ಬಜಗೋಳಿ ಡಿಡಿ೦ಬಿರಿ ಅಯ್ಯಪ್ಪ ಮಂದಿರದಲ್ಲಿ ಶ್ರೀ ರಾಮ ತಾರಕ ಜಪಯಜ್ಞ
ಜಾತಿ ಮತ ಭೇದವಿಲ್ಲದೆ ಶ್ರೀ ರಾಮ ದೇವರಿಗೆ ಪುಷ್ಪಾರ್ಚನೆ ಸಲ್ಲಿಸಿ ತಾರಕ ಮಂತ್ರ ಪಠಿಸಲು ಅವಕಾಶ
ಅಯೋಧ್ಯೆ ಶ್ರೀ ರಾಮ ದೇವರ ಮಹೋತ್ಸವದ ಅಂಗವಾಗಿ, ಅಯೋಧ್ಯೆಗೆ ನೆಲ್ಲಿಕಾರು ಶಿಲೆ ಸಮರ್ಪಿತವಾದ ಎರಡನೇ ವರ್ಷದ ಸವಿನೆನಪಿಗಾಗಿ ಬಜಗೋಳಿ ಡಿಡಿ೦ಬಿರಿ ಅಯ್ಯಪ್ಪ ಮಂದಿರದಲ್ಲಿ ಜನವರಿ 22 ಬುಧವಾರದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಶ್ರೀ ರಾಮ ತಾರಕ ಜಪಯಜ್ಞ ನಡೆಯಲಿದೆ.
ಸಮಸ್ತ ಹಿಂದೂಗಳು ಜಾತಿ ಮತ ಭೇದವಿಲ್ಲದೆ ಹಿಂದೂಗಳೆಲ್ಲರೂ ಸಮಾನತೆ ಯಿಂದ ಶ್ರೀ ರಾಮ ದೇವರಿಗೆ ಪುಷ್ಪಾರ್ಚನೆ ಸಲ್ಲಿಸಿ ತಾರಕ ಮಂತ್ರ ಪಠಿಸಲು ಅವಕಾಶ ಕಲ್ಪಿಸಲಾಗಿದೆ.ಸಂಜೆ ಅಯೋಧ್ಯೆಯ ಕಡೆ ಮುಖಮಾಡಿ ಹಣತೆಯನ್ನು ಕೈಯಲ್ಲಿ ಹಿಡಿದು ಮಹಾಮಂಗಳಾರತಿ ಮಾಡಲು ಅವಕಾಶವಿದೆ.
ಸಂಜೆ 6.30ಕ್ಕೆ ಗಂಟೆಗೆ ಧಾರ್ಮಿಕ ಚಿಂತಕರಾದ ಬಾರ್ಕೂರು ದಾಮೋದರ ಶರ್ಮಾರವರಿಂದ ಧಾರ್ಮಿಕ ಉಪನ್ಯಾಸ ಮತ್ತು ಕಲ್ಲಡ್ಕ ವಿಠ್ಠಲ್ ನಾಯಕ್ ರವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.
ಸಮಸ್ತ ಹಿಂದೂಗಳು ಈ ಪುಣ್ಯಕಾರ್ಯದಲ್ಲಿ ಪಾಲ್ಗೊಂಡು ಪುನೀತರಾಗಬೇಕಾಗಿ ಶ್ರೀ ರಾಮ ತಾರಕ ಯಜ್ಞ ಸಮಿತಿಯರು ತಿಳಿಸಿದ್ದಾರೆ.