್ಲ ಚಹಾ,ತಾಜಾ ಹಣ್ಣುಗಳ ಜ್ಯೂಸ್‌ಗಳು,ಆರೋಗ್ಯಕರ ಪಾನೀಯಗಳು,ಐಸ್‌ ಕ್ರೀಮ್ ಡೆಲೈಟ್ಸ್,ಮಿಲ್ಕ್‌ಶೇಕ್‌ಗಳು ಮತ್ತು ಕೋಲ್ಡ್ ಕಾಫಿ,ಸ್ನ್ಯಾಕ್ಸ್ ಕ್ರಿಸ್ಪಿ ಬೈಟ್ಸ್‌ ಕೆಫೆಯಲ್ಲಿ ಸಿಗಲಿದೆ.

ವಿಳಾಸ:ಜ್ಯೂಸ್ & ಐಸ್ ಕೆಫೆ, ಅಧಿಧನ್ ದುರ್ಗಾ ಎನ್ಕ್ಲೇವ್,ಬಿಟಿಕೆ ಪೆಟ್ರೋಲ್ ಪಂಪ್ ಎದುರು,ಜೋಡುರಸ್ತೆ, ಕಾರ್ಕಳ

ಹೆಚ್ಚಿನ ಮಾಹಿತಿಗೆ ಅಥವಾ ಆರ್ಡರ್‌ಗಳಿಗೆ ಸಂಪರ್ಕಿಸಿ: +91 8123006118

ಬಜಗೋಳಿ ಡಿಡಿ೦ಬಿರಿ ಅಯ್ಯಪ್ಪ ಮಂದಿರದಲ್ಲಿ ಶ್ರೀ ರಾಮ ತಾರಕ ಜಪಯಜ್ಞ ಜಾತಿ ಮತ ಭೇದವಿಲ್ಲದೆ ಶ್ರೀ ರಾಮ ದೇವರಿಗೆ ಪುಷ್ಪಾರ್ಚನೆ ಸಲ್ಲಿಸಿ ತಾರಕ ಮಂತ್ರ ಪಠಿಸಲು ಅವಕಾಶ

0

ಬಜಗೋಳಿ ಡಿಡಿ೦ಬಿರಿ ಅಯ್ಯಪ್ಪ ಮಂದಿರದಲ್ಲಿ ಶ್ರೀ ರಾಮ ತಾರಕ ಜಪಯಜ್ಞ

ಜಾತಿ ಮತ ಭೇದವಿಲ್ಲದೆ ಶ್ರೀ ರಾಮ ದೇವರಿಗೆ ಪುಷ್ಪಾರ್ಚನೆ ಸಲ್ಲಿಸಿ ತಾರಕ ಮಂತ್ರ ಪಠಿಸಲು ಅವಕಾಶ

ಅಯೋಧ್ಯೆ ಶ್ರೀ ರಾಮ ದೇವರ ಮಹೋತ್ಸವದ ಅಂಗವಾಗಿ, ಅಯೋಧ್ಯೆಗೆ ನೆಲ್ಲಿಕಾರು ಶಿಲೆ ಸಮರ್ಪಿತವಾದ ಎರಡನೇ ವರ್ಷದ ಸವಿನೆನಪಿಗಾಗಿ ಬಜಗೋಳಿ ಡಿಡಿ೦ಬಿರಿ ಅಯ್ಯಪ್ಪ ಮಂದಿರದಲ್ಲಿ ಜನವರಿ 22 ಬುಧವಾರದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಶ್ರೀ ರಾಮ ತಾರಕ ಜಪಯಜ್ಞ ನಡೆಯಲಿದೆ.

ಸಮಸ್ತ ಹಿಂದೂಗಳು ಜಾತಿ ಮತ ಭೇದವಿಲ್ಲದೆ ಹಿಂದೂಗಳೆಲ್ಲರೂ ಸಮಾನತೆ ಯಿಂದ ಶ್ರೀ ರಾಮ ದೇವರಿಗೆ ಪುಷ್ಪಾರ್ಚನೆ ಸಲ್ಲಿಸಿ ತಾರಕ ಮಂತ್ರ ಪಠಿಸಲು ಅವಕಾಶ ಕಲ್ಪಿಸಲಾಗಿದೆ.ಸಂಜೆ ಅಯೋಧ್ಯೆಯ ಕಡೆ ಮುಖಮಾಡಿ ಹಣತೆಯನ್ನು ಕೈಯಲ್ಲಿ ಹಿಡಿದು ಮಹಾಮಂಗಳಾರತಿ ಮಾಡಲು ಅವಕಾಶವಿದೆ.

ಸಂಜೆ 6.30ಕ್ಕೆ ಗಂಟೆಗೆ ಧಾರ್ಮಿಕ ಚಿಂತಕರಾದ ಬಾರ್ಕೂರು ದಾಮೋದರ ಶರ್ಮಾರವರಿಂದ ಧಾರ್ಮಿಕ ಉಪನ್ಯಾಸ ಮತ್ತು ಕಲ್ಲಡ್ಕ ವಿಠ್ಠಲ್ ನಾಯಕ್ ರವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.

ಸಮಸ್ತ ಹಿಂದೂಗಳು ಈ ಪುಣ್ಯಕಾರ್ಯದಲ್ಲಿ ಪಾಲ್ಗೊಂಡು ಪುನೀತರಾಗಬೇಕಾಗಿ ಶ್ರೀ ರಾಮ ತಾರಕ ಯಜ್ಞ ಸಮಿತಿಯರು ತಿಳಿಸಿದ್ದಾರೆ.